ಹಲಸಿನ ಹಲವು ಬಗೆಗೊ…

June 19, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಳೆಕಾಲ ಸುರು ಆತದ. ಸರಿಗಟ್ಟು ಕರೆಂಟು ಇಪ್ಪಲಿಲ್ಲೆ ಇನ್ನು. ಹಾಂಗಾಗಿ ಕರೆಂಟಿನ ಪುಸ್ತಕದ ಮುಂದೆ ಕೂಪಲೂ ಅಪ್ಪಲಿಲ್ಲೆ. ರೆಜ ರೆಜ ಬರದು ಸೇವೆ ಮಾಡಿ ಮಡುಗುದು.
ಮಳೆಕಾಲ ಹೇಳಿರೆ ಹಲಸಿನ ಹಣ್ಣಿನ ಕಾಲ ಇದಾ.

ತೋಡ ಕರೆಲಿ ಇಪ್ಪ ಬಡ್ಡ ಬರಿಕ್ಕೆ

ಉದಿಯಪ್ಪಗ ಕಾಪಿಗೆ ಕಾಯಿ ಸೊಳೆ ದೋಸೆ, ಇಲ್ಲದ್ರೆ ಹಲಸಿನ ಹಣ್ಣಿನ ಕೊಟ್ಟಿಗೆ, ಮದ್ಯಾನಕ್ಕೆ ಸೊಳೆ ಕೊದಿಲು, ಸೊಳೆ ತಾಳ್ಳು, ಹೊತ್ತೊಪ್ಪಾಗ ಸೊಳೆ ಹೊರುದ್ದು, ಒಟ್ಟಿಂಗೆ ಹಪ್ಪಳ, ಇರುಳಿಂಗೆ ಹಲಸಿನ ಹಣ್ಣಿನ ಉಸುಲಿ – ಹೀಂಗೆ ಇಡೀ ದಿನ ಹಲಸಿಂದೇ ವೈವಿದ್ಯಂಗೊ ಈ ಕಾಲಲ್ಲಿ. ನವಗೆ ಹಳಬ್ಬರಿಂಗೆ ಅದು ಎಷ್ಟು ತಿಂದರೂ ಬೊಡಿಯ. ಮೊದಲೆಲ್ಲ ಅದುವೇ ಇದ್ದದನ್ನೇ. ಈಗಾಣ ಪುಳ್ಯಕ್ಕೊಗೆ ಮಾಂತ್ರ ಗಳಿಗೆಲಿ ಬೊಡಿತ್ತು.
ಹ್ಮ್.. ಹಲಸಿಂದು ಇಷ್ಟೇ ಅಲ್ಲ ಇನ್ನುದೇ ಸುಮಾರು ಬಗೆಗೊ ಇದ್ದು. ಕೆಲವೆಲ್ಲ ನೆಂಪಾದ್ದರ ಬರೆತ್ತೆ.

ಬೇಳೆ ಹೋಳಿಗೆ:
ಹಲಸಿನ ಬೇಳೆ ಸಾಂತಾಣಿ ಮಾಡುದು ಒಂದು ಹೇಂಗೂ ಇದ್ದನ್ನೇ. ಪುಳ್ಯಕ್ಕೊ ಚೀಲಲ್ಲಿ ಹಾಕಿಗೊಂಡು ಹೋವುತ್ತವು ಶಾಲಗೆ. ಮಾಷ್ಟ್ರಕ್ಕೊ ಬೈತ್ತವಿಲ್ಯೊ ಉಮ್ಮ ಮಾಷ್ಟ್ರಣ್ಣನತ್ತರೆ ಕೇಳೆಕಷ್ಟೆ.
ಮೊನ್ನೆ ಒಪ್ಪಣ್ಣ ಚೆಂಙಾಯಿಗಳ ಹುಡ್ಕಿಗೊಂಡು ಉದಾಕೆ ಬಂದವ ಹೇಳಿದ, “ಬೇಳೆ ಹೋಳಿಗೆ ಮಾಡಿದ್ದಿಲ್ಲೆಯಾ ಅಜ್ಜೀ..” ಹೇಳಿ. ಹಾಂಗೆ ಮತ್ತೆ ಮಾಡಿದ್ದು. ಪುಳ್ಯಕ್ಕೊ ಕೇಳುವಾಗ ಇಲ್ಲೆ ಹೇಳುಗ ಅಜ್ಜಿ.
ಬೇಳೆಯ ನೀರಿಂಗೆ ಹಾಕಿ ಬೊದುಲುಸುದು. ಮತ್ತೆ ಅದರ ಚೋಲಿ ಕೆರಸುದು. ಹೇಳಿದಾಂಗೆ ಉಳೆಕ್ಕೊಂಬಿನ ಪೀಶಕತ್ತಿ ಬಡ್ಡಾಯಿದು. ಅರ ಹಾಕಿ ಕೊಡ್ತೆ ಹೇಳಿದ ಅಜ್ಜಕಾನದ ಪುಳ್ಳಿಯ ಪತ್ತೆ ಇಲ್ಲೆ. ಅವ ಬೆಂಗ್ಳೂರಿಂಗೆ ಹೋಯಿದಾಳಿ ಒಪ್ಪಣ್ಣ ಹೇಳಿದ. ನಿಂಗೊಗೆ ಸಿಕ್ಕಿದರೆ ಅಜ್ಜಿ ಕೇಳಿಗೊಂಡಿತ್ತು ಹೇಳಿಕ್ಕಿ ಆತೊ. ಏ°? ಅಜ್ಜಿಂದ ಜಾಸ್ತಿ ಪುಳ್ಯಕ್ಕೊಗೇ ಮರವದಿದಾ ಈಗ.
ಬೇಳೆಯ ಕೆಂಪು ಚೋಲಿ ಎಲ್ಲ ಕೆರಸಿ ಬೆಳೀ ಬೇಳೆ ಆಯೆಕ್ಕದು. ಮತ್ತೆ ಅದರ ಬೇಶುದು. ಬೆಲ್ಲ ಬೇಶುವಗಳೇ ಹಾಕುಲಕ್ಕು, ಇಲ್ಲದ್ರೆ ಮತ್ತೆ ಕಡವಗ ಪಾಕ ಮಾಡಿ ಹಾಕಿರೂ ಅಕ್ಕು.
ಬೇಶಿ ಆದಿಕ್ಕಿ ಅದಕ್ಕೆ ಏಲಕ್ಕಿ ಹಾಕಿ ಕಡವದು ನೊಂಪಿಂಗೆ. ಒಂದು ರಜ್ಜ ರುಚಿಗೆ ಬೇಕಪ್ಪಷ್ಟು ಉಪ್ಪುದೇ ಹಾಕೆಕ್ಕು. ಬೇಕಾರೆ ಕಾಯಿ ಹಾಕುಲಕ್ಕು ರಜ. ರುಚೀ ಆವುತ್ತು. ಕಡದಿಕ್ಕಿ ಸಣ್ಣ ಉಂಡೆ ಮಾಡಿತ್ತು. ಹೋಳಿಗೆಗೆ ಕನಕ ತಯಾರಾತದ. ಹಸರು ಬೇಳೆ ಹೋಳಿಗೆ ಮಾಡಿದ ಹಾಂಗೆಯೇ ಕ್ರಮ.
ಇನ್ನು ಮೈದ ಹೊಡಿಯ ಚಪಾತಿ ಹಿಟ್ಟಿನ ಹದಕ್ಕೆ ಕಲಸುದು ನೀರು ಹಾಕಿ. ಅದರ ಉಂಡೆ ಮಾಡಿ ಸಣ್ಣಕ್ಕೆ ಕೈಲಿ ತಟ್ಟಿ, ಅದಕ್ಕೆ ಮೊದಲು ಮಾಡಿದ ಕನಕವ ಮಡುಗಿ ಮಡುಸಿ ಪುನಾ ಉಂಡೆ ಮಾಡುದು. ಮತ್ತೆ ಅದರ ಮೈದ ಹೊಡಿಲಿ ಲಟ್ಟುಸಿ ಬೇಶುದು. ಹೋಳಿಗೆ ಹಂಚಿಲೂ ಬೇಶುಲಕ್ಕು, ಇಲ್ಲದ್ರೆ ಕಾವಲಿಗೆಲೂ ಆವುತ್ತು. ಬೇಶಿ ಅಪ್ಪಗ ಬೆಶಿ ಬೆಶಿ ಬೇಳೆ ಹೋಳಿಗೆ ತಿಂಬಲೆ ತಯಾರಾತು.

