Oppanna.com

ಹಲಸಿನಕಾಯಿ ಖಾರದ ಹಪ್ಪಳ

ಬರದೋರು :   ವೇಣಿಯಕ್ಕ°    on   29/04/2014    0 ಒಪ್ಪಂಗೊ

ವೇಣಿಯಕ್ಕ°

ಹಲಸಿನಕಾಯಿ ಖಾರದ ಹಪ್ಪಳ
ಬೇಕಪ್ಪ ಸಾಮಾನುಗೊ:

  • 2 ಸಾಧಾರಣ ಗಾತ್ರದ ಹಲಸಿನಕಾಯಿ
  • 3/4 ಕಪ್(ಕುಡ್ತೆ) ಕೊತ್ತಂಬರಿ
  • 1.5 ಚಮ್ಚೆ ಓಮ
  • 3 ಚಮ್ಚೆ ಜೀರಿಗೆ
  • 10 ಒಣಕ್ಕು ಮೆಣಸು
  • 5-6 ಕಣೆ ಬೇನ್ಸೊಪ್ಪು
  • 3/4 ಚಮ್ಚೆ ಇಂಗು
  • 2 ಚಮ್ಚೆ ಗೆಣಮೆಣಸು
  • 6-8 ಚಮ್ಚೆ ಮೆಣಸಿನ ಹೊಡಿ
  • 1/4 ಕಪ್(ಕುಡ್ತೆ) ಎಳ್ಳು
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಅರ್ಧ ಭಾಗ ಮಾಡಿ.

ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಗೂಂಜಿನ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಒಂದು ಬಾಣಲೆಲಿ ಒಣಕ್ಕು ಮೆಣಸು, ಗೆಣಮೆಣಸು, ಓಮ, ಜೀರಿಗೆ, ಕೊತ್ತಂಬರಿಯ ಎಣ್ಣೆ ಹಾಕದ್ದೆ  ಸಾಧಾರಣ 3 ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಬೇನ್ಸೊಪ್ಪು, ಇಂಗು ಹಾಕಿ ಸಾಧಾರಣ 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಪರಿಮ್ಮಳ ಬಪ್ಪನ್ನಾರ ಹೊರಿರಿ.


ಪೂರ್ತಿ ತಣುದ ಮೇಲೆ, ಮಿಕ್ಸಿಗೆ ಹಾಕಿ ಹೊಡಿ ಮಾಡಿ.

ಸೊಳೆಯ ನೀರಿಲ್ಲಿ ಲಾಯಿಕ ತೊಳದು ಅಟ್ಟಿನಳಗೆ ಅಥವಾ ಪ್ರೆಶ್ರ್ ಕುಕ್ಕರ್ಲ್ಲಿ ಉಪ್ಪು, ಹೊಡಿ ಮಾಡಿದ ಮಸಾಲೆ, ಮೆಣಸಿನ ಹೊಡಿ ಹಾಕಿ 20-30 ನಿಮಿಷ ಬೇಶಿ.

ಬೆಂದ ಸೊಳೆಯ ಲಾಯಿಕಲಿ ತೊಳಸಿ, ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ. ಅದಕ್ಕೆ ಎಳ್ಳು ಹಾಕಿ ಬೆರುಸಿ.

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಮೇಲೆ ತಯಾರಿಸಿದ ಹಿಟ್ಟಿಂದ ನಿಂಬೆ ಹಣ್ಣಿನ ಗಾತ್ರದ ಉಂಡೆಗಳ ಮಾಡಿ.

ಎರಡು ಸಣ್ಣ ಪ್ಲಾಸ್ಟೀಕು ಶೀಟಿಂಗೆ ಎಣ್ಣೆ ಪಸೆ ಮಾಡಿ, ಉಂಡೆಯ ಎರಡು ಪ್ಲಾಸ್ಟೀಕು ಶೀಟಿನ ನಡುಕೆ ಮಡುಗಿ ಹಪ್ಪಳದ ಮಣೆಲಿ ಒತ್ತಿ.


ಮೇಗಾಣ ಪ್ಲಾಸ್ಟೀಕು ಶೀಟ್ ತೆಗದು, ಹಪ್ಪಳವ ಕವುಂಚಿ ಇನ್ನೊಂದು ದೊಡ್ಡ ಪ್ಲಾಸ್ಟೀಕು ಶೀಟ್/ ಬಾಳೆ ಎಲೆ / ಮುಂಡಿ ಎಲೆಲಿ ಹಾಕಿ ಇನ್ನೊಂದು ಸಣ್ಣ ಪ್ಲಾಸ್ಟೀಕು ಶೀಟಿನ ತೆಗೆರಿ.


ಇದರ 5-6 ದಿನ ಬೆಶಿಲಿಲ್ಲಿ ಒಣಗ್ಸಿ, ಒಂದು ಇರುಳು ತಣ್ಣಂಗೆ ನೆಲಕ್ಕಲ್ಲಿ ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಟ್ಟ ಕಟ್ಟಿ, ಪುನಃ ಒಂದು 3-4 ದಿನ ಬೆಶಿಲಿಲ್ಲಿ ಒಣಗುಸಿ ಡಬ್ಬಿಲಿ ತೆಗದು ಮಡುಗಿ.

ಇದರ ಎಣ್ಣೆಲಿ ಹೊರುದು ಅಥವಾ ಕೆಂಡ/ಮೈಕ್ರೊವೇವ್ಲ್ಲಿ ಸುಟ್ಟಾಕಿ ತಿಂಬಲೆ ಕೊಡಿ. ಇದು ಅಶನ, ಸಾರು/ಮೇಲಾರ ದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.
ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 300 ಹಪ್ಪಳ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×