Oppanna.com

ಕುಂಬಳಕಾಯಿ ದೋಸೆ

ಬರದೋರು :   ವೇಣಿಯಕ್ಕ°    on   11/02/2014    4 ಒಪ್ಪಂಗೊ

ವೇಣಿಯಕ್ಕ°

ಕುಂಬಳಕಾಯಿ ದೋಸೆ
ಬೇಕಪ್ಪ ಸಾಮಾನುಗೊ:

  • 1/8 ಭಾಗ ಸಾಧಾರಣ ಗಾತ್ರದ ಕುಂಬಳಕಾಯಿ ಅಥವಾ 2 ಕಪ್(ಕುಡ್ತೆ) ಕುಂಬಳಕಾಯಿ ತುಂಡುಗೊ)
  • 1 ಕಪ್(ಕುಡ್ತೆ) ಬೆಣ್ತಕ್ಕಿ
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ / ತುಪ್ಪ

ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.

ಕುಂಬಳಕಾಯಿಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ ಅಥವಾ ತುರುದು ಮಡಿಕ್ಕೊಳ್ಳಿ.

ಅಕ್ಕಿ, ಉಪ್ಪು, ಕುಂಬಳಕಾಯಿ ತುಂಡಿನ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ ನೊಂಪಿಂಗೆ ಕಡೆರಿ(ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಎರದು ಮುಚ್ಚಲು ಮುಚ್ಚಿ 1-2 ನಿಮಿಷ ಬೇಶಿ.
ಇದಕ್ಕೆ ಎಣ್ಣೆ/ತುಪ್ಪ ಹಾಕಿ, ಕವುಂಚಿ ಹಾಕಿ 1-2 ನಿಮಿಷ ಬೇಶಿ.

ಬೆಶಿ ಬೆಶಿ ದೋಸೆಯ ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 6-8 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

4 thoughts on “ಕುಂಬಳಕಾಯಿ ದೋಸೆ

  1. ವಾಹ್! ಕುಂಬಳಕಾಯಿಯ ಕರು ಕುರುದೋಸೆಯ ಕಾಂಬಗಳೇ ಕೊಶಿ ಆವ್ತು. ನೆಂಪು ಮಾಡಿದ ವೇಣಿಯಕ್ಕಂಗೆ ಧನ್ಯವಾದ. ನಾಳಂಗೇ ಎಂಗಳ ಮನೆಲಿ ಕುಂಬಳ ಕಾಯಿ ದೋಸೆ.

  2. ಹರೇರಾಮ, ನಿನ್ನ ಬೆನ್ನು ತಟ್ಟೆಕ್ಕಾದ್ದು ಖಂಡಿತ. ಆನು ತಿದ್ದಿ ಹೇಳಿಯಪ್ಪಗ ನಿನ ಬೇಜಾರಾಗಿಹೋಕೊ ಜಾನ್ಸಿತ್ತಿದ್ದೆ.ಆದರೆ ಹಾಂಗಾಯಿದಿಲ್ಲೆ. ನೀನು ತುಂಬ ಬರೆತ್ತಕಾರಣ ಹೇಳಿದೆ. ಒಪ್ಪಮಾತಿನ ತೆಕ್ಕೊಳ್ತವು ಇನ್ನು,ಇನ್ನು ಪ್ರತಿಭಾನ್ವಿತರಾವುತ್ತವು.ನೀನೂ ಆ ಸಾಲಿಂಗೆ ಸೇರಿದ್ದೆ. ಸಂತೋಷಾತೆನಗೆ ನಿನ್ನ ಬಗ್ಗೆ.

  3. @ ವಿಜಯತ್ತೆ, ನಿಂಗೊ ಹೇಳಿದ್ದು ಸರಿ, ಅದು ನೀರು ಬೇಕಾದರೆ ಮಾತ್ರ ಸೇರ್ಸಿ ಹೇಳಿ ಆಯೆಕ್ಕಾತು. ಈಗ ಸರಿ ಮಾಡಿದೆ. ಹೇಳಿದ್ದಕ್ಕೆ ಧನ್ಯವಾದಂಗೊ..ಃ)
    ಕುಂಬಳಕಾಯಿ, ಸೌತೆಕಾಯಿ, ಮುಳ್ಳು ಸೌತೆ, ಬಚ್ಚಂಕಾಯಿ ಓಡು, ಇತ್ಯಾದಿ ನೀರಿನ ಅಂಶ ಹೆಚ್ಚಿಪ್ಪ ತರಕಾರಿಗಳ ದೋಸೆ ಮಾಡುವಗ, ಕಡವಗ ಸಾಧಾರಣವಾಗಿ ನೀರು ಸೇರ್ಸೆಕ್ಕಾವುತ್ತಿಲ್ಲೆ. ತರಕಾರಿಗ ಒಣಗಿದ ಹಾಂಗೆ ಅಥವಾ ಹಂಜೆ ಆಗಿದ್ದರೆ ಮಾತ್ರ ನೀರು ಸೇರ್ಸೆಕ್ಕಾಗಿ ಬತ್ತು.
    ಓಜೀಪು ಹೇಳಿದರೆ ಎಂತ ಹೇಳಿ ಗೊಂತಾಯಿದಿಲ್ಲೆ.

  4. ಹರೇರಾಮ, ಕುಂಬಳಕಾಯಿದೋಸೆ ಒೞೆದಿದ್ದು. ಕುಂಬಳಕಾಯಿ, ಚೆಕ್ಕರ್ಪೆ, ಹೀಂಗಿದ್ದೆಲ್ಲ ನೀರು ಬಿಡುವ ಸಾಧನ. ಹಾಂಗಾಗಿ ಅದಕ್ಕೆ ಕಡವಗ ಆ ಹೋಳು ಹಾಕಿ ಕಡದಿಕ್ಕಿ ಮತ್ತೆ ದೋಸೆ ಎರವಗ ದೋಸೆ ‘ಬೆಳ್ಪಿಟ್ಟು’ ಆವುತ್ತರೆ ನೀರು ಎರವಲಕ್ಕು. ಕಡವಗಳೇ ನೀರು ಹಾಕಿಯೊಂಡರೆ ನೀರು ಹೆಚ್ಹಕ್ಕು. ಅಲ್ಲದ್ದೆ, ಓಜೀಪು ಬಾರದೋ ಕಾಣ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×