ಕುಂಬಳಕಾಯಿ ದೋಸೆ

February 11, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕುಂಬಳಕಾಯಿ ದೋಸೆ

ಬೇಕಪ್ಪ ಸಾಮಾನುಗೊ:

  • 1/8 ಭಾಗ ಸಾಧಾರಣ ಗಾತ್ರದ ಕುಂಬಳಕಾಯಿ ಅಥವಾ 2 ಕಪ್(ಕುಡ್ತೆ) ಕುಂಬಳಕಾಯಿ ತುಂಡುಗೊ)
  • 1 ಕಪ್(ಕುಡ್ತೆ) ಬೆಣ್ತಕ್ಕಿ
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ / ತುಪ್ಪ

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.

ಕುಂಬಳಕಾಯಿಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ ಅಥವಾ ತುರುದು ಮಡಿಕ್ಕೊಳ್ಳಿ.

ಅಕ್ಕಿ, ಉಪ್ಪು, ಕುಂಬಳಕಾಯಿ ತುಂಡಿನ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ ನೊಂಪಿಂಗೆ ಕಡೆರಿ(ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಎರದು ಮುಚ್ಚಲು ಮುಚ್ಚಿ 1-2 ನಿಮಿಷ ಬೇಶಿ.
ಇದಕ್ಕೆ ಎಣ್ಣೆ/ತುಪ್ಪ ಹಾಕಿ, ಕವುಂಚಿ ಹಾಕಿ 1-2 ನಿಮಿಷ ಬೇಶಿ.

ಬೆಶಿ ಬೆಶಿ ದೋಸೆಯ ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 6-8 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

  1. ವಿಜಯತ್ತೆ
    ವಿಜಯತ್ತೆ

    ಹರೇರಾಮ, ಕುಂಬಳಕಾಯಿದೋಸೆ ಒೞೆದಿದ್ದು. ಕುಂಬಳಕಾಯಿ, ಚೆಕ್ಕರ್ಪೆ, ಹೀಂಗಿದ್ದೆಲ್ಲ ನೀರು ಬಿಡುವ ಸಾಧನ. ಹಾಂಗಾಗಿ ಅದಕ್ಕೆ ಕಡವಗ ಆ ಹೋಳು ಹಾಕಿ ಕಡದಿಕ್ಕಿ ಮತ್ತೆ ದೋಸೆ ಎರವಗ ದೋಸೆ ‘ಬೆಳ್ಪಿಟ್ಟು’ ಆವುತ್ತರೆ ನೀರು ಎರವಲಕ್ಕು. ಕಡವಗಳೇ ನೀರು ಹಾಕಿಯೊಂಡರೆ ನೀರು ಹೆಚ್ಹಕ್ಕು. ಅಲ್ಲದ್ದೆ, ಓಜೀಪು ಬಾರದೋ ಕಾಣ್ತು.

    [Reply]

    VA:F [1.9.22_1171]
    Rating: 0 (from 0 votes)
  2. ವೇಣಿಯಕ್ಕ°

    @ ವಿಜಯತ್ತೆ, ನಿಂಗೊ ಹೇಳಿದ್ದು ಸರಿ, ಅದು ನೀರು ಬೇಕಾದರೆ ಮಾತ್ರ ಸೇರ್ಸಿ ಹೇಳಿ ಆಯೆಕ್ಕಾತು. ಈಗ ಸರಿ ಮಾಡಿದೆ. ಹೇಳಿದ್ದಕ್ಕೆ ಧನ್ಯವಾದಂಗೊ..ಃ)
    ಕುಂಬಳಕಾಯಿ, ಸೌತೆಕಾಯಿ, ಮುಳ್ಳು ಸೌತೆ, ಬಚ್ಚಂಕಾಯಿ ಓಡು, ಇತ್ಯಾದಿ ನೀರಿನ ಅಂಶ ಹೆಚ್ಚಿಪ್ಪ ತರಕಾರಿಗಳ ದೋಸೆ ಮಾಡುವಗ, ಕಡವಗ ಸಾಧಾರಣವಾಗಿ ನೀರು ಸೇರ್ಸೆಕ್ಕಾವುತ್ತಿಲ್ಲೆ. ತರಕಾರಿಗ ಒಣಗಿದ ಹಾಂಗೆ ಅಥವಾ ಹಂಜೆ ಆಗಿದ್ದರೆ ಮಾತ್ರ ನೀರು ಸೇರ್ಸೆಕ್ಕಾಗಿ ಬತ್ತು.

    ಓಜೀಪು ಹೇಳಿದರೆ ಎಂತ ಹೇಳಿ ಗೊಂತಾಯಿದಿಲ್ಲೆ.

    [Reply]

    VN:F [1.9.22_1171]
    Rating: 0 (from 0 votes)
  3. ವಿಜಯತ್ತೆ
    ವಿಜಯತ್ತೆ

    ಹರೇರಾಮ, ನಿನ್ನ ಬೆನ್ನು ತಟ್ಟೆಕ್ಕಾದ್ದು ಖಂಡಿತ. ಆನು ತಿದ್ದಿ ಹೇಳಿಯಪ್ಪಗ ನಿನ ಬೇಜಾರಾಗಿಹೋಕೊ ಜಾನ್ಸಿತ್ತಿದ್ದೆ.ಆದರೆ ಹಾಂಗಾಯಿದಿಲ್ಲೆ. ನೀನು ತುಂಬ ಬರೆತ್ತಕಾರಣ ಹೇಳಿದೆ. ಒಪ್ಪಮಾತಿನ ತೆಕ್ಕೊಳ್ತವು ಇನ್ನು,ಇನ್ನು ಪ್ರತಿಭಾನ್ವಿತರಾವುತ್ತವು.ನೀನೂ ಆ ಸಾಲಿಂಗೆ ಸೇರಿದ್ದೆ. ಸಂತೋಷಾತೆನಗೆ ನಿನ್ನ ಬಗ್ಗೆ.

    [Reply]

    VA:F [1.9.22_1171]
    Rating: 0 (from 0 votes)
  4. ಬೊಳುಂಬು ಮಾವ°
    ಬೊಳುಂಬು ಗೋಪಾಲ

    ವಾಹ್! ಕುಂಬಳಕಾಯಿಯ ಕರು ಕುರುದೋಸೆಯ ಕಾಂಬಗಳೇ ಕೊಶಿ ಆವ್ತು. ನೆಂಪು ಮಾಡಿದ ವೇಣಿಯಕ್ಕಂಗೆ ಧನ್ಯವಾದ. ನಾಳಂಗೇ ಎಂಗಳ ಮನೆಲಿ ಕುಂಬಳ ಕಾಯಿ ದೋಸೆ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣvreddhiದೊಡ್ಡಮಾವ°ವಸಂತರಾಜ್ ಹಳೆಮನೆಒಪ್ಪಕ್ಕಗೋಪಾಲಣ್ಣಮಾಲಕ್ಕ°ವಿದ್ವಾನಣ್ಣಚೂರಿಬೈಲು ದೀಪಕ್ಕವೆಂಕಟ್ ಕೋಟೂರುನೆಗೆಗಾರ°ಸರ್ಪಮಲೆ ಮಾವ°ಶುದ್ದಿಕ್ಕಾರ°ಪುತ್ತೂರುಬಾವಪವನಜಮಾವಸುವರ್ಣಿನೀ ಕೊಣಲೆಕಳಾಯಿ ಗೀತತ್ತೆಚುಬ್ಬಣ್ಣಶಾಂತತ್ತೆಅಡ್ಕತ್ತಿಮಾರುಮಾವ°ಅನು ಉಡುಪುಮೂಲೆದೊಡ್ಡಭಾವಕೇಜಿಮಾವ°ಅಕ್ಷರದಣ್ಣಕಜೆವಸಂತ°ಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