Oppanna.com

ಮಳೆಕಾಲದ ಚಳಿಗೆ ಕುರುಕುರು ಕಾಟಂಕೋಟಿಗೊ

ಬರದೋರು :   ಬಂಡಾಡಿ ಅಜ್ಜಿ    on   05/07/2010    29 ಒಪ್ಪಂಗೊ

ಬಿಟ್ಟೂ ಬಿಡದ್ದ ಹಾಂಗೆ ಮಳೆ ಬಂದೊಂಡೇ ಇದ್ದು. ಮನೆಂದ ಹೆರ ಕಾಲು ಮಡುಗುಲೆಡಿಯ. ಹೆರಡುಲುದೆ ಉದಾಸನವೇ ಅಪ್ಪದು. ಮನೆ ಒಳವೇ ಬೆಶ್ಚಂಗೆ ಕೂದೊಂಡು ಎಂತಾರು ಕಾಟಂಕೋಟಿ ತಿಂಬದೂಳಿರೆ ಆತು ಪುಳ್ಯಕ್ಕೊಗೆ. ಈಗ ಕೊಡೆಯಾಲಲ್ಲಿಯುದೇ ಹಾಂಗಿದ್ದದರ ನಮುನೆ ನಮುನೆ ಪೆಕೇಟಿಲಿ ಹಾಕಿ ಮಾರುತ್ತವಡ. ಏವ ಕಾಟು ಎಣ್ಣೆಲಿ ಹೊರುದಿರ್ತವೋ ಏನೊ. ಅದರ ತಿಂದು ಹೊಟ್ಟೆಹಾಳು ಮಾಡಿಗೊಂಬದರಿಂದ ಮನೆಲೇ ಮಾಡುದು ಒಳ್ಳೆದಲ್ಲದೋ. ಪೇಟೆಲಿಪ್ಪವಕ್ಕೆ ಪುರುಸೊತ್ತಿಲ್ಲೆ ಹೇಳುವ. ಕೊಡೆಯಾಲಂದ ಪುಳ್ಯಕ್ಕೊ ಬಂದರೆ ಹೀಂಗಿದ್ದದು ಎಂತಾರು ಮಾಡಿ ಕಟ್ಟುಕಟ್ಟಿ ಕೊಡುದು, ಶಾಂತಕ್ಕ ಮಕ್ಕೊಗೆ ಕಳುಸಿದ ಹಾಂಗೆ.
ಮಾಡ್ತರೆ ಸುಮಾರಿದ್ದಪ್ಪ ಕುರುಕುರು ತಿಂಡಿಗೊ. ಕೆಲವು ನೆಂಪಾದ್ದರ ಬರದ್ದೆ ಇದಾ.
ಸೊಳೆ ಹೊರುದ್ದು :
ಓ ಅಲ್ಲಿ ತೋಟದ ತಲೇಲಿ ಇಪ್ಪ ಮರದ ಹಲಸಿನಕಾಯಿ ಇನ್ನೂ ಹಣ್ಣಾಯೆಕಷ್ಟೆ. ಅದು ಹೊರಿವಲೆ ಒಳ್ಳೆದಾವುತ್ತು. ಮೊನ್ನೆ ಎರಡು ಕೊಯಿಶಿದ್ದು. ಒಪ್ಪಣ್ಣ ಇತ್ಲಾಗಿ ಬಂದೋನು ಅದರ ಕೊರದು ಅಜಪ್ಪಿ ಕೊಟ್ಟ.

ಹಲಸಿನಕಾಇ ಸೊಳೆ ಹೊರುದ್ದು

ಹ್ಮ್.. ಇದರ ಮಾಡ್ಳೆ ಬಾರೀ ಸುಲಾಬ. ಸೊಳೆಯ ಸಪುರ ಸಪುರ ಕೊರದು ಹೊರಿವದು. ಹೊರುದು ಅಪ್ಪಲಪ್ಪಾಗ ಅದಕ್ಕೆ ಉಪ್ಪು ನೀರು ಮಾಡಿ ಹಾಕೆಕು. ಹೊರಿವಲೆ ಹಾಕಿಯಪ್ಪಗ ಜೋರು ಶಬ್ದ ಬತ್ತದ. ಅದು ನಿಂದಪ್ಪಗ ಆತೂಳಿ ಲೆಕ್ಕ. ಉಪ್ಪು ನೀರು ಅಂದಾಜಿ ನೋಡಿಗೊಳ್ಳೆಕ್ಕು. ಜಾಸ್ತಿ ಉಪ್ಪು ಬೇಡ. ಒಂದೆರಡು ಚಂಚೆ ಹಾಕಿ ಲಾಯಿಕ ತೊಳಸಿ ತೆಗದರೆ ಸೊಳೆ ಹೊರುದ್ದು ತಯಾರಾತದ.
ಇದರ ಹಾಂಗೆಯೇ ಬಟಾಟೆ ಚಿಪ್ಪುಸು, ಬಾಳೆಕಾಯಿ ಚಿಪ್ಪುಸು, ದೀಗುಜ್ಜೆ ಚಿಪ್ಪುಸು ಎಲ್ಲ ಆವುತ್ತು.
ಬಾಳೆಕಾಯಿ ನೇಂದ್ರ ಬಾರೀ ಒಳ್ಳೆದಪ್ಪದು ಚಿಪ್ಪುಸಿಂಗೆ. ಅವುಂಡದೇ ಲಾಯಿಕಾವುತ್ತು. ಹಾಂಗೆ ಕದೊಳಿ, ಹೂಬಾಳೆ ಎಲ್ಲ ಆವುತ್ತು. ಇದರದ್ದೆಲ್ಲ ಚಿಪ್ಪುಸು ಬೆಳೀ ಅಪ್ಪದು. ನೇಂದ್ರದ್ದು ಒಳ್ಳೆ ಅರೀಶಿನ ಆಗಿ ಲಾಯಿಕಾವುತ್ತು. ಮಾಡುವ ಕ್ರಮ ಸೊಳೆ ಹೊರುದ ಹಾಂಗೆಯೇ.
ಬಟಾಟೆ ಚಿಪ್ಪುಸಿಂಗೆ ಮಾಂತ್ರ ಹೊರಿವಾಗ ಉಪ್ಪು ನೀರು ಹಾಕುದು ಬೇಡ. ಹೊರುದಾದ ಮತ್ತೆ ರೆಜಾ ಉಪ್ಪನ್ನೂ ಮೆಣಸಿನ ಹೊಡಿಯನ್ನೂ ಕಲಸಿ ಚಿಪ್ಪುಸಿಂಗೆ ಬೆರುಸೆಕ್ಕು. ರುಚೀ ಆವುತ್ತು. ಹಾಂಗೇಳಿಗೊಂಡು ದಣಿಯ ತಿಂದಿಕ್ಕೆಡಿ.
ಕೊಣಲೆ ಡಾಗುಟ್ರೆತ್ತಿಗೆ ಪುರುಸೊತ್ತೇ ಇರ ಮತ್ತೆ.
ಚಕ್ಕುಲಿ :
ಉದ್ದಿನ ಬೇಳೆಯ ಹೊರುದು ಹೊಡಿ ಮಾಡಿ ಅದಕ್ಕೆ ಅಕ್ಕಿ ಹೊಡಿ ಸೇರುಸೆಕ್ಕು. ಒಂದು ಗ್ಲಾಸು ಅಕ್ಕಿಹೊಡಿಗೆ UGG Stiefeletten günstig ಅರ್ದ ಗ್ಲಾಸು ಉದ್ದಿನ ಹೊರುದು ಹೊಡಿಮಾಡಿ ಹಾಕೆಕ್ಕು. ಅದಕ್ಕೆ ಜೀರಿಗೆ, ಒಂದು ರಜ ಬೆಣ್ಣೆ, ರಜ ನೀರು, ಉಪ್ಪು ಎಲ್ಲ ಹಾಕಿ ಬೆರುಸುದು.
ಒತ್ತುವಷ್ಟು ಗಟ್ಟಿಗೆ. ಮರದ ಮುಟ್ಟಿಲಿ ಒತ್ತಿಗೊಂಡು ಇದ್ದದು ಮದಲು. ಹಳೇ ಕಾಲದ್ದು ಅದು. ಮೊನ್ನೆ ಇತ್ಲಾಗಿ ಮುರುದತ್ತು. ಈಗ ಕೀಜಿದು ತಯಿಂದು ಪುಳ್ಳಿ.
ಅದರಲ್ಲಿದೇ  ಶ್ಟೀಲಿಂದು, ಪ್ಲೇಷ್ಟಿಕಿಂದು ಹೇಳಿ ನಮುನೆ ನಮುನೆದು ಇದ್ದಡ. ಬಾರದ್ವಾಜದ ದೇವಿ ನೋಡಿದ್ದಡ ಕೊಡೆಯಾಲಲ್ಲಿ.
ಹಿಟ್ಟಿನ ಮುಟ್ಟಿಂಗೆ ಹಾಕಿ ಚಕ್ಕುಲಿಯ ಬಾಳೆ ಮೇಲೆಯೋ ಪೇಪರಿನ ಮೇಲಿಯೊ ಮಣ್ಣ ಒತ್ತಿ ಮಡುಗಿ ಒಟ್ಟಿಂಗೆ ಹೊರುದತ್ತು.
ಇದೇ ಹಿಟ್ಟಿಂದು ಕಾರಕಡ್ಡಿಯುದೇ ಮಾಡ್ಳಕ್ಕು. ಈಗಾಣ ಅಚ್ಚಿಲಿ ಬೇರೆ ಬೇರೆ ನಮುನೆದು ಇದ್ದು. ಮೊನ್ನೆ ಒಪ್ಪಕ್ಕ ಗೀಸುಳಿಯ ಹಾಂಗಿಪ್ಪದರ ಪ್ರಯೋಗ ಮಾಡಿಗೊಂಡು ಇದ್ದತ್ತು. ರುಚಿ ಒಂದೇ. ಆಕಾರ ಮಾತ್ರ ಬೇರೆ ಅಷ್ಟೆ.
ಕಾರದಕಡ್ಡಿ :
ಕಡ್ಳೆಹೊಡಿಗೆ ಮೆಣಸಿನ ಹೊಡಿ, ಉಪ್ಪು, ರಜ್ಜ ನೀರು, ಬೇಕಾರೆ ನಾಕು ಜೀರಿಗೆಯೋ ಎಳ್ಳೋ ಹಾಕೆಕ್ಕು. ಮತ್ತೆ  ಇಂಗಿನ ನೀರು ಮಾಡಿ ಹಾಕೆಕ್ಕು. ಎಲ್ಲ ಒಟ್ಟಿಂಗೆ ಕಲಸಿ ಮುಟ್ಟಿಲಿ ಒತ್ತಿ  ಹೊರುದತ್ತು.
ಇದೇ ಹಿಟ್ಟಿನ ರಜ ನೀರು ಮಾಡಿರೆ ಪೋಡಿ ಮಾಡ್ಳೂ ಅಕ್ಕು.
ಬಾಳೆಕಾಯಿ, ಬಾಳೆಹಣ್ಣು, ದೀಗುಜ್ಜೆ, ಬಟಾಟೆ, ಮೆಣಸು ಹೀಂಗೆ ಪೋಡಿಗಳಲ್ಲೂ ತರಾವರಿ ಇದ್ದು.
ಬಾಳೆಕಾಯಿಯ ಚೋಲಿ ತೆಗದು ತೆಳೂವಿಂಗೆ ಕೊರದು ಎರಡು ಹೊಡೆಯನ್ನುದೇ ಹಿಟ್ಟಿಲಿ ಲಾಯ್ಕ ಅದ್ದಿ ಹೊರಿವದು. ಚೋಲಿ ತೆಗದಿಕ್ಕಿ ಒಂದರಿ ನೀರಿಂಗೆ ಹಾಕಿ ತೆಗೆಯೆಕ್ಕು.
ಒಳುದ್ದುದೇ ಹೀಂಗೇ ಕೊರದು ಹಿಟ್ಟಿಂಗೆ ಅದ್ದಿ ಹೊರಿವದು.
ನೀರುಳ್ಳಿ ಬಜೆ :
