ಖಾರ ಕೆಂಡತ್ತಡ್ಯ

ಖಾರ ಕೆಂಡತ್ತಡ್ಯ

ವಿಧಾನ ೧: (ಬಾಣಲೆ ಉಪಯೋಗ್ಸಿ)

ಬೇಕಪ್ಪ ಸಾಮಾನುಗೊ:

 • 2 ಸಾಧಾರಣ ಗಾತ್ರದ  ಮುಳ್ಳು ಸೌತೆ (ಅಥವಾ ಸೊರೆಕ್ಕಾಯಿ) / 4-5 ಕಪ್(ಕುಡ್ತೆ) ತುರುದ ಮುಳ್ಳು ಸೌತೆ(ಅಥವಾ ಸೊರೆಕ್ಕಾಯಿ) ಭಾಗ
 • 1.5 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಆದರೆ ಒಳ್ಳೆದು)
 • 2 ಚಮ್ಚೆ ಕಾಯಿ ತುರಿ (ಬೇಕಾದರೆ ಮಾತ್ರ)
 • ರುಚಿಗೆ ತಕ್ಕಸ್ಟು ಉಪ್ಪು
 • 2-3 ಹಸಿಮೆಣಸು
 • 8-10 ಬೇನ್ಸೊಪ್ಪು
 • 1.5 ಚಮ್ಚೆ ಸಾಸಮೆ
 • 2.5 ಚಮ್ಚೆ ಉದ್ದಿನ ಬೇಳೆ
 • 2-3 ಸಾಧಾರಣ ಗಾತ್ರದ ನೀರುಳ್ಳಿ
 • 6-8 ಎಳೆ ಕೊತ್ತಂಬರಿ ಸೊಪ್ಪು
 • ಎಣ್ಣೆ / ತುಪ್ಪ

ಮಾಡುವ ಕ್ರಮ:
ಮುಳ್ಳು ಸೌತೆಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು(ಎಳತ್ತಾದರೆ ಚೋಲಿ, ತಿರುಳು ತೆಗೆಯೆಕ್ಕು ಹೇಳಿ ಇಲ್ಲೆ), ದೊಡ್ಡಕೆ ತುರುದು ಮಡಿಕ್ಕೊಳ್ಳಿ.

ಅಕ್ಕಿಯ ನೀರಿಲ್ಲಿ 4-5 ಘಂಟೆ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿ, ಉಪ್ಪು, ಕಾಯಿ ತುರಿ, ಬೇನ್ಸೊಪ್ಪು, ಹಸಿಮೆಣಸು, ಮುಳ್ಳು ಸೌತೆಯ ಎಸರಿನ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ ಹದ ನೊಂಪಿಂಗೆ ಗಟ್ಟಿಗೆ ಕಡೆರಿ.
ಇದಕ್ಕೆ ತುರುದು ಮಡುಗಿದ ಮುಳ್ಳು ಸೌತೆಯ ಹಾಕಿ ಲಾಯಿಕಲಿ ತೊಳಸಿ. (ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಹದ ಇರಲಿ.

ನೀರುಳ್ಳಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರದು ಮಡಿಕ್ಕೊಳ್ಳಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡಿಕ್ಕೊಳ್ಳಿ.

ಬಾಣಲೆಗೆ 1/2 ಚಮ್ಚೆ ಉದ್ದಿನ ಬೇಳೆ, 1/4 ಚಮ್ಚೆ ಸಾಸಮೆ, 2 ಚಮ್ಚೆ ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, 1/5 ಭಾಗ ಕೊರದು ಮಡುಗಿದ ನೀರುಳ್ಳಿಯ ಹಾಕಿ ರೆಜ್ಜ ಹೊತ್ತು ಬಾಡ್ಸಿ. (ಪ್ರತಿ ಕೆಂಡತ್ತಡ್ಯಕ್ಕೂ ಬೇರೆ ಬೇರೆ ಒಗ್ಗರಣೆ ಮಾಡುವ ಬದಲು, ಒಗ್ಗರಣೆಯ ಒಂದರಿಯೆ ಮಾಡಿ ಉಪಯೋಗ್ಸುಲೆ ಅಕ್ಕು.)

ನೀರುಳ್ಳಿ ಒಗ್ಗರಣೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಣಲೆಲಿ ಹರಡ್ಸಿ. (ರೆಜ್ಜ ಒಗ್ಗರಣೆಯ ಮೇಲಂದ ಹಾಕುಲೆ ತೆಗದು ಮಡುಗಿ.)

ಇದಕ್ಕೆ 1/5 ಭಾಗ ಹಿಟ್ಟಿನ ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹರಡ್ಸಿ.

ಇದರ ಮೇಗಂಗೆ ತೆಗದು ಮಡುಗಿದ ನೀರುಳ್ಳಿ ಒಗ್ಗರಣೆಯ ಹಾಕಿ, ರೆಜ್ಜ ಕೊಚ್ಚಿ ಮಡಿಗಿದ ಕೊತ್ತಂಬರಿ ಸೊಪ್ಪನ್ನೂ ಹಾಕಿ, ಮೇಗಂದ 1-2 ಚಮ್ಚೆ ಎಣ್ಣೆ/ತುಪ್ಪ ಹಾಕಿ ಮುಚ್ಚಲು ಮುಚ್ಚಿ 10-12 ನಿಮಿಷ ಸಣ್ಣ ಕಿಚ್ಚಿಲ್ಲಿ ಬೇಶಿ.

