Oppanna.com

ಗೆಣಸಲೆ

ಬರದೋರು :   ವೇಣಿಯಕ್ಕ°    on   06/11/2012    3 ಒಪ್ಪಂಗೊ

ವೇಣಿಯಕ್ಕ°

ಗೆಣಸಲೆ

ಬೇಕಪ್ಪ ಸಾಮಾನುಗೊ:

  • 2 ಕಪ್(ಕುಡ್ತೆ) ಬೆಣ್ತಕ್ಕಿ
  • 3 ಕಪ್(ಕುಡ್ತೆ) ಕಾಯಿ ತುರಿ
  • 2 ಕಪ್(ಕುಡ್ತೆ) ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 10-12 ಬಾಳೆ ಎಲೆ

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಅಕ್ಕಿಗೆ ರೆಜ್ಜವೆ ನೀರು ಹಾಕಿ, ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ನೊಂಪಿಂಗೆ ಕಡೆರಿ.
ಅಕ್ಕಿ ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ.
ಕಾಯಿ ಕೆರದು, ಬೆಲ್ಲವ ಕೆರಸಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಲಾಯಿಕ ಕಲಸಿ ಮಡುಗಿ.

ಅರ್ಧ ಸೌಟಪ್ಪಸ್ಟು ಹಿಟ್ಟಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಡ್ಸಿ ಉದ್ದಿ ಮಡುಗಿದ ಬಾಳೆ ಕೀತಿನ ನಡುಕಂಗೆ ಹಾಕಿ.

ಬಾಳೆ ಕೀತಿನ ಓರೆ ಮಾಡಿ ಅಥವಾ ಒಂದು ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ಹಸರ್ಸಿ.

ಮಾಡಿ ಮಡುಗಿದ ಬೆಲ್ಲ ಸುಳಿಯ ರೆಜ್ಜ ತೆಕ್ಕೊಂಡು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಸರ್ಸಿದ ಹಿಟ್ಟಿನ ಅರ್ಧ ಭಾಗಕ್ಕೆ ಹಾಕಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಯ ಮಡ್ಸಿ.

ಪುನಃ ಬಾಳೆ ಎಲೆಯ ಎರಡು ಕರೆಯನ್ನು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡ್ಸಿ.

ಅಟ್ಟಿನಳಗೆ/ಪ್ರೆಶರ್ ಕುಕ್ಕರ್ನ ಅಡಿಲಿ ರೆಜ್ಜ ನೀರು ಹಾಕಿ, ಸ್ಟಾಂಡ್ ಮಡುಗಿ ಅದರ ಮೇಗೆ ಗೆಣಸಲೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಮಡುಗಿ.
ಮುಚ್ಚಲು ಮುಚ್ಚಿ, 15-20 ನಿಮಿಷ ದೊಡ್ಡ ಕಿಚ್ಚಿಲ್ಲಿ ಬೇಶಿ, ಮತ್ತೆ 15-20 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
(ಪ್ರೆಶರ್ ಕುಕ್ಕರಿಂಗೆ, ವೈಟ್ ಮಡುಗುದು ಬೇಡ, ವೈಟ್ ಸ್ಟಾಂಡಿಂಗೆ ಒಂದು ಗ್ಲಾಸಿನ ಕವುಂಚಿ ಮಡುಗಿರೆ ಸಾಕು.)

ಬೆಶಿ ಬೆಶಿ ಗೆಣಸಲೆಗೆ ತುಪ್ಪ ಹಾಕಿ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 10-12 ಗೆಣಸಲೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ಗೆಣಸಲೆ

  1. ಬಹುಷಃ ಈ ರೀತಿ ಗೆಣಸಲೆ ಮಾಡ್ಲೆ ಹವ್ಯಕರಿಂಗೆ ಮಾತ್ರ ಗೊಂತಿಪ್ಪದೋ ಹೇಳಿ ಕಾಣುತ್ತು.
    ಬೇರೆಯವು ಮೋದಕ ಹೇಳಿ ಮಾಡ್ತವು. ಅದು ಇದರ ಅನುಕರಣೆ ಮಾತ್ರ. ಇದಕ್ಕೆ ಇದುವೇ ಸಾಟಿ.
    ತುಂಬಾ ಇಷ್ಟವಾದ ಕಜ್ಜಾಯವ ವಿವರ ಸಮೇತ ಕೊಟ್ಟದಕ್ಕೆ ವೇಣಿಯಕ್ಕಂಗೆ ಧನ್ಯವಾದಂಗೊ

  2. ಫಟ೦ಗೊ, ಬರವ ವಿವರಣೆಗೊ ಎಲ್ಲ ultimate ಧನ್ಯವಾದ೦ಗೊ..

  3. ಸದ್ಯಕ್ಕೆ ಇದನ್ನೆ ಸ್ಕ್ರೀನ್ ಸೇವರ್ ಮಾಡುವ ಆಲೋಚನೆ. ಒಪ್ಪಿಗೆ ಇದ್ದಾ?.ಬೈಲಿಲಿ ಕಾಣುತ್ತಿದ್ದ ಸ೦ಕಹಿತ್ಲು ,ಸ್ಯಾ೦ಡಿ ಬ೦ದ ಮೇಲೆ ಕಾಣುತ್ತಿಲ್ಲೆನ್ನೆ.ಕುಶಲವೆ?ಎಲ್ಲರೂ ಕ್ಷೇಮವೆ?ಸೌಖ್ಯವೆ?.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×