ಹಲಸಿನ ಹಣ್ಣಿನ ಹಪ್ಪಳ

May 6, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನ ಹಣ್ಣಿನ ಹಪ್ಪಳ

ಬೇಕಪ್ಪ ಸಾಮಾನುಗೊ:

  • 3 ಲೀಟರ್ ಪಾತ್ರಲ್ಲಿ ತುಂಬ ಹಲಸಿನ ಹಣ್ಣಿನ ಸೊಳೆ
  • ರುಚಿಗೆ ತಕ್ಕಸ್ಟು ಉಪ್ಪು(ರೆಜ್ಜ ಸಾಕು)

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಸೊಳೆಯ ಅಟ್ಟಿನಳಗೆ ಅಥವಾ ಪ್ರೆಶ್ರ್ ಕುಕ್ಕರ್ಲ್ಲಿ ರೆಜ್ಜ ಉಪ್ಪು ಹಾಕಿ 20-30 ನಿಮಿಷ ಹಬೆಲಿ ಬೇಶಿ.

ಇದರ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.

ರೆಜ್ಜ ಹಿಟ್ಟಿನ ತೆಕ್ಕೊಂಡು ಒಂದು ಪ್ಲಾಸ್ಟೀಕು ಶೀಟ್/ ಬಾಳೆ ಎಲೆ / ಮುಂಡಿ ಎಲೆಲಿ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತೆಳ್ಳಂಗೆ (ಕೈಲಿ ಅಥವಾ ಸೌಟಿಲ್ಲಿ) ಪಸರುಸಿ.

ಇದರ 4-5 ದಿನ ಬೆಶಿಲಿಲ್ಲಿ ಒಣಗುಸಿ ಡಬ್ಬಿಲಿ ತೆಗದು ಮಡುಗಿ. ಇದರ ಹಾಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 20 ಹಪ್ಪಳ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಚೆನ್ನಬೆಟ್ಟಣ್ಣಮುಳಿಯ ಭಾವಬೋಸ ಬಾವಚೆನ್ನೈ ಬಾವ°ಶಾಂತತ್ತೆಕಳಾಯಿ ಗೀತತ್ತೆಸುಭಗದೊಡ್ಡಮಾವ°ಅಜ್ಜಕಾನ ಭಾವನೀರ್ಕಜೆ ಮಹೇಶದೊಡ್ಡಭಾವvreddhiಮಂಗ್ಳೂರ ಮಾಣಿಪೆರ್ಲದಣ್ಣಶುದ್ದಿಕ್ಕಾರ°ವಸಂತರಾಜ್ ಹಳೆಮನೆಶ್ರೀಅಕ್ಕ°ದೊಡ್ಮನೆ ಭಾವಡೈಮಂಡು ಭಾವಜಯಗೌರಿ ಅಕ್ಕ°ಎರುಂಬು ಅಪ್ಪಚ್ಚಿಪವನಜಮಾವನೆಗೆಗಾರ°ಡಾಮಹೇಶಣ್ಣಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