ಇದರ ಕವುಂಚಿ ಹಾಕಿ, ಮುಚ್ಚಲು ಮುಚ್ಚಿ 10-12 ನಿಮಿಷ ಸಣ್ಣ ಕಿಚ್ಚಿಲ್ಲಿ ಬೇಶಿ.

ಬೆಶಿ ಬೆಶಿ ಕೆಂಡತ್ತಡ್ಯವ, ತುಪ್ಪ, ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 4-5 ಕೆಂಡತ್ತಡ್ಯ ಆವುತ್ತು.

 

ವಿಧಾನ ೨: (ಮೈಕ್ರೋವೇವ್ / ಓವನ್ / ಕೆಂಡಲ್ಲಿ ಉರುಳಿ ಅಥವಾ ದಪ್ಪ ಚೆಟ್ಟೆ ಪಾತ್ರ ಉಪಯೋಗ್ಸಿ)

ಬೇಕಪ್ಪ ಸಾಮಾನುಗೊ:

 • 2 ಸಾಧಾರಣ ಗಾತ್ರದ  ಮುಳ್ಳು ಸೌತೆ (ಅಥವಾ ಸೊರೆಕ್ಕಾಯಿ) / 4-5 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ ಮುಳ್ಳು ಸೌತೆ(ಅಥವಾ ಸೊರೆಕ್ಕಾಯಿ) ಭಾಗ
 • 1.5 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಆದರೆ ಒಳ್ಳೆದು)
 • 2 ಚಮ್ಚೆ ಕಾಯಿ ತುರಿ (ಬೇಕಾದರೆ ಮಾತ್ರ)
 • ರುಚಿಗೆ ತಕ್ಕಸ್ಟು ಉಪ್ಪು
 • 3-4 ಹಸಿಮೆಣಸು
 • 8-10 ಬೇನ್ಸೊಪ್ಪು
 • 1 ಚಮ್ಚೆ ಸಾಸಮೆ
 • 1.5 ಚಮ್ಚೆ ಉದ್ದಿನ ಬೇಳೆ
 • 1/2 ಒಣಕ್ಕು ಮೆಣಸು
 • 1 ದೊಡ್ಡ ನೀರುಳ್ಳಿ
 • ಎಣ್ಣೆ / ತುಪ್ಪ

ಮಾಡುವ ಕ್ರಮ:
ಮುಳ್ಳು ಸೌತೆಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು(ಎಳತ್ತಾದರೆ ತಿರುಳು ತೆಗೆಯೆಕ್ಕು ಹೇಳಿ ಇಲ್ಲೆ), ಸಣ್ಣಕೆ ಕೊಚ್ಚಿ ಮಡಿಕ್ಕೊಳ್ಳಿ.

ಅಕ್ಕಿಯ ನೀರಿಲ್ಲಿ 4-5 ಘಂಟೆ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿ, ಉಪ್ಪು, ಕಾಯಿ ತುರಿ, ಬೇನ್ಸೊಪ್ಪು, ಹಸಿಮೆಣಸು, ಮುಳ್ಳು ಸೌತೆಯ ಎಸರಿನ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ ತರಿ ತರಿಯಾಗಿ ಗಟ್ಟಿಗೆ ಕಡೆರಿ.

ಇದಕ್ಕೆ ಕೊಚ್ಚಿ ಮಡುಗಿದ ಮುಳ್ಳು ಸೌತೆಯ ಹಾಕಿ ಲಾಯಿಕಲಿ ತೊಳಸಿ. (ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಹದ ಇರಲಿ.

ನೀರುಳ್ಳಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರದು ಮಡಿಕ್ಕೊಳ್ಳಿ.

ಓವನ್ ನ 350-400 ಡಿಗ್ರಿ F(ಪ್ಯಾರನ್ ಹೀಟ್) ಲ್ಲಿ, ಬೇಕ್ ಮೋಡ್ ಲ್ಲಿ ಪ್ರಿಹೀಟ್ (ಮೊದಲೇ ಬೆಶಿ) ಮಾಡಿ ಮಡಿಕ್ಕೊಳ್ಳಿ. (ಮೈಕ್ರೋವೇವ್ ಆದರೆ 200 ಡಿಗ್ರಿ C(ಸೆಲ್ಸಿಯಸ್)ಲ್ಲಿ, ಕನ್ವೆಕ್ಶನ್ ಮೋಡ್ ಲ್ಲಿ ಪ್ರಿಹೀಟ್ (ಮೊದಲೇ ಬೆಶಿ) ಮಾಡಿ ಮಡಿಕ್ಕೊಳ್ಳಿ.)
ಒಂದು ಬಾಣಲೆಗೆ ಉದ್ದಿನ ಬೇಳೆ, ಸಾಸಮೆ, 2-3 ಚಮ್ಚೆ ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಕೊರದು ಮಡುಗಿದ ನೀರುಳ್ಳಿಯ ಹಾಕಿ ರೆಜ್ಜ ಹೊತ್ತು ಬಾಡ್ಸಿ.

