ಹಲಸಿನಕಾಯಿ ಗುಜ್ಜೆ ಚಟ್ನಿ

February 12, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನಕಾಯಿ ಗುಜ್ಜೆ ಚಟ್ನಿ

ಬೇಕಪ್ಪ ಸಾಮಾನುಗೊ:

  • 1.5 – 2 ಕಪ್(ಕುಡ್ತೆ) ಕೊರದ ಹಲಸಿನಕಾಯಿ ಗುಜ್ಜೆ
  • 1 ಕಪ್(ಕುಡ್ತೆ) ಕಾಯಿ ತುರಿ
  • ಸಣ್ಣ ತುಂಡು ಮಾವಿನಕಾಯಿ ಅಥವಾ ದ್ರಾಕ್ಷೆ ಗಾತ್ರದ ಹುಳಿ
  • 2 – 3 ಹಸಿಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1/2 ಚಮ್ಚೆ ಸಾಸಮೆ
  • 1/4 ಚಮ್ಚೆ ಜೀರಿಗೆ
  • 1-2 ಮುರುದ ಒಣಕ್ಕು ಮೆಣಸು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಅದರ ಗೂಂಜು, ಹೆರಾಣ ರೆಚ್ಚೆಯ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ಕೊರದು, ಒಂದು 5 ನಿಮಿಷ ನೀರಿಲ್ಲಿ ಹಾಕಿ ತೆಗದು ಮಡುಗಿ.

ಇದರ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ಉಪ್ಪು, ರೆಜ್ಜ ನೀರು ಹಾಕಿ ಬೇಶಿ.(1-2 ಸೀಟಿ ಬಂದರೆ ಸಾಕು)
ಮಿಕ್ಸಿಗೆ ಕಾಯಿ ತುರಿ, ಹಸಿಮೆಣಸು, ಮಾವಿನಕಾಯಿ / ಹುಳಿ, ಉಪ್ಪು ಹಾಕಿ, ರೆಜ್ಜ ನೀರು ಹಾಕಿ ಸಾಧಾರಣ ನೊಂಪಿಂಗೆ ಕಡೆರಿ.
ಅದಕ್ಕೆ ಈ ಬೆಂದ ಗುಜ್ಜೆ ಬಾಗವ ಹಾಕಿ ಮಿಕ್ಸಿಯ ಒಂದು ನಿಮಿಷ ತಿರುಗ್ಸಿ.

ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ರೆಜ್ಜ ಹೊತ್ತು ಮಡುಗಿ, ಚಟ್ನಿಗೆ ಹಾಕಿ, ತೊಳಸಿ.
ಇದು ದೋಸೆ, ಇಡ್ಲಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಬೆಟ್ಟುಕಜೆ ಮಾಣಿ
    ಬೆಟ್ಟುಕಜೆ ಮಾಣಿ

    ಇದರ ಮಾಡ್ಲೇ ಬೇಕು..ನೊದ್ವ ಗುಜ್ಜೆಯ ಸೀಸನ್ ಸುರು ಅತದ..

    [Reply]

    VN:F [1.9.22_1171]
    Rating: 0 (from 0 votes)
  2. parvathi marakini

    ಎಂಗೊ ಪೇಟೆಲಿ ಇಪ್ಪೊರಿಂಗೆ ಗುಜ್ಜೆ ಸಿಕ್ಕುದು ಅಪುರೂಪ. ಕೊದಿ ಆವ್ಥು ತಿಂಬಲೆ. ಗುಜ್ಜೆದು ಚಟ್ನಿ ಮಾಡ್ಲಾವ್ಥು ಹೇಳಿ ಗೊಂತಿತ್ತಿಲ್ಲೆ. ಲಾಯಿಕದ ಪಾಕ ಹೇಳಿ ಕೊಟ್ಟ್ತದಕ್ಕೆ thanks. ಖಂಡಿತ ಮಾದಿ ತಿನ್ನೆಕ್ಕು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆವಾಣಿ ಚಿಕ್ಕಮ್ಮಪುಟ್ಟಬಾವ°ಸರ್ಪಮಲೆ ಮಾವ°ಒಪ್ಪಕ್ಕಡಾಗುಟ್ರಕ್ಕ°ಅಕ್ಷರದಣ್ಣಸುಭಗಶ್ಯಾಮಣ್ಣಕಜೆವಸಂತ°ನೀರ್ಕಜೆ ಮಹೇಶಬಟ್ಟಮಾವ°ಪುತ್ತೂರುಬಾವಡೈಮಂಡು ಭಾವಬಂಡಾಡಿ ಅಜ್ಜಿಸಂಪಾದಕ°ಜಯಶ್ರೀ ನೀರಮೂಲೆವಿನಯ ಶಂಕರ, ಚೆಕ್ಕೆಮನೆಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ಚುಬ್ಬಣ್ಣಅಡ್ಕತ್ತಿಮಾರುಮಾವ°ರಾಜಣ್ಣಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