ಹಲಸಿನಕಾಯಿ ಬೇಳೆ ಹೋಳಿಗೆ

September 4, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನಕಾಯಿ ಬೇಳೆ ಹೋಳಿಗೆ

ಬೇಕಪ್ಪ ಸಾಮಾನುಗೊ:

  • 1.5 ಲೀಟರ್ ಪಾತ್ರ ತುಂಬ ಹಲಸಿನಕಾಯಿ ಬೇಳೆ ಅಥವಾ 13 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ
  • 5 ಕಪ್(ಕುಡ್ತೆ) ಕಾಯಿ ತುರಿ
  • 5 ಕಪ್(ಕುಡ್ತೆ) ಬೆಲ್ಲ
  • 4.5 ಕಪ್(ಕುಡ್ತೆ) ಬೆಣ್ತಕ್ಕಿ
  • ರುಚಿಗೆ ತಕ್ಕಸ್ಟು ಉಪ್ಪು
  • ತುಪ್ಪ

ಮಾಡುವ ಕ್ರಮ:

ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ.

ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೆಳಿ ಮಾಡಿ.

ಬೆಳಿ ಮಾಡಿದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತುಂಡು ಮಾಡಿ.

ಒಂದು ಬಾಣಲೆ/ದಪ್ಪ ತಳದ ಪಾತ್ರಲ್ಲಿ ಸಾಧಾರಣ 14 ಕುಡ್ತೆ ನೀರು ಹಾಕಿ ಕೊದುಶಿ. ಕೊರದ ಬೇಳೆಯ ಹಾಕಿ ಮುಚ್ಚಲು ಮುಚ್ಚಿ ಬೇಶಿ.

ಬೇಳೆ ಬೆಂದ ಮೇಲೆ ಹೆಚ್ಚಿಪ್ಪ ನೀರಿನ ಅರುಶಿ, ಬೆಲ್ಲ, ಕಾಯಿ ಸುಳಿ, 1/4 ಚಮ್ಚೆ ಉಪ್ಪು ಹಾಕಿ ತೊಳಸಿ.

ಇದರ ಹದ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ಮಡುಗಿ. ಕಿಚ್ಚು ನಂದ್ಸಿ, ತಣಿವನ್ನಾರ ಕರೆಲಿ ಮಡುಗಿ.

ಇದರ ಮಿಕ್ಸಿ/ಗ್ರೈಂಡರ್ ಲ್ಲಿ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.

ಅಕ್ಕಿಯ 3-4 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ, ತೊಳದು, ಬೇಕಾದಸ್ಟು ನೀರು, ಉಪ್ಪು ಹಾಕಿ ನೊಂಪಿಂಗೆ ಗಟ್ಟಿಗೆ ಕಡೆರಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಕಡದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನಿಂಬೆ ಗಾತ್ರದ ಉಂಡೆ ಮಾಡಿ.

ಒಂದು ಪ್ಲಾಸ್ಟೀಕು ಶೀಟ್ಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ಈ ಉಂಡೆಯ ಅದರಲ್ಲಿ ಮಡುಗಿ.
ಇನ್ನೊಂದು ಸಣ್ಣ ಪ್ಲಾಸ್ಟೀಕು ಶೀಟ್ ತೆಕ್ಕೊಂಡು ಅದಕ್ಕು ರೆಜ್ಜ ಎಣ್ಣೆ ಪಸೆ ಮಾಡಿ, ಉಂಡೆಯ ಮೇಗೆ ಮಡುಗಿ ಒಂದು ಗಿಣ್ಣಾಲಿಲ್ಲಿ/ಹಪ್ಪಳದ ಮಣೆಲಿ ಒತ್ತಿ.

ಕಾವಲಿಗೆಯ ಬೆಶಿ ಅಪ್ಪಲೆ ಮಡುಗಿ, ಈ ಒತ್ತಿದ ಹೋಳಿಗೆ ಹಿಟ್ಟಿನ ತೆಗದು, ಅದ್ದಿ ಹಿಟ್ಟಿಲ್ಲಿ ಮುಳುಗ್ಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಗೆ ಹಾಕಿ, ಒಂದು ಸಕ್ಕಣ ತುಪ್ಪ ಹಾಕಿ ಮುಚ್ಚಿ ಬೇಶಿ.

