Oppanna.com

ತರಾವರಿ ಹಲ್ವಂಗೊ…

ಬರದೋರು :   ಬಂಡಾಡಿ ಅಜ್ಜಿ    on   15/05/2010    1 ಒಪ್ಪಂಗೊ

ಕೈ ಬೇನೆ ಸದಾರ್ಣ ಕಮ್ಮಿ ಆತು. ಮೊನ್ನೆ ಮತ್ತೆ ಕುಂಬ್ಳಕಾಯಿ ಹಲ್ವ ಮಾತ್ರ ಬರವಲೆಡ್ತದು. ಈ ಸರ್ತಿ ಒಳುದ್ದದರ ಎಲ್ಲ ಬರೆತ್ತೆ. ಮೊನ್ನೆಣ ಸೆಡ್ಳಿಂಗೆ ಸರಿಯಾಗಿ ಕರೆಂಟುದೇ ಇಲ್ಲೆ. ಅಂಬಗಂಬಗ ಹೋಗಿಯೊಂಡು ಬಂದೊಂಡು ಇರ್ತು. ಇಲ್ಲಿ ಬರವಾಗ ಅಂಬಗಂಬಗ ಅದೆಂತದೋ ಸೇವೆ ಮಾಡೆಕಡ. ಇಲ್ಲದ್ದರೆ ಉದ್ದಿ ಹೋವುತ್ತಡ, ಒಪ್ಪಣ್ಣ ಹೇಳಿತ್ತಿದ. ಹಾಂಗೆ ಮಾಡಿಮಡಗಿ ಪುನಾ ಕರೆಂಟು ಬಂದಪ್ಪಗ ಮುಂದರುಸುದು. ಕೊಡೆಯಾಲಲ್ಲಿ ಅಡಿಗೆ ಮಾಡುವಾಗಳೂ ಹಾಂಗೇಡ. ಎಲ್ಲ ತೆಯಾರಿ ಮಾಡಿ ಮಡಗಿ ಕರೆಂಟು ಬಂದಪ್ಪಗ ಮಾಡುದಡ. ಮಿಸ್ಕಿಲಿ ಕಡದು ಮಾಡ್ತದು. ಕಲ್ಲಿಲಿ ಕಡವಲೆ ಉದಾಸನ ಇದಾ. ಮೊನ್ನೆ ಕೊಡೆಯಾಲಕ್ಕೆ ಹೋಗಿ ಬಂದ ಶ್ರೀ ಹೇಳಿಯೊಂಡಿದ್ದತ್ತು.
ಹ್ಮ್… ಅದಿರಳಿ. ಈಗ ಹಲ್ವ ಮಾಡುವ ಶುದ್ದಿಗೆ ಬಪ್ಪೊ.
ಎಲ್ಲವನ್ನೂ ಮಾಡ್ತ ವಿದಾನ ಸಾಮಾನ್ಯ ಒಂದೇ ರೀತಿ, ಕುಂಬ್ಳಕಾಯಿ ಹಲ್ವದ ಹಾಂಗೆಯೇ.
ಕೆಂಬುಡೆ ಹಲ್ವ, ಸೊರೆಕ್ಕಾಯಿ ಹಲ್ವ, ಮುಳ್ಳುಸೌತ್ತೆ ಹಲ್ವ, ಬಪ್ಪಂಕಾಯಿ ಹಲ್ವ, ಕೇರೇಟು ಹಲ್ವ ಎಲ್ಲವುದೇ ಆವುತ್ತು.
ಕೆಂಬುಡೆ/ಸೊರೆಕ್ಕಾಯಿ/ಮುಳ್ಳುಸೌತ್ತೆ ಏವದರ ಮಾಡ್ತೋ ಅದರ ತಿರುಳು, ಚೋಲಿ ಎಲ್ಲ ತೆಗದು ಸಣ್ಣಕ್ಕಿ ಕೊಚ್ಚಿ ಕಾಸಿತ್ತು, ನೀರು ಆರುವನ್ನಾರ. ಬೇವಲಪ್ಪಾಗ ಸಕ್ಕರೆ ಹಾಕಿ, ಪುನಾ ಕಾಸಿತ್ತು. ಅದು ಕರಗಿ ಪಾಕ ಅಪ್ಪಾಗ ತುಪ್ಪ ಹಾಕಿತ್ತು. ಮತ್ತೆ ಏಲಕ್ಕಿ ಹೊಡಿ, ಬೀಜದಬೊಂಡು, ಒಣದ್ರಾಕ್ಷೆ ಎಲ್ಲ ಹಾಕುಲಕ್ಕು ಬೇಕಾರೆ. ಕೈರಂಗಳ ಪುಳ್ಳಿಗೆ ಆ ಒಣದ್ರಾಕ್ಷೆ ಹಾಕಿರೆ ಆಗ. ಅದು ಹುಳಿ ಹುಳಿ ಆವುತ್ತಡ. ಪಾಯಸಲ್ಲಿ ಇಪ್ಪ ದ್ರಾಕ್ಷೆಯೂ ಆಗ ಅದಕ್ಕೆ.
ಹೊಸಬೆಟ್ಟು ಪುಳ್ಳಿಯಾಂಗಿಪ್ಪವಕ್ಕೆಲ್ಲ ಈ ಹಲ್ವಂಗಳ ಚಂಚಲ್ಲಿ ಕೋರಿ ತಿಂಬ ಪಕಕ್ಕೆ ಮಾಡಿರೆ ಕುಶಿ ಅಪ್ಪದು. ನಮ್ಮ ಕುಂಞಿಮಾಣಿ ಎಲ್ಲ ಅದರ ಮೈಮೇಲಂಗೆ ಅರಿಶಿಯೊಳ್ತವಿದಾ, ತಿಂಬಲೆ ಅರಡಿಯದ್ದೆ. ಹಾಂಗೆ ರೆಜಾ ಗಟ್ಟಿಗೆ ಕಾಸುದು.