ಸುಕ್ರುಂಡೆ:
ಬೇಳೆಯ ಸುಕ್ರುಂಡೆದೇ ಮಾಡ್ಳಾವುತ್ತು. ಹೋಳಿಗೆಗೆ ಮಾಡಿದಾಂಗೆ ಬೇಳೆಯ ಕೆರಸಿ, ಬೇಶುದು. ಬೇಶುವಾಗಳೇ ಉಪ್ಪು ಹಾಕೆಕ್ಕು. ಮತ್ತೆ ಅದರ ನೀರು ತೆಗದು, ಬರೇ ಬೇಳೆಯ ಮಾತ್ರ ಕಲ್ಲಿಂಗೆ ಹಾಕಿ, ಏಲಕ್ಕಿ, ಬೆಲ್ಲ ಎಲ್ಲ ಹಾಕಿ ಕಡವದು. ಲಾಯ್ಕ ನೊಂಪು ಮಾಡಿ ಅದರ ಉಂಡೆ ಮಾಡುದು. ಇದರ ಹೀಂಗೆಯೇ ತಿಂಬಲಕ್ಕು. ಇಲ್ಲದ್ದರೆ ಮೈದ ಹಿಟ್ಟಿನ ಒಳ ಮಡುಗಿ ಪುನಾ ಉಂಡೆ ಮಾಡಿ, ಅದರ ಹೊರುದು ಸುಕ್ರುಂಡೆ ಮಾಡ್ಳಕ್ಕು. ಎಣ್ಣೆಪಸೆ ಬೇಡ ಹೇಳಿ ಆದರೆ ಮೊದಲಾಣ ಉಂಡೆ ಮಾಡಿತ್ತು. ಅಕ್ಕೂಳಿ ಆದರೆ ಹೊರುದತ್ತು. ಹೊರಿಯದ್ದದು ಎರಡು ದಿನಕ್ಕೆ ಮಾತ್ರ ಬಕ್ಕಷ್ಟೆ. ಮತ್ತೆ ಹಳಸುತ್ತು. ಮಾಡಿದ ಕೂಡ್ಳೆ ತಿಂಬಲೆ ತುಂಬ ರುಚಿ.

