ಕೆಸವು ಹಲಸಿನಕಾಯಿ ಬೇಳೆ ಮೆಣಸು ಮೇಲಾರ(ಜೀರಿಗೆ ಬೆಂದಿ)

July 2, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೆಸವು ಹಲಸಿನಕಾಯಿ ಬೇಳೆ ಮೆಣಸು ಮೇಲಾರ(ಜೀರಿಗೆ ಬೆಂದಿ)

ಬೇಕಪ್ಪ ಸಾಮಾನುಗೊ:

  • 3 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ
  • 8 ಕಪ್(ಕುಡ್ತೆ) ಕೊಚ್ಚಿದ ಕೆಸವಿನ ಕಾಲು
  • 2.5 ಕಪ್(ಕುಡ್ತೆ) ಕಾಯಿ ತುರಿ
  • 1/2 ಚಮ್ಚೆ ಜೀರಿಗೆ
  • ಚಿಟಿಕೆ ಅರುಶಿನ ಹೊಡಿ
  • 1 ಚಮ್ಚೆ ಮೆಣಸಿನ ಹೊಡಿ
  • ಸಾಧಾರಣ ನಿಂಬೆ ಗಾತ್ರದ ಬೆಲ್ಲ
  • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
  • ರುಚಿಗೆ ತಕ್ಕಸ್ಟು ಉಪ್ಪು
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ, ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೆಳಿ ಮಾಡಿ.

ಕೆಸವಿನ ಕಾಲಿನ ನಾರು ತೆಗದು, ಸಣ್ಣ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರೆರಿ. ಬೆಳಿ ಮಾಡಿದ ಬೇಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತುಂಡು ಮಾಡಿ.

ಹುಳಿಯ ಒಂದು ಗಿಣ್ಣಾಲಿಂಗೆ ಹಾಕಿ, ರೆಜ್ಜ ನೀರು ಹಾಕಿ ಪುರುಂಚಿ ಮಡುಗಿ.
ಕೊರದ ಬೇಳೆಯ ಪ್ರೆಶರ್ ಕುಕ್ಕರಿಂಗೆ ಹಾಕಿ, ಬೇಕಸ್ಟು ನೀರುದೆ, ಉಪ್ಪುದೆ ಹಾಕಿ ಬೇಶಿ(3 ಸೀಟಿ). ಕುಕ್ಕರಿನ ಪ್ರೆಶರ್ ಹೋದ ಮೇಲೆ, ಅದಕ್ಕೆ ಕೊರದ ಕೆಸವಿನ ಕಾಲು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ಹುಳಿ ಪುರುಂಚಿದ ನೀರು ಹಾಕಿ ಪುನಃ ಬೇಶಿ(1 ಸೀಟಿ).

ಕಾಯಿಯ ಬೇಕಾದಸ್ಟು ನೀರು ಹಾಕಿ ಕಡೆರಿ. ನೊಂಪಪ್ಪಲಪ್ಪಗ ಜೀರಿಗೆಯ ಹಾಕಿ ರೆಜ್ಜ ಹೊತ್ತು ಕಡೆರಿ.
ಇದರ ಬೇಶಿ ಮಡುಗಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ.(ನೀರು, ಉಪ್ಪು ಬೇಕಾದರೆ ಹಾಕುಲಕ್ಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ,  ಎಣ್ಣೆ ಹಾಕಿ ಬೆಶಿ ಮಾಡಿ.ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಬೆಂದಿಗೆ ಹಾಕಿ ತೊಳಸಿ.
ಇದು ಉಬ್ಬು ರೊಟ್ಟಿ, ಚಪಾತಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. Harish kevala

    Thanks for nice traditional preparation…

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಬಂಡಾಡಿ ಅಜ್ಜಿಕೊಳಚ್ಚಿಪ್ಪು ಬಾವಯೇನಂಕೂಡ್ಳು ಅಣ್ಣಪವನಜಮಾವಬೋಸ ಬಾವಶಾಂತತ್ತೆಗೋಪಾಲಣ್ಣಒಪ್ಪಕ್ಕವಿನಯ ಶಂಕರ, ಚೆಕ್ಕೆಮನೆಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕದೀಪಿಕಾಶರ್ಮಪ್ಪಚ್ಚಿರಾಜಣ್ಣಹಳೆಮನೆ ಅಣ್ಣಜಯಗೌರಿ ಅಕ್ಕ°ಮುಳಿಯ ಭಾವಶೇಡಿಗುಮ್ಮೆ ಪುಳ್ಳಿವೇಣಿಯಕ್ಕ°ಚೂರಿಬೈಲು ದೀಪಕ್ಕಪುಣಚ ಡಾಕ್ಟ್ರುಪುತ್ತೂರುಬಾವದೇವಸ್ಯ ಮಾಣಿನೆಗೆಗಾರ°ಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