ಕುಂಬಳಕಾಯಿ ತಿರುಳಿನ ಸಾಸಮೆ

January 21, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕುಂಬಳಕಾಯಿ ತಿರುಳಿನ ಸಾಸಮೆ

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ಕುಂಬಳಕಾಯಿ ತಿರುಳು
  • 1 ಕಪ್(ಕುಡ್ತೆ) ಕಾಯಿ ತುರಿ
  • 1/4 ಚಮ್ಚೆ ಮೆಣಸಿನ ಹೊಡಿ
  • ದೊಡ್ಡ ನಿಂಬೆ ಗಾತ್ರದ ಬೆಲ್ಲ
  • 1 ಹಸಿಮೆಣಸು ಅಥವಾ ಒಣಕ್ಕು ಮೆಣಸು
  • 1/2 ಕಪ್(ಕುಡ್ತೆ) ಮಜ್ಜಿಗೆ
  • ರುಚಿಗೆ ತಕ್ಕಸ್ಟು ಉಪ್ಪು
  • 4-5 ಬೇನ್ಸೊಪ್ಪು 
  • 3/4 ಚಮ್ಚೆ ಸಾಸಮೆ(1/8 ಚಮ್ಚೆ ಕಡವಲೆ + ಒಳುದ್ದು ಒಗ್ಗರಣೆಗೆ)
  • 1-2 ಮುರುದ ಒಣಕ್ಕು ಮೆಣಸು
  • 1/2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕುಂಬಳಕಾಯಿ ತಿರುಳಿಂದ ಬಿತ್ತಿನ ತೆಗದು ಲಾಯಿಕಲಿ ತೊಳದು ಮಡುಗಿ.

ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹದಾಕೆ ತುಂಡು ಮಾಡಿ.

ಕುಂಬಳಕಾಯಿ ತಿರುಳಿನ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ತೆಂಗಿನಕಾಯಿ ತುರಿ, ಹಸಿಮೆಣಸು ಅಥವಾ ಒಣಕ್ಕು ಮೆಣಸು, 1/8 ಚಮ್ಚೆ ಸಾಸಮೆಯ ಮಿಕ್ಸಿಗೆ/ಗ್ರೈಂಡರಿಂಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪು ಕಡದು, ಬೇಶಿ ಮಡುಗಿದ ಬಾಗಕ್ಕೆ ಹಾಕಿ ತೊಳಸಿ. ಇದಕ್ಕೆ ಮಜ್ಜಿಗೆದೆ ಹಾಕಿ ತೊಳಸಿ.(ನೀರು, ಉಪ್ಪು ಬೇಕಾದರೆ ಹಾಕುಲಕ್ಕು.)

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಸಾಸಮೆಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಶ್ಯಾಮಣ್ಣ
    ಶ್ಯಾಮಣ್ಣ

    ಮನೆಲಿ ಒಂದು ಕುಂಬಳ ಕಾಯಿ ತಂದು ಮಡುಗಿದ್ದೆ… ಸಾಸಮೆ ಮಾಡ್ಳೆ ಹೇಳೆಕ್ಕು… ಎನಗೇ ಮಾಡ್ಳಕ್ಕು ಹೇಳಿರೆ ಪುರುಸೊತ್ತಿಲ್ಲೆ… ತಿಂಬಲೆ ಮಾಂತ್ರ ಪುರ್ಸೊತ್ತು…. :)

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಬೊಳುಂಬು ಮಾವ°ರಾಜಣ್ಣಶಾ...ರೀಅನು ಉಡುಪುಮೂಲೆಪ್ರಕಾಶಪ್ಪಚ್ಚಿಶಾಂತತ್ತೆಅಕ್ಷರದಣ್ಣಎರುಂಬು ಅಪ್ಪಚ್ಚಿಚೆನ್ನಬೆಟ್ಟಣ್ಣದೊಡ್ಮನೆ ಭಾವಅಕ್ಷರ°ಶೀಲಾಲಕ್ಷ್ಮೀ ಕಾಸರಗೋಡುಕೊಳಚ್ಚಿಪ್ಪು ಬಾವಮಾಲಕ್ಕ°ಪಟಿಕಲ್ಲಪ್ಪಚ್ಚಿಚುಬ್ಬಣ್ಣಬೋಸ ಬಾವಡಾಮಹೇಶಣ್ಣಸುವರ್ಣಿನೀ ಕೊಣಲೆದೊಡ್ಡಭಾವಅಜ್ಜಕಾನ ಭಾವಮಾಷ್ಟ್ರುಮಾವ°ಶ್ರೀಅಕ್ಕ°ಅನುಶ್ರೀ ಬಂಡಾಡಿದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