ಸುಟ್ಟವು:
ಇದಕ್ಕೆ ಮೈದ ಹೊಡಿಯೂ ಅಕ್ಕು, ಅಕ್ಕಿ ಹೊಡಿಯೂ ಅಕ್ಕು. ಹಣ್ಣು ಸೊಳೆಯ ಕಡದು ಕೂಡುದು. ಅದುವೇ ಸೀವಿದ್ದರೆ ಬೆಲ್ಲ ಬೇಡ.  ದೇವಿಯ ಅಪ್ಪನ ಮನೆಯ ತೋಟದ ಮೂಲೆಲಿಪ್ಪ ಮರದ್ದು ಒಳ್ಳೆತ ಸೀವಡ. ಅದಕ್ಕೆ ಬೆಲ್ಲ ಮುಟ್ಟುಸೆಕ್ಕೂಳಿಯೇ ಇಲ್ಲೆಡ. ಸೊಳೆ ಚಪ್ಪೆ ಇದ್ದರೆ ರಜ ಬೆಲ್ಲವನ್ನುದೇ ಹಾಕಿತ್ತು ಕಡವಗ. ಕೊಚ್ಚಲು ಸುಟ್ಟವುದೇ ಮಾಡ್ಳಾವುತ್ತು. ಅದಕ್ಕೆ ಸೊಳೆಯ ಸಣ್ಣಕ್ಕೆ ಕೊಚ್ಚಿ ಹಾಕುದು, ಕಡವಲಿಲ್ಲೆ. ಮೊದಲು ಎಂಗೊ ಸೊಳೆಯ ಹಾಳೆಗೆ ಹಾಕಿ ಉಳಿಲಿ ಕೊಚ್ಚಿಗೊಂಡಿದ್ದದು. ಈಗ ಹಾಂಗಿಪ್ಪ ಉಳಿ ಕಾಂಬಲಿಲ್ಲೆ. ಕಾವಲಿಗೆ ಸಟ್ಟುಗಿಲೂ ಕೊಚ್ಚುಲಾವುತ್ತು.
ಕಡದರೆ ಕಡದ್ದರ, ಇಲ್ಲದ್ದರೆ ಕೊಚ್ಚಿದ್ದರ ಮೈದ ಹೊಡಿ ಅತವಾ ಅಕ್ಕಿ ಹೊಡಿಗೆ ಕೂಡಿ ಹಿಟ್ಟು ಮಾಡಿತ್ತು. ಅದರ ಉಂಡೆ ಮಾಡಿ ಎಣ್ಣೆಲಿ ಹೊರುತ್ತು. ಹಾ ಎಂತಾ ಪರಿಮ್ಮಳ ಬಕ್ಕು ಹೊರಿವಾಗ! ಕೊಳಚ್ಚಿಪ್ಪು ಪುಳ್ಳಿ ಸುಟ್ಟವಿನ ಪರಿಮ್ಮಳ ಕೇಳಿಯೇ ಮೈಲು ದೂರಂದ ಓಡಿಗೊಂಡು ಬಕ್ಕಡ.

ಹಲುವ:
ಹಲುವಂಗಳ ಬಗ್ಗೆ ಹೇಳಿದ್ದೆನ್ನೆ ಒಂದರಿ. ಹಾಂಗೆಯೇ ಹಲಸಿನಹಣ್ಣಿನ ಹಲುವವುದೇ ಮಾಡುದು.

ಕೆಳಾಣ ತೋಟದ ತಲೇಲಿಪ್ಪ ತುಳುವ

ಸೊಳೆಯ ಕಡದು, ಬಣಲೆಗೆ ಹಾಕಿ ಬೇವನ್ನಾರ ಕಾಸುದು. ಮತ್ತೆ ಶಕ್ಕರೆ ಹಾಕಿ, ಪಾಕ ಅಪ್ಪಗ ರಜ್ಜ ತುಪ್ಪ ಹಾಕಿತ್ತು. ಅದು ಸರೀ ಮುದ್ದೆ ಆಗಿ ಅಡಿ ಬಿಡ್ಳಪ್ಪಗ ಇಳುಗಿ, ಬಟ್ಳಿಂಗೆ ಹರಡಿತ್ತು. ಅದುವೇ ಒಂದು ಪರಿಮ್ಮಳ ಇಪ್ಪ ಕಾರಣ ಏಲಕ್ಕಿ ಬೇಕೂಳಿಲ್ಲೆ.

