ಹಾಲುಬಾಯಿ

ಹಾಲುಬಾಯಿ

ಬೇಕಪ್ಪ ಸಾಮಾನುಗೊ:

  • 1 /2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು)
  • 1 ಕಪ್(ಕುಡ್ತೆ) ಕಾಯಿತುರಿ
  • 1 – 1.25 ಕಪ್(ಕುಡ್ತೆ) ಕೆರಸಿದ ಬೆಲ್ಲ
  • 2  ಏಲಕ್ಕಿ
  • ಚಿಟಿಕೆ ಉಪ್ಪು

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 3-4 ಘಂಟೆ ಬೊದುಳುಲೆ ಹಾಕಿ. ಬೊದುಳಿದ ಅಕ್ಕಿಯ ಲಾಯಿಕಲಿ ನೀರಿಲ್ಲಿ ತೊಳದು, ಕಾಯಿ, ಏಲಕ್ಕಿ ಎಲ್ಲ ಮಿಕ್ಸಿ/ಗ್ರೈಂಡರಿಂಗೆ  ಹಾಕಿ, ಬೇಕಾಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಕೆರಸಿದ ಬೆಲ್ಲವ ಇದಕ್ಕೆ ಹಾಕಿ 1-2 ನಿಮಿಷ ಕಡೆರಿ. ಚಿಟಿಕೆ ಉಪ್ಪುದೆ, ಬೇಕಾಸ್ಟು ನೀರು ಹಾಕಿ ತೊಳಸಿ. (ಹಿಟ್ಟು ಹಾಲಿನಸ್ಟು ತೆಳ್ಳಂಗೆ ಇರಲಿ)

ಒಂದು ಬಾಣಲೆಯ ಬೆಶಿ ಮಾಡಿ, ಅದಕ್ಕೆ ಈ ಕಡದ ಹಿಟ್ಟಿನ ಹಾಕಿ, ದೊಡ್ಡ ಕಿಚ್ಚಿಲ್ಲಿ ಅದು ಗಟ್ಟಿ ಅಪ್ಪಲೆ ಸುರು ಅಪ್ಪನ್ನಾರ ತೊಳಸಿ. ಮತ್ತೆ ಸಣ್ಣ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ಅದು ಬಾಣಲೆಯ ತಳಂದ ಬಿಡುವನ್ನಾರ ತೊಳಸಿ.

ಇದರ ಒಂದು ತಟ್ಟೆ ಅಥವಾ ಬಾಳೆ ಎಲೆಗೆ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಚೆಟ್ಟೆ ಸೌಟಿಲ್ಲಿ ಹರಡಿ.

ಐದು ನಿಮಿಷ ಬಿಟ್ಟು, ಒಂದು ಪೀಶಕತ್ತಿಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೌಕಾಕಾರಕ್ಕೆ ತುಂಡು ಮಾಡಿ.

ತುಂಡಿನ ಬೇರೆ ಬೇರೆ ಮಾಡಿ, ಮೇಲಂದ ತುಪ್ಪ ಹಾಕಿ, ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

17 Responses

  1. ಎನಗೆ ಹಾಲು ಬಾಯಿ ಇ೦ದು ಎನ್ನಜ್ಜಿಗೆ ಭಯ೦ಕರ ಖುಶಿ ಆಯ್ದಿದು [:D] ಇದರ ಓದುವಗ ಬಾಯಿಲಿ ಹಾಲು ಬಪ್ಪೊದೊ೦ದು ಬಾಕಿ! ಹಾ೦ಗೊ೦ದು ಒಪ್ಪ. ಲಾಯ್ಕಾಯ್ದು..

    • ಪೆಂಗಣ್ಣ says:

      ನಿನ್ನ ಕಾಣದ್ದಿಪ್ಪಗ ಕೈಬಾಯಿ ಅಂಟಿದ್ದೋ ಆತು ಒಂದರಿ… ಬಂದೆಯೋ!

  2. ನ೦ಬದಿಗೆ ಇದ್ಕೆ ಮಣಗಡು ಹೇಳ್ತೊ..ಇದನ್ನ ಮಕರ ತಿ೦ಗಳಲ್ಲಿ (ಜನವರಿ ೧೪ ರಿ೦ದ ೧ ತಿ೦ಗಳು) ಹೆಣ್ಣುಮಕ್ಕಳನ್ನ ತಾಯಿ (ಅಪ್ಪನ ) ಮನೆಗೆ ಕರ್ದು ಮಾಡಿ ಬಡಿಸ್ತೊ…

  3. ವೇಣಿಯಕ್ಕ ನಿ೦ಗಳ ಲೇಖನಲ್ಲಿ ಇಪ್ಪ ಪಟ೦ಗಳ ನೋಡಿಯೇ ಬಾಯಿಯ ರಜ್ಜ ಸೀವು ಮಾಡಿಗೊ೦ಡೆ….
    ಮನೆಲಿ ಒ೦ದು ಸರ್ತಿ ಮಾಡೆಕ್ಕು……

  4. shobhana krishna says:

    ningala lekhana nodi baili neeru bantu,americanda ammange phone madi haalu bai maadudu henge heli keludu tappittu.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *