ಕುಂಡಿಗೆ ಚಟ್ನಿ

February 9, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಳೆಗೊನೆಯ ಕೊಡಿಲಿ ಇಪ್ಪ ಕೆಂಪಿನ ಮೋತೆಗೆ ನಮ್ಮ ಭಾಶೆಲಿ ಕುಂಡಿಗೆ ಹೇಳುದು. ತುಳುವಿಲಿ ಪೂಂಬೆ ಹೇಳಿಯೂ ಹೇಳ್ತವು.
ನಮ್ಮವರಲ್ಲಿ ಸಾಮಾನ್ಯವಾಗಿ ಒಂದು ಬಾಳೆಗೊನೆ ಕಡುದ್ದು ಹೇಳಿ ಆದರೆ, ಆ ದಿನ ಹೆಚ್ಚಾಗಿ ಕುಂಡಿಗೆ ಚಟ್ಣಿ ಇದ್ದೇ ಇರ್ತು!
ಅದರ ಮಾಡುವ ಕ್ರಮ ಗೊಂತಿದ್ದಾ?
ಗೊಂತಿಲ್ಲದ್ರೆ ಇಲ್ಲಿದ್ದು, ನೋಡಿ:

Kundige/ ಪೂಂಬೆ / poombe
ಕುಂಡಿಗೆ, ಕೊಯಿದು ತಂದ ಕೂಡ್ಳೆ

ಬೇಕಪ್ಪ ಸಾಮಾನುಗೊ:

 • ಕುಂಡಿಗೆ – 1 (ಹದಾ ದೊಡ್ಡದು), ಸಣ್ಣಕೆ ಕೊಚ್ಚೆಕ್ಕು.
 • ಮಜ್ಜಿಗೆ ನೀರು – ೧ ಕುಡ್ತೆ
 • ಹುಳಿ (ಹುಣಸೆಹುಳಿ) – ೧ ಚಮ್ಚ
 • ಬೆಲ್ಲ – ರುಚಿಗೆ
 • ಉಪ್ಪು – ಅವರವರ ರುಚಿಗೆ
 • ಅರಶಿನ – ರಜ
 • ಕೆಂಪು ಮೆಣಸು – ೩
 • ಕೊತ್ತಂಬರಿ – ೧ ಚಮ್ಚ
 • ಇಂಗು – ೧ ಚಿಟ್ಕೆ
 • ಬೇನುಸೊಪ್ಪು – ೮ ಎಲೆ
 • ಕಾಯಿಸುಳಿ – ೧ ಗ್ಲಾಸು
 • ಎಣ್ಣೆ – ೨ ಚಮ್ಚ
 • ಸಾಸಮೆ – ೧ ಚಮ್ಚ

ಮಾಡುವ ಕ್ರಮ:

ಕುಂಡಿಗೆ ಕೊಚ್ಚಲಿನ ರಜ್ಜ ಹೊತ್ತು ಮಜ್ಜಿಗೆನೀರಿಲಿ ಹಾಕಿ ಮಡುಗೆಕ್ಕು, ಹತ್ತಿಪ್ಪತ್ತು ನಿಮಿಷ.
ಮತ್ತೆ ಅದರಿಂದ ತೆಗದು ಬಾಣಲೆಲಿ ಹಾಕಿ ರಜ್ಜ ಬೇವಲೆ ಮಡುಗೆಕ್ಕು. ಬೆಂದೋಂಡಿಪ್ಪಗ ಅದಕ್ಕೇ ಹುಳಿ, ಉಪ್ಪು, ಬೆಲ್ಲ, ಅರಶಿನ – ಇಷ್ಟರ ರಜರಜ ಹಾಕೆಕ್ಕು, ಜಾಸ್ತಿ ಹಾಕೆಡಿ – ನಿಂಗಳ ಹೊಟ್ಟೆ ಬೇಯಿಗು ಮತ್ತೆ!
ಎಲ್ಲ ರಜ ಬೆಂದಮತ್ತೆ ತಣಿವಲೆ ಮಡುಗೆಕ್ಕು. ಪ್ರಿಜ್ಜಿಲಿ ಮಡುಗೆಕ್ಕು ಹೇಳಿ ಏನೂ ಇಲ್ಲೆ, ಅಂತೇ ಹತ್ತು ನಿಮಿಶ ಬಿಟ್ರೆ ಅಲ್ಲಿಗೇ ತಣಿತ್ತು.
ಇನ್ನೊಂದು ಬಾಣಲೆಯ ಕಿಚ್ಚಿಂಗೆ ಮಡಿಗಿ, ಅದರ್ಲಿ ರಜ್ಜ ಎಣ್ಣೆ ಹಾಕಿ ಮೆಣಸು, ಇಂಗು, ಕೊತ್ತಂಬರಿ, ಬೇನುಸೊಪ್ಪು ಹಾಕಿ ಚೆಂದಕೆ ಹೊರಿಯೆಕ್ಕು – ಕೆಂಪಪ್ಪನ್ನಾರ.

ಇಷ್ಟಾದ ಮತ್ತೆ, ಈ ಹೊರುದ ವಸ್ತುವನ್ನುದೇ, ಕಾಯಿಸುಳಿಯನ್ನುದೇ, ಆಗ ಬೇಶಿ ತಣಿವಲೆ ಮಡುಗಿದ ಕುಂಡಿಗೆಯನ್ನುದೇ ಹಾಕಿ, ಗಟ್ಟಿಗೆ ಕಡೆಯೆಕ್ಕು!
ಈ ಮಿಶ್ರಣಕ್ಕೆ ಎಣ್ಣೆ, ಸಾಸಮೆ, ಬೇನುಸೊಪ್ಪು ಹಾಕಿ ಲಾಯಿಕದ ಒಂದು ಒಗ್ಗರಣೆ ಕೊಡಿ.
ರುಚಿಯಾದ ಕುಂಡಿಗೆ ಚಟ್ಣಿ ತಯಾರು.!

ತಿಂಬ ಕ್ರಮ:

ಕೊಯಿಶಕ್ಕಿ ಹೆಜ್ಜೆಗೆ ಈ ಚಟ್ಣಿ ಕೂಡಿ ಉಂಬಲೆ ಬಾರೀ ರುಚಿ.
ಬೆಣ್ತಕ್ಕಿ ಅಶನಕ್ಕುದೇ ಆಗದ್ದೆ ಇಲ್ಲೆ, ಅದರ ಒಂದು ರುಚಿಯೇ ಬೇರೆ!

ಬಾಯಿಗೆ ರುಚಿ, ಹೊಟ್ಟಗೆ ತಂಪು.

ಕುಂಡಿಗೆ, ನಾರು ನಾರಲ್ಲದಾ, ಜೀರ್ಣಕ್ಕೆ ಒಳ್ಳೆದು ಹೇಳಿ ಇವು ಯಾವಗ್ಳೂ ಹೇಳುತ್ತವು!
ಇನ್ನಾಣ ಗೊನೆ ಕಡಿವಗ ಅದರ ಕುಂಡಿಗೆಯ ಚಟ್ಣಿ ಮಾಡಿನೋಡಿ, ಹೇಂಗಾಯಿದು ಹೇಳಿ!
ಆತಾ?

ಕುಂಡಿಗೆ ಚಟ್ನಿ, 4.0 out of 10 based on 3 ratings

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಅನುಶ್ರೀ ಬಂಡಾಡಿ

  ಹ್ಮ್.. ಓದುವಾಗ ಆಸೆ ಆವುತ್ತು. ಹೇಳಿದಾಂಗೆ ಇದಕ್ಕೆ ಒಂದು ಬೆಳ್ಳುಳ್ಳಿ ಒಗ್ಗರಣೆ ಕೊಟ್ರೆ ಇನ್ನೂ ಲಾಯ್ಕವುತ್ತಲ್ಲದಾ…

  [Reply]

  VA:F [1.9.22_1171]
  Rating: 0 (from 0 votes)
 2. Baraddu laaika aaydu Deepakka. Haange photo va bere blog inda copy maadi haakire adara bagge ondu gere baradare olledu heli enna abhipraaya.

  [Reply]

  VA:F [1.9.22_1171]
  Rating: 0 (from 0 votes)
 3. ಗೋವಿಂದ ಮಾವ, ಬಳ್ಳಮೂಲೆ
  govinda ballamoole

  SASAME SIHI CHATNI:Sasame,KAYI SULI, Bella,UPPU,Huli ottinge kadedare HAY!!ENTHA RUCHI.

  [Reply]

  VA:F [1.9.22_1171]
  Rating: 0 (from 0 votes)
 4. ಸುವರ್ಣಿನೀ ಕೊಣಲೆ
  Suvarnini Konale

  ಕುಂಡಿಗೆ ಚಟ್ನಿ ಅಂತೂ ಸೂಪರ್ !!! ಅದರ ಪಲ್ಯದೇ ಭಾರಿ ಲಾಯ್ಕ ಆವ್ತಲ್ಲದಾ? ಎಂಗಳ ಜಾಲಿಲ್ಲಿ 3-4 ಬಾಳೆ ಸೆಸಿ ಇದ್ದು, ಅದರಲ್ಲಿ ಗೊನೆ ಬಿಟ್ಟ ಕೂಡ್ಲೆ ಆನು ಆಶೆ ಬಿಡ್ಲೆ ಶುರು ಮಾಡ್ತೆ ಯಾವಗ ಕುಂಡಿಗೆ ಕೊಯ್ವಲಕ್ಕು ಹೇಳಿ!! ಎಂಗಳ ಹತ್ತರಾಣ ಮನೆಯೋರ ಬಾಳೆ ಸೆಸಿಂದಲುದೇ ಕುಂಡಿಗೆ ಕೊಯ್ವದು ಆನು!! ಅವಕ್ಕೆ ಕುಂಡಿಗೆ ಪದಾರ್ಥ ಮಾಡ್ಲೆ ಅರಡಿತ್ತಿಲ್ಲೆ :) ಎನಗೆ ಲಾಭ 😉

  [Reply]

  sharadamadhyastha Reply:

  ashtu ase avthare kundige koivale kayekkuli ille. adara sippe ondonde uduruthallada? erdu muru sippe thekkondu chatni madlakku

  [Reply]

  VA:F [1.9.22_1171]
  Rating: 0 (from 0 votes)
 5. anu ninne poombe chatni ,ganji madide super . enage enna amma heli kottadu

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಬೋಸ ಬಾವಮಾಲಕ್ಕ°ಅನಿತಾ ನರೇಶ್, ಮಂಚಿದೇವಸ್ಯ ಮಾಣಿಜಯಶ್ರೀ ನೀರಮೂಲೆಕೊಳಚ್ಚಿಪ್ಪು ಬಾವವೇಣೂರಣ್ಣವಾಣಿ ಚಿಕ್ಕಮ್ಮವಿದ್ವಾನಣ್ಣಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°ಸಂಪಾದಕ°ಮಂಗ್ಳೂರ ಮಾಣಿಅನು ಉಡುಪುಮೂಲೆಸರ್ಪಮಲೆ ಮಾವ°ಪಟಿಕಲ್ಲಪ್ಪಚ್ಚಿಅಕ್ಷರದಣ್ಣಚೆನ್ನೈ ಬಾವ°ಡೈಮಂಡು ಭಾವಅನುಶ್ರೀ ಬಂಡಾಡಿಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