ಗೆಣಸಲೆ:
ಮೊನ್ನೆ ಕಿಟ್ಟ° ನೆಂಪು ಮಾಡಿದ, ಗೆಣಸಲೆ ಮಾಡೆಕ್ಕಾತು, ಮರತ್ತೋ  ಹೇಳಿ. ಮರದ್ದಿಲ್ಲೆಪ್ಪ. ಮಾಡಿಗೊಂಡು ಇರ್ತು ನಾವು. ಅದಕ್ಕೆ ತೋಟಂದ ಬಾಳೆ ತಂದು ರೂಡಿ ಮಾಡುದೇ ರಜ್ಜ ಬಂಙ ಈ ಮಳೆಕಾಲಲ್ಲಿ. ಎಲ್ಲಿ ನೋಡಿರೂ ನರಕ್ಕದ ಹಿಸ್ಕು. ಕೈಗೊ ಕಾಲಿಂಗೊ ಹಿಡುದರೆ ಮತ್ತೆ ಬೂದಿಗೊಂಡಗೆ ಬುಡಕ್ಕೇ ಓಡೆಕ್ಕು. ಬೂದಿ ಹಾಕದ್ದೆ ಹೋಗ ಅದರ ಅಂಟು. ಮಹಾ ರಗಳೆ ಅದು. ಹಾಂಗೆ ಮಳೆಕಾಲಲ್ಲಿ ಬಾಳೆಲೆ ಕಡಿವಲೆ ಹೋಪಲೇ ಇಲ್ಲೆ ಆನು. ಮನೆಲಿ ಆರಾರು ಇದ್ದರೆ ತಪ್ಪಲೆ ಹೇಳುದು. ಮಳೆಕಾಲಲ್ಲಿ ಆಳುಗೊಕ್ಕೂ ಉದಾಸನ ಕೆಲಸಕ್ಕೆ ಬಪ್ಪಲೆ. ಮೊನ್ನೆ ಮತ್ತೆ ಮಂಗ್ಳೂರು ಪುಳ್ಳಿ ಬಂದೋನಿತ್ತಿದ್ದ. ಅವನತ್ತರೆ ಹೇಳಿದೆ.
ಹ್ಮ್.. ಗೆಣಸಲೆ ಮಾಡುಲೆ ಸೊಳೆಯ ಕೊಚ್ಚುದು ಅತವಾ ಕಡವದು ಮದಲಿಂಗೆ. ಅದಕ್ಕೆ ಕೆರಸಿದ ಬೆಲ್ಲ, ಕಾಯಿಸುಳಿ ಹಾಕಿ ಮಿಶ್ರ ಮಾಡುದು. ಅದರಿಂದ ಮೊದಲು ಹಿಟ್ಟು ಮಾಡಿಗೊಳೆಕ್ಕು. ಒಂದು ಗ್ಲಾಸೋ ಮಣ್ಣ, ಬೇಕಪ್ಪಷ್ಟು ಬೆಣ್ತೆಕ್ಕಿ ಬೊದುಲ್ಲೆ ಹಾಕಿ ದೋಸೆ ಹಿಟ್ಟಿನಾಂಗೆ ಕಡವದು. ದೋಸೆ ಹಿಟ್ಟಿನಷ್ಟು ನೀರು ಬೇಡ, ರಜ್ಜ ಗಟ್ಟಿಗೆ. ಕಡವಾಗ ಉಪ್ಪು ಹಾಕೆಕ್ಕು.
ಕೀತು ಬಾಳೆಗೆ ಈ ಹಿಟ್ಟಿನ ತೆಳೂವಿಂಗೆ ಹರಡೆಕ್ಕು ಉರೂಟಿಂಗೆ ದೋಸೆಯ ಹಾಂಗೆ. ಅದಾದಿಕ್ಕಿ ಅದರ ಮೇಲಂಗೆ ಒಂದು ಹೊಡೆಂಗೆ ಆಗ ಮಾಡಿದ ಹೂರಣವ ಹಾಕೆಕ್ಕು. ಇನ್ನೊಂದು ಹೊಡೆಯ ಅದರ ಮೇಲಂಗೆ ಮಡುಸಿ, ಈಚ ಕರೆಯನ್ನು ಮಡುಸಿ ಮಡುಗಿ ಅಟ್ಟಿನಳಗೆಲಿ ಬೇಶಿತ್ತು. ರುಚಿ ರುಚಿ ಗೆಣಸಲೆ ತೆಯಾರಾತದ.

ಹಾಂಗೆ ಹಲಸಿನ ವೈವಿದ್ಯಂಗೊ ಹೇಳಿ ಮುಗಿಯ. ಸೊಳೆ ಹೊರುದ್ದು, ಬೆರಟಿ ಎಲ್ಲ ಗೊಂತಿಪ್ಪದೆನ್ನೆ. ಏವ ಏವ ಕಾಲಲ್ಲಿ ಪ್ರಕೃತಿ ನವಗೆ ಎಂತ ಹಣ್ಣು ಕೊಡ್ತೋ ಅದರ ಬೇಕಾದಷ್ಟು ತಿನ್ನೆಕ್ಕು. ಅದಕ್ಕೇಳಿಯೇ ಕೊಡುದು. ಮುಗುದ ಮತ್ತೆ ಬೇಕೂಳಿರೂ ಸಿಕ್ಕ, ಅಲ್ಲದೋ?

ಹಲಸಿನ ಹಲವು ಬಗೆಗೊ..., 5.0 out of 10 based on 3 ratings

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಅಜ್ಜಕಾನ ಭಾವ

  ಅಜ್ಜಿ ಬಂದಿರೋ.. ಅಜ್ಜಕಾನ ಪುಳ್ಳಿಗೆ ಮರದ್ದಿಲ್ಲೆ.. ಒಪ್ಪಣ್ಣ ಪೂರ್ತ ವಿಶ್ಯ ಹೇಳಿದ್ದನಿಲ್ಲೆ ಕಾಂತು.. ಜೀವನಕ್ಕೆ ವ್ಯವಹಾರ ಮಾಡೆಕ್ಕನ್ನೆ.. ಹಾಂಗೆ ಈಗ ಹಲಸಿನ ಕಾಲ ಅಲ್ಲದೋ.. ಬೆಂಗ್ಳೂರಿಲಿ ವ್ಯಾಪಾರ ಅಕ್ಕೊ ನೋಡುಲೆ ಹೋದ್ದಿದಾ.. ಒಟ್ಟಿಂಗೆ ಪೆರ್ಲದಣ್ಣನತ್ರ ಗಣಾಕ ಕಲಿವಲೆ ಹೇಳಿತ್ತಿದ್ದ ಒಪ್ಪಣ್ಣ.. ಕಲ್ತು ಬಂದು ಎನಗು ರಜಾ ಕಲ್ಸು ಹೇಂಗೂ ಬೆಂಗ್ಳೂರಿಂಗೆ ಹೋವುತ್ತೆನ್ನೆ ಹೇಳಿ.. ಹಾಂಗೆ ಎರಡು ದಿನ ಜಾಸ್ತಿ ನಿಲ್ಲೆಕ್ಕಾತು..

  ಅಜ್ಜಿ ಹೋಳಿಗೆ ಒಪ್ಪಣ್ಣನತ್ರ ಕೊಟ್ಟಿದರನ್ನೇ.. ಗೆಣ್ಸೆಲೆ ತಿಂಬಲೆ ಎರಡು ದಿನ ಕಳದು ಬತ್ತೆ..

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಓ ಅಪ್ಪೋ… ವೇಪಾರ ಆತೋ?
  ಅಪ್ಪು ಹೋಳಿಗೆಯನ್ನೂ ಕೊಟ್ಟಿದೆ, ಗೆಣಸಲೆದೇ ಕೊಟ್ಟಿದೆ. ಹೋಳಿಗೆ ಮುಗುದಿಕ್ಕು. ಗೆಣಸಲೆ ಒಳುದಿದ್ದರೆ ಹಳಸಿಕ್ಕು.
  ಇನ್ನೊಂದರಿ ಮಾಡೆಕ್ಕಾರೆ ಬಾಳೆಲೆ ಕೊಯಿದು ಕೊಡೆಕ್ಕದೊ…

  [Reply]

  VA:F [1.9.22_1171]
  Rating: 0 (from 0 votes)
 2. ಕೇಜಿಮಾವ°
  ಕೆ.ಜಿ.ಭಟ್.

  ಹಲ್ವ ಮಾಡುವಾಗ ರಜಾ ಮೈದಾ ಹೊಡಿ ಹಾಕಿರೆ ಬೇಗ ಪಾಕ ಬತ್ತು.ಅಂಬಗ ಬೆರಟಿ ಏಕೆ ಕೊಟ್ಟಿದಿಲ್ಲೆ ಅಳಿಯೋ?ಈಗಾಣ ಮಕ್ಕೋ ಸಿಕ್ಕಿರೆ ಸರೀ ತಿಂತವು.

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಹ್ಮ್ ಅದಪ್ಪು ಆದರೆ ಅದರ ರುಚಿ ಬೇರೆ. ಪರಿಮ್ಮಳದೆ.
  ಬೆರಟಿ ಪಾಯಸ ಬರವಗ ಹೇಳಿದ್ದೆನ್ನೆ ಪುಳ್ಳೀ ಬೆರಟಿಯ. ಮರದತ್ತೋ?
  ಈಗ ಪುಳ್ಯಕ್ಕೊಗೆ ಅಜ್ಜಿಯೇ ನೆಂಪು ಮಾಡೆಕ್ಕಾವುತ್ತದ.

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಅಜ್ಜೀ, ಹಲಸಿನ ವೈವಿಧ್ಯ ಲಾಯಕ ಆಯಿದು.. ಸರಿಯಾದ ಸಮಯಕ್ಕೆ ಬಂತಿದಾ… ಈ ಸರ್ತಿ ಮಾವಿನಹಣ್ಣಿನ ವೈವಿಧ್ಯ ಮಾಯವೋ ಹೇಳಿ ಈ ಕರೆಂಟು ಸರಿ ಇಲ್ಲದ್ದ ದೆಸೆಂದ… ಈ ವರ್ಷ ಕಾಟು ಮಾವಿನ ಹಣ್ಣುದೇ ಇಲ್ಲೆನ್ನೇ!!! ಹಾಂಗಾಗಿ ತೊಂದರೆ ಇಲ್ಲೆ.. ಮುಂದೆ ಯೆವಾಗಾರು ಅಜ್ಜೀ ಹೇಳುಗು..ಎಂಗೊಗೆ ಮಾಷ್ಟ್ರು ಮಾವನ ಮನೆಂದ ಕಾಟು ಮಾವಿನ ಹಣ್ಣು ಶಾಂತತ್ತೆ ಕೊಟ್ಟಿದವಿದಾ ಮೊನ್ನೆ ಬದ್ಧಕ್ಕೆ ಹೋಗಿಪ್ಪಾಗ ಆ ತೆರಕ್ಕಿನ ಎಡೆಲಿದೆ… ಹಾಂಗೆ ಈ ವರ್ಷದ ಮಟ್ಟಿ ನ್ಗೆ ರುಚಿ ರುಚಿ ಮಾಡಿ ಉಂಡೆಯೋ° ಶಾಂತತ್ತೆಯ ನೆನೆಸಿಗೊಂಡು… ಅಜ್ಜೀ ಹೇಳಿದ್ದು ಅನುಭವದ ಮಾತದಾ… ಆಯಾ ಕಾಲದ ಹಣ್ಣುಗಳ ಪ್ರಕೃತಿ ಕೊಡುವಾಗ ಉಪಯೋಗ ಮಾಡಿ ತಿನ್ನೆಕ್ಕು ಹೇಳಿ…

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಇತ್ಲಾಗಿ ಮಾವಿನ ಹಣ್ಣೇ ಇಲ್ಲೆಬ್ಬೋ. ಮಾಷ್ಟ್ರಕ್ಕ ಹೇಳಿತ್ತಿದು ಮಾವಿನ ಹಣ್ಣು ಕೊಡ್ತೇಳಿ. ಎನಗೆ ಹೋಪಲೇ ಆತಿಲ್ಲೆ. ಒಪ್ಪಣ್ಣನತ್ತರೆ ಕಳುಸಿತ್ತೋ ಏನೊ ಉಮ್ಮಪ್ಪ ಎತ್ತಿದ್ದಿಲ್ಲೆ ಇನ್ನುದೇ.

