ಗುಜ್ಜೆ ಬಿರಿಯಾನಿ

ಹಲಸಿನಕಾಯಿಯ ಸಮಯ ಈಗ.
ಅದರ್ಲಿ ಅನೇಕ ವಿಧದ ಪಾಕಂಗೊ ಮಾಡುಲೆ ಆವುತ್ತು. ಇದೊಂದು ಗುಜ್ಜೆ ಬಿರಿಯಾನಿಯುದೇ ಅದೇ ರೀತಿದು.
ನಿಂಗಳೂ ಕಲಿಯೆಕ್ಕಾ, ಇದ ಇಲ್ಲಿದ್ದು..

ಗುಜ್ಜೆ ಬಿರಿಯಾನಿ: (Jackfruit Biriyani)
ಬೇಕಪ್ಪ ಸಾಮಾಗ್ರಿಗೊ
:

ಗುಜ್ಜೆ ತುಂಡುಗೊ
: 3 ಕಪ್
ನೀರುಳ್ಳಿ : 3
ಟೊಮೇಟೊ: 5
ಬಿರಿಯಾಣಿ (/ಪಲಾವ್) ಮಸಾಲೆ ಹೊಡಿ: 2 ಚಮ್ಚ
ಅರಿಶಿನ ಹೊಡಿ: ರಜ್ಜ
ಅಕ್ಕಿ: 2 ಕುಡ್ತೆ

ರುಚಿರುಚಿ ಗುಜ್ಜೆ ಬಿರಿಯಾನಿ ತೆಯಾರು!

ಮಾಡ್ತ ವಿಧಾನ:

 • ಗುಜ್ಜೆ ತುಂಡುಗಳ ಕಂದು ಬಣ್ಣ ಬಪ್ಪನ್ನಾರ ಎಣ್ಣೆಲಿ ಹೊರುದು ತೆಗದು ಮಡುಗೆಕ್ಕು.
 • ಕುಕ್ಕರಿಲಿ ಒಂದು ದೊಡ್ಡ ಚಮಚ ಎಣ್ಣೆ (/ತುಪ್ಪ) ಬೆಶಿ ಮಾಡಿ ತುಂಡು ಮಾಡಿದ ನೀರುಳ್ಳಿ ಹಾಕಿ ಕಂದು ಬಣ್ಣ ಬಪ್ಪನ್ನಾರ ಹೊರಿಯಕ್ಕು.
 • ಇದಕ್ಕೇ ತುಂಡು ಮಾಡಿದ ಟೊಮೇಟೊ ಹಾಕಿ, ರಜ್ಜ ಹೊತ್ತು ಫ್ರೈ ಮಾಡೆಕ್ಕು.
 • ಹೊರುದು ಮಡುಗಿದ ಗುಜ್ಜೆ ತುಂಡು, ರಜ ಅರಿಶಿನ ಹೊಡಿ, ಬಿರಿಯಾಣಿ (/ಪಲಾವ್) ಮಸಾಲೆ ಹಾಕಿ ಕಲಸೆಕ್ಕು
 • ರುಚಿಗೆ ತಕ್ಕ ಉಪ್ಪು ಹಾಕಿಗೊಳೆಕ್ಕು.
 • ತೊಳದ ಅಕ್ಕಿಯ ಹಾಕಿ, ಅಕ್ಕಿಗೆ ತಕ್ಕ ನೀರು  (1:2) ಹಾಕಿ ಬೇಶೆಕ್ಕು.

~

ಬಿರಿಯಾಣಿ ಸಂಗಾತಕ್ಕೆ ಕೂಡ್ಳೆ ಸಲಾಡ್ ಅಥವಾ ಎಸರುಪಾಕ(ಗ್ರೇವಿ) ಮಾಡುಲಕ್ಕು

ಎಸರುಪಾಕ ಮಾಡ್ತ ವಿಧಾನ:

 • ತುಂಡು ಮಾಡಿದ ಒಂದು ನೀರುಳ್ಳಿ, ಎರಡು ಟೊಮೇಟೋ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ (ಎಲ್ಲವು ರಜ್ಜ ರಜ್ಜ) ರಜ್ಜ ಪಾಕ ಬಪ್ಪನ್ನಾರ ಎಣ್ಣೆಲಿ ಫ್ರೈ ಮಾಡೆಕ್ಕು.
 • ಅದರ ಪೇಷ್ಟಿನಹಾಂಗೆ ಕಡದು, ಬೇಕಾದಷ್ಟೇ ನೀರೆರದು ತೆಳ್ಳಂಗೆ ಮಾಡಿಗೊಳೆಕ್ಕು.
 • ರುಚಿಗೆ ತಕ್ಕ ಉಪ್ಪು, ಸಕ್ಕರೆ ಹಾಕಿ ಒಂದರಿ ಕೊದುಶೆಕ್ಕು.

ಈ ಎಸರು ಪಾಕ ಯಾವುದೇ ಪುಲಾವ್/ ಬಿರಿಯಾಣಿಗೆ ಸಂಗಾತಕ್ಕೆ ಆವುತ್ತು.

ಶ್ರೀಅಕ್ಕ°

   

You may also like...

109 Responses

 1. ಮೋಹನಣ್ಣ says:

  ಶ್ರೀ ಅಕ್ಕೋ ವಿಚಿತ್ರಾನ್ನವೋ ಬಿರಿಯಾಣಿಯೊ ಅ೦ತು ಲಾಯಕಾವುತ್ತು.ಎನ್ನ ಯಜಮಾನ್ತಿಗೆ ಬಿರಿಯಾನಣಿ ಹೇಳ್ತ ಶಬ್ದದ ಬಗ್ಯೆ ಒ೦ದು ಸಣ್ಣ ಎಲರ್ಜಿ ಹಾ೦ಗಾಗಿ ಅದ್ರತ್ರೆ ವಿಚಿತ್ರಾನ್ನ ಹೇಳಿಯೇ ಹೇಳಿದ್ದೆ.ಈ ಹೆಸರು ಸಿಕ್ಕಲೆ ತಡವಾದ ಕಾರಣ ಒಪ್ಪ ಕೊಡ್ಲೂ ತಡವಾತದ.ಹಾ೦ಗೆ ನಮ್ಮ ಬೋಸ ಭಾವನನ್ನೂ ಅವನ ಚನ್ಗಾಯಿಗಳನ್ನು ಬಪ್ಪಲೆ ಹೇಳ್ತರೆ ಕಮ್ಮಿಲಿ ಒ೦ದು ಹತ್ತು ಗುಜ್ಜೆದಾರು ವಿಚಿತ್ರಾನ್ನ ಮಾಡೇಕಕ್ಕು ಹಾ೦ಗಾಗಿ ರಜ ಜಾಗ್ರತೆ ಮಾಡಿಯೊ೦ಬದು ಒಳ್ಳೆದು.ಮತ್ತೆ ಮಾಡಿದ ಮತ್ತೆ ಪ್ಲೇಟು ಇಲ್ಲದ್ರು ನೆಡೆತ್ತು.ಅ೦ಬ್ರೆಪ್ಪುತಾಯೆಕು ಇರೆಟ್ಟು ಬಳಸ್ಲೆ ಎ೦ಕು ನೆಲಟ್ಟು ಬಳಸ್ಲೆ ಹೇಳ್ತ ಜಾತಿ ಅದ ನಮ್ಮ ಈ ಭಾವ೦ದ್ರು.ಒಪ್ಪ೦ಗಳೊಟ್ಟಿ೦ಗೆ.

  • ಮೋಹನಣ್ಣ,

   ತುಂಬಾ ಧನ್ಯವಾದ ನಿಂಗಳ ಪ್ರತಿ ಒಪ್ಪಕ್ಕೆ. ಇನ್ನಾಣ ವರ್ಷ ವಿಚಿತ್ರಾನ್ನ ಮಾಡಿ ಹೇಳಿಕ್ಕಿ ಹೇಂಗಾಯಿದು ಹೇಳಿ! ನಿಂಗೋ ಹೇಳಿದ್ದು ಸರಿ, ಬೈಲಿನ ಎನ್ನ ತಮ್ಮಂದ್ರಿಂಗೆ ರಜ್ಜ ಮಾಡಿದರೆ ಸಾಕಾವುತ್ತಿಲ್ಲೆ. ಅದರ ಅನುಭವ ಆಯಿದು ಎನಗೆ!! 🙂

   ಒಂದು ಕೊಶೀ ಇದ್ದು, ಬೈಲಿನ ತಮ್ಮಂದ್ರು ಅಕ್ಕ° ಇಂಥದ್ದು ತಿಂಡಿ ಮಾಡಿಕೊಡಿ ಹೇಳಿ, ಅಕ್ಕನ ಹತ್ತರೆ ತಿಂಡಿ ಮಾಡ್ಸಿಗೊಂಡು ತಿಂತವುದೇ!! 🙂
   ದೂರಲ್ಲಿಪ್ಪ ತಮ್ಮಂಗೆ ಹೋಪಗ ಕಟ್ಟಿ ಕೊಡೆಕ್ಕಿದಾ!!! ಇಲ್ಲದ್ದರೆ ಅವಂಗೆದೇ ಆಗದಾ ಅಕ್ಕ° ಈ ಸರ್ತಿ ಎಂತ ಮಾಡಿ ಕೊಟ್ಟಿದವಿಲ್ಲೆ ಹೇಳೀ!! 🙂

 2. ಪೆಂಗ says:

  ಯೇ ಶ್ರೀ ಅಕ್ಕೊ.

  ಆ ಕೆರೆಯ ಕರೆಲಿ ಇಪ್ಪ ಮರಲ್ಲಿ ಇನ್ನು ಒಂದು ಗುಜ್ಜೆ ಇದ್ದು ಕಾಣ್ತು!
  ಕೊಯಿದಪ್ಪಗ ಹೇಳಿ! ಅತ್ಲಾಗಿ ಬತ್ತೆಯೊ..

  • ಸುಭಗ says:

   ಪೆಂಗಣ್ಣೋ, ಅದಾ ಅಡ್ಕತ್ತಿಮಾರುಮಾವನ ಹಲಸಿನಮರ(ದ ಪಟ)ಲ್ಲಿ ಇನ್ನುದೆ ಗೆಜ್ಜೆ ಕಟ್ಟಿದ ಹಾಂಗೆ ಗುಜ್ಜೆ ನೇಲುತ್ತಾ ಇದ್ದು. ಬೇಕಾಷ್ಟು ಕೊಯ್ಕಂಡು ಬಪ್ಪಲಕ್ಕು. (ಎನಗೆ ಮಾಂತ್ರ ಅಲ್ಲೇ ಹೋಪಲೆ ಹೆದರಿಯೋಳ್ತು. ಕಟ್ಟಪ್ಪುಣಿ ಕರೇಂಗೆ ಎತ್ತುವಗ ‘ಭೂತ’ ಬಂದರೆ…??!)

   • @ಪೆಂಗ,

    [ಆ ಕೆರೆಯ ಕರೆಲಿ ಇಪ್ಪ ಮರಲ್ಲಿ ಇನ್ನು ಒಂದು ಗುಜ್ಜೆ ಇದ್ದು ಕಾಣ್ತು!]

    ಅದು ಯೇವ ಕೆರೆಯ ನೋಡಿ ಹೇಳಿದ್ದಪ್ಪಾ? 😉
    ಅಕ್ಕು ಗುಜ್ಜೆ ಸಿಕ್ಕಿಅಪ್ಪಗ ಹೇಳುತ್ತೆ ಆತಾ? 😉

    @ಸುಭಗಣ್ಣ,
    ಪಟಲ್ಲಿಪ್ಪದರ ನೋಡಿ, ಇದ್ದು ಹೇಳಿ ಹೋದರೆ ಮಾವ° ಕೊಡುಗಾ? ಅಲ್ಲಿ ಅವ್ವು ಮಾಡವಾ ಬಿರಿಯಾಣಿಯ?
    ಅವಕ್ಕಾಗಿ ಒಳುದರೆ ಕೊಡ್ತವಾ ಕೇಳುವ°. ಈಗ ಅಕೇರಿ ಆತನ್ನೆ? 🙂

 3. ಅನುಶ್ರೀ ಬಂಡಾಡಿ says:

  ಅಕ್ಕಾ,
  ಚೆ ಆನಿದರ ಓದುವಾಗ ಗುಜ್ಜೆ ಎಲ್ಲ ಬೆಳದಾಯ್ದನ್ನೇ. ಬಪ್ಪ ವರ್ಷ ಮಾಡೆಕ್ಕಷ್ಟೆ ಇನ್ನು.