ನೀರುಳ್ಳಿಯ ಸಣ್ಣ ಸಣ್ಣಕ್ಕೆ ಕೊಚ್ಚಿ ಅದಕ್ಕೆ ರಜ ಕಡ್ಳೆ ಹೊಡಿ, ಉಪ್ಪು, ಮೆಣಸಿನ ಹೊಡಿ, ಇಂಗಿನ ನೀರು (ಹಾಕದ್ರೂ ಅಕ್ಕು) – ಎಲ್ಲ ಒಟ್ಟಿಂಗೆ ಬೆರುಸುದು. ನೀರು ಹಾಕುದು ಬೇಡ. ಕಲಸಿದ್ದದರ ರಜ ರಜವೇ ತೆಗದು ಎಣ್ಣೆಗೆ ಹಾಕಿ ಹೊರುದರೆ ಘಮ ಘಮ ನೀರುಳ್ಳಿ ಬಜೆ ತಯಾರಾತದ. ಈಗ ಸಿಕ್ಕುವ ನೀರುಳ್ಳಿಗೊ ಪರಿಮ್ಮಳವೇ ಇರ್ತಿಲ್ಲೆ. ಮದಲಾಣ ಹಾಂಗೆ ರುಚಿಯೂ ಇಲ್ಲೆ. ರೇಟು ಮಾಂತ್ರ ಏರುತ್ತಾ ಇದ್ದಡ ಕಳಾಯಿ ಗೀತ ಪರಂಚಿಗೊಂಡು ಇತ್ತು.
ಉದ್ದಿನ ಅಂಬಡೆ :
ಒಂದು ಗ್ಲಾಸು ಉದ್ದು ಬೊದುಲ್ಲೆ ಹಾಕೆಕ್ಕು. ಒಂದು ಗಂಟೆ ಕಳುದು ಅದರಿಂದ ನೀರು ತೆಗದು ಕಾಲಿ ಉದ್ದಿನ ಕಡೆಯೆಕ್ಕು. ಮತ್ತೆ ಅದಕ್ಕೆ ಹಸಿಮೆಣಸು, ಶುಂಟಿ ಎಲ್ಲ ಕೊಚ್ಚಿ ಹಾಕಿ ಚೆಂದಕ್ಕೆ ಬೆರುಸಿ, ಉಂಡೆ ಮಾಡಿ ಎಣ್ಣೆಲಿ ಹೊರುದರೆ ರುಚಿ ರುಚಿ ಅಂಬಡೆ ಆತದ.
ಚಟ್ಟಂಬಡೆ :
ಇದಕ್ಕೆ ಕಡ್ಳೆಬೇಳೆ, ಉದ್ದಿನಬೇಳೆ ಎರಡುದೇ ಬೇಕು. ಒಂದು ಗ್ಲಾಸು ಕಡ್ಳೆಬೇಳೆಗೆ ಅರ್ದ ಗ್ಲಾಸು ಉದ್ದಿನ ಬೇಳೆ ಸೇರುಸಿ ಬೊದುಲ್ಲೆ ಹಾಕೆಕ್ಕು. ಅಂಬಡೆಗೆ ಮಾಡಿದ ಹಾಂಗೆಯೇ ಅದರ ಕಡೆಯೆಕ್ಕು. ಆದರೆ ನೊಂಪಿಂಗೆ ಅಲ್ಲ, ಹದಾಕೆ ಕಡವದು. ಬೇಳೆಗೊ ರಜ ಇಡಿ ಇಡಿ ಬೇಕದ. ಇದಕ್ಕೆ ಉಪ್ಪು, ಹಸಿಮೆಣಸು, ಬೇಕಾರೆ ಶುಂಟಿ ಎಲ್ಲ ಹಾಕಿ ಲಾಯ್ಕ ಬೆರುಸುದು. ಅಂಗೈಗೆ ರಜಾ ನೀರು ಮುಟ್ಟುಸಿ ಉದ್ದಿ ಹಿಟ್ಟಿನ ಉಂಡೆ ಮಾಡಿ ಒಡೆಯ ಹಾಂಗೆ ಚಟ್ಟೆ ಮಾಡುದು. ಅದರ ಮತ್ತೆ ಹೊರಿವದು. ಅಬ್ರಾಜೆ ಪುಳ್ಳಿಗೆ ಹೊತ್ತೊಪ್ಪಾಗ ಬೆಶಿ ಬೆಶಿ ಚಟ್ಟಂಬಡೆ ಇದ್ದರೆ ಮತ್ತೆ ಎಂತದೂ ಬೇಡಡ ಕಾಪಿಯೊಟ್ಟಿಂಗೆ.
ಕಾಯಿ ಒಡೆ :