  [Reply]

  ಶಾಂತತ್ತೆ

  ಮಾಷ್ಟ್ರಕ್ಕ Reply:

  ಮಾವಿನ ಹಣ್ಣು ಮುಗುತ್ತಕ್ಕಾ… ನಿನ್ನೆ ಅಲ್ಲ ಮೊನ್ನೆ ಗೊಜ್ಜಿ ಅಕೇರಿ…
  ಇನ್ನು ಬಪ್ಪೊರಿಶ ಆತಷ್ಟೇ…
  ಒಪ್ಪಣ್ಣನತ್ರೆ ಕೊಡ್ಲೆ ಅವ ಬೆಂಗ್ಲೂರಿನ್ಗೆ ಹೋದವ ಇತ್ಲಾಗಿ ಬೈಂದ ಇಲ್ಲೇ…

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಅದಾ ಮಾಷ್ಟ್ರತ್ತೆ.. ಅಕೇರಿಯಣದ್ದಕ್ಕೆ ಕರದ್ದೇ ಇಲ್ಲೆ. ಓ ಒಪ್ಪಣ್ಣ ದೊಡ್ಡ ಪೇಟೆಗೆ ಹೋಯಿದನಾ.. ಅಜ್ಜಿ ಹುಡುಕಿಯೊಂಡಿತ್ತು.. ಒಪ್ಪಣ್ಣಾ ಬಂಡಾಡಿಗೆ ಹೋದವ ಕನ್ನಡಕ ಹುಗ್ಗಿಸಿ ಮಡಗಿದ್ದನಡ.. ನವಗರಡಿಯಾ°

  VA:F [1.9.22_1171]
  Rating: +1 (from 1 vote)
 4. ನೆಗೆಗಾರ°

  ಶುದ್ದಿ ಲಾಯಿಕಾಯಿದು!
  ಗುಜ್ಜೆಯ ಕಾಂಬಗ ಬಂಡಾಡಿಪುಳ್ಳಿಯನ್ನೇ ನೆಂಪಾತು ಅಜ್ಜಿ!! :-( :-(

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  “ನೆಗೆಗಾರ ಮಾವಂಗೆ ಬೆನ್ನು ತೊರುಸುತ್ತಡವಾ” ಕೇಳಿತ್ತು ಪುಳ್ಳಿ.
  ಉಮ್ಮಪ್ಪ ಎಂತಕೇಳಿ ಗೊಂತಿಲ್ಲೆ.
  ಮದ್ದಿನ ಕವಾಟಿಲಿ ಪಂಚವಲ್ಲಿ ತೈಲ ಇದ್ದದ ಬೇಕಾರೆ.

  [Reply]

  VA:F [1.9.22_1171]
  Rating: 0 (from 0 votes)
 5. ಕೇಜಿಮಾವ°

  ಕುಜುವೆ ಬೆಂದಿ ಮತ್ತೆ ಹಲಸಿನ ಕಾಯಿ ತಾಳು ಹೇಂಗೆ ಮಾಡುದು ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಶ್ರೀಅಕ್ಕ°ಬೋಸ ಬಾವಕಜೆವಸಂತ°ಶುದ್ದಿಕ್ಕಾರ°ಪವನಜಮಾವಎರುಂಬು ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಚೆನ್ನಬೆಟ್ಟಣ್ಣಬಟ್ಟಮಾವ°ನೆಗೆಗಾರ°vreddhiಡೈಮಂಡು ಭಾವಗೋಪಾಲಣ್ಣಅನಿತಾ ನರೇಶ್, ಮಂಚಿಬೊಳುಂಬು ಮಾವ°ಡಾಮಹೇಶಣ್ಣಕೆದೂರು ಡಾಕ್ಟ್ರುಬಾವ°ರಾಜಣ್ಣಯೇನಂಕೂಡ್ಳು ಅಣ್ಣಮಾಲಕ್ಕ°ಶರ್ಮಪ್ಪಚ್ಚಿಪೆರ್ಲದಣ್ಣಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