ಅಪ್ಪೋ.. ಇದಕ್ಕೆಂತ ಹೆಸರು ?

May 4, 2011 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 32 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಡಿಗೆ ಮಾಡಿದ ಈ ಶುದ್ದಿಲಿ ಇಪ್ಪ ರಸಪ್ರಶ್ನೆಗೆ ಬೈಲಿನೋರು ಉತ್ತರ ಹೇಳುವಿರಾ?

ಕೇಶವಣ್ಣ ಅವನ ಹೆಂಡತಿ ಸಾವಿತ್ರಿ. ಪಾಪದವು. ಹಿತ್ತಲು ಮನೆಲಿ ವಾಸ. ಭಟ್ಟಮಾವ ದೆನಿಗೊಂಡರೆ ಪರಿಕರ್ಮಕ್ಕೆ  ಹೋವ್ತ ಉದ್ಯೋಗ.

ಕೇಶವಣ್ಣಂಗೆ ಒಂದೇ ಮಗಳು, ಪಾರ್ವತಿ. ಈ ವಾರಿ ಎಂಟನೇ ಕ್ಲಾಸು.
ಕಳುದ ವರ್ಷ ಬೇಸಗೆ ರಜೆಲಿ ಅತ್ತೆ ಮನಗೆ ಬೆಂಗಳೂರಿಂಗೆ ಹೋಗಿ ಒಂದು ತಿಂಗಳು ಕೂದಿಕ್ಕಿ ಬಯಿಂದು. ಮತ್ತೆ ಹೆರಾಣ ಪ್ರಪಂಚ ನಮ್ಮೂರು, ನಮ್ಮೂರ ಜೆಂಬ್ರ ಅಷ್ಟೆ.

ಅಂದು ಕೇಶವಣ್ಣಂಗೆ ಉಕ್ಕಿನಡ್ಕಲ್ಲಿ ಒಂದು ಗ್ರಾಶಾಂತಿ ಪರಿಕರ್ಮ.
ಉದಿಯಪ್ಪಗಳೇ ಬರೀ ಕಾಪಿ ಕುಡುದಿಕ್ಕಿ ಹೊಯ್ದವು ಬೇಗ ಎತ್ತೆಕ್ಕನ್ನೇದು.  ಸಾವಿತ್ರಿ ಉದಿಯಪ್ಪಗ ತೆಳ್ಳವು ಮಾಡಿಕ್ಕಿ ಮಗಳಿಂಗೂ ಕೊಟ್ಟಿಕ್ಕಿ ಹಟ್ಟಿಲಿ ದನಗೊಕ್ಕೆ ತಿಂಬಲೆ ಹಾಕಿಕ್ಕಿ ಬಂದಿಕ್ಕಿ ಚೆಂಬು ಕವುಂಚಿ ಹಾಕಿತ್ತಡ.
ಛೆ., ಇನ್ನೆಂತರ ಮಾಡುತ್ಸು. ಮಧ್ಯಾನ್ನಕ್ಕಿಪದೂ ಆಯ್ದಿಲ್ಲೆ. ನೀ ಎಂತಾರು ಮಾಡು ಮಗಳೇ ಹೇಳಿಕ್ಕಿ ಕೂದತ್ತಡ ಸಾವಿತ್ರಿ.
ನಮ್ಮ ಒಪ್ಪಕ್ಕ ಪಾರ್ವತಿ ಸಣ್ಣ ಕೂಸು. ಮಾಡಿ ಕೊಟ್ಟದರ ತಿಂದು ಗೊಂತಲ್ಲದ್ದೇ ಅಡಿಗೆ ಮಾಡ್ಲೆ ಎಲ್ಲಿ ಗೊಂತಿದ್ದು.

ಅಮ್ಮ ಹೇಳಿತ್ತನ್ನೇದು ಹೆಂಗೋ ಎರಡು ಕುಡ್ತೆ ಬೆಳ್ತಿಗೆ ಅಕ್ಕಿ ಅಶನ ಮಡಿಗಿತ್ತು. ಇನ್ನು ಬೆಂದಿ ಮಾಡುತ್ಸೆಂಗೆ. ತಟ್ಟನೇ ಎಂತ ತೋರಿತ್ತೋ ಅದಕ್ಕೆ! ಹೋದ ಒರಿಶ ಬೆಂಗಳೂರಿಂಗೆ ಹೋದ್ದು  ನೆಂಪಾತು.

ಒಲೆಲಿ ಚೀಂಚಟ್ಟಿ ಮಡುಗಿ ಒಂದು ಸಕ್ಕಣ ತೆಂಗಿನ ಎಣ್ಣೆ ಹಾಕಿ, ಎಣ್ಣೆ ಬೆಷಿ ಅಪ್ಪದ್ದೆ ಒಂದು ಇಡೀ ಹಸಿ ಮೆಣಸು ತೊಳದು ಅದರಲ್ಲಿ ಹಾಕಿ ತುಸು ಕಾಸಿತ್ತು.
ಮತ್ತೆ ಒಂದು ಕಟ್ಟ ಪುದಿನ ಆದು ಮಡಿಗಿದ್ದಿದ್ದರ ತೊಳದು ಆ ಪಾಕಕ್ಕೆ ಹಾಕಿ ರಜಾ ಫ್ರೈ ಮಾಡಿತ್ತು.
ಅದರ ಇಳುಗಿ ಕೆಳಮಡುಗಿ ತಣುದ ಮತ್ತೆ ಮಿಕ್ಷಿಲಿ ರಜಾ ಹುಳಿ ಹಾಕಿ ಎರಡು ಸುತ್ತು ಓಡ್ಸಿಕ್ಕಿ ಅದರೊಟ್ಟಿನ್ಗೆ ಆ ಹೊರುದು ಮಡುಗಿದ ಹಸಿಮೆಣಸು ಪುದಿನ ಪಾಕವ ಹಾಕಿ ರಜಾ ನೀರು ಹಾಕಿ ನೊಂಪಾಗಿ ಮಂದಕೆ ಕಡದತ್ತು.
ಒಂದು ನೀರುಳ್ಳಿ ಸಣ್ಣ ಸಣ್ಣಕೆ ಕೊಚ್ಚಿ ಮಡುಗಿತ್ತು. ಆ ಅದೇ ಬಾಣಾಲೆಲಿ ಒಂದು ಸಕ್ಕಣ ಎಣ್ಣೆ ಹೊಯ್ದು , ರಜಾ ಸಾಸಮೆ , ಉದ್ದಿನ ಬೇಳೆ , ಹಸರ ಬೇಳೆ ಹಾಕಿ  ಒಂದು ಒಣಕ್ಕು ಮೆಣಸು ತುಂಡು ಮಾಡಿ ಹಾಕಿ ಸಾಸಮೆ ಹೊಟ್ಟಿಯಪ್ಪಗ ಬೇವಿನಸೊಪ್ಪು ಹಾಕಿ ನಂತ್ರ ಆ ಕೊಚ್ಚ್ಚಿ ಮಡುಗಿದ ನೀರುಳ್ಳಿ ಅದಕ್ಕೆ ಹಾಕಿ ಚಿನ್ನದ  ಬಣ್ಣ ಬಪ್ಪಷ್ಟು ಹೊರುದು ಮತ್ತೆ ಆ ಮಿಕ್ಷಿಲಿ ಅರದು ಮಡುಗಿದ ಪುದಿನವ ಇದಕ್ಕೆ ಹಾಕಿ ಮತ್ತೆ ರುಚಿಗೆ ತಕ್ಕ ಉಪ್ಪು, ಇಂಗಿನ ಹುಡಿ ಹಾಕಿ ರಜಾ ಲಾಯಕ ಹೊರದತ್ತು.
ಪುದಿನದ ಪರಿಮ್ಮಳ ಬಪ್ಪಲೆ ಸುರುವಪ್ಪಗ ಒಳ್ಳೆ ಕಡು ಪಚ್ಚೆ ಬಣ್ಣಕ್ಕೆ  ಬಂದಪ್ಪಗ ಒಲೆಂದ ಇಳಿಸಿ ಮಡಿಗಿತ್ತು.
ಆ ಆಗ ಮಾಡಿ ಮಡುಗಿದ್ದ ಬೆಳ್ತಿಗೆ ಅಶನವ ಈ ಪಾಕಕ್ಕೆ ಹಾಕಿ ಲಾಯಕ್ಕ ತೊಳಸಿತ್ತು.

ನಾಕು ಹಪ್ಪಳ ಎರಡು ಸೆಂಡಗೆಯನ್ನೂ ಹೊರುದು ಮಡುಗಿತ್ತು. ಮಸರನ್ನೂ ಒಂದು ಸಣ್ಣ ಪಾತ್ರಲ್ಲಿ ತಂದು ಮಡುಗಿ ಅಬ್ಬೆ ಊಟಕ್ಕೆ ಕೂರಬ್ಬೆ ಹೇಳಿ ಬಳಿಸಿತ್ತು.
ಹೋಹ್ ಭಾರೀ ಪಷ್ಟು ಆಯಿದು ಮಗಳೇ ಹೇದು ಉಂಡತ್ತಡ ಸಾವಿತ್ರಿ. ಪಾರ್ವತಿಯೂ ಆನು ಮಾಡಿದ್ದು ಹೇಳಿ ನೆಗೆ ನೆಗೆ ಮಾಡಿಯೊಂಡು ಉಂಡತ್ತಡ.
ರಜಾ ಇರುಳಿಂಗೆ ಅಪ್ಪಂಗೆ ರುಚಿ ನೋಡ್ಲೇ ಹೇಳಿ ತೆಗದು ಮಡುಗಿತ್ತಡ.
ಅಶನ ಮಡುಗುವಾಗಳೇ ಒಂದು ಸಕ್ಕಣ ಎಣ್ಣೆ ಹಾಕಿ ಬೇಶಿತ್ತಿದ್ರೆ ಉದುರುದುರಾಗಿ ಸಟ್ಟುಗಲ್ಲಿ ತೊಳಸಲೆ ಸುಲಭ ಆವ್ತಿತ್ತು  ಮಗಳೇ ಹೇಳಿ ಹೇಳಿತ್ತಡಾ ಒಂದು ಕಿವಿ ಮಾತು ಸಾವಿತ್ರಿ ಮಗಳಿಂಗೆ.

ಅಪ್ಪೋ …., ಈ ಪಾರ್ವತಿ ಮಾಡಿದ ಅಡಿಗ್ಗೆ ಎಂತ ಹೆಸರು?

ಮಕ್ಕೊಗೆ ಬೇಕು ಮಾಡೆಕು ಹೇಳಿ ಕಂಡ್ರೆ ಎಂತದೂ ಮಾಡುಗು ಅಪ್ಪೋ.

ಅಪ್ಪೋ.. ಇದಕ್ಕೆಂತ ಹೆಸರು ?, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 32 ಒಪ್ಪಂಗೊ

 1. ಕೊಳಚ್ಚಿಪ್ಪು ಬಾವ
  ಕೊಳಚಿಪ್ಪು ಭಾವ

  ಪುತ್ತೂರು ಭಾವನ ಹತ್ರೆ ಕೇಳಿರೆ ಗೊಂತಕ್ಕು ಅವರ ಮಾವ ಗವರ್ನಮೆಂಟ್ ಲ್ಯಾಬಿಲಿ ಅಹಾರದ್ದು ಸಂಶೋಧನೆ ಮಾಡ್ಯೊಂಡು ಇತ್ತಿದ್ದವಡ.

  ಇದರ ಓದಿ ಅಜ್ಜಕಾನ ಭಾವ ಸುಮಾರು ನಮುನೆಯ ಸೊಪ್ಪು ಹೊರುದು “ಭಾತ್” ಮಾಡಿ ಎಲ್ಲರಿಂಗು ಬಂಙ ಅಡ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಪುತ್ತೂರು ಭಾವಂಗೆ ಇನ್ನು ಮಳೆಗಾಲ ಅಲ್ಲದ್ದೆ ಪುರುಸೋತ್ತಿಲ್ಲೆಡ!. ಮಳೆಗಾಲಕ್ಕಪ್ಪಗ ಅವರ ಮಾವಂಗೆ ಎಡೆ ಇಲ್ಲೆಡ!! ಅಜ್ಜಕಾನ ಭಾವ ಅಜನೆ ಮಾಡದ್ದೇ ಕೂಯ್ದವದಾ.

  [Reply]

  VA:F [1.9.22_1171]
  Rating: 0 (from 0 votes)
 3. ವಿಷ್ಣು ನಂದನ
  ವಿಷ್ಣು ನಂದನ

  ಪುದೀನ ಸೊಪ್ಪು ಉಪಯೋಗುಸಿದ ಕಾರಣ “ಪುದೀನ ರೈಸ್”

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ವಿಷ್ಣುನಂದನಂಗೆ ಒಂದು ಪ್ಯಾಕ್ ‘ಪುದಿನ ರೈಸ್’ ಉಚಿತ . ಕೊರಿಯರ್ಲಿ ಕಳ್ಸಿಕ್ಕೊಡ್ಲಾವ್ತು ನಿಂಗಳ ಇದೇ ವಿಳಾಸಕ್ಕೆ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಡಾಮಹೇಶಣ್ಣದೊಡ್ಡಮಾವ°ಪ್ರಕಾಶಪ್ಪಚ್ಚಿದೇವಸ್ಯ ಮಾಣಿವಾಣಿ ಚಿಕ್ಕಮ್ಮಅನು ಉಡುಪುಮೂಲೆವೇಣೂರಣ್ಣಶ್ಯಾಮಣ್ಣದೊಡ್ಮನೆ ಭಾವಬೊಳುಂಬು ಮಾವ°ಅನುಶ್ರೀ ಬಂಡಾಡಿಚೆನ್ನಬೆಟ್ಟಣ್ಣನೀರ್ಕಜೆ ಮಹೇಶಮಾಲಕ್ಕ°ಅಕ್ಷರ°ಕೊಳಚ್ಚಿಪ್ಪು ಬಾವಶುದ್ದಿಕ್ಕಾರ°ಬಟ್ಟಮಾವ°ವೆಂಕಟ್ ಕೋಟೂರುಶಾ...ರೀಗಣೇಶ ಮಾವ°ಎರುಂಬು ಅಪ್ಪಚ್ಚಿಪುತ್ತೂರುಬಾವಚೂರಿಬೈಲು ದೀಪಕ್ಕಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