ಕೇರೆಟ್ಟಿನ ಹಲುವ, ಜಾಸ್ತಿ ತಿಂದರೆ ಪಿತ್ತ, ಹಾಂ!
ಕೇರೆಟ್ಟಿನ ಹಲುವ, ಜಾಸ್ತಿ ತಿಂದರೆ ಪಿತ್ತ, ಹಾಂ!

ಹೀಂಗೇ ಕೇರೇಟಿನ ಹಲ್ವದೇ.
ಇದರ ಮಾಡ್ತರೆ ಒಪ್ಪಕ್ಕನತ್ತರೆ ತುರಿತ್ತ ತಟ್ಟೆಲಿ ತುರುದು ಕೊಡ್ಳೆ ಹೇಳುದು. ತುರುದರೆ ಲಾಯ್ಕಾವುತ್ತು, ಕೊಚ್ಚುಲೆ ಬಂಙ ಅಲ್ಲದೋ. ತುರುದು ಬೇಶುದು. ಇದಕ್ಕೆ ಬೇಕಾರೆ ರಜ ಹಾಲುದೆ ಹಾಕುಲಕ್ಕು. ಬೆಂದಪ್ಪಾಗ ಸಕ್ಕರೆ ಹಾಕಿ ಕಾಸಿ, ತುಪ್ಪ ಹಾಕಿ ಪುನಾ ಕಾಸಿ, ಹೊರುದ ಬೀಜದ ಬೊಂಡುದೇ ಏಲಕ್ಕಿಯುದೇ ಹಾಕಿರೆ ಕೇರೇಟಿನ ಹಲ್ವ ಆತು.
ಎಲ್ಲಾ ಹಲ್ವಂಗಳ ಮಾಡುವಾಗಳೂ ಸಕ್ಕರೆ ಹಾಕೆಕ್ಕಾರೆ ಮೊದಲೇ ಆ ತರಕಾರಿ ಬೆಂದಿರೆಕ್ಕು. ಇಲ್ಲದ್ದರೆ ಮತ್ತೆ ಬೇಯ್ತಿಲ್ಲೆ. ಹಲ್ವಕ್ಕೆ ರುಚಿ ಬಪ್ಪದು ಏಲಕ್ಕಿ, ತುಪ್ಪ ಹಾಕಿಯಪ್ಪಾಗಳೇ. ಅದುದೇ ನಮ್ಮ ಹಟ್ಟಿದನದ ಪರಿಮ್ಮಳದ ತುಪ್ಪ ಆಯೆಕ್ಕು.
ಕೇರೇಟಿನ ಹಲ್ವದ ಹಾಂಗೆಯೇ ಬೀಟ್ರೋಟಿನ ಹಲ್ವವುದೇ ಆವುತ್ತಡ. ಆನು ಮಾಡಿ ನೋಡಿದ್ದಿಲ್ಲೆ. ನೋಡೊ ಈ ಸರ್ತಿ ಕೊಳಚ್ಚಿಪ್ಪು ಪುಳ್ಳಿಯ ಮೇಲೆ ಒಂದು ಪ್ರಯೋಗ ಮಾಡುವೊ ಆಗದೋ?
ಮೊನ್ನೆ ರಂತಡ್ಕ ರಾಜನ ಮನೆಲಿ ಒರಿಷಾವಧಿ ಪೂಜೆ ಇತ್ತದ. ಅಲ್ಲಿಗೆ ಹೋಯ್ಕೊಂಡಿಪ್ಪಾಗ ಬಸ್ಸಿಲಿ ಇಬ್ರು ಹೆಮ್ಮಕ್ಕೊ ಮಾತಾಡಿಯೊಂಡಿತ್ತವು, ಬಟಾಟೆ ಹಲ್ವ ಮಾಡ್ಳಾವುತ್ತೂಳಿ.
ಅದೊಂದು ಮಾಡಿ ನೋಡೇಕೂಳಿ ಅಂಬಗಳೇ ಗ್ರೇಶಿದ್ದೆ. ಮೊನ್ನೆ ಪುಳ್ಳಿಯ ರಿಸಲ್ಟು ಬಂದಪ್ಪಾಗ ಒಂದು ಸಂದರ್ಬ ಸಿಕ್ಕಿತ್ತದ. ಪಾಪ ಒಳ್ಳೆ ಮಾರ್ಕು ತೆಗದ್ದು. ಹಾಂಗೆ ಬಾಯಿಸೀವು ಮಾಡೆಕ್ಕನ್ನೆ. ಹೇಂಗೋ ಸಾಂಬಾರಿಂಗೆ ತಂದ ಬಟಾಟೆ ಇದ್ದತ್ತು.
ಅದರ ಚೋಲಿ ತೆಗದು ತುರುದ್ದದು. ಈ ಸರ್ತಿ ಒಪ್ಪಕ್ಕ ಸಿಕ್ಕಿದ್ದಿಲ್ಲೆ, ಪರೀಕ್ಷೆಡ. ಹಾಂಗೆ ಪುಳ್ಳಿಯತ್ತರೇ ಹೇಳಿದ್ದು. ತುರುದ್ದದದರ ಹಸಿ ಮಾಸುವಷ್ಟು ಬೇಶಿ ಸಕ್ಕರೆ ಹಾಕಿ ಪುನಾ ಬೇಶಿ, ಅದು ಕರಗುಲಪ್ಪಾಗ ತುಪ್ಪ ಹಾಕಿದ್ದು. ಒಂದ್ರಜ್ಜ ತೊಳಸಿ, ಅಡಿ ಬಿಡ್ಳಪ್ಪಾಗ ಇಳುಗಿ ಅಗಲ ಪಾತ್ರಲ್ಲಿ ಹರಗಿದ್ದು. ಬೇಕಾರೆ ಏಲಕ್ಕಿ ಹಾಕುಲಕ್ಕು. ತೊಂದರಿಲ್ಲೆ, ಒಳ್ಳೆ ರುಚೀ ಆವುತ್ತು. ಬಟಾಟೆ ಹಲ್ವ ಹೇಳಿ ಹೇಳದ್ದರೆ ಗೊಂತೇ ಆಗ. ಕುಂಬ್ಳಕಾಯಿ ಹಲ್ವದ ಹಾಂಗೆಯೇ ಆವುತ್ತು. ರುಚಿ ಮಾತ್ರ ಒಂದು ರಜಾ ಬೇರೆ ಅಷ್ಟೆ. ಪುಳ್ಳಿಗೆ ಕುಶೀ ಆಯಿದು, ಎಲ್ಲೊರಿಂಗೂ ಕೊಟ್ಟು ಕೊಟ್ಟು “ಇದು ಎಂತರದ್ದು ಹೇಳಿರೆ ನಿಂಗ ಉಶಾರಿ..” ಹೇಳಿ ಕಾಲೆಳಕ್ಕೊಂಡಿತ್ತು. ಬೈಲಿಂಗೆಲ್ಲ ಕೊಡ್ತೇಳಿ ತೆಕ್ಕೊಂಡೋಯಿದು. ನಿಂಗೊಗೆ ಸಿಕ್ಕಿದ್ದೋ?
ಇನ್ನೊಂದು ಬಾಳೆಹಣ್ಣು ಹಲ್ವ. ಶಾಂತಕ್ಕ ಬಾರೀ ಲಾಯ್ಕಕ್ಕೆ ಮಾಡುಗು ಇದರ. ಮಾಡಿ ಬೆಂಗ್ಳೂರಿಂಗೆಲ್ಲ ಕಳುಸುಲಿದ್ದಡ. ಪೋಷ್ಟುಮೇನು ಗೊಂತಾದರೆ ಬಿಡ, ಪೂರ ಮುಗಿಶುಗು. ಬೆಂಗ್ಳೂರಿಲಿಪ್ಪವಂಗೆ ಬರೇ ಕರಡಿಗೆ ಸಿಕ್ಕುಗು!
ಇದಕ್ಕೆ ನೇಂದ್ರ, ಕದಳಿ, ಔಂಡ ಬಾಳೆ ಎಲ್ಲವುದೇ ಲಾಯ್ಕಾವುತ್ತು.
ಬಾಳೆಹಣ್ಣಿನ ಕೊಚ್ಚುದು ಚೋಲಿ ತೆಗದು. ಮತ್ತೆ ಕಾಸುದು. ಸುಮಾರು ಹೊತ್ತು ಕಾಸೆಕ್ಕಾವುತ್ತು ಮಾಂತ್ರ. ಕಾದಪ್ಪಾಗ ಬಣ್ಣ ಬದಲುತ್ತು. ಮತ್ತೆ ಸಕ್ಕರೆ ಹಾಕಿ ಪುನಾ ಕಾಸಿತ್ತು. ಪಾಕ ಆಯ್ಕೊಂಡು ಬಪ್ಪಾಗ ತುಪ್ಪ ಹಾಕುದು. ಒಂದು ಬಟ್ಳು ಹಲ್ವಕ್ಕೆ ಒಂದು ಕುಡ್ತೆ ತುಪ್ಪ ಬೇಕಾವುತ್ತು.
ಹಲ್ವ ಗಟ್ಟಿ ಆಗಿ ಅಡಿಬಿಟ್ಟಪ್ಪಾಗ ಇಳುಗಿ ಹರಡಿತ್ತು.
ಇದಕ್ಕೆ ಏಲಕ್ಕಿ ಹಾಕೆಕೂಳಿ ಇಲ್ಲೆ. ಬಾಳೆಹಣ್ಣೇ ಒಂದು ಪರಿಮ್ಮಳ ಇದ್ದಲ್ಲದೋ.
ಬೀಜದಬೊಂಡು ಹಾಕಲಕ್ಕು, ಇನ್ನುದೇ ರುಚಿ ಅವುತ್ತು.
ಇನ್ನು, ಸೇಮಿಗೆ, ಸಾಬಕ್ಕಿ ಹಲ್ವವುದೇ ಆವುತ್ತು.
ಅದರ ಲಾಯ್ಕಕ್ಕೆ ತುಪ್ಪಲ್ಲಿ ಹೊರಿಯೆಕ್ಕು ಮೊದಾಲು. ಮತ್ತೆ ಚೂರು ನೀರು ಹಾಕಿ ತೊಳಸಿ ಬೇಶುದು.Günstige Replica Uhren  ಬೆಂದಮೇಲೆ ಸಕ್ಕರೆ ಹಾಕುದು. ಪಾಕ ಬಂದು ಗಟ್ಟಿ ಅಪ್ಪಲಪ್ಪಗ ತುಪ್ಪ ಹಾಕಿತ್ತು. ಮತ್ತೆ ಏಲಕ್ಕಿ, ಬೀಜದಬೊಂಡು ಎಲ್ಲ ಹಾಕಿ, ಇಳುಗಿ ಬಟ್ಳಿಲಿ ಹರಡಿ ತಣುದಪ್ಪಗ ತುಂಡುಮಾಡಿರಾತು. ಇದೆಲ್ಲ ರಜಾ ಗಟ್ಟಿಯೇ ಇರೆಕ್ಕು.
ಹಾಂಗೆ ನೆಂಪಾದಷ್ಟು ಹಲ್ವಂಗಳ ಬರದೆ ಇದಾ. ಪುರುಸೋತಿಲಿ ಒಂದೊಂದೆ ಮಾಡಿ ತಿಂಬಲಕ್ಕು. ಇಲ್ಲಿ ಬಿಟ್ಟೋದ್ದದು ನಿಂಗೊಗೆ ನೆಂಪಾದರೆ ಹೇಳಿ.
ಮಾಡಿಪ್ಪಗ ಅಜ್ಜಿಗೂ ರೆಜಾ ಕೊಡಿ ರುಚಿನೋಡ್ಳೆ, ಆತೊ…

One thought on “ತರಾವರಿ ಹಲ್ವಂಗೊ…

  1. ಬೀಟ್ರೂಟ್ ಹಲ್ವ ಎನ್ನ ಮಗಳು ಮನೆಲಿ ಪ್ರಯೋಗ ಮಾಡಿತ್ತಿದ್ದು. ತುಂಬಾ ಲಾಯಿಕ್ ಆವುತ್ತು. ಕಾರೆಟ್ ಹಲ್ವ ಮಾಡ್ತಾ ಹಾಂಗೇ ಮಾಡಿರೆ ಆತು. ಬೇಯಿಸುವಾಗ ಹಾಲಿಲ್ಲಿ ಬೇಯಿಸಿದ್ದೆ ಹೇಳಿದ್ದು. ಬೀಜ ಬೊಂಡು,ಏಲಕ್ಕಿ, ದ್ರಾಕ್ಷಿ ಹಾಕಿದ್ದು, ರಜ ಬೆಶಿ ಇಪ್ಪಗ ತಿಂಬಲೆ ಇನ್ನೂ ಲಾಯಿಕ್ ಆವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×