  • ಅನುಶ್ರೀ,

   ಬಂಡಾಡಿಲಿ ಅಷ್ಟು ಬೇಗ ಗುಜ್ಜೆ ಬೆಳದಾತೋ? ಬಪ್ಪ ವರ್ಷ ಮಾಡ್ಲಕ್ಕಿದಾ.
   ಧನ್ಯವಾದ ಪ್ರತಿ ಒಪ್ಪಕ್ಕೆ! 🙂

 4. ಪೆಂಗ says:

  ಮೊನ್ನೆ ಆಯಿತ್ಯವಾರ ಈ ಸರ್ತಿಯಾಣ ಅಖೇರಿಯಾಣ ಗುಜ್ಜೆಂದ ಗುಜ್ಜೆ ಬಿರಿಯಾಣಿ ಮಾಡಿ ತಿಂದಾಯಿದು! ಬಾರಿ ಪಸ್ಟಾಗಿತ್ತು!

  • ಬೋಸ ಬಾವ says:

   ಓಯಿ ಭಾವ..
   ಎನ್ನ ದಿನುಗೋಳಿದ್ದಿಲ್ಲೆ.. ಒಬ್ಬನೇ ತಿ೦ದ್ಸೋ?? 🙁

   • ತೆಕ್ಕುಂಜ ಕುಮಾರ says:

    ಅನ್ಯಾಯ…ಮಹಾಅನ್ಯಾಯ..! ಹೀಂಗೊ ಮಾಡುಡೊ, , ನೆಲ ಉದ್ದುಲೆ ಬೋಸಭಾವನ ಹಳೆ ಶರ್ಟು ಬೇಕಾಯಿದು, ಬಿರಿಯಾನಿ ತಿಂಬಗ ನೆಂಪಾಯಿದಿಲ್ಲೆಯಾ..

    • ಪೆಂಗ says:

     ಯೇ ತೆಕ್ಕುಂಜೆ ಬಾವ

     ನಿಂಗಳ ಆ ವಾರ್ತೆ ಊರಿಲಿ ಎಲ್ಲಿಯಾದ್ರು ಗುಜ್ಜೆ ಇದ್ದರೆ ಹೇಳಿ ಬಂದಿಕ್ಕುತ್ತೆಯೋ ಎಂಗ!

     • ತೆಕ್ಕುಂಜ ಕುಮಾರ says:

      ಅಕ್ಕು..ನಿಂಗೊ ತ್ರಿಮೂರ್ತಿಗೊಕ್ಕೆ ಇದುವೇ ಹೇಳಿಕೆ.

     • ಪೆಂಗ says:

      ಹೇಳಿಕೆ ಸರಿ! ದಿನ ಯೇವತ್ತು ಹೇಳಿದ್ದಿಲ್ಲೆನ್ನೆ!
      ರಜಾ ಮೊದಲೇ ಹೇಳಿಕ್ಕಿ ಬೇರೆ ಊರಿಲಿದ್ದರೆ ಬೇಕಾವ್ತಿದಾ!

     • ತೆಕ್ಕುಂಜ ಕುಮಾರ says:

      ಸಂಗತಿ ಎಂತ ಹೇಳಿರೆ, ಎಂಗಳ ಊರಿನ ಗುಜ್ಜೆ ಬಿರಿಯಾಣಿಗೆ ‘ವರ್ಥ್’ ಅಲ್ಲ ಹೇಳಿದವು ಚೆನ್ನಬೆಟ್ಟಣ್ಣ ಮನ್ನೆ ಸಿಕ್ಕಿಪ್ಪಗ. ಇನ್ನು ‘ಮನೆದೇವರ’ ಕತ್ತಿ ಸಿಕ್ಕುವನ್ನಾರ ಕಾವದು, ಆಗದೋ..ಹೇಂ..

     • ಬೋಸ ಬಾವ says:

      ಆನು ಬತ್ತೆ ಆನು ಬತ್ತೆ.. 🙂
      ತಿ೦ಬಲೆ..!! 😉

     • ಕುಮಾರಣ್ಣ,

      [ ಎಂಗಳ ಊರಿನ ಗುಜ್ಜೆ ಬಿರಿಯಾಣಿಗೆ ‘ವರ್ಥ್’ ಅಲ್ಲ ಹೇಳಿದವು]

      ಅವ° ಹೇಳಿದ° ಹೇಳಿ ನಂಬಿಕ್ಕೆಡಿ!! ಅದು ಮನ್ನೆ ಜ್ವರ ಏರಿಪ್ಪಗ ಹೇಳಿರೆಕ್ಕು!! 😉
      ಅವಂಗೆ ತಿಂಬಲೆ ಆವುತ್ತಿಲ್ಲೆನ್ನೆ ಹಾಂಗೆ.
      ಎಂಗಳಲ್ಲಿ ಬಿರಿಯಾಣಿ ಮಾಡುವಾಗ ಹೇಳ್ತೆ ಬನ್ನಿ ಆತೋ!

     • ತೆಕ್ಕುಂಜ ಕುಮಾರ says:

      ಅದು ಸೆರಿ..! ಆನು ಮರವಲಿಲ್ಲೆ ಈ ಗುಟ್ಟಿನ…ಅಕ್ಕ !

     • ಬೋಸ ಬಾವ says:

      ಈ ಗುಟ್ಟಿನ ರಟ್ಟು ಮಾಡಿಕ್ಕೆಡಿ ಏ?? ಆತೊ..! 😉

     • ತೆಕ್ಕುಂಜ ಕುಮಾರ ಮಾವ° says:

      ಇದಾ , ಈಗ ಗುಟ್ಟಿನ ರಟ್ಟು ಮಾಡ್ತೆ. ಕಳುದ ಸರ್ತಿ ಎನಗೆ ಬಿರಿಯಾನಿ ತಿನ್ನೆಕ್ಕು ಹೇಳಿ ಗ್ರೇಶುವದ್ದೆ ಗುಜ್ಜೆ ಮುಗಿದತ್ತು. ಈ ಸರ್ತಿ ಶುರುವಾಣ ಗುಜ್ಜೆ ಆದಿಪ್ಪಗ ನಾವು ಶ್ರೀ ಅಕ್ಕನಲ್ಲಿ ಹಾಜರು. ಮೆಟ್ಟುಕಲ್ಲು ಹತ್ತುವಗಳೇ ಬಿರಿಯಾಣಿ ಪರಿಮಳ ಮೂಗಿಂಗೆ ಬಡುದತ್ತು, ಮತ್ತೆ ಅಲ್ಲಿ ಎಂತ ಮಾತಾಡಿದ್ದು ಎನ್ನ ಕೆಮಿಗೆ ಹೋಯ್ದಿಲ್ಲೆ. ಮೊಸರು ಗೊಜ್ಜಿನೊಟ್ಟಿಂಗೆ ತಿಂದದೆಷ್ಟು ಗೊಂತಾಯಿದಿಲ್ಲೆ.
      ತೃಪ್ತಿ ಆತಿದಾ.
      ಆನು ಹೇಳಿದ್ದು ಸತ್ಯ, ಗುಜ್ಜೆ ಬಿರಿಯಾನಿಯಾಣೆ ಸತ್ಯ…!!!

