Oppanna.com

ಹಲಸಿನ ಹಣ್ಣಿನ ಇಡ್ಲಿ

ಬರದೋರು :   ವೇಣಿಯಕ್ಕ°    on   17/06/2014    2 ಒಪ್ಪಂಗೊ

ವೇಣಿಯಕ್ಕ°

ಹಲಸಿನ ಹಣ್ಣಿನ ಇಡ್ಲಿ
ಬೇಕಪ್ಪ ಸಾಮಾನುಗೊ:

  • 8 ಕಪ್(ಕುಡ್ತೆ) ಹಲಸಿನ ಹಣ್ಣಿನ ಎಸರು(ತುಳುವ ಹಲಸಿನ ಹಣ್ಣಿಂದಾದರೆ ಒಳ್ಳೆದು)
  • 4 ಕಪ್(ಕುಡ್ತೆ) ಬೆಣ್ತಕ್ಕಿ ರವೆ(ಸೋನಾ ಮಸೂರಿ ಆದರೆ ಒಳ್ಳೆದು)
  • 1 ಕಪ್(ಕುಡ್ತೆ) ನೀರು
  • 1.5-2 ಕಪ್(ಕುಡ್ತೆ) ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 2 ಬಾಳೆ ಎಲೆ

ಮಾಡುವ ಕ್ರಮ:
ಅಕ್ಕಿಯ ಲಾಯಿಕಲಿ ತೊಳದು, ಲಾಯಿಕದ ಹತ್ತಿ ವಸ್ತ್ರಲ್ಲಿ ಹರಗಿ ಒಂದು 10 ಘಂಟೆ ಕರೆಲಿ ಮಡುಗಿ. ನೀರ ಪಸೆ ಎಲ್ಲ ಆರಿದ ಮತ್ತೆ ಮಿಕ್ಸಿಗೆ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತರಿ-ತರಿ ಆಗಿ(ಇಡ್ಲಿ ರವೆಯ ಹಾಂಗೆ) ಹೊಡಿ ಮಾಡಿ ಮಡಿಕ್ಕೊಳ್ಳಿ.

ಹಲಸಿನ ಹಣ್ಣಿನ ತುಂಡು ಮಾಡಿ, ಅದರಿಂದ ಸೊಳೆಯ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರುಶಿಯ ಹಾಂಗಿದ್ದ ಬೆತ್ತದ ತಡ್ಪೆಲಿ ಉದ್ದಿ ಅಥವಾ ಮಿಕ್ಸಿಗೆ ಹಾಕಿ ತಿರುಗ್ಸಿ, ಅರುಶಿ, ಎಸರಿನ ತೆಗದು ಪುಂಟೆಯ ಇಡ್ಕಿ.


ಇದಕ್ಕೆ 1 ಕುಡ್ತೆ ನೀರು, ಸೀವಿಂಗೆ ಬೇಕಪ್ಪಸ್ಟು ಬೆಲ್ಲವ ಕೆರಸಿ ಹಾಕಿ ಲಾಯಿಕಲಿ ತೊಳಸಿ.

ಇದಕ್ಕೆ ಅಕ್ಕಿ ರವೆ, ಉಪ್ಪು ಹಾಕಿ ಲಾಯಿಕಲಿ ತೊಳಸಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಅಟ್ಟಿನಳಗೆ/ಪ್ರೆಶರ್ ಕುಕ್ಕರ್ನ ಅಡಿಲಿ ರೆಜ್ಜ ನೀರು ಹಾಕಿ, ಸ್ಟಾಂಡ್ ಮಡುಗಿ ಅದರ ಮೇಗೆ ಬಾಡ್ಸಿ, ಉದ್ದಿದ ಬಾಳೆ ಎಲೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ. ಕೆಳಾಣ ನೀರು ಕೊದುದಪ್ಪಗ ಇಡ್ಲಿ ಹಿಟ್ಟಿನ ಬಾಳೆ ಎಲೆ ಮೇಲೆ ಕೆಳಾಣ ಛಿತ್ರಲ್ಲಿ ತೋರ್ಸಿದ ಹಾಂಗೆ ಎರೆರಿ.

ಮುಚ್ಚಲು ಮುಚ್ಚಿ, 15-20 ನಿಮಿಷ ದೊಡ್ಡ ಕಿಚ್ಚಿಲ್ಲಿ ಬೇಶಿ, ಮತ್ತೆ 40-45 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
(ಪ್ರೆಶರ್ ಕುಕ್ಕರಿಂಗೆ, ವೈಟ್ ಮಡುಗುದು ಬೇಡ, ವೈಟ್ ಸ್ಟಾಂಡಿಂಗೆ ಒಂದು ಗ್ಲಾಸಿನ ಕವುಂಚಿ ಮಡುಗಿರೆ ಸಾಕು.)
ಬೆಶಿ ಬೆಶಿ ಇಡ್ಲಿಯ ತುಂಡು ಮಾಡಿ, ತುಪ್ಪ ಹಾಕಿ ಚಟ್ನಿ ಅಥವಾ ಸಾಂಬರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 17 ಹಲಸಿನ ಹಣ್ಣಿನ ಕೊಟ್ಟಿಗೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

2 thoughts on “ಹಲಸಿನ ಹಣ್ಣಿನ ಇಡ್ಲಿ

  1. ಇಂದು ಎಂಗಳಲ್ಲಿಯೂ ಹಲಸಿನ ಕೊಟ್ಟಿಗೆ ಮಾಡಿದ್ದವು.ಈಗ ಹಲಸಿಂಗೂ ಮರ್ಯಾದಿ ಹೆಚ್ಚಪ್ಪಲೆ ಸುರುವಾಯಿದು.ಹಲಸು ಮೇಳ ಅಲ್ಲಲ್ಲಿ ಆವುತ್ತಾ ಇದ್ದು.

  2. ವೇಣಿ ಅಕ್ಕ, ಹಲಸಿನ ಹಣ್ಣಿನ ಇಡ್ಲಿ ಮಾಡ್ಲೆ ತಡ್ಪೆಲಿ ಎಸರು ತೆಗದು ಮಾಡ್ತ ಕ್ರಮ ಚೆಂದ ಇದ್ದು.
    ಲಾಯಕ ಆಯಿದು ವಿವರಣೆ…
    ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×