Oppanna.com

ಹಲಸಿನಕಾಯಿ ಗುಜ್ಜೆ ಹುಳಿಮೆಣಸಿನ ಕೊದಿಲು

ಬರದೋರು :   ವೇಣಿಯಕ್ಕ°    on   12/03/2013    2 ಒಪ್ಪಂಗೊ

ವೇಣಿಯಕ್ಕ°

ಹಲಸಿನಕಾಯಿ ಗುಜ್ಜೆ ಹುಳಿಮೆಣಸಿನ ಕೊದಿಲು

ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ
  • 1/4 ಚಮ್ಚೆ ಅರುಶಿನ ಹೊಡಿ ಅಥವಾ ಸಣ್ಣ ತುಂಡು ಅರುಶಿನ
  • ಚಿಟಿಕೆ ಮೆಣಸಿನ ಹೊಡಿ
  • ದ್ರಾಕ್ಷೆ ಗಾತ್ರದ ಓಟೆ ಹುಳಿ
  • ದ್ರಾಕ್ಷೆ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ)
  • 5-6 ಒಣಕ್ಕು ಮೆಣಸು
  • 3/4 -1 ಕಪ್ ಕಾಯಿತುರಿ
  • ರುಚಿಗೆ ತಕ್ಕಸ್ಟು ಉಪ್ಪು
  • 3-4 ಬೆಳ್ಳುಳ್ಳಿ (ಬೇಕಾದರೆ ಮಾತ್ರ)
  • 1/2 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಅದರ ಗೂಂಜು(ಗೂಂಜಿನ ಪೂರ್ತ್ ತೆಗವದು ಬೇಡ), ಹೆರಾಣ ರೆಚ್ಚೆಯ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ಕೊರದು, ಒಂದು 5 ನಿಮಿಷ ನೀರಿಲ್ಲಿ ಹಾಕಿ ತೆಗದು ಮಡುಗಿ.

ಇದರ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ಉಪ್ಪು, ಚಿಟಿಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಬೆಲ್ಲ, ರೆಜ್ಜ ನೀರು ಹಾಕಿ ಬೇಶಿ.(1-2 ಸೀಟಿ ಬಂದರೆ ಸಾಕು)

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಒಣಕ್ಕು ಮೆಣಸು, ಅರುಶಿನ ಹೊಡಿ/ಕೊಂಬು, ಹುಳಿ, ಬೇಕಾಸ್ಟು ನೀರು ಹಾಕಿ ನೊಂಪು ಕಡೆರಿ. ಕುಕ್ಕರಿನ ಪ್ರೆಶರ್ ಹೋದ ಮೇಲೆ, ಇದರ ಬೇಶಿದ  ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು.(ಉಪ್ಪು, ನೀರು ಬೇಕಾದಸ್ಟು ಹಾಕಿ.)  ಸಣ್ಣ ಕಿಚಿಲ್ಲಿ ಒಂದು 5 ನಿಮಿಷ ಮಡುಗಿ. ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಕೊದಿಲಿಂಗೆ ಹಾಕಿ. ಇದು ಅಶನ, ದೋಸೆ, ರೊಟ್ಟಿ, ಕೊಟ್ಟಿಗೆ, ಉಂಡೆ, ಚಪಾತಿ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

2 thoughts on “ಹಲಸಿನಕಾಯಿ ಗುಜ್ಜೆ ಹುಳಿಮೆಣಸಿನ ಕೊದಿಲು

  1. ಹಾಯ್.. ಗುಜ್ಜೆ ಬಂತದಾ. ಗುಜ್ಜೆ ಹುಳಿಮೆಣಸಿನ ಕೊದಿಲು ಪ್ರಯೋಗ ಇನ್ನು ಮಾಡೇಕ್ಕಷ್ಟೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×