ಒಂದು ಗ್ಲಾಸು ಅಕ್ಕಿ ಹೊಡಿಗೆ ಒಂದು ಗ್ಲಾಸು ಕಾಯಿಸುಳಿ ಸೇರುಸಿ, ಅದಕ್ಕೆ ಉಪ್ಪು, ಜೀರಿಗೆ, ಬೇಕಾರೆ ರಜ ಅರಿಶಿನ ಹಾಕಿ ನೀರಾಕಿ ಕಲಸುದು ಗಟ್ಟಿಗೆ. ನಾಕು ಬಾಳೆಲೆ ಬಾಡುಸಿ ಅದಕ್ಕೆ ಎಣ್ಣೆ ಉದ್ದಿ ಈ ಹಿಟ್ಟಿನ ಸಣ್ಣ ಸಣ್ಣ ಉಂಡೆ ಮಾಡಿ ಒಡೆ ತಟ್ಟುದು. ಅದರ ಒಂದೊಂದೆ ಎಳಕ್ಕುಸಿ ಎಣ್ಣೆಗೆ ಹಾಕಿ ಹೊರಿವದು. ಎಣ್ಣೆಗೆ ಹಾಕುವಾಗ ಜಾಗ್ರತೆ ಬೇಕಾತೊ. ಕೊದಿಪ್ಪ ಎಣ್ಣೆ ರಟ್ಟಿ ಗುಳ್ಳೆ ಬಂದಿಕ್ಕುಗು. ಎಲ್ಲಿಯಾದರು ರಟ್ಟಿ ಹೋದರೆ ಪಕ್ಕನೆ ತುಪ್ಪ ಕಿಟ್ಟೆಕ್ಕು. ಹೀಂಗೆ ಎಣ್ಣೆ ರಟ್ಟಿದ್ದೋ, ಬೆಶಿ ಬಣಲೆ ತಾಗಿದ್ದೋ ಹೇಳಿಗೊಂಡು ಎಂತಾರು ಒಂದು ಗಾಯ ಇಪ್ಪದೇ ಹೆಮ್ಮಕ್ಕಳ ಕೈಲಿ. ಎಷ್ಟು ಜಾಗ್ರತೆ ಮಾಡಿರೂ ಕಮ್ಮಿಯೇ.
ಬನುಸು :
ಗೆನಾ ಮಯಿಸೂರು ಬಾಳೆಗೊನೆ ಸಿಕ್ಕಿತ್ತಿದು ಮೊನ್ನೆ. ಮಯಿಸೂರು ಬಾಳೆಗೊನೆ ಇದ್ದೂಳಿ ಆದರೆ ಪುಳ್ಯಕ್ಕಳದ್ದು ರಾಗ ಸುರು ಆವುತ್ತು “ಅಜ್ಜೀ ಬನ್ಸೂ…” ಹೇಳಿಗೊಂಡು. ಹ್ಮ್.. ಹೊತ್ತೊಪ್ಪಗಣ ಕಾಪಿಗೆ ಬನುಸು ಮಾಡೆಕ್ಕೂಳಿ ಆದರೆ ಉದಿಯಪ್ಪಗಳೇ ಹಿಟ್ಟು ಕಲಸಿ ಮಡುಗೆಕ್ಕದ. ಬಾಳೆಹಣ್ಣಿನ ಲಾಯ್ಕ ಪುರುಂಚೆಕ್ಕು ಮದಾಲು. ಮತ್ತೆ ಅದಕ್ಕೆ ತುಪ್ಪ, ಜೀರಿಗೆ, ಒಂಚೂರು ಸೋಡದ ಹೊಡಿ, ಶೆಕ್ಕರೆ, ಉಪ್ಪು ಎಲ್ಲ ಹಾಕಿ ಬೆರುಸೆಕ್ಕು. ಅದಾದ ಮತ್ತೆ ಮೈದ ಹೊಡಿ ಹಾಕಿ ಕಲಸಿ ಮಡುಗುದು. ಕೈಗೆ ಹಿಡಿಯದ್ದಾಂಗೆ ಇಪ್ಪ ಹಿಟ್ಟಿನ ಮುದ್ದೆ ಆಯೆಕ್ಕು ಅದು. ಈ ಹಿಟ್ಟಿನ ಹೊತ್ತೊಪ್ಪಾಗ ಲಟ್ಟುಸಿ ಹೊರುದರೆ ಬನುಸು ತಯಾರಾತು. ಇದರ ಮದ್ಯಾನದ ಸಾಂಬಾರಿಂಗೆ ಅದ್ದಿ ಅದ್ದಿ ತಿಂಬಲಕ್ಕು ಇಲ್ಲದ್ದರೆ ಹಾಂಗೇ ತಿಂಬಲೂ ಅಕ್ಕು.

