ಇದು ‘ತಂಬುಳಿ’. ಹೊಸತ್ತೇನೂ ಅಲ್ಲ!

ಶುಂಠಿ ತಂಬುಳಿ, ನೆಲ್ಲಿಂಡಿ/ನೆಲ್ಲಿಕ್ಕಾಯಿ ತಂಬುಳಿ, ಉರಗೆ ತಂಬುಳಿ, ಬಾಳೆದಂಡು ತಂಬುಳಿ ಇದೆಲ್ಲಾ ನಾವು ಧಾರಾಳ ಕಡದು ಉಂಡಿದಪ್ಪೋ. ಹಾಂಗೇ, ಅಕ್ಕಂದ್ರ ಸ್ಪೆಷಲ್ ಇನ್ನೂ ಹಲವಾರು ತಂಬುಳಿಗೊ ಕೂಡ ಇಕ್ಕು.

ನಿತ್ಯ ಸಾರು, ಕೊದಿಲು, ಮೇಲಾರ, ಅವಿಲು ಹೇಳಿ ಉಂಡು ಉಂಡು ಉದಾಸನ ಅಪ್ಪಗ ಇದೊಂದು ಬಗೆ ತಂಬುಳಿ ಕೂಡ ಇದ್ದು. ಹಾಂಗೇಳಿ ತಂಬುಳಿ ಮಾಡ್ಳೂ ನಿನಗರಡಿಗೊ ಕೇಟ್ರೆ – ‘ಎನಗರಡಿಯಾ’ ಹೇಳುವೆಷ್ಟೇ. ಇದಾ., ಇದು , ‘ಅದು ಮಾಡಿದ್ದು – ಆನು ಉಂಡದು’. ಇದಕ್ಕೆ ಹೆಸರು – ‘ಬೇವಿನಸೊಪ್ಪು (ಕರಿಬೇವು) ತಂಬುಳಿ’ ಹೇಳಿ ಮಡುಗಿದ್ದವು

ಮಾಡುತ್ತೇಂಗೆ ಕೇಳಿಯಪ್ಪಗ , ಹೀಂಗಡಾ –

ರಜಾ.., ಒಂದಿಷ್ಟು…, ಹೇಳಿರೆ.., ಹತ್ತು ಕಣೆ ಲಾಯಕದ ಬೇವಿನಸೊಪ್ಪು ಆಯ್ದು ತೊಳದು, ನೀರಪಸೆ ಆರಿದ ಮತ್ತೆ ತುಸು ಎಣ್ಣೆ ಅಥವಾ ತುಪ್ಪಲ್ಲಿ ಹೊರಿಯೆಕು. ಮತ್ತೆ ಮುಕ್ಕಾಲು ಕಡಿ ತೆಂಗಿನಕಾಯಿ ತುರುದು, ಒಂದು ಹಸಿಮೆಣಸು, ಉಪ್ಪು ಹಾಕಿ ಮತ್ತು ಹೊರುದು ಮಡುಗಿದ ಬೇವಿನಸೊಪ್ಪನ್ನೂ ಸೇರ್ಸಿ ರಜಾ ನೀರು ಕೂಡಿಗೊಂಡು ನೈಸಾಗಿ ಕಡೆಕು.   ಕಡದ್ದರ ಒಂದು ಪಾತ್ರಲ್ಲಿ ಹಾಕಿ ಬೇಕಾಷ್ಟು ಮಜ್ಜಿಗೆ ಹೊಯ್ದು ಲಾಯಕ ತೊಳಸೆಕು. ಮತ್ತೆ ಒಂದು ಒಗ್ಗರಣೆ ಹಾಕಿಕ್ಕಿ. ಇದಕ್ಕೆ ‘ಬೇವಿನಸೊಪ್ಪಿನ ತಂಬುಳಿ’ ಹೇಳಿ ಹೆಸರು.

ಕರಿಬೇವಿನ ಸ್ಥಾನಲ್ಲಿ ಬಸಳೆ ಹಾಕಿ ಮೇಗಾಣ ಪಾಕ ಮಾಡಿರೆ ‘ಬಸಳೆ ತಂಬುಳಿ’ ಹೇಳಿ ಹೆಸರು. ಲಾಯಕ ಮಜ್ಜಿಗೆ ಕೂಡೆಕ್ಕು.

ಇದರ ಒಟ್ಟಿಂಗೆ ಕೂಡ್ಳೆ ಮೆಣಸಿನ ಬಾಳ್ಕೋ , ಸೆಂಡಗೆಯೋ …, ಎಂತಕೆ!, ಕರುಕುರು ಮೆಡಿ ಉಪ್ಪಿನಕ್ಕಾಯಿಯೂ ಕೂಡ ಒಳ್ಳೇ ಚೇರ್ಚೆ.

