ಕಲ್ ಕಲ್

May 4, 2011 ರ 9:56 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನೆಗೆ ಆರಾದರು ಬ೦ದವು, ಮನೆಲಿ ತಿ೦ಡಿ ಯೆ೦ತ ಇಲ್ಲೆ.

ಪಕ್ಕನೆ ಬೆಶಿ ಬೆಶಿ ತಿ೦ಡಿ ಮಾಡೆಕ್ಕು. ಹೀ೦ಗಿದ…..

ಬೇಕಪ್ಪ ಸಾಮಗ್ರಿಗೊ:

 • ಮೈದ ಹೊಡಿ – ಕಾಲು ಕೆಜಿ ( ೧/೪ ಕೆಜಿ)
 • ಸಕ್ಕರೆ  – ೭೫ (75) ಗ್ರಾ೦
 • ಮೆಣಸಿನ ಹೊಡಿ  – ಅರ್ಧ (೧/೨)  ಚಮಚ
 • ಉಪ್ಪು  – ರುಚಿಗೆ
 • ಬೆಣ್ಣೆ ಅಥವ ತುಪ್ಪ – ಬೆಣ್ಣೆ ಅದರೆ ಸದಾರಣವಾದ ಒ೦ದು ಅಡಿಕೆ ಗಾತ್ರ, ತುಪ್ಪ ಅದರೆ  ಅದೇ ಅ೦ದಾಜು.
 • ಒ೦ದು ಹೊಸ ಬಾಚಣಿಗೆ.

ಮಾಡುವ ವಿಧಾನ:

ಬೆಣ್ಣೆ ಅಥವ ತುಪ್ಪ ರಜ ಬೆಶಿ ಮಡೆಕ್ಕು.
ಅದಕ್ಕೆ ಮೆಣಸಿನ ಹೊಡಿ, ಉಪ್ಪು, ಸಕ್ಕರೆ  ಹಾಕಿ ಕರಗುಸೆಕ್ಕು.
ಈ ಮೆಲಿನ ಪಾಕಕ್ಕೆ ಮೈದ ಹೊಡಿ ಮತ್ತೆ ಚೂರು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸೆಕ್ಕು.

ಹಿಟ್ಟಿನ ಸಣ್ಣ ಸಣ್ಣ ಉ೦ಡೆ (ಊರ ನೆಲ್ಲಿಕಾಯಿ ಗಾತ್ರ) ಮಾಡೆಕ್ಕು.

ಅದರ ಬಾಚಣಿಗೆಲ್ಲಿ ಒತ್ತಿ (ಪಟಲ್ಲಿ ತೋರುಸಿದ ಹಾ೦ಗೆ) ಕೊದಿವ ಎಣ್ಣೆಲ್ಲಿ ಹಾಕೆಕ್ಕು.

ಅದು ಬೆ೦ದು ಹೊ೦ಬಣ್ಣಕ್ಕೆ ತಿರುಗುವಗ ತೆಗೆಕು.

ಹೀ೦ಗಾದರೆ ಕಲ್ ಕಲ್ ತಿ೦ಬಲೆ ಸಿದ್ದ.

ಇದು ಎಲ್ಲ ಎಣ್ಣೆ ತಿ೦ದಡಿಗಳ ಹಾ೦ಗೆ ದಾಸ್ತಾನು ಮಾಡಲೆ ಅಕ್ಕು.

ಕಲ್ ಕಲ್, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಪಕ್ಕನೆ ಬೆಶಿ ಬೆಶಿ ತಿ೦ಡಿ ಮಾಡ್ಳೆ ಎಳ್ಪದ ಕೆಣಿ ಇದಪ್ಪು. ಬಾಯಿಗೆ ಹಾಕಿ ಕರು ಕುರು ಪಚ ಪಚ ಮಾಡ್ಳೆ ಹದಾ ರುಚಿ ಕೂಡ . ಒಪ್ಪ.

