Oppanna.com

ಕುಂಬಳಕಾಯಿ(ಕಾಶಿ) ಹಲ್ವ

ಬರದೋರು :   ವೇಣಿಯಕ್ಕ°    on   31/12/2013    0 ಒಪ್ಪಂಗೊ

ವೇಣಿಯಕ್ಕ°

ಕುಂಬಳಕಾಯಿ(ಕಾಶಿ) ಹಲ್ವ
ಬೇಕಪ್ಪ ಸಾಮಾನುಗೊ:

  • 6 ಕಪ್(ಕುಡ್ತೆ) ತುರುದ ಕುಂಬಳಕಾಯಿ
  • 3.5-4 ಕಪ್(ಕುಡ್ತೆ) ಸಕ್ಕರೆ
  • 4-5  ಏಲಕ್ಕಿ
  • 1-2 ಚಮ್ಚೆ ಬೀಜದ ತುಂಡು
  • 1 ಚಮ್ಚೆ ಒಣ ದ್ರಾಕ್ಷೆ
  • 3/4 ಕಪ್(ಕುಡ್ತೆ) ತುಪ್ಪ
  • 2 -3 ಚಮ್ಚೆ ಹಾಲು
  • ಚಿಟಿಕೆ ಕೇಸರಿ

ಮಾಡುವ ಕ್ರಮ:

ಕುಂಬಳಕಾಯಿಯ ಚೋಲಿ ತೆಗದು, ತಿರುಳು, ಬಿತ್ತು ಎಲ್ಲ ಮನಾರಕೆ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಂಗೆ ಕೊರದು, ತೊಳದು ಮಡುಗಿ.

ಇದರ ತುರಿಮಣೆಲಿ ತುರುದು ಮಡುಗಿ.

ಇದರ ಪ್ರೆಷರ್ ಕುಕ್ಕರಿನ ಪಾತ್ರಕ್ಕೆ ಹಾಕಿ, ನೀರು ಹಾಕದ್ದೆ ಬೇಶಿ.(2 ಸೀಟಿ)

ಒಂದು ಸಣ್ಣ ಬಾಣಲೆಲಿ ಒಂದು ಸಕ್ಕಣ ತುಪ್ಪ, ಬೀಜದ ಬೊಂಡು ಹಾಕಿ, ಚಿನ್ನದ ಬಣ್ಣ ಬಪ್ಪನ್ನಾರ ಹದ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಒಣ ದ್ರಾಕ್ಷೆಯನಾನು ಹಾಕಿ, ಅದು ಉಬ್ಬುವನ್ನಾರ ಹೊರಿರಿ.

ಏಲಕ್ಕಿಯ ಚೋಲಿ ತೆಗದು ಗುದ್ದಿ/ಹೊಡಿ ಮಾಡಿ ಮಡಿಕ್ಕೊಳ್ಳಿ. ಕೇಸರಿಯ 2-3 ಚಮ್ಚೆ ಬೆಶಿ ಹಾಲಿಂಗೆ ಹಾಕಿ ಮಡಿಕ್ಕೊಳ್ಳಿ.

ಕುಕ್ಕರಿನ ಪ್ರೆಷರ್ ಹೋದ ಮೇಲೆ, ಇದರ ಬಾಣಲೆಗೆ ಸಮಲ್ಸಿ, ನೀರು ಆರುವನ್ನಾರ ಮಡುಗಿ.

ಸಾಧಾರಣ ನೀರು ಆರಿ ಅಪ್ಪಗ ಸಕ್ಕರೆ ಹಾಕಿ ತೊಳಸಿ.

ಹಲ್ವವ ಹದ ಕಿಚ್ಚಿಲ್ಲಿ 2-3 ನಿಮಿಷಕ್ಕೆ ಒಂದರಿ, ರೆಜ್ಜ ಘಟ್ಟಿ ಅಪ್ಪನ್ನಾರ ತೊಳಸುತ್ತಾ ಇರಿ.

ಇದಕ್ಕೆ ಕೇಸರಿ ಹಾಕಿದ ಹಾಲಿನ ಹಾಕಿ ತೊಳಸಿ, ತುಪ್ಪವ ರೆಜ್ಜ-ರೆಜ್ಜವೆ ಹಾಕಿ, ಬಾಣಲೆಯ ತಳಂದ ಬಿಡುವನ್ನಾರ ತೊಳಸಿ.

ಇದಕ್ಕೆ ಹೊರುದು ಮಡುಗಿದ ಬೀಜ, ದ್ರಾಕ್ಷೆ, ಏಲಕ್ಕಿ ಹೊಡಿ ಹಾಕಿ ತೊಳಸಿ.

ಒಂದು ತಟ್ಟೆಗೆ ರೆಜ್ಜ ತುಪ್ಪ ಉದ್ದಿ, ಹಲ್ವವ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಚೆಟ್ಟೆ ಸೌಟಿಲ್ಲಿ ಹರಡಿ.

ಬೆಶಿ-ಬೆಶಿ ಅಥವಾ ತಣುದ ಮೇಲೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×