     • ಶೇಡಿಗುಮ್ಮೆ ಪುಳ್ಳಿ says:

      ಮೊಸರು ಗೊಜ್ಜಿನೊಟ್ಟಿಂಗೆ ತಿಂದದೆಷ್ಟು ಗೊಂತಾಯಿದಿಲ್ಲೆ.- ನಿಂಗೊ ಹೀಂಗೆ ಹೇಳಿರೆ ನೆಗೆಗಾರನ ಮೋರೆ ಹುಳಿ ಹುಳಿ ಅಕ್ಕನ್ನೇ….!

     • ಪೆಂಗಣ್ಣ says:

      ಯೇ ಮಾವ
      ಗುಜ್ಜೆ ಆಯಿದೂ ಹೇಳುವಾಗಲೇ ನಿಂಗೊ ಓಡಿಯೊಂಡು ಬಂದ್ಸು ಸಾಕು…

      ಬೋಚ ತಪಸ್ಸು ನಿಲ್ಲಿಸಿದ ಕೂಡ್ಲೆ ನಾವು ಹೋವ್ತು ಗುಜ್ಜೆ ಬಿರಿಯಾಣಿ ತಿಂಬಲೆ.. ನೆಗೆ ಮಾಣಿ ಈ ಸರ್ತಿಯೂ ಬಪ್ಪ ಅಂದಾಜಿ ಕಾಣ್ತಿಲ್ಲೆ..

     • jayashree.neeramoole says:

      ಮಾವ,

      ಈ ಸರ್ತಿ ಶ್ರೀ ಅಕ್ಕನಲ್ಲಿಗೆ ಹೋದರೆ ಎನಗೊಂದು ಸಹಾಯ ಮಾಡುವಿರೋ… ಇದೇ ಗುಜ್ಜೆ ಬಿರಿಯಾಣಿಯ ಎನಗೂ ಎನ್ನ ಮಗಂಗೂ ಸರಿ ಆವುತ್ತ ಹಾಂಗೆ (ಹೇಳಿರೆ ಗೊಂತಾತನ್ನೇ…ರುಚಿ ರುಚಿಯಾಗಿ ಆದರೆ ನೀರುಳ್ಳಿ/ಪೇಟೆ ಮಸಾಲೆ ಹೊಡಿ ಉಪಯೋಗಿಸದ್ದೆ) ಮಾಡುದು ಹೆಂಗೆ ಹೇಳಿ ತಿಳುದು ಹೇಳುವಿರೋ… ಈಗಲೇ ಧನ್ಯವಾದಂಗ… 🙂

     • ತೆಕ್ಕುಂಜ ಕುಮಾರ ಮಾವ° says:

      ಓ..ಅದಕ್ಕೆಂತ. ನಿಂಗೊ ಹೇಳಿದ ಹಾಂಗೆ ಮಾಡಿರಾತು. ಅದಕ್ಕೆ “ಗುಜ್ಜೆ ವಿಚಿತ್ರಾನ್ನ” ಹೇಳಿ ಹೆಸರುದೇ ಮಡಗಿದ್ದು ನಾವು.

     • ಜಯಶ್ರೀ ಅಕ್ಕ°,
      ನೀರುಳ್ಳಿ, ಬೆಳ್ಳುಳ್ಳಿ ನಿಂಗೋ ಉಪಯೋಗ ಮಾಡದ್ದರೆ ಹೀಂಗಿಪ್ಪ ಅಡಿಗೆ ಹೇಂಗೆ ಮಾಡುದು ಹೇಳಿ ಚಿಂತೆ ಮಾಡೆಡಿ. ಅಡಿಗೆ ಕೋಣೆಲಿ ಅದರ ಬದಲಿ ವ್ಯವಸ್ಥೆಗೋ ಇದ್ದೇ ಇರ್ತು ಅಲ್ಲದಾ?

      ಮಸಾಲೆ ಹಾಕುವಲ್ಲಿ ನಿಂಗೊಗೆ ಮನೆಲಿಯೇ ಮಸಾಲೆ ಮಾಡಿ ಹಾಕುಲಕ್ಕು.
      ♦ಕಾಯಿ ತುರಿಗೆ ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸು ಹಾಕಿ ಕಡದು ಬೇಶುವಾಗ ಸೇರ್ಸುಲಕ್ಕು.
      ♦ಕೊತ್ತಂಬರಿ ಸೊಪ್ಪು ಆಗದ್ದರೆ, ಶುಂಠಿ, ಹಸಿಮೆಣಸು, ಏಲಕ್ಕಿ, ಲವಂಗ, ಚೆಕ್ಕೆ ಹಾಕಿ ಕಡದು ಸೇರ್ಸುಲಕ್ಕು. ಕಾಯಿತುರಿ ಹಾಕೆಕ್ಕು ಹೇಳಿಯೇ ಇಲ್ಲೆ.

      ನಿಂಗೊಗೆ ಹೇಂಗೆ ಅನುಕೂಲವೋ ಹಾಂಗೆ ಮಾಡಿ ನೋಡಿ ಅಕ್ಕೋ. ಒಳ್ಳೆ ರುಚಿಯಾದ ಅಡಿಗೆಯೇ ಆವುತ್ತು.
      ಇದಕ್ಕೆ ಕೂಡುಲೆ ಇಪ್ಪದಕ್ಕೂ ಕೂಡಾ ನೀರುಳ್ಳಿ, ಬೆಳ್ಳುಳ್ಳಿ ಹಾಕದ್ದೆ ಮಾಡಿದರೂ ಆವುತ್ತು. ಕೊತ್ತಂಬರಿ ಸೊಪ್ಪು ಹಾಕಿ ಕಡದರೆ ಆತು.

