Oppanna.com

ಹಲಸಿನ ಹಣ್ಣು ಸುಟ್ಟವು

ಬರದೋರು :   ವೇಣಿಯಕ್ಕ°    on   19/06/2012    27 ಒಪ್ಪಂಗೊ

ವೇಣಿಯಕ್ಕ°

ಹಲಸಿನ ಹಣ್ಣು ಸುಟ್ಟವು

ಬೇಕಪ್ಪ ಸಾಮಾನುಗೊ:

  • 6 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು
  • 4 ಕಪ್(ಕುಡ್ತೆ) ಬೆಣ್ತಕ್ಕಿ
  • 3-4 ಕಪ್(ಕುಡ್ತೆ) ಬೆಲ್ಲ
  • 2.5 ಕಪ್(ಕುಡ್ತೆ) ಕಾಯಿ ತುರಿ
  • 3 ಚಮ್ಚೆ ಎಳ್ಳು
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಅಕ್ಕಿ, 2 ಕುಡ್ತೆ ಕಾಯಿ ತುರಿಯ ಗ್ರೈಂಡರಿಲ್ಲಿ ಹಾಕಿ, ಬೇಕಾದಸ್ಟು ನೀರುದೆ ಹಾಕಿ ಕಡೆರಿ. ಹಿಟ್ಟು ನೊಂಪಪ್ಪಲಪ್ಪಗ, ಬೆಲ್ಲ, ಉಪ್ಪು ಹಾಕಿ 2-3 ನಿಮಿಷ ಕಡೆರಿ.


ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ.

ಬಾಣಲೆಲಿ ಎಳ್ಳಿನ ಹಾಕಿ ಹೊರಿರಿ, ಅದು ಹೊಟ್ಟಿ ಅಪ್ಪಗ, ಅದಕ್ಕೆ 1/2 ಕುಡ್ತೆ ಸಣ್ಣಕೆ ತುರುದ ಕಾಯಿ ತುರಿಯ ಹಾಕಿ ಚಿನ್ನದ ಬಣ್ಣ ಬಪ್ಪನ್ನ್ನಾರ ಹೊರಿರಿ.

ಹೊರುದ ಎಳ್ಳು ಕಾಯಿಯನ್ನೂ, ಕೊಚ್ಚಿದ ಹಲಸಿನ ಹಣ್ಣನ್ನೂ, ಕಡದ ಹಿಟ್ಟಿಂಗೆ ಹಾಕಿ ತೊಳಸಿ.
ನೀರು ಬೇಕಾದರೆ ಹಾಕುಲಕ್ಕು. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಒಲೆಲಿ ಅಪ್ಪದ ಗುಳಿಯ ಬೆಶಿ ಅಪ್ಪಲೆ ಮಡುಗಿ, ಪ್ರತಿ ಗುಳಿಗೂ, 2-3 ಚಮ್ಚೆ ಎಣ್ಣೆ ಹಾಕಿ(ಹಿಟ್ಟು ಹಾಕಿ ಅಪ್ಪಗ ಅದು ಎಣ್ಣೆಲಿ ಮುಳುಗೆಕ್ಕು).
ಎಣ್ಣೆ ಬೆಶಿ ಆದ ಕೂಡಲೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಗುಳಿಗು ಹಿಟ್ಟು ಹಾಕಿ.

3-4 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ.

ತಿರುಗಿಸಿ ಹಾಕಿ ಇನ್ನೊಂದು ಹೊಡೆಯನ್ನೂ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ.

ಬೆಶಿ ಬೆಶಿ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 70 ಗುಳಿ ಅಪ್ಪ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

27 thoughts on “ಹಲಸಿನ ಹಣ್ಣು ಸುಟ್ಟವು

  1. exactly…. ಪಾಯಿಂಟು ಹೇಳಿರೆ ಇದು ಮಾವಾ…. ಎನಗೂ ಅರಡಿಯದ್ದ ಹಾಂಗೆ law point ಹೇಳಿದಿ ವಿವರಂಗಳೊಟ್ಟಿಂಗೆ. ಆನು ಕಲಿವದು ತುಂಬಾ ಇದ್ದು ಇನ್ನುದೇ….. ಧನ್ಯವಾದಂಗೋ ಗೋಪಾಲಮಾವಾ…

  2. ಎಣ್ಣೆಗೆ ‘ಎಣ್ಣೆ’ ಹೇಳ್ಥ ಹೆಸರು ಹೇಂಗೆ ಬಂತು?????

    ಅದು ‘ಎಳ್ + ನೆಯ್ ‘ ಹೇಳ್ತ ವ್ಯುತ್ಪತ್ತಿ ಅಡ. ನಮ್ಮ ಶತಾವಧಾನಿ ಗಣೇಶ ಹೇಳಿತ್ತಿದ್ದವು ಅಂದೊಂದು ಕಾಲಲ್ಲಿ.
    ಹಾಂಗಾರೆ ಅದು ಎಲ್ಳೆಣ್ಣೆ ಮಾತ್ರ.

    ಎಣ್ಣೆ = ಎಲ್ಳೆಣ್ಣೆ.

    1. ತಿಲ=ಎಳ್ಳು
      ತೈಲ=ಎಣ್ಣೆ
      ಯಾವ ರೀತಿ ಸಂಸ್ಕೃತಲ್ಲಿ ತಿಲ ಶಬ್ದಂದ ತೈಲ ಬಂತೋ ಅದೇ ರೀತಿ ಕನ್ನಡಲ್ಲಿ ಎಳ್ಳು ಶಬ್ದಂದ ಎಣ್ಣೆ ಬಂತು! ಈ ಬಗ್ಗೆ ಅನುಮಾನ ಇಲ್ಲೆ.ಕನ್ನಡದ ಸೋದರ ಭಾಷೆ ತುಳುವಿಲಿ ಎಣ್ಮೆ ಮತ್ತೆ ಎಣ್ಣೆ ಹೇಳಿ ಇದ್ದನ್ನೆ.ಅದರಿಂದ ಇದು ಸ್ಪಷ್ಟ ಆವುತ್ತು.
      ಬಹುಶಃ ಎಳ್ಳು ನಮ್ಮ ಮೊತ್ತ ಮೊದಲ,ಮುಖ್ಯ ಎಣ್ಣೆಕಾಳು ಹೇಳಿ ತೋರುತ್ತು.ಕೊಬ್ಬರಿ,ಸೂರ್ಯಕಾಂತಿ,ನೆಲಗಡಲೆ ಎಲ್ಲಾ ಅಷ್ಟು ಪ್ರಧಾನವಾಗಿ ಇತ್ತಿದ್ದಿಲ್ಲೆ ಹೇಳಿ ಊಹಿಸಲಕ್ಕು.

  3. ರುಚಿ ರುಚಿಯಾದ ಅಡುಗೆ ಮಾಡುದು ” ಒಂದು ಕಲೆಯೇ ಸೈ ” ಹೇಳಿ ಎನ್ನ ಅಜ್ಜಿ ಹೇಳುಗು. ಅದು ಅಪ್ಪಾದ್ದುದೆ. ವೇಣಿ ಅಕ್ಕನ ಅಡಿಗೆಯ ರುಚಿ ಘಮ ಘಮಾಯಿಸುಲೆ ಹ೦ತ ಹ೦ತವಾಗಿ ಹಾಕುವ ಅಷ್ಟೇ ಚೆಂದದ ಪಟ೦ಗಳೂ ಕಾರಣ ಇದ್ದಲ್ಲದ?

  4. ಸುಟ್ಟವಿನ ರುಚಿಯ ಒಟ್ಟಿ೦ಗೆ ಭಾಷೆಯ ವಿಮರ್ಶೆಯೂ ಸೇರಿಯಪ್ಪಗ ಸೀವು ಹೆಚ್ಚಿತ್ತು.ಅಕ್ಕ೦ಗೂ ,ಮಾತುಕತೆಲಿ ಸೇರಿದ ನೆ೦ಟ್ರಿ೦ಗೂ ಧನ್ಯವಾದ.

  5. ಮರ ಕಡುದು ಕುತ್ತಿಗೆ ಕಿಚ್ಚು ಕೊಟ್ಟು ಸುಟ್ಟವು ಹೇಳುತ್ತವಲ್ಲದೋ? ಬೆಶಿ ಬೆಶಿ ಗುಳಿಲ್ಲಿ ಸುಟ್ತು ಮಾಡುವದೇ ಸುಟ್ಟವು ಹೇಳುವದು ಎನ್ನ ಅಭಿಪ್ರಾಯ! ಎಣ್ಣೆಲ್ಲಿ ಹಿಟ್ತಿನ ಚೂಂಟಿ ಮುಳುಗುಸಿ ಮಾಡುವದು ಮುಳ್ಕ ಆದಿಕ್ಕು. ರುಚಿಯೂ ಬೇರೆ ಬೇರೆ ಅಲ್ಲದೋ? ಸುಟ್ತವಿಂಗಿ ಬರೇ ಚುಟ್ಟಿ ಕಿಟ್ತಿದರೂ ಸಾಕು. ಮಧೂರು ಅಪ್ಪವ ತುಪ್ಪಲ್ಲೇ ಬೇಶುವದು.ಗುಳಿಲ್ಲೇ ಎರವದಾದರೂ ರುಚಿ ಬೇರೆಯೇ ಇದ್ದು. ಬಾಳೆ ಹಣ್ಣಿಂದೂ ಸುಟ್ಟವು ಮಾದುಲಕ್ಕು.

  6. ವೇಣಿ ಅಕ್ಕ ಇದು ಗುಳಿ ಸುಟ್ಟವು ಅಲ್ಲದೋ? ಹಿತ್ತಿನ ರಜ್ಜ ಗಟ್ಟಿ ಮಾಡಿ ಬಾಣಲೆಗೆ ಬಿಟ್ಟರೆ ಮಾಮೂಲು ಸುಟ್ಟವು ಆದಿಕ್ಕು..ಇದನ್ನೆ ಮುಳ್ಕ ಹೇಳುದು…ಹಲಸಿನ ಹಣ್ಣು ಇದ್ದರೆ ಬತ್ತೆ ಅತ್ಲಾಗಿ ಸುಟ್ಟಾವು ಮಾಡಿ ಕೊಟ್ಟಿಕ್ಕಿ..

    1. ಅಪ್ಪು, ಎಣ್ಣೆಗೆ ಚೂಂಟಿ ಹಾಕಿ ಬೇಶುತ್ತರೆ ಹಿಟ್ಟು ಇದರಿಂದ ರೆಜ್ಜ ಗಟ್ಟಿ ಬೇಕಾವುತ್ತು. ಇದಕ್ಕುದೆ ಕೆಲವು ಜನ ಮುಳ್ಕ, ಗುಳಿ ಅಪ್ಪ ಹೇಳಿದೆ ಹೆಳ್ತವು.

      ಖಂಡಿತ ಬನ್ನಿ ಸುಟ್ಟವು ಮಾಡಿ ಕೊಡುವ. ಃ)

      1. ಅಕ್ಕು ಬತ್ತೆ ಅಂಬಗ ನಾಡುದ್ದು ಉರಿಂಗೆ ಬಂದಪ್ಪಗ..ಹಲಸಿನ ಹಣ್ಣು ಉಳಿಗನ್ನೆ ಇನ್ನುದೆ ನಾಲ್ಕು ದಿನ..

      2. ಅದಾ ಎನ್ನ ದಿನುಗೇಳಿದ್ದವಿಲ್ಲೆ, ಬೋಚನನ್ನೂ.. ಅಲ್ಲದೋ ಬೋಚೋ?
        ಇದಾ ಅಕ್ಕ ಬೆಟ್ಟುಕಜೆ ಬಾವಂಗೆ ಬೇರೆಯೇ ತಟ್ಟೇಲಿ ಕೊಟ್ಟು ರಜ ದೂರವೇ ಕೂರ್ಸೆಕ್ಕು.. ಇಲ್ಲದ್ರೆ ನವಗೆ ಕೊಟ್ಟದ್ದು ಉಳಿಯಾ…

        1. ಬೇಜಾರು ಮಾಡದ ಪೆಂಗಣ್ಣ ನಿನಗೆ ಕೊಟ್ಟಿಕ್ಕಿ ಆನು ತಿಂತೆ..ಆದರೆ ಬೋಚ ಭಾವ ಬಂದರೆ ಎನಗೆ ಉಳಿಗೋ?..

          1. ಮಾಣಿ ಬಾವ ಅಕ್ಕಕ್ಕು..
            ಇದಾ ಇಂದು ನಿನ್ನ ಊರಿನ ಕರೇಲಿ ಬಂದಿತ್ತೆ.. ಮಳೆಗೆ ಚೆಂಡಿ ಆದ ಕಾರಣ ಸೀದಾ ಕಾನಾವಣ್ಣನಲ್ಲಿಗೆ ಹೋದೆ. ನಮ್ಮ ಕಟ್ಟ ಅಲ್ಲಿತ್ತಿದಾ..

    1. ಮಳೆ ಬಂದಾತು ಹಲಸಿನ ಹಣ್ಣು ಕೊಳದತ್ತು…

  7. ಹ್ಮ್… ಆಶೆ ಅವ್ತನ್ನೆ?

  8. ಇದಕ್ಕೆ “ಸುಟ್ಟವು” ಹೇಳಿ ಹೆಸರು ಎಂತಕೆ ಬಂತು….. ಕೆಂಡಲ್ಲಿ ಸುಡುದು ಅಲ್ಲನ್ನೇ……. ಎಣ್ಣೆಲಿ ಹೊರಿವದಲ್ಲದೋ…!!

    1. ಕೆಲವು ಹೆಸರು ಹೀಂಗೆ ವಿಚಿತ್ರ ಆಗಿ ಇದ್ದು.ಕೆಲವರು ಅಪ್ಪ,ಮುಳ್ಕ ಹೇಳಿ ಹೇಳುತ್ತವು.ಅವು- ಹೇಳಿದರೆ ಅಪ್ಪ [ಅಪೂಪ]ಹೇಳುವ ಶಬ್ದಂದ ಬಂದದಾಗಿಕ್ಕು.ಈ ತಿಂಡಿಯ ಗುಳಿಲಿ ಹಾಕಿ ಹೊರಿವದು[ಕೆಲವೊಮ್ಮೆ ಬಹಳ ಕಮ್ಮಿ ಎಣ್ಣೆ,ಯಾ ತುಪ್ಪ ಹಾಕುದು]ತೆಗೆವಲೆ ಕಬ್ಬಿಣದ ಕೋಲು[ಕಡ್ಡಿ]ಉಪಯೋಗಿಸುದು-ಇದರಿಂದಾಗಿ ಸುಡುದು ಹೇಳುವ ಶಬ್ದ ಹುಟ್ಟಿತ್ತು ಹೇಳಿ ಎನ್ನ ಊಹೆ.ಹೀಂಗೆ ಸುಟ್ಟ+ಅವು=ಸುಟ್ಟವು ಆದಿಕ್ಕು.ನಮ್ಮ ಭಾಷೆಲಿ ಎಣ್ಣೆಲಿ ಹೊರಿವದನ್ನೂ ಕೆಲವು ಸರ್ತಿ ಬೇಶುದು-ಹೇಳಿ ಹೇಳುತ್ತವು ;’ತಿಥಿಗೆ ಒಡೆ ಸುಟ್ಟವು ಬೇಶಿದರೆ ಆತು’ಹೇಳಿ ಹೇಳುದು ಆನು ಕೇಳಿದ್ದೆ.

      1. ಆ ಕಬ್ಬಿಣದ ಕೊಲಿನ್ಗೆ ಸುಟ್ಟವಿನ ಕೊಚ್ಹು ಹೇಳಿ ಹೇಳ್ತವು.

    2. ಎಣ್ಣೆಯ ಆವಿಷ್ಕಾರ ಆಯೆಕ್ಕಾರೆ ಮದಲೆ, ಎಣ್ನೆಲಿ ಹೊರಿವ ಕ್ರಮ ಕಲಿಯೆಕ್ಕಾರೆ ಮದಲೆ ಸುಟ್ಟವು ಮಾಡಿಗೊಂಡಿತ್ತಿದ್ದವೋ ಏನೋ.? ಆ ಸಮಯಲ್ಲಿ ಕೆಂಡಲ್ಲಿ ಸುಟ್ಟು ಮಾಡ್ಯೊಂಡಿತ್ತಿದ್ದವೋ, ಹಾಂಗಾಗಿ “ಸುಟ್ಟವು” ಹೆಸರೋ ಇದಕ್ಕೆ. ಕೆಂಡಲ್ಲಿ ಸುಟ್ಟದು ರುಚಿ ಕೆಡುತ್ತು ಹೇಳ್ಯೊಂಡು ಮತ್ತೆ ಎಣ್ಣೆಲಿ ಹೊರಿವ ಕ್ರಮ ಶುರುವಾತೋ, ಹೆಸರು ಮಾಂತ್ರ ಹಾಂಗೆ ಒಳುದತ್ತೋ , ಉಮ್ಮಪ್ಪ, ನವಗರಡಿಯ.

      1. ಮಾವ ಹಾಂಗೆ ಇದಕ್ಕೆ ಮುಳ್ಕ ಹೇಳ್ತವು..ವಿಶ್ಲೇಷಣೆ ಮಾಡ್ಲೆ ಎದಿಗಾಗದ್ದ ಹೆಸರು ಸುಮಾರಿದ್ದು ನಮ್ಮ ಭಾಷೆಲಿ ಅಲ್ಲದೋ..

        1. ಎಣ್ಣೆಲಿ ಮುಳುಗಿ ಬೇವ ಕಾರಣ “ಮುಳ್ಕ” ಹೇಳುದು ಬಂದದಾದಿಕ್ಕು. ಸುಟ್ಟವು ಹೇಳುವ ಹೆಸರು ಎಂತಕೆ ಬಂದದು ಗೊಂತಿಲ್ಲೆ.

          1. ಅದಪ್ಪು ವೇಣಿ ಅಕ್ಕ..ನಿಂಗ ವಿಶ್ಲೇಷಣೆ ಸರಿಯೇ..

    3. ಅದೇಕೆ ಎನಗೊಂತಿದ್ದು..
      ತರವಾಡು ಮನೆ ರಂಗಮಾವ ಸಣ್ಣದಾಗಿಪ್ಪಗ ಅವರ ಮನೆಗೆ ತೆಂಕ್ಲಾಗಿಂದ ಬಂದ ಒಂದು ಜೆನ ಮುಳ್ಕ ಮಾಡುಸ್ಸು ನೋಡಿ ಎಣ್ಣೆಂದ ತೆಗದಪ್ಪದೇ ಬಾಯಿಗೆ ಹಾಕಿತ್ತಡ.. ಹಾಕಿದ್ದೇ ಸುಟ್ಟತ್ತು ಸುಟ್ಟತ್ತು ಎನ್ನ ಬಾಯಿ ಸುಟ್ಟತ್ತು ಹೇದು ಬೊಬ್ಬೆ ಹೊಡೆದ ಮೇಗೆ ಇದು ಸುಟ್ಟವು ಆದ್ಸು ಹೇದು ಎನಂಗೊಂತಿಪ್ಪ ವಿಷಯ..

      ಮತ್ತೆ ಬೇರೆಂತಾರು ಪರವೂರಿಲಿದ್ದೋ ನವಗೊಂತಿಲ್ಲೆ..

      1. ಪೆಂಗಣ್ಣಹೇಳಿದ್ದು ಆದಿಕ್ಕೋ?? ಆದಿಪ್ಪಲು ಸಾಕು ಕೇಳಿ ನೋಡ್ತೆ…

        1. ಕೇಳುಲಕ್ಕಪ್ಪಾ..
          ನಾವು ಹೇದು ಹೇಳಿ ಹೇಳಿಕ್ಕೆಡಿ. ಮತ್ತೆ ನವಗೆ ಸುದ್ದಿ ಸಿಕ್ಕ ಇದಾ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×