Oppanna.com

ಕಠಿಣ ಪಾಯಸ

ಬರದೋರು :   ವೇಣಿಯಕ್ಕ°    on   10/01/2012    17 ಒಪ್ಪಂಗೊ

ವೇಣಿಯಕ್ಕ°

ಕಠಿಣ ಪಾಯಸ

ಬೇಕಪ್ಪ ಸಾಮಾನುಗೊ:

  • 2 ಕಪ್(ಕುಡ್ತೆ) ಬೆಣ್ತಕ್ಕಿ(ಸೋನಾ ಮಸೂರಿ ಒಳ್ಳೆದು)
  • 1.5 – 2 ಕಪ್(ಕುಡ್ತೆ) ಬೆಲ್ಲ
  • 1 ಕಪ್(ಕುಡ್ತೆ) ಕಾಯಿ ತುರಿ(ಸಣ್ಣಕೆ ತುರುದ್ದು)
  • 1/2 – 3/4 ಕಪ್(ಕುಡ್ತೆ) ಬೀಜದಬೊಂಡು
  • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
  • 3-4 ಏಲಕ್ಕಿ
  • 5-6 ಚಮ್ಚೆ ತುಪ್ಪ

ಮಾಡುವ ಕ್ರಮ:

ಅಕ್ಕಿಯ ಲಾಯಿಕ ನೀರಿಲ್ಲಿ 2-3 ಸರ್ತಿ ತೊಳದು ಒಂದು ಕರೆಲಿ ಮಡುಗಿ.  ಒಂದು ಪಾತ್ರಲ್ಲಿ 4.5 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ.
ನೀರು ಕೊದುದಪ್ಪಗ ಅದಕ್ಕೆ ತೊಳದ ಅಕ್ಕಿಯ ಹಾಕಿ, ಒಂದು 5-6 ನಿಮಿಷ ಆದ ಮೇಲೆ ಬೆಲ್ಲ, ಚಿಟಿಕೆ ಉಪ್ಪು ಹಾಕಿ ಪುನಃ ಕೊದುಶಿ.
ಮತ್ತೆ ಅದರ ಸಣ್ಣ ಕಿಚ್ಚಿಲ್ಲಿ ಮಡುಗಿ ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ನೀರಿನ ಬತ್ತುಸಿ.

ತುಪ್ಪವನ್ನೂ, ಬೀಜದಬೊಂಡನ್ನೂ ಒಂದು ಬಾಣಲೆ/ಉರುಳಿಲಿ ಹಾಕಿ ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.

ಅದಕ್ಕೆ ತುರುದ ತೆಂಗಿನಕಾಯಿಯನ್ನೂ ಹಾಕಿ ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.

ಅದಕ್ಕೆ ಬೇಶಿ ಮಡುಗಿದ ಬೆಲ್ಲ-ಅಶನ, ಹೊಡಿ ಮಾಡಿದ ಏಲಕ್ಕಿಯ ಹಾಕಿ ಲಾಯಿಕಲಿ ತೊಳಸಿ. ಸಣ್ಣ ಕಿಚ್ಚಿಲ್ಲಿ ಒಂದು 2-3 ನಿಮಿಷ ಮಡುಗಿ.
ಬೆಶಿ-ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು

17 thoughts on “ಕಠಿಣ ಪಾಯಸ

  1. ಈ ಸೀವು ಹೊಸ ನಮೂನೆಯೇ ಹೇಳಿ ಕ೦ಡತ್ತು.
    ಅಕ್ಕ೦ಗೆ ಧನ್ಯವಾದ.

  2. ಬೈಲಿನ ಹುಟ್ಟುಹಬ್ಬದ ಲೆಕ್ಕಲ್ಲಿ ಸೀವು ಒದಗಿಸಿದ ವೇಣಿಯಕ್ಕಂಗೆ ಧನ್ಯವಾದ…

  3. ಅಕ್ಕಾ
    ನವಗೆ ಮಾಡಿ ತಿಂಬಲರಡಿಯಾ! ಶ್ರೀ ಅಕ್ಕಂಗೆ ಕೇಳಿದ್ದಕ್ಕೆ ಪುಳ್ಳಿಯತ್ರೆ ಕೇಳು ಹೇಳಿದವು..
    ಬೋಚನೂ ಕಾಯ್ತಾ ಇದ್ದಾ!

      1. ವೇಣಿ..,

        [ಮನೆಗೆ ಬನ್ನಿ ಮಾಡಿ ಕೊಡುವ]

        ಹೇಳಿಕ್ಕಿದೆಯಾ? ಇನ್ನು ಎರಡು ಪಾಲು ಹೆಚ್ಚು ಮಾಡಿ ಮಡುಗು ಆತಾ… ಕಡಮ್ಮೆ ಎಲ್ಲ ಸಾಕಾವುತ್ತಿಲ್ಲೆ 😉
        ಪೆಂಗಣ್ಣ, ಬೋಚ ಮಾಂತ್ರ ಆಗಿ ಬಾರವು!! ಇನ್ನೊಬ್ಬ° ನೆಗೆ ಮಾಣಿ ಮೂರೂ ಸೇರಿ ತ್ರಿಮೂರ್ತಿಗ ಆಗಿಯೇ ಬಪ್ಪದು ಯಾವಾಗಲೂ ಆತಾ!! ಅಜ್ಜಿ ಹೇಳಿದ್ದಿಲ್ಲೆ ಹೇಳಿ ಬೇಡ ಮತ್ತೆ!! 😉

        ಲಾಯ್ಕಾಯಿದಬ್ಬೋ ಪಾಯಸ ಪಟ ಸಮೇತ ವಿವರ್ಸಿ ಹಾಕಿದ್ದದು. ಸುಮ್ಮನೆ ಅಲ್ಲ ಪೆಂಗಣ್ಣ ಮೊದಲೇ ಅರ್ಜಿ ಹಾಕಿದ್ದದು!!! 🙂

  4. ಹೊಸ ಪಾಕ. ಧನ್ಯವಾದಂಗೊ
    ಅಕ್ಕಿ ಅಂಬಗ ಸರೀ ಬೇಯೆಕ್ಕು ಹೇಳಿ ಇಲ್ಲೆಯೋ?

  5. ಪಾಯಸಕ್ಕೆ ಈ ಹೆಸರು ಎಂತಕೆ, ಒಂದು ಕುತೂಹಲ.
    ಹೇಳುವಿರೋ ಅಕ್ಕ.

    1. ಮೊದಲಿಂಗೆಲ್ಲ, ಈ ಪಾಯಸವ ಒಳ್ಳೆ ಖಡ್ಪ(ಬೆಲ್ಲ ಹೆಚ್ಚು ಹಾಕಿ) ಮಾಡಿಗೊಂಡು ಇತ್ತವು. ಮತ್ತೆ ಈ ಪಾಯಸಕ್ಕೆ ಒಳುದ ಪಾಯಸಕ್ಕೆ ಹಾಕುದಕ್ಕಿಂತ ಸಾಮಾನುಗೊ ಜಾಸ್ತಿ ಬೇಕು(ಕಾಯಿ, ಬೀಜದಬೊಂಡು, ತುಪ್ಪ, ಬೆಲ್ಲ), ಒಳುದ ಪಾಯಸದಸ್ಟು ತಿಂಬಲೂ ಎಡಿತ್ತಿಲ್ಲೆ.(ಒಳುದ ಪಾಯಸದಸ್ಟು ತಿಂದರೆ ಜೀರ್ಣುಸುಲೂ ಕಠಿಣ.)
      ಈ ಪಾಯಸವ ನಿತ್ಯಕ್ಕೆ ಮಾಡುದು ಕಮ್ಮಿ. ದೇವಿ ಪೂಜೆಯ ನೈವೇದ್ಯಕ್ಕೆ ಹೆಚ್ಚು ವಿಶೇಷ.

  6. ದುರ್ಗಾ ಪೂಜಗೆ ಮಾಡುವ ಕೂಟು ಪಾಯಸದ ಹಾ೦ಗೆ ಇದ್ದು..

    1. ಆದಿಕ್ಕು. ಕೂಟು ಪಾಯಸ ಆನು ಕೇಳಿದ್ದಿಲ್ಲೆ. ಈ ಪಾಯಸವನ್ನೂ ಹೆಚ್ಚಾಗೆ ದೇವಿಯ ಪೂಜೆಯ ನೈವೇದ್ಯಕ್ಕೆ ಮಾಡುದು.

  7. ಅಕ್ಕೋ ಇದೆಂತ ಕಠಿಣ , ಚುಲಾಭ ಇದ್ದು ಮಾಡುಲೆ ನವಗೆ ಚೀಪೆ ಇಷ್ಟ ಇದಾ ನಾವೂ ಮಾಡುಗು ಆತೋ , ಹೇಳಿಕೊಟ್ಟದ್ದಕ್ಕೆ ಧನ್ಯವಾದ.

  8. ಕಠಿಣ ಪಾಯಸ ಹೇಳಿ ಶೀರ್ಷಿಕೆ ಕಂಡಪ್ಪಗ ಇದಕ್ಕೆ ಕೆಲಸ ಅಲ್ಪ ಇಕ್ಕೋದು ಗ್ರೇಶಿದೆ. ಇಲ್ಲೆ, ಇಲ್ಲೆ., ಎಳ್ಪಲ್ಲಿ ಮಾಡಿ ಅಲ್ಪ ತಿಂಬ ಸೌಕರ್ಯಲ್ಲಿಯೇ ಇದ್ದು. ಸಕ್ಕರೆ ಆಗದ್ದವು ಬೆಲ್ಲ ಅಕ್ಕೋ ಕೇಳ್ತ ಪಂಚಾತಿಗೇ ಬೇಡ ಅಲ್ಲದೋ.
    ಪಾಚ ಶುದ್ದಿ ಚೀಪೆ ಆತು ಹೇಳಿ ಹೇಳುವದು – ‘ಚೆನ್ನೈವಾಣಿ’.

  9. ಮಹಾಪ್ರಾಣ ಉಪಯೋಗಂದ ಇದು ಎಷ್ಟು ಕಠಿಣ ಹೇಳಿ ಗೊಂತುಪಡಿಸಿದ್ದು ಕುಷಿ ಆತು.ಮಾಡುಲೆ ಸುಲಭ ಆದಿಕ್ಕು ಅಲ್ಲದೊ?ತಿಂಬದು ಅಂತೂ ಬಲು ಸುಲಭ!

    1. ಅದು ಕಠಿಣ ಪಾಯಸ ಆಯೆಕ್ಕು ಖಠಿಣ ಅಲ್ಲ. (ಈಗ ಸರಿ ಮಾಡಿದ್ದೆ)
      ಮಾಡುಲೂ ಸುಲಭ, ತಿಂಬಲೂ ಸುಲಭ ಆದರೆ ಜೀರ್ಣಕ್ಕೆ ಕಷ್ಟ. ಃ)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×