Oppanna.com

ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   27/03/2012    23 ಒಪ್ಪಂಗೊ

ವೇಣಿಯಕ್ಕ°

ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ
  • 1/4 ಕಪ್(ಕುಡ್ತೆ) ಕಾಯಿ ತುರಿ
  • 2 ಒಣಕ್ಕು ಮೆಣಸು
  • 1/4 ಚಮ್ಚೆ ಮೆಣಸಿನ ಹೊಡಿ
  • ಸಣ್ಣ ನಿಂಬೆ ಗಾತ್ರದ ಬೆಲ್ಲ
  • ದ್ರಾಕ್ಷೆ ಗಾತ್ರದ ಹುಳಿ
  • ಚಿಟಿಕೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಉದ್ದಿನ ಬೇಳೆ
  • 3/4 ಚಮ್ಚೆ ಸಾಸಮೆ
  • 7-8 ಬೇನ್ಸೊಪ್ಪು
  • 2-3 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಗುಜ್ಜೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಅದರ ಗೂಂಜು, ಹೆರಾಣ ರೆಚ್ಚೆಯ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ದೊಡ್ಡಕೆ ಕೊರದು, ಒಂದು 5 ನಿಮಿಷ ನೀರಿಲ್ಲಿ ಹಾಕಿ ತೆಗದು ಮಡುಗಿ.

ಇದರ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ.(2-3 ಸೀಟಿ ಬಂದರೆ ಸಾಕು)
ಕುಕ್ಕರ್ನ ಪ್ರೆಶರ್ ಹೋದ ಮೇಲೆ, ಗುಜ್ಜೆ ಬಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಗುಂಡು ಕಲ್ಲಿಲ್ಲಿ ಗುದ್ದಿ.

ಮಿಕ್ಸಿಗೆ ಕಾಯಿ ತುರಿ, ಒಣಕ್ಕು ಮೆಣಸು, 1/4 ಚಮ್ಚೆ ಸಾಸಮೆ, ಅರುಶಿನ ಹೊಡಿ, ಹುಳಿ, ಉಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೀರು ಹಾಕದ್ದೆ ತರಿ ತರಿ ಕಡೆರಿ.

ಬಾಣಲೆಲಿ ಉದ್ದಿನ ಬೇಳೆ, 1/2  ಚಮ್ಚೆ ಸಾಸಮೆ, 1-2 ಒಣಕ್ಕು ಮೆಣಸಿನ ತುಂಡು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟುವಗ, ಬೇನ್ಸೊಪ್ಪು ಹಾಕಿ, ಗುದ್ದಿದ ಗುಜ್ಜೆಯ ಹಾಕಿ ತೊಳಸಿ.
ಇದಕ್ಕೆ ಕಡದ ಮಸಾಲೆಯನ್ನೂ ಹಾಕಿ ತೊಳಸಿ. ತಾಳಿನ ಒಂದು 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಅಶನ, ಚಪಾತಿ ಒಟ್ಟಿಂಗೆ ತಿಂಬಲೆ ಕೊಡಿ.
ಸೂಚನೆಃ ಗುಜ್ಜೆಯ ಬೇಶಿ ಗುದ್ದುವ ಬದಲು, ಸಣ್ಣ ಕೊಚ್ಚಿಕ್ಕಿದೆ, ಬೇಶಿ ಮಾಡ್ಲೆ ಆವುತ್ತು.
ಕಡದು ಹಾಕಿದ ಮಸಾಲೆ ಇಸ್ಟ ಆಗದ್ದರೆ, ತಾಳು ಬೇವಗ, ಮೆಣಸಿನ ಹೊಡಿ, ಬೆಲ್ಲ, ಅರಿಶಿನ ಹೊಡಿ ಹಾಕಿ ಮಾಡ್ಲೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

23 thoughts on “ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ)

  1. ಗುಜ್ಜೆಗೆ ಇಲ್ಲದ್ದ ಮರ್ಯಾದೆ ಜೀಗುಜ್ಜೆಗೆ ಇದ್ದು.G-ಗುಜ್ಜೆ!!

  2. ವೇಣಿ,
    ಲಾಯ್ಕಾಯಿದು ಗುಜ್ಜೆ ತಾಳಿನ ವಿವರಣೆ. ವಾರವಾರ ತಪ್ಪದ್ದೆ ಬಪ್ಪಗ ಭಾರೀ ಕೊಶೀ ಆವುತ್ತಬ್ಬೋ!
    ಬತ್ತಾ ಇರಲಿ..

  3. ಅಂಬಗ ಕುಕ್ಕರ್ ಇಲ್ಲದ್ದವು ಹೇಂಗೆ ಮಾಡುದು ಜಯಕ್ಕ? ಎಂಗೊಗೆ ಹಲಸಿನಮರವೇ ಇಲ್ಲೇ ಅಕ್ಕಾ.ನಿಂಗ ಸುಮ್ಮನೆ ಆಸೆ ಹುಟ್ಸುಲಾಗಾತ. ನಿಂಗೊಗೆ ಗ್ಯಾರೆಂಟಿ ಹೊಟ್ಟೆಬೇನೆ ಅಕ್ಕು

  4. ವೇಣಿಅಕ್ಕನ ಗುಜ್ಜೆತಾಳು ತುಂಬ ರುಚಿರುಚಿ ಆಯಿದು.
    ಈವಾರ ಎಂತರ ಅಡಿಗೆ ಹೇದು ವಾರವಾರ ಕಾಯ್ತ ಹಾಂಗೆ ಇರ್ತು ಅಕ್ಕನ ಅಡಿಗೆಕೋಣೆ! 🙂

    ಪಟಂಗಳ ಸಮೇತ ನಿರೂಪಣೆ ಮಾಡಿದ ಕಾರಣ ಚೋಲಿ ತೆಗದು ಕೊರೇಕೋ, ಮೇಣ ಸಹಿತ ಬೇಶೇಕೋ – ಹೇದು ಬೋಚಬಾವಂಗೆ ಸಂಶಯ ಬಪ್ಪಲಿಲ್ಲೆ.

    ಇನ್ನಾಣ ವಾರ…??

    1. ಏ ಒಪ್ಪಣ್ಣೋ.. 🙂
      ಇನ್ನಾಣ ವಾರ ಜೀಗುಜ್ಜೆ ಕೊದಿಲು ಮಾಡುಸಿ, ನಾಲ್ಕು ದೊಡ್ಡ ದೊಡ್ಡ ಭಾಗ ಹೊಡವೊ.. ಹೂ..!! 😉

      1. ಎಪ್ರೀಲು ಎರಡ್ನೇ ವಾರ ಜೀಗುಜ್ಜೇ ಕೊದಿಲೇ ಮಾಡ್ಸು.. ಈ ಸರ್ತಿ ಬಟಾಟೆಗೆ ಕ್ರಯ ಜಾಸ್ತಿ ಹೇದು ದೊಡ್ಡಜ್ಜ ಮೊನ್ನೆ ಕಣ್ಣಾನ್ನೂರಿಲಿ ಸಿಕ್ಕಿಪ್ಪಗ ಹೇಳಿತ್ತವು.. ಅಕ್ಕಲ್ಲದೋ..

        1. ಹಾ..!!
          ಆದಿಕ್ಕೋ ಏನೋ..!!
          ಬಳುಸಿಯಪ್ಪಗಳೇ ಗೊ೦ತ್ತು.. 😉

  5. ಅಕ್ಕೋ ಇದಾ ಕರೇಂಗೆ ರಜ ತೆಂಗಿನೆಣ್ಣೆ ಬಳುಸಿಕ್ಕಿ ಆತೋ….

  6. ಹೋ.. ನವಗಿಂದು ಗುಜ್ಜೆ ತಾಳೋ. ಪಷ್ಟಾತಿದು .

  7. ಎಂಗೊಗೆ ಈಗ ಹೆಚ್ಹಾಗಿ ಗುಜ್ಜೆ ತಾಳು… ಎಂಗೊಗೆ ಗುದ್ದಿ ಮಾಡಿದ್ದದೆ ಇಷ್ಟ… 🙂

    1. @ ಎಂಗೊಗೆ ಗುದ್ದಿ ಮಾಡಿದ್ದದೆ ಇಷ್ಟ…

      ಆರು ಅಕ್ಕ ನಿಂಗೊಗೆ ಗುದ್ದಿದ್ದು??????

      1. ಬೋದಾಳಂಗೆ ಅದು ಹೇಳಿರು ಅರ್ಥ ಆಗ… ಸುಮ್ಮನೆ ಗುದ್ದುಲೆ ಗುಜ್ಜೆ ಇದ್ದೋ ಹೇಳಿ ಹುಡುಕ್ಕು…

          1. ನೀನು ನಿಜವಾಗಿಯೂ ಬೋದಾಳ ಅಲ್ಲ ಆತ… ನಿನ್ನ ಬೋದಾಳ ಹೇಳಿದವು ಬೋದಾಳ… ಕೂಗೆಡ… ನಿನಗೆ ಸರಿಯಾಗಿ ಅರ್ಥ ಮಾಡುಸುಲೆ ನಿನ್ನಷ್ಟೇ ಬುದ್ದಿವಂತ ‘ಬೋಚ’ ಇದ್ದ… ಅವನತ್ರೆ ಕೇಳು ಆತ…

          2. ಹಾ,
            ಅಪ್ಪು ಅಕ್ಕ.. 🙂
            ಆನು ಬೋದಾಳ೦ದಲೂ ಬುದ್ದಿವ೦ತ…!! 😉

          3. ಯೇ ಬೋಚೋ
            ನೀನು ತಪ್ಪಸ್ಸಿಂದ ಎದ್ದೆಯೋ?

            ಇದಾ ಅರ್ಧಲ್ಲಿ ಬಾಕಿ ಮಾಡಿದ್ದು ಇದ್ದು ಹೇಳಿ ನೆಗೆ ಮಾಣಿ ಹೇಳಿಯೊಂಡಿತ್ತಿದ್ದ ಓ ಅಲ್ಲಿ..
            ಇನ್ನು ಪುನಾ ತಪಸ್ಸಿಂಗೆ ಹೋಗೆಡಾ..

          4. ಅಪ್ಪೂ ಭಾವ,
            3 ರನೇ ಭಾಗ ಇನ್ನು ರಜಾ ತಡಕ್ಕು..
            ಕಾರಣ ಎ೦ತ ಕೇಳಿರೆ ಈಗ ಮದುವೇ-ಉಪನಯನ ಹೇಳಿ೦ಡು ಗೌಜಿಯಿದಾ..
            ಸಮಯವೇ ಸಿಕ್ಕುತ್ತಿಲ್ಲೆ.. 😉

          5. ಅದಾ ಊಟ ಇಪ್ಪಗ ಬೋಚನ ಮಾತಡ್ಸುಲೆ ಎಡಿಯಪ್ಪಾ!

  8. ರುಚಿ ನೋಡಿ ಹೇಳುಲೆ , ಛೆ..ಗುಜ್ಜೆ ತಲಾಸು ಮಾಡ್ಯೊಂಡು ಊರಿಂಗೆ ಬಸ್ಸು ತಿಕೇಟು ತೆಗವ ಆಲೋಚನೆ ಎನ್ನದು. ಇದರ ಫಟಲ್ಲಿ ನೋಡಿರೆ ಸಾಕಾವ್ತಿಲ್ಲೆ.

    1. ಯೇ ಟಿ.ಕೆ ಮಾವ,
      ಮನ್ನೆ ಹುಳಿಮಾವಿನಡಿಲಿ ದೊಡ್ಡಜ್ಜನ ವೇನಿಂದ ಗುಜ್ಜೆ ಇಳಿಶಿದ್ದಲ್ಲದೋ ಓ.. ಆಜೆನ! ಆ ಜೆನವ ಅಲ್ಲಿಂದ ಮತ್ತೆ ಬೈಲಿಲಿ ಕಾಂಬಲೆ ಇಲ್ಲೆ. ಆ ಜೆನ ಮಾಂತ್ರ ಕಾಣೆ ಆದ್ದದೋ ಅಲ್ಲ ಗುಜ್ಜೆಯೂ ಕಾಣೆ ಆಯಿದೋ? 😉 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×