ಹಾ.. ‘ಎಂತ ರುಚಿ – ಎಂತ ರುಚಿ’! ಹೇಳಿ ಉಂಡ ಮತ್ತೆಯೇ ಹೇಳುವದು ಕ್ರಮ.

ಬಸಳೆ ಮತ್ತು ಕರಿಬೇವು ಆರೋಗ್ಯಕ್ಕೆ ಬಹಳ ಒಳ್ಳೆದಡಾ. (ಡಾಕುಟ್ರುಬಂಧುಗೊ ಹೇಳೆಕ್ಕಷ್ಟೇ ಆ ವಿವರ).

ವಿ.ಸೂ. – ಕಾಯಿ ಕಡದು ಕೂಡ್ಳೆ ಎಡಿಯದ್ದವು, ಮಜ್ಜಿಗೆ ಮೊಸರು ಆಗದ್ದವು ಇದರ ಪ್ರಯತ್ನಿಸದ್ದೆ ಇಪ್ಪೋದು ಒಳ್ಳೆದು. ಹಾಲು ಹಾಕಿ ಮಾಡ್ವ ಕ್ರಮ ಇಲ್ಲೆಡಾ!

ಚೆನ್ನೈ ಬಾವ°

   

You may also like...

33 Responses

 1. ರಘು ಮುಳಿಯ says:

  ಹೊ,
  ಕೊಶಿಅಕ್ಕಿ ಅಶನವೂ…ಕರಿಬೇವಿನ ತ೦ಬುಳಿಯೂ…,ಬಾಯಿಲಿ ನೀರು ಬತ್ತಾ ಇದ್ದನ್ನೆ ಭಾವ !!
  ಅಲ್ಲಾ,ಮೊಸರು,ಮಜ್ಜಿಗೆ ಆಗದ್ದ ಈ ಮನುಷ್ಯರಿ೦ಗೆ ಕಹಿಬೇವಿನ ಹೊಸರುಚಿ ಯೇನಾರು ಇದ್ದೊ ನಿ೦ಗಳ ಸ೦ಚಿಲಿ?
  {ಇದರ ಒಟ್ಟಿಂಗೆ ಕೂಡ್ಳೆ ಮೆಣಸಿನ ಬಾಳ್ಕೋ , ಸೆಂಡಗೆಯೋ …, ಎಂತಕೆ!, ಕರುಕುರು ಮೆಡಿ ಉಪ್ಪಿನಕ್ಕಾಯಿಯೂ ಕೂಡ ಒಳ್ಳೇ ಚೇರ್ಚೆ.} ಇದು ಒಗ್ಗರಣೆ೦ದಲೂ ಬಲ ಆಯಿದು !

  • ಚೆನ್ನೈ ಭಾವ says:

   ಅವಕ್ಕೆ ಮನೆಂದ ಮಾಡಿ ಕೊಡುವ ಕರಿಬೇವಿನ ಚಟ್ನಿ ಪುಡಿ ‘ಸಂತೋಷ ಆಂಡ್’ ಅಕ್ಕೋ.
   ನಿಂಗೊ ಹೇಳುವ ‘ಈ ಮನುಷ್ಯ’ರಿಂಗೆ ಕಹಿಬೇವಿನೊಟ್ಟಿಂಗೆ ಹಾಲು ಸಕ್ಕರೆ ಕಾಯಿ ಹಾಕಿ ಕಡದರೆ ಹೇಂಗೆ!!

   • ರಘು ಮುಳಿಯ says:

    ಹು೦, ಆಗದ್ದೆ ಇಲ್ಲೆ! ಹೊಟ್ತೆಲಿಪ್ಪ ಹುಳುವೂ ಸಾಯುಗು..

 2. ಅನುಪಮ says:

  ಎನ್ನ ಸಣ್ಣ ಅತ್ತೆ ಅ೦ತೂ ಶಿರಸಿ ಕಡೆಯವ್ವು. ತ್೦ಬುಳಿ ಎಕ್ಸ್ ಪರ್ಟ್……..ಎ೦ಗೊಗೆ ದಿನಕ್ಕೊ೦ದು ಬಗೆ ತ್೦ಬುಳಿ ಇರ್ತು……

  • ಚೆನ್ನೈ ಭಾವ says:

   ಹೋ.., ಇದು ನೋಡಿ ಖುಶಿ ಆತಿದಾ.
   ಹೇಳಿದಾಂಗೆ, ಅವ್ವು ಅತ್ಲಾಗಿಯಣವಾದರೆ ನಾವು ಇತ್ಲಾಗಿಯಾಣವಿದಾ. ಕೊಚ್ಚಿಲಕ್ಕಿ ಅನ್ನವೇ ಆಯ್ಕು. ಇದಾ.., ಮುಳಿಯ ಭಾವ, ಮುಣ್ಚಿಕ್ಕಾನ ಅಣ್ಣ, ಅ.ಭಾವ ಇವೆಲ್ಲಾ ಸೇರಿ ಒಂದು ಪಿಕ್ನಿಕ್ ನಿಂಗಳ ಹೋಡೆಂಗೆ ಹೋಪದೋ ಹೇಳಿ ಅಂದಾಜು ಮಾಡ್ತಾ ಇದ್ದವು. ಹೇಂಗೆ ನಿಂಗೊಗೆ ಸದ್ಯ ಮೈಸೂರು – ಮುಂಬಾಯಿ ಮತ್ತೂ ಹೋಪಲಿಲ್ಲೆನ್ನೆ! ಅಲ್ಲಾ.. ಅದು ತೊಂದರೆ ಇಲ್ಲೆ, ತಂಬುಳಿಗೆ ಅವ್ವು ಇದ್ದವನ್ನೇ ಹೇಳಿದವು ದೊಡ್ಡಭಾವ! ಮತ್ತೆ ಕೊಚ್ಚಿಲಕ್ಕಿ ಆತುಕಂಡ್ರೆ ಮತ್ತೆ ಬುತ್ತಿ ಬಿಡುಸಲೆ ಇಲ್ಲೆಡಾ !!

 3. ಅನುಪಮ says:

  ಬನ್ನಿ ಬನ್ನಿ ಸದಾ ಸ್ವಾಗತ….ಎಷ್ಟು ಜನ ಬೇಕಾರು ಬನ್ನಿ. ಎ೦ಗಳ ಮನೆಲಿ ಎಲ್ಲರಿ೦ಗೂ ಖುಷಿ ಆವುತ್ತು………ಎ೦ಗ ಮನೆಲಿ ಇರ್ತೆಯ್.ಮಾವನೂ, ಮಾವನ ಮಗ(?)ನೂ ಇರ್ತವಾ ಹೇಳಿ ಹೇಳ್ಲೆ ಎಡಿಯ…….ನಿ೦ಗ್ ಅಮದಲೇ ತಿಳಿಸಿದರೆ ಅವುದೆ ಇಕ್ಕು……

 4. ತೆಕ್ಕುಂಜ ಕುಮಾರ ಮಾವ° says:

  ಅಕ್ಕು..ಅಕ್ಕು. ನಾವುದೆ ಒಟ್ಟಿಂಗೆ ಸೇರ್ತೆಯೋ°.
  ಒಂದು ವಿಷಯ ಇದ್ದು, ಕೊಚ್ಚಿಮೂಲೆಂದ ಕೋಂಡುಹೋದವು, ಇನ್ನು ಕೆಲವರಿಂಗೆ ಕೊಚ್ಚುಲಕ್ಕಿ ಮಾಡಿ, ಎಂಗೋ ಬೆಳಿಗುಡ್ಡೆಲಿ ಇಪ್ಪವು, ಬೆಳ್ತಿಗೆ ಆಯೆಕ್ಕು.

 5. ಚೆ೦ಡೆ ಮುೞಿ(ಬೇಲಿಲಿ ಇರ್ತು)ನ ಕೊಡಿ ತ೦ಬುಳಿ ಭಾರೀ ಲಾಯ್ಕ ಆವ್ತು ಮಾವ! ಎನಗದೇ ಮಾಡಿ ಹಾಕೊದು ಅಜ್ಜಿ [:(]

  • ಚೆನ್ನೈ ಭಾವ says:

   ಅದೇ… ಅದೇ …, ಈ ಅರ್ಗೆಂಟು ಬೇಲಿಕರೇಂಗೆ ಹೋಗಿ ಚೆಂಡೆಮುಳ್ಳು ತಾಗಿಸ್ಯೊಂಡು ಇದ್ದ ಕಾರಣವೋ ಬೈಲಿಲಿ ಹಲವು ಸಮಯಂದ ಕಂಡತ್ತಿಲ್ಲೆ!! ಅಜ್ಜಿ ಮಾಡಿದ ತಂಬ್ಳಿ ಉಂಡಪ್ಪಗ ಬೈಲಿಂಗೆ ಇಳಿವೋ° ಹೇಳಿ ಹುರುಪು ಬಂತದಾ..!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *