ಹಲಸಿನಕಾಯಿ ಗುಜ್ಜೆ ಮೇಲಾರ

February 26, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನಕಾಯಿ ಗುಜ್ಜೆ ಮೇಲಾರ

ಬೇಕಪ್ಪ ಸಾಮಾನುಗೊ:

 • 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ
 • 2 ಕಪ್(ಕುಡ್ತೆ) ಕಾಯಿ ತುರಿ
 • 1.5 ಕಪ್(ಕುಡ್ತೆ) ಮಜ್ಜಿಗೆ
 • ಚಿಟಿಕೆ ಅರುಶಿನ ಹೊಡಿ
 • 1/4 ಚಮ್ಚೆ ಮೆಣಸಿನ ಹೊಡಿ
 • 1-2 ಹಸಿಮೆಣಸು
 • ರುಚಿಗೆ ತಕ್ಕಸ್ಟು ಉಪ್ಪು
 • 1 ಚಮ್ಚೆ ಸಾಸಮೆ
 • 1-2 ಮುರುದ ಒಣಕ್ಕು ಮೆಣಸು
 • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಅದರ ಗೂಂಜು(ಗೂಂಜಿನ ಪೂರ್ತ್ ತೆಗವದು ಬೇಡ), ಹೆರಾಣ ರೆಚ್ಚೆಯ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ಕೊರದು, ಒಂದು 5 ನಿಮಿಷ ನೀರಿಲ್ಲಿ ಹಾಕಿ ತೆಗದು ಮಡುಗಿ.

ಇದರ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ಉಪ್ಪು, ಅರುಶಿನ ಹೊಡಿ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ.(1-2 ಸೀಟಿ ಬಂದರೆ ಸಾಕು)

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ. ಅದು ರೆಜ್ಜ ನೊಂಪಪ್ಪಗ ಖಾರಕ್ಕೆ ಬೇಕಪ್ಪಸ್ಟು ಹಸಿಮೆಣಸು ಹಾಕಿ, ಕಾಯಿಯ ನೊಂಪಿಂಗೆ ಕಡೆರಿ.
ಇದರ ಬೇಶಿದ ಬಾಗಕ್ಕೆ ಹಾಕಿ, ಹುಳಿಗೆ ಬೇಕಪ್ಪಸ್ಟು ಮಜ್ಜಿಗೆಯನ್ನೂ ಹಾಕಿ, ತೊಳಸಿ, ಕೊದುಶೆಕ್ಕು.(ಉಪ್ಪು, ನೀರು ಬೇಕಾದರೆ ಹಾಕಿ.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು.
ಅದು ಹೊಟ್ಟಿ ಅಪ್ಪಗ, ಒಗ್ಗರಣೆಯ ಮೇಲಾರಕ್ಕೆ ಹಾಕಿ. ಇದು ಅಶನ, ದೋಸೆ, ಕೊಟ್ಟಿಗೆ, ಉಂಡೆ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಬೆಂಗ್ಳೂರಲ್ಲಿಪ್ಪ ನಂಗೊಕೆ ೫೦-೬೦ ರೂಪಾಯಿ ಕೊಟ್ಟು ಹಲಸಿನ ಗುಜ್ಕೆ ತಂದು ತಿಂಬಾಗ ಊರಲ್ಲಿ ನಮ್ಮನೆಯಲ್ಲಿಲ್ಲದ್ದಿದ್ದರೂ ಆಚೀಚೆ ಮನೆಯವು ಪ್ರೀತಿಯಿಂದ ಕೊಡುವುದು ನೆನ್ಪಾಗಿ ಊರಿನ ನೆನಪು ಮರುಕಳಿಸ್ತು..ಮೇಲಾರ ಮಾಡುದು ಗೊತ್ತಿಲ್ಯಾಗಿತ್ತು..ಮಾಡಿ ನೋಡ್ತೆ ಅಕ್ಕಾ….:D

  [Reply]

  VA:F [1.9.22_1171]
  Rating: +1 (from 1 vote)
 2. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಅಕ್ಕನ ವಿವರಣೆ ಚಿತ್ರ ಸಹಿತ..ತುಂಬಾ ಲಾಇಕಾಯಿದು..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಪೆಂಗಣ್ಣ°ಮಾಷ್ಟ್ರುಮಾವ°ವೆಂಕಟ್ ಕೋಟೂರುಮುಳಿಯ ಭಾವದೊಡ್ಮನೆ ಭಾವvreddhiಯೇನಂಕೂಡ್ಳು ಅಣ್ಣಪುತ್ತೂರುಬಾವಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆದೊಡ್ಡಮಾವ°ಅಡ್ಕತ್ತಿಮಾರುಮಾವ°ಸುಭಗಚುಬ್ಬಣ್ಣದೀಪಿಕಾಅನು ಉಡುಪುಮೂಲೆಪುತ್ತೂರಿನ ಪುಟ್ಟಕ್ಕವೇಣಿಯಕ್ಕ°ನೀರ್ಕಜೆ ಮಹೇಶವಿದ್ವಾನಣ್ಣಕಜೆವಸಂತ°ಸಂಪಾದಕ°ಪೆರ್ಲದಣ್ಣಶಾ...ರೀಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