ಕೆಂಡದಡ್ಯೆ (ಗೆಂಡತಡ್ಯೆ)

January 27, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಾಲೆಂದ ಹೊತ್ತಪ್ಪಗ ಮನೆಗೆ ಬಂದ ಮಕ್ಕೊ ‘ಕೆಂಡದಡ್ಯೆ ಮಾಡಿಕೊಡೆಕು’ ಹೇಳಿದವು.

ಕೆಂಡದಡ್ಯೆ ಹೇಳಿರೆ, ಕೆಂಡಲ್ಲಿ ಮಾಡುವ ಅಡ್ಯೆ.  ತುಳುವಿಲಿ ಈ ಅಡಿಗೆಯ ಗೆಂಡತಡ್ಯೆ (ಗೆಂಡತ + ಅಡ್ಯೆ) ಹೇಳುದು.
ಅಡ್ಯೆ ಹೇಳಿರೆ- ಕೊಟ್ಟಿಗೆ ಹೇಳಿ ಅರ್ಥ ಬತ್ತು. ಇದರ ಮಾಡೆಕ್ಕಾರೆ ಕಿಚ್ಚು ಬೇಡ, ಕೆಂಡಲ್ಲೇ ಕಾಸೆಕ್ಕು, ಹಾಂಗಾಗಿ ಈ ಹೆಸರು.
ಇದ, ಅದರ ವಿವರ ಕೊಡ್ತೆ,  ಮಾಡಿ ನೋಡಿ:

ಬೇಕಪ್ಪ ಸಾಮಾನುಗೊ:

 • ಅಕ್ಕಿ – ೧ ಕುಡ್ತೆ (೧ ಗ್ಲಾಸು)
 • ಬೆಲ್ಲ – ೧ ಹಿಡಿ (೧೦೦ ಗ್ರಾಮು)
 • ಕಾಯಿ ಸುಳಿ – ೧/೨ ಗ್ಲಾಸು
 • ಚೆಕ್ಕರ್ಪೆ – ಸಣ್ಣದು ಒಂದು (ಕೊಚ್ಚಲು)
 • ಉಪ್ಪು – ರುಚಿಗೆ ಬೇಕಷ್ಟು
 • ತುಪ್ಪ – ೨ ಚಮ್ಚ

ಮಾಡುವ ಕ್ರಮ:

ಅಕ್ಕಿ, ಕಾಯಿ ಸುಳಿ, ಬೆಲ್ಲ, ಸೌತ್ತೆ – ಎಲ್ಲ ಒಟ್ಟಿಂಗೆ ಹಾಕಿ ಕಡೇಕು, ತರಿತರಿ ಆದರೆ ಸಾಕು, ಸಣ್ಣ ಅಪ್ಪದು ಬೇಡ.
ರುಚಿಗೆ ಬೇಕಷ್ಟು ಉಪ್ಪು ಹಾಯ್ಕೊಂಬದು! ಸೀವು ಇದ್ದ ಕಾರಣ ರಜಾ ಉಪ್ಪುದೇ ಹಾಕಿ ಅಪ್ಪಗ ಒಳ್ಳೆ ರುಚಿ ಆವುತ್ತು.
ಈಗ ಹಿಟ್ಟು ತಯಾರಾತು. ಇನ್ನು ಬೇಶುವ ಕೆಲಸ.

Kendadye ಕೆಂಡದಡ್ಯೆ
ಕೆಂಡದಡ್ಯೆ, ಹಾಳೆ ತಟ್ಟೆಲಿ

ಒಲೆಲಿ ಕೆಂಡ ಮಾಂತ್ರ ಮಿಗಿಮಿಗಿ ಅಪ್ಪ ಹಾಂಗೆ ಮಡುಗಿಯೊಳಿ.
ಒಲೆಯ ಮೇಲೆ ಬಾಣಲೆ ಮಡುಗಿ ಅದಕ್ಕೆ ರಜಾ ತುಪ್ಪ ಹಾಕಿ, ಕಡದ ಹಿಟ್ಟಿನ ಎರವದು.
ಹಿಟ್ಟು ದಪ್ಪ ಆದ ಕಾರಣ, ಕೆಳಾಣ ಬೆಶಿ ಮೇಲಂಗೆ ಎತ್ತುತ್ತಿಲ್ಲೆ ಅಲ್ಲದಾ?
ಕೆಳ ಕರಂಚುಲೆ ಸುರು ಆದರೂ ಮೇಲೆ ಬೆಶಿ ಆಗಿರ್ತಿಲ್ಲೆ, ಅದಕ್ಕೆ ಬೇಕಾಗಿ – ಹಿಟ್ಟಿನ ಎರದ ಕೂಡ್ಳೇ, ಒಂದು ಕೀಜಿ(ಎಲುಮಿನಿಯಂ) ಪ್ಲೇಟಿನ ಮುಚ್ಚಿ, ಒಲೆಂದ ನಾಕು ಗೆನಾ ಕೆಂಡ ತೆಗದು ಪ್ಲೇಟಿನ ಮೇಲೆ ಹಾಕಿ.  ಸಣ್ಣ ಸಣ್ಣ ಸೌದಿಗಳ ಹಾಕಿ ಕೆಂಡದ ಕಿಚ್ಚು ತಾಗುತ್ತ ಹಾಂಗೆ ಮಡುಗಿ!
ಈಗ ಎರಡೂ ಹೊಡೆಂದ ಕೆಂಡಲ್ಲಿ ಬೆಶಿ ಆವುತ್ತಾ ಇರ್ತು. ಹೀಂಗೆ ಅರ್ದ ಗಂಟೆ ಕೆಂಡಲ್ಲಿ ಬೆಂದರೆ ಇಳುಗುಲೆ ಅಕ್ಕು.

ತಿಂಬ ಕ್ರಮ:

ಅರ್ಧಗಂಟೆ ಕಳುದಮತ್ತೆ ಇಳುಗಿ, ಈ ಉರೂಟು ಕೆಂಡದಡ್ಯೆಯ ತುಂಡುಮಾಡಿ ತುಪ್ಪದೊಟ್ಟಿಂಗೆ ಕೂಡಿ ತಿಂಬಲೆ ಸುರುಮಾಡಿ!
ಎಂಗಳಲ್ಲಿ ಮಕ್ಕೊಗೆ, ಇವಕ್ಕೆ ಎಲ್ಲ ಇದು ಬಾರೀ ಇಷ್ಟ!

ನಿಂಗಳುದೇ ಮಾಡಿ ನೋಡಿಕ್ಕಿ, ಹೇಂಗಾಯಿದು ಹೇಳ್ತಿರಲ್ಲದಾ?

ಕೆಂಡದಡ್ಯೆ (ಗೆಂಡತಡ್ಯೆ), 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. kenda illadare oven use maadi madule adithu. hittu mathra neeruaagirakku.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಬೊಳುಂಬು ಮಾವ°ಯೇನಂಕೂಡ್ಳು ಅಣ್ಣಶೇಡಿಗುಮ್ಮೆ ಪುಳ್ಳಿರಾಜಣ್ಣಅನಿತಾ ನರೇಶ್, ಮಂಚಿಎರುಂಬು ಅಪ್ಪಚ್ಚಿಕೇಜಿಮಾವ°ಚೆನ್ನಬೆಟ್ಟಣ್ಣಡಾಗುಟ್ರಕ್ಕ°ಪವನಜಮಾವಶರ್ಮಪ್ಪಚ್ಚಿಸರ್ಪಮಲೆ ಮಾವ°ವಿನಯ ಶಂಕರ, ಚೆಕ್ಕೆಮನೆಸುವರ್ಣಿನೀ ಕೊಣಲೆಚೆನ್ನೈ ಬಾವ°ಅನು ಉಡುಪುಮೂಲೆಅಜ್ಜಕಾನ ಭಾವದೊಡ್ಡಮಾವ°ನೀರ್ಕಜೆ ಮಹೇಶಡಾಮಹೇಶಣ್ಣಶ್ರೀಅಕ್ಕ°ಪೆಂಗಣ್ಣ°ಪಟಿಕಲ್ಲಪ್ಪಚ್ಚಿಗಣೇಶ ಮಾವ°ಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