ನೀರುಳ್ಳಿ ಒಗ್ಗರಣೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮೈಕ್ರೋವೇವ್/ಓವನ್ಲ್ಲಿ ಮಡುಗುವಂತಹ ಚೆಟ್ಟೆ ಪಾತ್ರಲ್ಲಿ ಹರಡ್ಸಿ.(ರೆಜ್ಜ ಒಗ್ಗರಣೆಯ ಮೇಲಂದ ಹಾಕುಲೆ ತೆಗದು ಮಡುಗಿ.)

ಇದಕ್ಕೆ 1/3 ಭಾಗ ಹಿಟ್ಟಿನ ಹಾಕಿ,ಲಾಯಿಕಲಿ ತೊಳಸಿ. ಒಳುದ ಹಿಟ್ಟಿನ ಅದರ ಮೇಗಂದ ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ 1/2 ಇಂಚು ದಪ್ಪಕೆ ಒಂದೇ ರೀತಿ ಹರಡ್ಸಿ.

ಇದರ ಮೇಗಂಗೆ ತೆಗದು ಮಡುಗಿದ ನೀರುಳ್ಳಿ ಒಗ್ಗರಣೆಯ ಹಾಕಿ. ಮೇಗಂದ 1-2 ಚಮ್ಚೆ ಎಣ್ಣೆ/ತುಪ್ಪ ಹಾಕಿ, ಓವನ್ ಲ್ಲಿ ಮಡುಗಿ 350-400 ಡಿಗ್ರಿ F(ಪ್ಯಾರನ್ ಹೀಟ್) ಲ್ಲಿ, ಬೇಕ್ ಮೋಡ್ ಲ್ಲಿ 45-50 ನಿಮಿಷ, ಕೆಳಾಣ ಹೊಡೆ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ.  ಮತ್ತೆ 300-350 ಡಿಗ್ರಿ F(ಪ್ಯಾರನ್ ಹೀಟ್) ಲ್ಲಿ, ಬ್ರಾಯಿಲ್ ಮೋಡ್ ಲ್ಲಿ 30-35 ನಿಮಿಷ, ಮೇಗಾಣ ಹೊಡೆ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ. (ಮೈಕ್ರೋವೇವ್ ಆದರೆ ಕನ್ವೆಕ್ಶನ್ ಮೋಡ್ಲ್ಲಿ ಸಾಧಾರಣ 1 ಘಂಟೆ ಬೇಶಿ.)

ಇದರ ಮೈಕ್ರೋವೇವ್/ಓವನ್ಂದ / ಉರುಳಿ(ಚೆಟ್ಟೆ ಪಾತ್ರಂದ) ಎಳಕ್ಕುಸಿ ತೆಗದು ತುಂಡು-ತುಂಡು ಮಾಡಿ, ತುಪ್ಪ, ಚಟ್ನಿ, ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ.

ಸೂಚನೆ: ಮಕ್ರೋವೇವ್ / ಓವನ್ ಕಂಪೆನಿಂದ-ಕಂಪೆನಿಗೆ ವ್ಯತ್ಯಾಸ ಇರ್ತು. ( ಅದಕ್ಕೆ ಸರಿಯಾಗಿ ಉಷ್ಣಾಂಶವ ಸರಿ ಮಾಡಿಗೊಳ್ಳಿ.)

ಕೆಂಡತ್ತಡ್ಯವ ಕೆಂಡಲ್ಲಿ ಮಾಡ್ಲೆ, ಒಗ್ಗರಣೆಯ ಉರುಳಿ ಅಥವಾ ಚೆಟ್ಟೆ ಪಾತ್ರಲ್ಲಿ ಮಾಡಿ, ಅದಕ್ಕೆ ಹಿಟ್ಟು ಹಾಕಿ ತೊಳಸಿ, ಅದರ ಮೇಗಂದ ಕಬ್ಬಿಣದ ಮುಚ್ಚಲು/ಮಣ್ಣಿನ ಓಡಿನ ಹಾಂಗಿಪ್ಪದರ ಮುಚ್ಚಿ. ಆ ಮುಚ್ಚಲಿನ ಮೇಗಂಗೆ ರೆಜ್ಜ ಕೆಂಡ ಹಾಕಿ, ಸಣ್ಣ-ಸಣ್ಣ ಮರದ ಚೆಕ್ಕೆ ಮಡುಗಿ ಕಿಚ್ಚು ಹಾಕಿ ಸಾಧಾರಣ 30-45 ನಿಮಿಷ ಮೇಗಾಣ ಹೊಡಂದ ಬೇಶೆಕ್ಕು. ಕೆಳಾಣ ಹೊಡೆಂಗೆ ರೆಜ್ಜ/ಸಣ್ಣ ಕಿಚ್ಚು ಹಾಕಿ 20-30 ನಿಮಿಷ ಬೇಯೆಕ್ಕು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *