ಕುಂಬಳಕಾಯಿ ಕೊದಿಲು(ಸಾಂಬಾರು)

January 7, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕುಂಬಳಕಾಯಿ ಕೊದಿಲು(ಸಾಂಬಾರು)

ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಕುಂಬಳಕಾಯಿ
  • 1/2-3/4 ಕಪ್(ಕುಡ್ತೆ) ಕಾಯಿ ತುರಿ
  • ಸಣ್ಣ ತುಂಡು ಅರುಶಿನ ಕೊಂಬು ಅಥವಾ 1/8 ಚಮ್ಚೆ ಅರುಶಿನ ಹೊಡಿ
  • ಚಿಟಿಕೆ ಮೆಣಸಿನ ಹೊಡಿ
  • ದ್ರಾಕ್ಷೆ ಗಾತ್ರದ ಬೆಲ್ಲ
  • 4-5 ಒಣಕ್ಕು ಮೆಣಸು
  • 3/4 ಚಮ್ಚೆ ಕೊತ್ತಂಬರಿ
  • 1/4 ಚಮ್ಚೆ ಜೀರಿಗೆ
  • 12-15 ಉದ್ದಿನ ಬೇಳೆ
  • 6-8 ಮೆಂತೆ
  • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 1/2 ಕಪ್(ಕುಡ್ತೆ) ಬೇಶಿದ ತೊಗರೀ ಬೇಳೆ
  • 12-15 ಬೇನ್ಸೊಪ್ಪು (8-10 ಮಸಾಲೆಗೆ + ಒಳುದ್ದು ಒಗ್ಗರಣೆಗೆ)
  • 1 ಚಮ್ಚೆ ಸಾಸಮೆ(1/4 ಚಮ್ಚೆ ಮಸಾಲಗೆ + ಒಳುದ್ದು ಒಗ್ಗರಣೆಗೆ)
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕುಂಬಳಕಾಯಿಯ ಹೆರಾಣ ಚೋಲಿ, ಒಳಾಣ ತಿರುಳು, ಬಿತ್ತು ಎಲ್ಲ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಕುಂಬಳಕಾಯಿ ಬಾಗವ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ಬಾಗ ಬೆಂದಪ್ಪಗ, ಬೇಶಿದ ತೊಗರಿಬೇಳೆಯ ಹಾಕಿ ತೊಳಸಿ.

ಬಾಣಲೆಲಿ ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆ, 1/4 ಚಮ್ಚೆ ಸಾಸಮೆ, ಮೆಂತೆ, ಉದ್ದಿನ ಬೇಳೆ, ಅರುಶಿನ ಕೊಂಬು(ಅರುಶಿನ ಹೊಡಿ ಆದರೆ ಲಾಸ್ಟಿಂಗೆ ಇಂಗಿನ ಒಟ್ಟಿಂಗೆ ಹಾಕಿ),  1 ಸಕ್ಕಣ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಅದು ಪರಿಮ್ಮಳ ಬಪ್ಪಗ ಇಂಗು, ಬೇನ್ಸೊಪ್ಪು(8-10 ಎಲೆ)  ಹಾಕಿ 1 ನಿಮಿಷ ಹೊರಿರಿ.

ತೆಂಗಿನಕಾಯಿ ತುರಿ, ಹೊರುದ ಮಸಾಲೆ, ಹುಳಿಯ ಮಿಕ್ಸಿಗೆ/ಗ್ರೈಂಡರಿಂಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪು ಕಡದು, ಬೇಶಿ ಮಡುಗಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ(ನೀರು, ಉಪ್ಪು ಬೇಕಾದರೆ ಹಾಕುಲಕ್ಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಕೊದಿಲಿಂಗೆ ಹಾಕಿ ತೊಳಸಿ.
ಇದು ರೊಟ್ಟಿ, ದೋಸೆ, ಚಪಾತಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಲಾಯಿಕ ಕಾಣ್ತು… ಆನು ಇನ್ನಾಣ ಸರ್ತಿ ಮಾಡುವಾಗ ಮಸಾಲೆಗೆ ಬೇವಿನ ಸೊಪ್ಪುಮತ್ತು ಸಾಸಮೆ ಸೇರ್ಸೆಕ್ಕು…..

    [Reply]

    VA:F [1.9.22_1171]
    Rating: 0 (from 0 votes)
  2. Gireesha

    ಬೆಂಧಿ ಮಾಡಿ ಉಂಡಾತು. ಎಂಗಳಲ್ಲಿ ಮಿಕ್ಷಿ/ಗ್ರೈಂಡರ್ ಇಲ್ಲೆ, ಕಲ್ಲಿಲ್ಲೇ ಕಡದ್ದು. ಬಾರಿ ಫಸ್ಟ್ ಅಯಿದಪ್ಪ..

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಶುದ್ದಿಕ್ಕಾರ°ನೆಗೆಗಾರ°ಶಾಂತತ್ತೆಯೇನಂಕೂಡ್ಳು ಅಣ್ಣಬೊಳುಂಬು ಮಾವ°ಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿಗೋಪಾಲಣ್ಣವಿನಯ ಶಂಕರ, ಚೆಕ್ಕೆಮನೆದೊಡ್ಡಮಾವ°ಕೊಳಚ್ಚಿಪ್ಪು ಬಾವವೇಣೂರಣ್ಣದೀಪಿಕಾಪಟಿಕಲ್ಲಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಕಜೆವಸಂತ°ಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಪುತ್ತೂರುಬಾವಮಾಲಕ್ಕ°ನೀರ್ಕಜೆ ಮಹೇಶರಾಜಣ್ಣಅನುಶ್ರೀ ಬಂಡಾಡಿಡೈಮಂಡು ಭಾವಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