  ತಮಾಷೆ ಎಂತರ ಕೇಳಿರೆ, ದೀಪಕ್ಕಾ, – ಕಲ್ ಕಲ್ ಹೇಳಿ ಇದಕ್ಕೆ ನಿಂಗಳೇ ನಾಮಕರಣ ಮಾಡಿದ್ದೋ! ಹೊರುದಪ್ಪಗ ಕಲ್ಲಿನಾಂಗೂ ಅವ್ತಿಲ್ಲೇ ಕಲ್ಲಿಲ್ಲಿ ಹಾಕಲೂ ಇಲ್ಲೆ!. ಆ ಬಾಚಣಿಗೆ ಎಂತ ಅಲಂಕಾರ ಮಾಡ್ಳೋ?!. ಸಕ್ಕರೆ ಹಾಕುತ್ತ ಕಾರಣ ಬೊಚ ಭಾವಂಗೆ ಇದೂ ಇಲ್ಲೆ ಪಾಪ. ಅವಂಗೆ ಪ್ರತ್ಯೇಕ ಕೊತ್ತಂಬರಿ ಗೆಣಮೆಣಸು ಹಾಕಿ ಮಾಡಿ ಮಡುಗೆಕು.

  [Reply]

  VA:F [1.9.22_1171]
  Rating: 0 (from 0 votes)
 2. ಮುಣ್ಚಿಕಾನ ಭಾವ

  ಪಟಲ್ಲಿ ಕಾಂಬಗ ಬಾಯಿಲಿ ನೀರು ಬತ್ತು. ಅಮ್ಮನತ್ತರೆ ಮಾಡುಲೆ ಹೇಳುತ್ತೆ. ಮತ್ತೆ ಅದರ ಒತ್ತುಲೆ ಬಾಚಣಿಗೆಯೇ ಆಯೆಕ್ಕು ಹೇಳಿ ಇದ್ದ…? 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಲ್ಲಿ ತೋರ್ಸಿದ ಹಾಂಗೇ ಇಪ್ಪ ಹೊಸ ಬಾಚಣಿಗೆ ಆಯೆಕ್ಕು ನೋಡಿ. ಅಂದರಷ್ಟೇ ಆ ಫಟಲ್ಲಿಪ್ಪಾಂಗೆ ಬಕ್ಕಷ್ಟೇ.

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಹಣಿಗೆ ಉಂಡೆಯ ಹೆರಮೈಯ surface area ಹೆಚ್ಚು ಮಾಡ್ಲೆ ಆಗಿಕ್ಕು..ಹಾಂಗೆ ಹೊರುದಪ್ಪಗ kuru ಕುರು ಅಕ್ಕದಾ..

  [Reply]

  VA:F [1.9.22_1171]
  Rating: 0 (from 0 votes)
  ಚೂರಿಬೈಲು ದೀಪಕ್ಕ

  ಚೂರಿಬೈಲು ದೀಪಕ್ಕ Reply:

  ಆ ಆಕೃತಿ ಬರೆಕಾದರೆ ಬಾಚಣಿಕೆಲ್ಲಿ ಒತ್ತೆಕ್ಕಾವುತ್ತು

  [Reply]

  VN:F [1.9.22_1171]
  Rating: 0 (from 0 votes)
 3. ಎರುಂಬು ಅಪ್ಪಚ್ಚಿ
  ಎರುಂಬು ಅಪ್ಪಚ್ಚಿ

  ನೋದುವಗಲೇ ಬಾಯಿಲಿ ನೇರು ಬತ್ತು .. … ಪ್ರಯತ್ನ ಮಾಡಿ ನೊಡ್ತೆ ….

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ

  ದೀಪಕ್ಕಾ.. ಸುಲಭವಾಗಿ ಮಾಡ್ಲೆ ಆವ್ತ ಹಾ೦ಗಿಪ್ಪ ಹೊಸರುಚಿಗಳ ತಿಳಿಸಿದ್ದಕ್ಕೆ ಧನ್ಯವಾದ೦ಗೊ..

  @ ಪಕ್ಕನೆ ಬೆಶಿ ಬೆಶಿ ತಿ೦ಡಿ ಮಾಡೆಕ್ಕು… – ಬಾಕಿ ಎಲ್ಲಾ ಸಾಮಾನುಗೊ ಮನೆಲಿ ರೆಡಿ ಇಕ್ಕು ಹೇಳಿ ತಿಳ್ಕೊ೦ಬೊ°. ಆದರೆ ಹೊಸ ಬಾಚಣಿಗೆ ಎಲ್ಲಿ೦ದ ತಪ್ಪದು? ನೆ೦ಟ್ರ ಕೂರಿಸಿಕ್ಕಿ ಪೇಟೆಗೆ ಹೋಗೆಡದೋ? 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿಂಗೊ ನೆಂಟ್ರ ಹತ್ರೆ ಕೂದು ಮಾತಾಡಿಗೊಂಡು ಇದ್ದ ಹಾಂಗೆ ನಿಂಗಳ ಶ್ರೀಮತಿ ಪಕ್ಕ ಒಂದರಿ ಅಂಗಡಿಗೆ ಹೋಗಿ ತೆಕ್ಕೊಂಡು ಬಾರವೋ ಗಣೇಶಣ್ಣ!. ಅಷ್ಟನ್ನಾರ ನಿಂಗೊ ಮಾತಾಡಿಗೊಂಡೇ ಕಲಸಿ ರೆಡಿ ಮಾಡಿ ಮಡುಗಲಕ್ಕದಾ..!!

  [Reply]

  ಗಣೇಶ ಪೆರ್ವ

  ಗಣೇಶ Reply:

  ಛೆ ಛೆ ಚೆನ್ನೈ ಭಾವಾ.. ಶ್ರೀಮತಿ ಇಲ್ಲದ್ದ ಎನ್ನ ಹತ್ರೆಯೇ ನಿ೦ಗೊ ಹೀ೦ಗೆ ಹೇಳ್ಳಕ್ಕೊ!!?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿಂಗಳ ಮೂಲಕವೇ ಇದು ಇಲ್ಲಿ ಬರ್ಲಿ ಹೇಳಿ ಅದಾ. ಬೈಲಿಂಗೆ ಈಗ ಗೊಂತಾತಿದ – ‘ನಮ್ಮ ಮಾಣಿ ಒಬ್ಬ ಇದ್ದ , ಹುಡುಕ್ಕುತ್ತಾ ಇದ್ದಾ , ಇದ್ದರೊಂದು ಕಟ್ಟಿ ಬಿಡುವೊ ಹೇಳಿ’ ಆರಾರು ಮುಂದೆ ಬಂದರೆ ಆತನ್ನೇ ಹೇದು. ಹಾಮ್., ಹೇಳ್ಳೆ ಎಡಿಯಾ, ರಘು ಭಾವನ ಭಾಮಿನಿಗೆ ಮನಸ್ಸಾದರೆ ಬಕ್ಕಿದಾ ಇಲ್ಲಿ .. ‘ಬೇಕಾತೆನಗೊಬ್ಬ ಮಾಣಿ..’ ಅಥವಾ ‘ಬೇಕಾತೆನಗೊಂದು ಕೂಸು..’ ಹೇಳಿ !!

  ಗಣೇಶ ಪೆರ್ವ

  ಗಣೇಶ Reply:

  ಯಬ್ಬಾ…. ನಿ೦ಗಳ ತಲೆಗೆ ಕೊಡೆಕ್ಕೇ!!!!!

  VA:F [1.9.22_1171]
  Rating: +1 (from 1 vote)
  ಮುಳಿಯ ಭಾವ

  ರಘುಮುಳಿಯ Reply:

  ಮತಿ ಇದ್ದರೆ “ಶ್ರೀಮತಿ” ಸಿಕ್ಕುಗು ಅಲ್ಲದೋ ಗಣೇಶ ಭಾವಾ..

  VA:F [1.9.22_1171]
  Rating: 0 (from 0 votes)
 5. ಬೋಸ ಬಾವ
  ಬೋಸ ಬಾವ

  [ಒ೦ದು ಹೊಸ ಬಾಚಣಿಗೆ]
  ಅಭಾ..!! ಹೊಚತ್ತು ಆದರೆ ಅಕ್ಕು.. ತಲೆ ಬೆಶಿ ಇಲ್ಲೆ.. 😉

  [Reply]

  ಚೂರಿಬೈಲು ದೀಪಕ್ಕ

  ಚೂರಿಬೈಲು ದೀಪಕ್ಕ Reply:

  ತಲೆ ಬೆಶಿ ಎ೦ತಕೆ ಬಾವ

  [Reply]

  VN:F [1.9.22_1171]
  Rating: 0 (from 0 votes)
 6. ಗ೦ಗಣ್ಬಾವ

  ಚೊಲೊ ಇದ್ದು

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ದೀಪಕ್ಕ,ಹೊಸರುಚಿಯ ಪರಿಚಯಕ್ಕೆ ಧನ್ಯವಾದ.
  ಇ೦ದೇ ಹೊಸ ಬಾಚಣಿಗೆ ತೆಕ್ಕೊಳ್ತೆ.ಒಳುದ ಸಾಹಿತ್ಯ ಎಲ್ಲ ಮನೆಲಿ ಇದ್ದಡ.

  [Reply]

  ಚೂರಿಬೈಲು ದೀಪಕ್ಕ

  ಚೂರಿಬೈಲು ದೀಪಕ್ಕ Reply:

  ಮಾಡಿ ನೋಡಿ ರುಚಿ ತಿಳುಸಿ, ಆತಾ…….

  [Reply]

  VN:F [1.9.22_1171]
  Rating: 0 (from 0 votes)
 8. ಬೊಳುಂಬು ಮಾವ°
  ಬೊಳುಂಬು ಮಾವ

  ದೊಡ್ಡ ರಜೆಲಿ ಉಂಡ್ಳ ಕಾಳು ಮಾಡ್ಳೆ ಎಡಿಗಾಗದ್ದ ಪೇಟೆಯವಕ್ಕೆ ಸುಲಭದ ಕರುಕುರು ತಿಂಡಿ.
  ಪ್ಯಾಕೆಟ್ಟಿಲ್ಲಿ ಸಿಕ್ಕುತ್ತ ಕುರೆ “ಕುರೆ ಕುರೆ”ಯ ಬದಲಿಂಗೆ ಫಸ್ಟ್ ಕ್ಲಾಸು. ಕಲ್ ಕಲ್ ಮಾಡು ಹೇಳಿ ಮನೆ ಎಜಮಾಂತಿಗೆ ಹೇಳಿರೆ, ಅದು ಕಲ್ ಕಲ್ ಹೇಳಿ , ನಾಳಂಗೆ, ನಾಳಂಗೆ ಹೇಳ್ತಾ ಇದ್ದು. ಮಾಡೆಕೊಂದರಿ.

  [Reply]

  ಬೆಟ್ಟುಕಜೆ ಮಾಣಿ

  ಬೆಟ್ಟುಕಜೆ ಅನಂತ Reply:

  ಅದಪ್ಪದ ಲೇಯ್ಸ್ ಕುರ್ಕುರೆ ಹೇಳಿ ಇಪ್ಪಾಂಗೆ ನಬವಗೆ ಕಲ್ ಕಲ್ ಹೇಳಿ ಹೊಸತ್ತು ಮಾಡುವ ಅಲ್ಲದಾ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಚುಬ್ಬಣ್ಣಡಾಗುಟ್ರಕ್ಕ°ಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಪುತ್ತೂರಿನ ಪುಟ್ಟಕ್ಕಕಜೆವಸಂತ°ಬೊಳುಂಬು ಮಾವ°ಸುವರ್ಣಿನೀ ಕೊಣಲೆಸಂಪಾದಕ°ಜಯಗೌರಿ ಅಕ್ಕ°ಎರುಂಬು ಅಪ್ಪಚ್ಚಿಶ್ರೀಅಕ್ಕ°ಪ್ರಕಾಶಪ್ಪಚ್ಚಿಅಕ್ಷರ°ನೆಗೆಗಾರ°ಪುಣಚ ಡಾಕ್ಟ್ರುವೇಣೂರಣ್ಣವಿನಯ ಶಂಕರ, ಚೆಕ್ಕೆಮನೆದೇವಸ್ಯ ಮಾಣಿದೊಡ್ಡಭಾವಸುಭಗದೀಪಿಕಾಶ್ಯಾಮಣ್ಣಗಣೇಶ ಮಾವ°ಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