ಕಠಿಣ ಪಾಯಸ

ಕಠಿಣ ಪಾಯಸ

ಬೇಕಪ್ಪ ಸಾಮಾನುಗೊ:

 • 2 ಕಪ್(ಕುಡ್ತೆ) ಬೆಣ್ತಕ್ಕಿ(ಸೋನಾ ಮಸೂರಿ ಒಳ್ಳೆದು)
 • 1.5 – 2 ಕಪ್(ಕುಡ್ತೆ) ಬೆಲ್ಲ
 • 1 ಕಪ್(ಕುಡ್ತೆ) ಕಾಯಿ ತುರಿ(ಸಣ್ಣಕೆ ತುರುದ್ದು)
 • 1/2 – 3/4 ಕಪ್(ಕುಡ್ತೆ) ಬೀಜದಬೊಂಡು
 • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
 • 3-4 ಏಲಕ್ಕಿ
 • 5-6 ಚಮ್ಚೆ ತುಪ್ಪ

ಮಾಡುವ ಕ್ರಮ:

ಅಕ್ಕಿಯ ಲಾಯಿಕ ನೀರಿಲ್ಲಿ 2-3 ಸರ್ತಿ ತೊಳದು ಒಂದು ಕರೆಲಿ ಮಡುಗಿ.  ಒಂದು ಪಾತ್ರಲ್ಲಿ 4.5 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ.
ನೀರು ಕೊದುದಪ್ಪಗ ಅದಕ್ಕೆ ತೊಳದ ಅಕ್ಕಿಯ ಹಾಕಿ, ಒಂದು 5-6 ನಿಮಿಷ ಆದ ಮೇಲೆ ಬೆಲ್ಲ, ಚಿಟಿಕೆ ಉಪ್ಪು ಹಾಕಿ ಪುನಃ ಕೊದುಶಿ.
ಮತ್ತೆ ಅದರ ಸಣ್ಣ ಕಿಚ್ಚಿಲ್ಲಿ ಮಡುಗಿ ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ನೀರಿನ ಬತ್ತುಸಿ.

ತುಪ್ಪವನ್ನೂ, ಬೀಜದಬೊಂಡನ್ನೂ ಒಂದು ಬಾಣಲೆ/ಉರುಳಿಲಿ ಹಾಕಿ ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.

ಅದಕ್ಕೆ ತುರುದ ತೆಂಗಿನಕಾಯಿಯನ್ನೂ ಹಾಕಿ ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.

ಅದಕ್ಕೆ ಬೇಶಿ ಮಡುಗಿದ ಬೆಲ್ಲ-ಅಶನ, ಹೊಡಿ ಮಾಡಿದ ಏಲಕ್ಕಿಯ ಹಾಕಿ ಲಾಯಿಕಲಿ ತೊಳಸಿ. ಸಣ್ಣ ಕಿಚ್ಚಿಲ್ಲಿ ಒಂದು 2-3 ನಿಮಿಷ ಮಡುಗಿ.
ಬೆಶಿ-ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು

ವೇಣಿಯಕ್ಕ°

   

You may also like...

17 Responses

 1. ರಘು ಮುಳಿಯ says:

  ಈ ಸೀವು ಹೊಸ ನಮೂನೆಯೇ ಹೇಳಿ ಕ೦ಡತ್ತು.
  ಅಕ್ಕ೦ಗೆ ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *