Oppanna.com

ಹಲಸಿನಕಾಯಿ ದೋಸೆ

ಬರದೋರು :   ವೇಣಿಯಕ್ಕ°    on   22/05/2012    12 ಒಪ್ಪಂಗೊ

ವೇಣಿಯಕ್ಕ°

ಹಲಸಿನಕಾಯಿ ದೋಸೆ

ಬೇಕಪ್ಪ ಸಾಮಾನುಗೊ:

  • 8-10 ಕಪ್(ಕುಡ್ತೆ) ಆದ ಹಲಸಿನಕಾಯಿ ಸೊಳೆ
  • 2 ಕಪ್(ಕುಡ್ತೆ) ಬೆಣ್ತಕ್ಕಿ
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ / ತುಪ್ಪ

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಹಲಸಿನಕಾಯಿ ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಸಿಗಿರಿ ಅಥವಾ ಮಿಕ್ಸಿಲಿ ಹಾಕಿ ಕ್ರಶ್ ಮಾಡಿ.

ಅಕ್ಕಿ, ಹಲಸಿನಕಾಯಿ ಸೊಳೆಯ ಮಿಕ್ಸಿ/ಗ್ರೈಂಡರಿಲ್ಲಿ ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಎರದು ಮುಚ್ಚಲು ಮುಚ್ಚಿ ಬೇಶಿ.
ಹದ ಕಿಚ್ಚಿಲ್ಲಿ ಬೇಕಾದಸ್ಟು ಕರ್ಕು ಅಪ್ಪನ್ನಾರ ಮಡುಗಿ ಎಳಕ್ಕಿ.

ತೆಂಗಿನ ಎಣ್ಣೆ ಹಾಕಿ ಬೆಶಿ ಬೆಶಿ ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 15 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

12 thoughts on “ಹಲಸಿನಕಾಯಿ ದೋಸೆ

  1. ವೇಣಿ ಅಕ್ಕನ ಶುದ್ದಿ ಚೊಲೋ ಆಯ್ದು.
    ಹ೦ತಹ೦ತವಾಗಿ ಫೋಟೋ ಸಮೇತ ವಿವರಿಸಿದ ಶೈಲಿ ತು೦ಬಾ ಹಿಡಿಸ್ತು. ಹತ್ತಾರು ಸಾಲು ಬರೆಯೋಕ್ಕಿ೦ತ ಹಿ೦ಗೆ ಕೆಲವೇ ಒ೦ದು ಫೋಟೋ ಹಾಕಿದ್ರೆ ಬಹುಶ ಇಫೆಕ್ಟು ಜಾಸ್ತಿ ಇರ್ತು. ಅಡುಗೆ ಮನೆ ಜಾಸ್ತಿ ಗೊತ್ತಿಲ್ದೋದ್ದವ್ರಿಗೂ ಬೇಗ ಅರ್ಥ ಆಗ್ತು. ಆನು ಇಷ್ಟುದಿನ ಹಲಸಿನ ಹಣ್ಣಿನ ದೋಸೆ ಮಾತ್ರ ತಿ೦ದಿದ್ದಿ. ಈಗ ಇದನ್ನೂ ಟ್ರೈ ಮಾಡ್ಳಕ್ಕು!

  2. ಕಾಯಿಚೆಕ್ಕೆ ದೋಸಗೆ ತೆಂಗೆನೆಣ್ಣೆ + ಜೇನ ಒಳ್ಲೆಯ ಚೇರ್ಚೆ……. ಚೆನ್ನೈ ಭಾವನ first remark perfect……

  3. ಹಲಸಿನ ಎಲ್ಲ ಖಾದ್ಯಂಗೊ ರುಚಿ ಆವುತ್ತು. ಎನಗೆ ಇಷ್ಟವೂ.

  4. Madi nodi- Arogyakara Chutni (Pachedi)
    Bekada samanugo- Hurida Kadle bele, kai suli,kottambari soppu, pudina soppu,2 bellulli bittu, thundu shunti,2 hasi menasu,uppu,huli.
    Mele helida ella samanugala mixili kaderi. Oggarane ge jeerige,menasu,sasame haki kodi.
    Thindi ge koodle avuthu, arogyakku olledu.

    1. ಇದಕ್ಕೆ ಆರೋಗ್ಯಕರ ಚಟ್ನಿ/ ಪಚ್ಚಡಿ ಹೇಳಿ ಹೆಸರೋ..! ಅಂಬಗ ಬಾಕಿದ್ದದು ??!!

      ಅಕ್ಕು… ನಿಂಗೊ ಹೇಳಿದಾಂಗೆ ಮಾಡಿ ತಿಂದು ನೋಡಿಕ್ಕಿ ಹೇಳ್ತೆಯೋ ಆತಾ. ಇದಾ.. ಹೀಂಗೆ ಆರೋಗ್ಯಕರವಾದ್ದು ನಿಂಗಳತ್ರೆ ಏನಾರು ಇದ್ದರೆ ಶುದ್ದಿ ಹೇಳಿ ಹೇದು.

      1. Athithi Submit on Wednesday, May 23, 2012 9:34:51 AM:

        Innondu prayoga- Arogyakara Basale soppina kichdi ( Madrasina Bavange heli)
        Samanugo: 10 dodda Basale soppu, 2 kudthe akki,ondu mushti kadle bele,1 kudthe togari bele, shunti, 4 bittu bellulli,uppu, 2 tomato, 3 dodda chamcha tuppa,jeerige, benusoppu,, 4 hasi menasu.
        Vidhana: Belegala mathe akkiya bere bere beshi (hadake beshi).Banale (chinchetti) ge tuppa haki beshi madi,jeerige haki hottusi, shunti+bellulli choorugala haki,bensoppu haki,basale soppina koradu haki badsi, hasi menasu haki, tomato thundugala haki.Beshida bele,ashana ,uppu ella haki sariyagi tirugsi. Meganda tuppalli oggarane kodi.

  5. Kayi sole dose madiddakke thumba thanks akko.
    Halasina hannina dose madle avuthu.Try madi nodi, layikka avuthu.

    1. ಅತಿಥಿ ಮಹಾಶಯರೇ.. ಹಲಸಿನ ಹಣ್ಣು ಹಪ್ಪಳವೂ ಮಾಡ್ಳಾವ್ತು. ಪಾಚವೂ ಮಾಡ್ಳಾವ್ತು, ಕೊಟ್ಟಿಗೆಯೂ ಮಾಡ್ಳಾವ್ತು. ಇದಾ.. ಎಲ್ಲ ಒಂದೇ ದಿನ ನಿಂಗಳ ಹೊಟ್ಟಗೆ ತುಂಬಿಸಿರೆ ಅರಿಷ್ಟ ಕುಪ್ಪಿಯವು ಈಗ ಊರಿಲ್ಲಿ ಇಲ್ಲೆ ಹಾ°.

  6. ಅದಪ್ಪು ಚೆನ್ನೈ ಅಪ್ಪಚ್ಚಿ ನಿಂಗ ಹೇಳಿದ ಹಾಂಗೆ ಎನಗೂ ಜೇನ ಇಲ್ಲದ್ರೆ ಹಲಸಿನಕಾಯಿ ದೋಸೆ ತಿಂದ ಹಾಂಗೆ ಆಗ್ತಿಲ್ಲೆ..ಎಂತದೇ ಆದರು ವೇಣಿಯಕ್ಕ ತುಂಬ ಕೆಲಸ ಮಾಡಿದ್ದವಪ್ಪ ಹಲಸಿನಕಾಯಿ ದೋಸೆಯ ಬೈಲಿಲಿ ಮಾಡ್ಲೆ..ಆದರೆ ಎಲ್ಲವಕ್ಕು ಸಿಕ್ಕುಗೋ ವೇಣಿಯಕ್ಕ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×