ತಿರುಗ್ಸಿ ಹಾಕಿ ಪುನಃ 1-2 ನಿಮಿಷ ಹದ ಕಿಚ್ಚಿಲ್ಲಿ ಬೇಶಿ.

ಬೆಶಿ ಬೆಶಿ ತುಪ್ಪದ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 25 ಹೋಳಿಗೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

  1. ಬೇಳೆ ‘ಕಾಯಿದಾದರೆ’ ಒಳ್ಲೆದೋ ಅಲ್ಲಾ ‘ಹಣ್ನಿ೦ದಾದರೆ’ ಒಳ್ಲೆದೋ?

    [Reply]

    ಯಸ್ ಕೆ. Reply:

    ಹಲಸಿನಕಾಯಿ ಬೇಳೆ ಹೇಳಿ ,ಮೇಲೆ ಬರದ್ದಲ್ಲದೋ?

    [Reply]

    VA:F [1.9.22_1171]
    Rating: +3 (from 5 votes)
    ತೆಕ್ಕುಂಜ ಕುಮಾರ ಮಾವ°

    ತೆಕ್ಕುಂಜ ಕುಮಾರ ಮಾವ° Reply:

    ಪೂರ್ತಿ ಓದದ್ದೆ, ಸರಿಯಾಗಿ ಅರ್ಥ ಮಾಡಿಗೊಳ್ಳದ್ದೆ ಕಮೆಂಟು ಬರವದೋ, ಈ ಶ್ಯಾಮ ಭಾವ..!!!

    [Reply]

    VN:F [1.9.22_1171]
    Rating: -1 (from 1 vote)
  2. ಬೊಳುಂಬು ಮಾವ°
    ಗೋಪಾಲ ಬೊಳುಂಬು

    ಹಲಸಿನ ಬೇಳೆಯ ಹೋಳಿಗೆ ತಯಾರಿ ಬಗ್ಗೆ ವಿಶೇಷ ಮಾಹಿತಿ ಕೊಟ್ಟ ವೇಣಿಯಕ್ಕಂಗೆ ಧನ್ಯವಾದಂಗೊ. ಅಪರೂಪಕ್ಕೆ ಆದ ಕಾರಣ ರುಚಿ ರುಚಿ ಆವ್ತು ಈ ಹೋಳಿಗೆ. ಎನಗೂ ಬೈಲಿನ ಒಪ್ಪಣ್ಣಂಗೂ ಪರಿಚಯ ಆದ್ದದೇ ಬೇಳೆ ಹೋಳಿಗೆ ವಿಚಾರದ ಒಟ್ಟಿಂಗೆ ಹೇಳುವದು ಸಂತೋಷ ಕೊಡ್ತು.

    [Reply]

    VA:F [1.9.22_1171]
    Rating: +4 (from 6 votes)
  3. ಚೆನ್ನೈ ಬಾವ°
    ಚೆನ್ನೈ ಭಾವ°

    ಅಪ್ಪಪ್ಪು. ಲಾಯಕ ಆವ್ತು. ಬೆಶಿ ಬೆಶಿಗೆ ಎನಗೆ ನಾಕು ಕೊಟ್ಟಿಕ್ಕಿ.

    [Reply]

    ಶ್ಯಾಮ Reply:

    ನಾಕು ಒಟ್ತಿ೦ಗೇ ತಿ೦ದರೆ ಒಟ್ತಿ೦ಗೆ ಇಪ್ಪವಕ್ಕೆ ಕಷ್ತ ಅಕ್ಕು ಚೆನ್ನಾಯಿ ಬಾವ!

    [Reply]

    VA:F [1.9.22_1171]
    Rating: -2 (from 4 votes)
  4. ಹರೀಶ್ ಕೇವಳ

    ವಾವ್ಹ್…..

    [Reply]

    VA:F [1.9.22_1171]
    Rating: +3 (from 3 votes)
  5. ಭೀಮ ಪ್ರಕಾಶ

    ನಾಲ್ಕನೇ ಬಗೆ (ಸಾಮಾನುಗಳ ಪಟ್ತಿಲಿ) ಎ೦ತ ಹೇಳಿ ಗೊ೦ತಾತಿಲ್ಲೆ ಅಕ್ಕೋ!

    [Reply]

    ಬೊಳುಂಬು ಮಾವ°

    ಗೋಪಾಲ ಬೊಳುಂಬು Reply:

    ಅದರ ಕಂಡು ಹಿಡಿಯಲೆ ಸುಲಾಬ ಇದ್ದು. ಭಾಳ ಸುಲಭದ ಸಮಸ್ಯೆ ಅದು. ಬಾಕಿ ಆದ್ದು ಎಂತರ ? ರಜಾ ಅಂದಾಜು ಮಾಡು ನೋಡುವೊ ? ಅದೇ ಅದು.

    [Reply]

    VA:F [1.9.22_1171]
    Rating: +3 (from 5 votes)
  6. ಭೀಮ ಪ್ರಕಾಶ

    ಹ ಹ ಹ ಅಕ್ಕಿ ಅಲ್ಲದೋ ಬೊಳು೦ಬು ಮಾವಾ, ಯುರೇಕಾ, ಯುರೇಕಾ!

    [Reply]

    VA:F [1.9.22_1171]
    Rating: -1 (from 3 votes)
  7. ಮಾನೀರ್ ಮಾಣಿ
    ಮಾನೀರ್ ಮಾಣಿ

    ಈಗಷ್ಟೇ ಉ೦ಡಾತು, ಆದರೂ ಈ ಹೋಳಿಗೆಯ ನೋಡದ್ದೇ ಮತ್ತೆ ಹಶ್ವಾಗ್ತಾ ಇದ್ದು. ಎಷ್ಟು ಸಿಕ್ಕುಗು? 😉

    [Reply]

    VN:F [1.9.22_1171]
    Rating: 0 (from 0 votes)
  8. Maithri BK

    ಇದೆ ಹೋಳಿಗೇನ ಮೈದಾ ಹಿಟ್ತು ಚಿರೋಟಿ ರವೆಯಲ್ಲಿ ಕಣಿಕೆ ಮಾದ್ಕನ್ದು ಅದರೊಳಗೆ ಉಂಡೆ ಇಟ್ತು ಬೇರೆ ಎಲ್ಲ ಹೋಳಿಗೆ ಮಾಡತವಲ ಆ ತರ ಮಾಡಕ್ಕೆ ಬತ್ತಾ?

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಅಡ್ಕತ್ತಿಮಾರುಮಾವ°ಅನಿತಾ ನರೇಶ್, ಮಂಚಿವಿಜಯತ್ತೆಸಂಪಾದಕ°ಮಂಗ್ಳೂರ ಮಾಣಿಸರ್ಪಮಲೆ ಮಾವ°ಅನು ಉಡುಪುಮೂಲೆದೀಪಿಕಾಕಾವಿನಮೂಲೆ ಮಾಣಿಶರ್ಮಪ್ಪಚ್ಚಿಡಾಮಹೇಶಣ್ಣವಸಂತರಾಜ್ ಹಳೆಮನೆದೊಡ್ಡಭಾವಬಂಡಾಡಿ ಅಜ್ಜಿದೇವಸ್ಯ ಮಾಣಿಕಜೆವಸಂತ°ರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಕೊಳಚ್ಚಿಪ್ಪು ಬಾವಪೆರ್ಲದಣ್ಣಡೈಮಂಡು ಭಾವಹಳೆಮನೆ ಅಣ್ಣಚುಬ್ಬಣ್ಣಶುದ್ದಿಕ್ಕಾರ°ಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