     • jayashree.neeramoole says:

      ಧನ್ಯವಾದ ಶ್ರೀ ಅಕ್ಕ… ಎನ್ನ ಮಗ ರುಚಿಗೆ ಪ್ರಾಶಸ್ತ್ಯ ಕೊಡುದೂ… ಆನು ನಮ್ಮ ಕ್ರಮಂಗಳ ಒಳಿಶುಲೆ ಹೋರಾಡುದು… ಎನಗೆ ಈ ಬೈಲು ಸಿಕ್ಕಿದ್ದು… ಎಲ್ಲ ಸಾರ್ಥಕ ಆತು… ಇನ್ನೂ ಹಲವು “ರುಚಿ ರುಚಿಯಾದ ಹವ್ಯಕರ ಅಡಿಗೆಗಳ” ವೇಣಿಯಕ್ಕನ ಕೈಲಿ ಕಲಿಯೇಕ್ಕು ಹೇಳಿ ಇದ್ದು…

     • ಪೆಂಗ says:

      ಯೇ ತೆಕ್ಕುಂಜೆ ಬಾವ
      ನೆಗೆ ಮಾಣಿಗೆ ರೆಚ್ಚೆ ಹಿಡುದುಗಲಾಟೆ ಮಾಡ್ಲೆ ಮಾಂತ್ರ ಗೊಂತಿಪ್ಪದು ರೆಚ್ಚೆಲಿ ಬಪ್ಪ ಗುಜ್ಜೆ ಆಗ! ಹಾಂಗಾಗಿ ಅವ° ಇತ್ಲಾಗಿ ಮೋರೆಯೇ ಹಾಕಿದ್ದನಿಲ್ಲೆ!
      ಎಂಗೊ ಎರಡೇ ಜೆನ ಬಪ್ಪದು ಪೆಂಗನೂ ಬೋಚನು ಆತೋ!

     • ತೆಕ್ಕುಂಜ ಕುಮಾರ says:

      ನೆಗೆ ಮಾಣಿ ಇಲ್ಲದ್ದರೆ ಆಗ. ಆಂದು ಅವ ಬೋಸಭಾವನ ಸಾರಡಿ ತೋಡಿನ ನೀರಿಲಿ ಹಾಕಿ ಮಸಿ ಮೆತ್ತಿಸಿ ಮೀಸಿದ್ದಕ್ಕೆ ಬಂದ ಕೋಪ ಮನೆ ದೇವರಿಂಗೆ ಇನ್ನೂ ಇಳಿದ್ದಿಲೆ. ರಚ್ಚೆಯ ಕಾಸಿ ಅವನ ದೊಂಡೆಗೆ ಹಾಕುಲಿದ್ದಡ. ಕರೊಕ್ಕೊಂಡು ಬನ್ನಿ ಆಗದೋ..

     • ಬೋಸ ಬಾವ says:

      ಹ್ಮ್..! ಅಕ್ಕಕ್ಕು…!!
      ನಿ೦ಗೋ ಮೂರ್ತ ಫಿಕ್ಸು ಮಾಡಿ..
      ನಾವು ಊಟಕ್ಕೆ ಹಾಜರ್.. 😉

   • ಪೆಂಗ says:

    ಯೇ ಬೋಚ ಬಾವ
    ನಿನ್ನ ಹಾಂಗೆಲ್ಲ ಬಿಟ್ಟು ಹೋಪೆನೋ!

    ಆನು ತಿರುಗಾಟಲ್ಲಿ ಹೋಗಿಪ್ಪಗ ಊಟಕ್ಕೆ ಒಂದು ಮನೆಗೆ ಹೋದೆ ಅಲ್ಲಿ ಮೇಲರಕ್ಕೆ ಗುಜ್ಜೆ ಕೊರದು ಮಡುಗಿತ್ತವು! ಹೀಂಗೊಂದು ಮಾಡುಲಾವುತ್ತು ಹೇಳಿ ಅವರತ್ರೆ ಮಾಡಿಸಿ ತಿಂದದಿದಾ! ಇನ್ನು ಎಲ್ಲಿಯಾರು ಅಖೇರಿಯಾಣದ್ದು ಸಿಕ್ಕಿರೆ ಒಟ್ಟಿಂಗೆ ಹೋಪ! ಸುಭಗಣ್ಣ ಸುಂದರನ ಮರಕ್ಕೆ ಹತ್ತುಸುವ ಅಂದಾಜಿಲಿ ಇದ್ದನಡ! ಚೆನ್ನೆಬೆಟ್ಟಣ್ಣ ಸ್ವರ್ಗಲ್ಲಿ ಸಿಕ್ಕುಗೋ ಹೇಳಿ ಹುಡ್ಕಿಯೊಂಡು ಹೋಯಿದ!

    • ಬೋಸ ಬಾವ says:

     ಓ..!! ಅದಕ್ಕು.. ಅಕೇರಿಯ ನಾಲ್ಕು ಗುಜ್ಜೆ ಇದ್ದಲ್ಲಿ ತಿ೦ಬೋ.. 🙂
     ಸುಭಗಣ್ಣ೦ಗೆ ಹೇಳಿಕ್ಕು ಏ°?? 😀
     ಅಡ್ಡಿ ಇಲ್ಲೆ.. ಒಟ್ಟಿ೦ಗೆ ಹುಳಿ ಮೊಸರಿಲ್ಲಿ ಮಾಡಿದ ಮೇಲಾರವೂ ಇರಲಿ.. 😛
     ಪಲ್ಯ ಇದ್ದರೂ ಆಗದ್ದೆ ಇಲ್ಲೆ.. 😉

  • ಪೆಂಗಣ್ಣ,
   ನಿನಗೆ ಗುಜ್ಜೆ ಬಿರಿಯಾಣಿ ತಿಂಬಲೆ ಹೋಪಗ ಚೆನ್ನಬೆಟ್ಟಣ್ಣನ ಕರ್ಕೊಂಡು ಹೋಪಲೆ ಆವುತ್ತಿತನ್ನೇ!! ನಿನ್ನೆ ಎನ್ನ ಹತ್ತರೆ ಎನಗೆ ಅಪ್ಪಗ ಬಿರಿಯಾಣಿ ಮಾಡಿ ಕೊಟ್ಟಿದಿಲ್ಲೆ ಹೇಳಿದ್ದ° 😉 ಈ ವರ್ಷ ಆಗ ಬಪ್ಪ ವರ್ಷ ಮಾಡಿ ಕೊಡುವ° ಹೇಳಿದೆ!!!

   • ಪೆಂಗ says:

    ಅಕ್ಕಾ
    ಬಪ್ಪ್ಲೆ ಹೇಳಿತ್ತಿದ್ದೆ! ಆನು ಅವನ ಮನೆ ಹತ್ರಂಗೆ!
    ಅವಂದು ಒಂದೇ ಕಂಡಿಶನ್ನು! “ಎನಗೆ ಸ್ವರ್ಗದ ಗುಜ್ಜೆಯೇ ಅಯೇಕು” ಹೇದು!
    ಎಂತ ಮಾಡುದಪ್ಪ! ನಮ್ಮಂದ ಆಗ ಹೇಳಿ ಬಿಟ್ಟೆ!

 5. ಸುಭಗ says:

  ಯೇ ಭಾವಾ.. ಸ್ವರ್ಗಲ್ಲಿ ಗುಜ್ಜೆ ಸಿಕ್ಕದ್ದೆ ಇಕ್ಕೋ? ಅಲ್ಲಿ ಮಜ್ಜಿಗೆ ಮಾಂತ್ರ ಅಲ್ಲದೋ ಸಿಕ್ಕದ್ದೆ ಇಪ್ಪದು?

  ಹೋ! ಸುಂದರ ಗುಜ್ಜೆ ಕೊಯ್ದ ಕತೆ ಕೇಳ್ತಿರೋ- ಇದಾ,ಅದು ಮದ್ದು ಬಿಡ್ಲೆ ಹಲಸಿನಮರದ ಹತ್ರೆ ಇಪ್ಪ ಅಡಕ್ಕೆಮರಕ್ಕೆ ಹತ್ತಿಯಪ್ಪಗ ಮೆಲ್ಲಂಗೆ ಒಂದು ರಿಕ್ವೆಸ್ಟ್ ಮಾಡಿದೆ. ‘ಅಪಗ ಗಳೆಕ್ಕ್ ಒಂಜಿ ಕತ್ತಿ ಕಟ್ಟ್ ದ್ ಕೊರ್ಲೆ’ ಹೇಳಿತ್ತು. (ಚೆನ್ನೈಭಾವ ಈ ಐಡಿಯ ಅಂದೇ ಹೇಳಿಕೊಟ್ಟಿತ್ತಿದ್ದ. ಹಾಂಗಾಗಿ ಆನು ಕೊಕ್ಕೆ ಮದಲೇ ರೆಡಿ ಮಾಡಿತ್ತಿದ್ದೆ) ಕೊಕ್ಕೆ ಕೊಟ್ಟೆ ಸುಂದರಂಗೆ. ಮರದ ಕೊಡೀಲಿ ಆಕಾಶದಷ್ಟು ಎತ್ತರಲ್ಲಿ ಇದ್ದ ಒಂದು ಗುಜ್ಜೆಗೆ ಕೊಕ್ಕೆ ಹಾಕಿತ್ತು. ಹಾಕಿದ್ದು ಮಾಂತ್ರ ಅಲ್ಲ; ಹಾಕಿ ಒಂದು ಬಲುಗಾಣ ಬಲುಗಿತ್ತು.

  ಗುಜ್ಜೆ ಬಿದ್ದಿದಿಲ್ಲೆ.
  ಏಕೆ ಬಿದ್ದಿದಿಲ್ಲೆ..?
  ಗುಜ್ಜೆಯ ತೊಟ್ಟಿಂಗೆ ಅಲ್ಲದ್ದೆ ಗೆಲ್ಲಿಂಗೆ ಕೊಕ್ಕೆ ಹಾಕಿ ಬಲುಗಿರೆ ಗುಜ್ಜೆ ಬೀಳುಗೊ?
  ಮತ್ತೆಂತಾತು ಅಂಬಗ?
  ಅಪ್ಪದೆಂತರ..! ಕತ್ತಿ ಮರಲ್ಲಿ ಬಾಕಿ..!!

  ಗುಜ್ಜೆ ಬಿರಿಯಾನಿ ಕತೆ ಗೋ…ವಿಂದ! ಬಿರಿಯಾನಿ ಆಶೆ ಪೂರಾ ಬಿರುದತ್ತು! 🙁

  • ಯೇ ಬಾವ
   ಆ ಮರದ ಕೊಡಿಲೀ ಇಪ್ಪ ಕತ್ತಿಯ ತೆಗವಲೆ ಕಲ್ಮಡ್ಕ ಅನಂತನ ಹತ್ರೆ ಇಕ್ನೀಸು ಇದ್ದಡ! ಅವಂಗೆ ಹೇಳೆಕ್ಕೋ?

   • ಸುಭಗ says:

    ಹ್ಹ! ಅದು ಆಗದ್ದೆ ಇಲ್ಲೆ. ಬೇಗ ಬಪ್ಪಲೆ ಹೇಳಿ ಭಾವಾ- ಏಕೆ ಹೇಳಿರೆ ಕೊಕ್ಕೆಗೆ ಕಟ್ಟಿದ್ದು ಮನೆದೇವರು ತೋಟಕ್ಕೆ ಕೊಂಡೋಪ ಕತ್ತಿ..!

    ಹಾಂಗೆಯೇ, ಮೆಟ್ಟುಕತ್ತಿಗೆ ಹಿಡುದ ಹಲಸಿನಮೇಣ ತೆಗೆತ್ತ ಇಕ್ಣೀಸು ಎಂತಾರು ಇದ್ದೊ ಕೇಳಿ ಅನಂತನತ್ರೆ..

    • ಬಾವ
     ಅದು ಸರಿ! ಅವಾ° ಅತ್ಲಾಗಿ ಕೋಲ್ಚಾರು ಹೋಡೇಲಿ ಇದ್ದನಡ! ಬಪ್ಪಗ ಅಲ್ಲಿಗೆ ಬಪ್ಪಲೆ ಹೇಳಿದ್ದೆ! ಹೇಂಗು ದಾರಿ ಆವ್ತನ್ನೆ ಅವಂಗೆ!
     ಅವಾ° ಯಾವೆಲ್ಲ ಇಕ್ನೀಸು ಇದ್ದು ಹೇಳುಗು!

  • ಸುಭಗಣ್ಣಾ,

   ಛೆ! ನಿಂಗೋ ಅಷ್ಟು ತಯಾರಿ ಮಾಡಿದರೂ ಕೂಡಾ ಗುಜ್ಜೆ ಸಿಕ್ಕಿದ್ದಿಲ್ಲೆನ್ನೆ!!! ಅದರ ಮೇಗಂದ ಮನೆದೇವರ ಕತ್ತಿ ಮರಲ್ಲೇ ಬಾಕಿ ಆತು. ಅಂತೂ ಎರಡೆರಡು ಸಹಸ್ರನಾಮಕ್ಕೆ ಕೊರತೆ ಇಲ್ಲೆ ಅಂಬಗ!!
   ಬಿರಿಯಾಣಿ ಮಾಡ್ಲೆ ಹೇಳಿ ಕೊಟ್ಟ ಎನಗೂ ಇಕ್ಕು ಒಟ್ಟಿಂಗೆ ಅರ್ಚನೆ ಅಲ್ಲದೋ? 🙁 😉

   ಅಜ್ಜಕಾನ ಭಾವ° ಹೇಳಿದ ಹಾಂಗೆ ಅನಂತನ ಹತ್ತರೆ ಏನಾರು ಕೆಣಿ ಇಕ್ಕು. ಆದರೆ ಅವ° ಎಷ್ಟು ಹೊತ್ತಿಂಗೆ ಸಿಕ್ಕುಗು ಹೇಳಿ ಮಾಂತ್ರ ಹೇಳುಲೆಡಿಯ!!! 😉

   ಸುಭಗಣ್ಣ,

   [ಮೆಟ್ಟುಕತ್ತಿಗೆ ಹಿಡುದ ಹಲಸಿನಮೇಣ ತೆಗೆತ್ತ ಇಕ್ಣೀಸು ]

   ಇದರ ಬಗ್ಗೆ ಮೊನ್ನೆ ಬೈಲ ಕರೇಲಿ ಆರೋ ಮಾತಾಡಿದ್ದು ಕೇಳಿದ ಹಾಂಗೆ ಆವುತ್ತಪ್ಪ!! ನಿಂಗೊಗೆ ನೆಂಪಾತಾ ಆರು ಹೇಳಿ!! 😉 😉

   • ಸುಭಗ says:

    ಶ್ರೀ ಅಕ್ಕಾ, ಮನೆದೇವರು ನಿನ್ನೆಯೇ ಅದರ ತಮ್ಮನ ಮನೆಗೆ ಹೋಯಿದು. ಫೋನ್ ಮಾಡಿ ‘ಇಂದು ಬರೆಕಾ? ನಾಳೆ ಬಂದರೆ ಸಾಕಾ?’ ಕೇಳಿತ್ತು. ‘ಅರ್ಜೆಂಟಿಲ್ಲೆ; ಎರಡು ದಿನ ಸಾವಕಾಶ ಕೂದು ಬಾ’ ಹೇಳಿದ್ದೆ. ಅಷ್ಟಪ್ಪಗ ಅನಂತ ಬಂದು ಕತ್ತಿ ತೆಗದುಕೊಟ್ಟರೆ ಬಚಾವ್.
    ಕೊಕ್ಕೆಗೆ ಕತ್ತಿ ಕಟ್ಟುತ್ತ ಏರ್ಪಾಡು ಹೇಳಿಕೊಟ್ಟ ಗಣೇಶಣ್ಣ, ಬೊಳುಂಬುಮಾವ, ಚೆನ್ನೈಭಾವ- ಇವು ಆರುದೆ ಓಟೆ ಬೆದುರಿಂಗೆ ಹಾಳೆಬಳ್ಳಿಲಿ ಕತ್ತಿ ಕಟ್ಟಿ ಗುಜ್ಜೆ ಕೊಯ್ವಲೆ ಎಡಿಯ ಹೇಳಿ ಹೇಳಿದ್ದವಿಲ್ಲೆ. ಹಾಂಗಾಗಿ ಕತ್ತಿ ಮರಲ್ಲಿ ಬಾಕಿ ಆದ್ದರ ಸಂಪೂರ್ಣ ಹೊಣೆಗಾರಿಕೆ ಈ ಮೂರು ಜೆನರದ್ದು! 😉
    ಮೆಟ್ಟುಕತ್ತಿಂದ ಮೇಣ ತೆಗವ ಇಕ್ಣೀಸು ಹೇಳಿಕೊಟ್ಟು ಎನ್ನ ಲಗಾಡಿ ತೆಗದ್ದು ಆರು ಹೇಳಿ ಇಡೀ ನೆರೆಕರೆಗೆ ಗೊಂತಿದ್ದು. ‘ಆ ಮನುಷ್ಯ’ ಸಿಕ್ಕಲಿ ಎನ್ನ ಎದುರು ಒಂದಾರಿ!

    • ಗಣೇಶ says:

     ಏ ಸುಭಗ ಭಾವಾ.. ಕೊಕ್ಕೆಗೆ ಕತ್ತಿ ಕಟ್ಟುವಗ ಗಟ್ಟಿಗೆ ಬಾಳೆಬಳ್ಳೆ ಚೆ೦ಡಿ ಮಾಡಿ ಕಟ್ಟೆಡದೊ? 😉
     {@ ಆರುದೆ ಓಟೆ ಬೆದುರಿಂಗೆ ಹಾಳೆಬಳ್ಳಿಲಿ ಕತ್ತಿ ಕಟ್ಟಿ ಗುಜ್ಜೆ ಕೊಯ್ವಲೆ ಎಡಿಯ ಹೇಳಿ ಹೇಳಿದ್ದವಿಲ್ಲೆ.}.. ಬೀಡಿ ಕಟ್ಟುತ್ತ ನೂಲು ತೆಕ್ಕೊ೦ಡು ಬಪ್ಪ೦ಗಾಯಿ ಗೆಲ್ಲಿ೦ಗೆ (ಬಪ್ಪ೦ಗಾಯಿ ಎಲೆಯ ಓಟಗೆ) ನೇಣು ಹಾಕಿರೆ ಜೀವ ಹೋಗ ಹೇಳಿ ಪ್ರತ್ಯೇಕ ಹೇಳಿ ಕೊಡೆಕೋ?.. 😉

    • ಬಾವ ಕಲ್ಮ್ಡಡ್ಕ ಅನಂತ ಸಿಕ್ಕಿದನೋ!

     • ಸುಭಗ says:

      ಕಲ್ಮಡ್ಕ ಅನಂತ?! ಹ್ಹ!! ಆಚಾರಿಗೊ,ಟೈಲರುಗೊ,ವಾಚು-ರೇಡ್ಯ ರಿಪೇರಿಯವು,ಮೇಸ್ತ್ರಿಗೊ,ಮದ್ದು ಬಿಡುವವು….ಮತ್ತೆ ಈ ಅನಂತ- ಒಪ್ಪಿದ ದಿನಕ್ಕೆ ಕೆಲಸ ಮಾಡಿಕೊಟ್ಟದು ಇದ್ದೊ ಎಲ್ಲ್ಯಾರು?? ‘ಬತ್ತೆ ಬತ್ತೆ’ ಹೇಳಿ ಬತ್ತಿ ಮಡುಗುವವೇ ಎಲ್ಲೋರುದೇ.

      ಭಾವಾ, ಮಂಗಂಗಳಿಂದ ನವಗೆ ಬರೇ ಉಪದ್ರ ಮಾಂತ್ರ ಹೇಳಿ ಇಷ್ಟು ದಿನ ಗ್ರೇಶಿಂಡು ಇದ್ದಿದ್ದೆ. ರಜ ರಜ ಉಪಕಾರವೂ ಇದ್ದು ಹೇಳಿ ಇಂದು ಗೊಂತಾತು. ಹಲಸಿನಣ್ಣು ಮುಕ್ಕುಲೆ ಬಂದ ಮಂಗಗಂಗೊ ಮರಲ್ಲಿ ಲಾಗ ಹಾಕುವಗ ಆ ಕತ್ತಿ ಕೆಳ ಬಿದ್ದತ್ತು. ಹಾಂಗಾಗಿ ಬಚಾವ್! ಅಲ್ಲದ್ರೆ ಆನು ಬೀಡಿನೂಲು ತೆಕ್ಕಂಡು ಬಪ್ಪಂಗಾಯಿ ಸೆಸಿ ಹತ್ರಂಗೆ ಹೋಯೆಕ್ಕಾವ್ತಿತ್ತು!

 6. ಯೇ ಶ್ರೀ ಅಕ್ಕೊ ಈ ಭಾವ೦ದ್ರು,ತಮ್ಮ೦ದ್ರು ಸೇರಿ ಗುಜ್ಜೆ ವಿಚಿತ್ರಾನ್ನವ ವಿಚಿತ್ರ ಮಾಡಿ ಬಿಟ್ಟವನ್ನೆ. ಅದರೆಡೆಲಿ ಈ ಸುಭಗ ಭಾವ೦ ಕತ್ತಿಲಿ ಕೆಣುದ್ದದು,ಮನೆ ದೇವರು ಇತ್ಲಾಗಿ ಮಾಡ್ತ ಅರ್ಚನಗೆ ತಯಾರೇ ಆಯೆಕು ಅವ೦.ಮತ್ತೆ ಹಲಸಿನ ಕಾಯಿ ಮೇಣ ತೆಗವಲೆ ಅಷ್ಟೆಲ್ಲಾ ಕೆಲಸ ಇಲ್ಲೆ.ಒ೦ದಾರಿ ಒಲೆಲಿ ಕೆ೦ಡ ಮಾ೦ತ್ರ ಇಪ್ಪಾಗ ಮೆಟ್ಟು ಕತ್ತಿಯ ಒಲಗೆ ಹಿಡುದು ಮೇಣ ಉದ್ದಿ ತೆಗದರಾತು.ಮೇಣ ಹೋಯಿದೋ ನೋಡ್ಲೆ ಬೋಸ ಭಾವನತ್ರೆ ಬೆಶೀಗೇ ಒ೦ದಾರಿ ಉದ್ಸೀರೆ ಆತು.

  • ಸುಭಗ says:

   ಮೋಹನಣ್ಣ, ಇದೇ ಕೆಣಿಯ ಮನ್ನೆ ಎನಗೆ ನೆಗೆಮಾಣಿ ಹೇಳಿಕೊಟ್ಟದು. ಒಲೆಲಿ ಒಳ್ಳೆತ ನಿಗಿನಿಗಿ ಕೆಂಡ ಇದ್ದತ್ತು. ಮೆಟ್ಟುಕತ್ತಿ ಮಡುಗಿದೆ. ಅಷ್ಟಪ್ಪಗ ಒಪ್ಪಣ್ಣನ ಫೋನ್ ಬಂತು. ಅರ್ಧ ಗಂಟೆ ಮಾತಾಡಿದ. ಎನಗೆ ಮೆಟ್ಟುಕತ್ತಿ ಮರದತ್ತು. ಮತ್ತೆ ನೆಂಪಾಗಿ ಹೋಗಿ ನೋಡಿಯಪ್ಪಗ ಮೆಟ್ಟು ಬೇರೆ- ಕತ್ತಿ ಬೇರೆ ಆಗಿಂಡಿದ್ದು..!! 🙁

  • ಬೋಸ ಬಾವ says:

   ಶ್ರೀಅಕ್ಕೊ.. ಎನೇ ಆಗಲಿ.. ಗುಜ್ಜೆ ಬಿರಿಯಾನಿ, ನಮ್ಮ ಬಯಲಿನೋಕ್ಕೆ ಭಾರೀ ಇಷ್ಟ ಆಯಿದು.. 🙂
   ಎಲ್ಲಾರಿ೦ಗು ನಾಲ್ಕು ನಾಲ್ಕು ಪ್ಲೇಟು ಮಾಡಿಕ್ಕಿ… ಏ? 😛
   ಒಟ್ಟೂ 100 😉 ಜೆನ ಕಮ್ಮಿ ಬಾರವ್ವು.. ಆತೋ.. 😉

 7. ಗಣೇಶ ಮಾವ° says:

  ಶ್ರೀ ಅಕ್ಕಾ,ಇನ್ನಾಣ ಸರ್ತಿ ಕಾನಾವಿಲಿ ಗುಜ್ಜೆ ಬಿರಿಯಾನಿ ಅಪ್ಪಗ ತಿಳಿಶಿಕ್ಕಿ.ಇದುವರೆಗೆ ರುಚಿ ನೋಡಿದ್ದಿಲ್ಲೆ.ಈಗ ಚಿತ್ರಲ್ಲಿ ಕಾಂಬ ಭಾಗ್ಯ ಸಿಕ್ಕಿತ್ತು.

 8. ಸುಭಗಣ್ಣೋ ಮನೆದೇವರ ಅರ್ಚನಗೆ ಕತ್ತಿಯೊಟ್ಟಿ೦ಗೆ ಮೆಟ್ಟು ಕತ್ತಿಯೂ ಸೇರಿತ್ತೊ?ಅ೦ಬಗ ಅಪ್ಪನ ಮನೆಲಿ ನಿ೦ಬಲೆ ಒ೦ದಷ್ಟು ಹೆಚ್ಹುದಿನವೇ ಕೊಡುವದು ಒೞೆದು.ಸದ್ಯಕ್ಕೆ ಇಲ್ಲಿ ಆನೇ ಸುದಾರ್ಸಿಗೊ೦ಬೆ ನಿನಗೆ ಅಪ್ಪನ ಮನೆಲಿ ನಿಲ್ಲೇಕು ಹೇಳ್ತಷ್ಟು ದಿನ ನಿ೦ದುಗೊ ಹೇಳುವದೇ ಒೞೆದು.ಅಪ್ರುಪಕ್ಕೆ ಬಪ್ಪಗ ಕತ್ತಿ ಮೆಟ್ಟುಕತ್ತಿ ಎಲ್ಲ ಮರಗು.ಮತ್ತೆ ನೆ೦ಪಪ್ಪಲಪ್ಪಗ ನೆಗೆಮಾಣಿಯನ್ನೋ ಬೋಸ ಭಾವನನ್ನೊ ತೋರ್ಸಿರಾತು.ಒಪ್ಪ೦ಗಳೊಟ್ಟಿ೦ಗೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *