ಸಣ್ಣಸಂಕೊಲೆ(shortlink):
ಕಣಿಲೆ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:
ಮಾಡುವ ಕ್ರಮ:
ಕಣಿಲೆಯ ಹೆರಾಣ ಚೋಲಿಯ ತೆಗದು, ಬೆಳಿ ಎಳತ್ತು ಇಪ್ಪ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.
ಒಂದು ಪಾತ್ರಲ್ಲಿ ಸಾಧಾರಣ 6 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ. ಅದು ಕೊದುದಪ್ಪಗ, ಕೊಚ್ಚಿದ ಕಣಿಲೆಯ ಹಾಕಿ ಕೊದುಶಿ, ಸಣ್ಣ ಕಿಚ್ಚಿಲ್ಲಿ ಒಂದು 5 ನಿಮಿಷ ಮಡುಗಿ.
ಇದರ ಒಂದು ವಸ್ತ್ರ/ ಅರಿಪ್ಪೆಲಿ ಹಾಕಿ ಅರುಶಿ ಅಥವಾ ಪಾತ್ರಕ್ಕೆ ಮುಚ್ಚಲು ಮಡುಗಿ ಬಗ್ಗುಸಿ. ಪುನಃ ಹೀಂಗೆ ಇನ್ನು 1-2 ಸರ್ತಿ ಕೊದುಶಿ ಅರುಶಿ, ಹಿಂಡಿ ಮಡುಗಿ.
ಬಾಣಲೆಲಿ ಎಣ್ಣೆ, ಸಾಸಮೆ, ಉದ್ದಿನ ಬೇಳೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಅದಕ್ಕೆ ಬೇನ್ಸೊಪ್ಪು ಹಾಕಿ, ಕೊದುಶಿ ಅರುಶಿದ ಕಣಿಲೆಯ ಹಾಕಿ ತೊಳಸಿ.
ಅದಕ್ಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಬೆಲ್ಲ, ಉಪ್ಪು, ಸಾಧಾರಣ 1.5 ಕುಡ್ತೆ ನೀರು ಹಾಕಿ ತೊಳಸಿ ಮುಚ್ಚಿ ಬೇಶಿ. 2-3 ನಿಮಿಷಕ್ಕೊಂದರಿ ತೊಳಸಿ.
ನೀರು ಆರಿಗೊಂಡು ಬಪ್ಪಗ ಕಾಯಿ ಸುಳಿ ಹಾಕಿ ತೊಳಸಿ. ಒಂದು 2 ನಿಮಿಷ ತಾಳಿನ ಸಣ್ಣ ಕಿಚ್ಚಿಲ್ಲಿ ಮಡುಗಿ. ಇದು ಅಶನ, ಚಪಾತಿ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ವೇಣಿಯಕ್ಕ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಎನಗೆ ತುಂಬಾ ಪ್ರೀತಿ ಇದು…
ಈಗ ತಿನ್ನದ್ದೆ ಎಷ್ಟೋ ವರ್ಷ ಆತು ಮಾಂತ್ರ…
[ಉತ್ತರುಸಿ]
ಹೊತ್ತುವೇಳೆ: 31 July,2012ರ 2:23 PM ಗೆ. (ಒಪ್ಪಸಂಕೊಲೆ)
ಯೆಡ್ರಾಸು ಕೊಡಿ… ಕಳುಗುವಾ….
[ಉತ್ತರುಸಿ]
ಹೊತ್ತುವೇಳೆ: 31 July,2012ರ 6:35 PM ಗೆ. (ಒಪ್ಪಸಂಕೊಲೆ)
ತುಂಬಾ ಧನ್ಯವಾದಂಗೊ ಅಣ್ಣ… ಖುಶಿ ಆತು ನಿಂಗಳ ಒಪ್ಪ ಓದಿ… ಯಾವಗ ಕೊಡೆಕು ಎಡ್ರಸ್ಸು?
[ಉತ್ತರುಸಿ]
ಅಪರೂಪದ ತಾಳು ನೋಡಿ ಖುಷಿ ಆತು… ಹರೇ ರಾಮ…
[ಉತ್ತರುಸಿ]
ಇದು ಐಟಂ ಲಾಯಕ ಆವ್ತು. ಒಪ್ಪ.
ಇದು ಇನ್ನು ಉಷ್ಣ ಮತ್ತೂ ಅಲ್ಲನ್ನೇ! ಅಪರೂಪಕ್ಕೆ ಆದ ಕಾರಣ ಆಗಾಯ್ಕು !!
[ಉತ್ತರುಸಿ]
ಹೊತ್ತುವೇಳೆ: 31 July,2012ರ 6:38 PM ಗೆ. (ಒಪ್ಪಸಂಕೊಲೆ)
ಆಪರೂಪಕ್ಕೆ ಸಿಕ್ಕುವಗ ಲಾಯಿಕಲ್ಲಿ ತಿಂಬ ಚೆನ್ನೈ ಭಾವ …. ಉಷ್ಣ ಎಲ್ಲ ಎಂತ ಆಗ …. ಅಲ್ಲದೋ?
[ಉತ್ತರುಸಿ]
ಹೊತ್ತುವೇಳೆ: 1 August,2012ರ 8:04 AM ಗೆ. (ಒಪ್ಪಸಂಕೊಲೆ)
ಚೆನ್ನೈ ಭಾವ ಕಣಿಲೆಯ ಉಷ್ಣ ಪ್ರಕೃತಿಯ ಬಗ್ಗೆ ತಿಳಿಸಿದ್ದದು ಒಳ್ಳೆದಾತು. ಅವರವರ ದೇಹ ಪ್ರಕೃತಿಗೆ ಸರಿಯಾಗಿ ಆಹಾರ ಸೇವಿಸುಲೆ ಸಹಾಯ ಅಕ್ಕು. ಹರೇ ರಾಮ…
[ಉತ್ತರುಸಿ]
ಕೊಂಕಣಿಗೊ ಮಾಡುವ ಕಣಿಲೆ ಪೋಡಿಯೂ ಲಾಯಕಾವುತ್ತು.
[ಉತ್ತರುಸಿ]
ಹೊತ್ತುವೇಳೆ: 6 August,2012ರ 11:03 AM ಗೆ. (ಒಪ್ಪಸಂಕೊಲೆ)
ವೈ ರೇ.
[ಉತ್ತರುಸಿ]
ಅಕ್ಕ, ಇದು ಭಾರಿ ರುಚಿಯ ಬಗೆ… ಮತ್ತೆ ಕಣಿಲೆಯ ಉಪ್ಪಿನ ಕಾಯೂ ಮಾಡ್ಲಾವುತ್ತು..
ಎನ್ನ ಅಮ್ಮ ಕೊಟ್ಟಿಗೆ ಮತ್ತೆ ಪತ್ರೊಡೆ ಮಾಡ್ತು…
[ಉತ್ತರುಸಿ]