ಹೆರ ಜೋರು ಮಳೆ ಬಂದೊಂಡಿಪ್ಪಗ ಹೀಂಗೆ ಎಂತಾರು ಕಾಟಂಕೋಟಿ ಮಾಡಿ ತಿಂಬದು ಸಾಮಾನ್ಯವೇ. ಮಾಡುಲೆ ಸುಲಾಬ, ತಿಂಬಲೆ ರುಚೀ. ಆದರೆ ಯಾವುದನ್ನೂ ದಣಿಯ ತಿಂಬಲಾಗ. ಅದರಲ್ಲಿಯೇ ಹೊಟ್ಟೆತುಂಬುಸಲೆ ಹೆರಟರೆ ಹೊಟ್ಟೆಹಾಳಕ್ಕು.
ನಿಂಗಳೂ ಮಾಡಿ, ಲೆಕ್ಕದ್ದು ತಿನ್ನಿ.
ಆತೊ?

29 thoughts on “ಮಳೆಕಾಲದ ಚಳಿಗೆ ಕುರುಕುರು ಕಾಟಂಕೋಟಿಗೊ

  1. ಪ್ರಾಯ ಆದ ಮತ್ತೆ ಹೆಚ್ಚು ತಿಂಬಲೆ ಆಗ ಹೇಳಿದರೂ, ತಿಂಬಲೆ ಕೊದಿ ಹೆಚ್ಚು. ಬಂಡಾಡಿ ಅಜ್ಜಿಗೆ ಎಂಬತ್ತು ದಾಂಟಿಕ್ಕಲ್ಲದೋ? ಈ ಪ್ರಾಯಲ್ಲಿಯೂ ಇಷ್ಟೊಂದು ತಿಂಡಿಗಳ ಬಗ್ಗೆ ಬೈಲಿನವಕ್ಕೆ ಕಲಿಶುವ ಉತ್ಸಾಹ ಮೆಚ್ಚೆಕ್ಕಾದ್ದೆ!

  2. ಅಜ್ಜಿ, ಉಂಡ್ಲಕಾಳು ಯಾವಾಗ ಮಾಡ್ತೀ?
    ಎನಗೆ ತುಂಬಾ ಇಷ್ಟ. ಮರೆಯದ್ದೆ ಮಾಡಿ ಮತ್ತೆ ರೆಜಾ ಕಳಿಸಿ ಕೊಡಿ ಆತಾ

    1. ಕಳುದೊರುಷ ಉಪ್ಪಿಲಿ ಹಾಕಿದ ಸೊಳೆ ಮುಗುದ್ದನ್ನೆ! ಈ ಸರ್ತಿ ಮೊನ್ನೆ ಹಾಕಿದ್ದದಷ್ಟೆ. ಇನ್ನುದೇ ಒಂದೆರಡು ಹಾಕೇಕು. ಅದು ಉಪ್ಪೆಳದ ಮತ್ತೆ ಆತಷ್ಟೆ ಇದಾ. ಶಾಂತಕ್ಕನಲ್ಲಿ ಇದ್ದೋ ಕೇಳುವ ಬೇಕಾರೆ.

  3. ಚಂಬರಕಟ್ಟಲ್ಲಿ ಹಪ್ಪಳ ಸುಟ್ಟು ತಿಮ್ಬದು.ಆನೂ ಅಲ್ಲಿಯಣವನೇ.

  4. ನಿಂಗೋ ಹಾಂಗಿಪ್ಪ ತಿಂಡಿ ತಿಂದು ಡಾಕ್ಟ್ರ ಹತ್ತರೆ ಬನ್ನಿ ಹೇಳಿ ಅಲ್ಲ.ಮದಲೆ ಜಾಗ್ರತೆ ಮಾಡಿರೆ ಏಕೆ ಆಗ.

    1. ಹಾಂಗೆ ತಿನ್ನದ್ದೆ ಕೂದರೆ ಚೆಂಬರಕಟ್ಟದ ಹಪ್ಪಳಕಟ್ಟಕ್ಕೆ ಬೂಸರು ಬಕ್ಕನ್ನೆ ಮತ್ತೆ! 😉

      1. ಹಾಂಗಲ್ಲ ಮಾಣೀ. ಅಪುರೂಪಕ್ಕೆ ಒಂದೆರಡು ತಿಂದರೆ ಎಂತೂ ಆವುತ್ತಿಲ್ಲೆ. ಬಾಯಿಗೆ ರುಚಿ ಆವುತ್ತು ಹೇಳಿಗೊಂಡು ಅದರಲ್ಲೇ ಹೊಟ್ಟೆತುಂಬುಸಲಾಗ ಹೇಳಿ ಹೇಳಿದ್ದದು.

        1. ಯಾವಗಾರೂ ಒಂದರಿ ತಿಂದರೆ ಏನೂ ತೊಂದರೆ ಇಲ್ಲೆ.ನಾಳಂಗೆ ಅಜ್ಜನ ತಿಥಿ.ಒಡೆ ಸುಟ್ಟವು ತಿನ್ನೆಕ್ಕಲ್ಲದೋ? ಈ ಕುರು ಕುರು ತಿಂಡಿಯ ಒಂದಾರಿ ಸುರು ಮಾಡಿರೆ ತಿಂಬ ಆಶೆ ಹೆಚ್ಚೇ ಆಯಿಗೊಂಡು ಹೊವುತ್ತದಾ.

  5. ಕಾಟಂಕೋಟಿ ತಿಂಡಿಗೊ ತಿಂಬಲೆ ಒಳ್ಳೆದಾವ್ತು. ಆದರೆ ಹೆಚ್ಚು ತಿಂದರೆ ಡಾಗುಟ್ರುಗೊಕ್ಕೆ ಒಳ್ಳೆ ಕೆಲಸ ಅಕ್ಕು.

  6. ಕನ್ನಡ slate ಇದರಷ್ಟೂ ಲಾಯಕಿಲ್ಲೇ.ಅದರ್ಲಿ ದೊಡ್ಡ ಸಣ್ಣ ಅಕ್ಷರ ಉಪಯೋಗ ಮಾಡೆಕಾವುತ್ತು.ಎನಗೆ ಅಷ್ಟು ತಾಳ್ಮೆ ಮತ್ತೆ ತಲೆಯೂ ಇಲ್ಲೆ.ಪ್ರಾಯ ಆಗಿಯೊಂಡು ಬಂತದಾ.ಆನು ಕ್ವಿಲ್ ಪಾಡ್ ಕೂಡ ನೋಡಿದ್ದೇ.ಎನಗೆ ಗೂಗಲ್ ಇದ್ದದರಲ್ಲಿ ಒಳ್ಳೇದು ಹೇಳಿ ಕಾಣುತ್ತು.ಹಾಂಗೆ ಎನಗೆ ಎನ್ನ ಕೆಲವು ಹಿತೈಶಿಗೋ ಬರಹ ಲಾಯಕಿದ್ದು ಹೇಳಿದವು.ನಮ್ಮ ಭಾಷೆ ಯಾವ ತಂತ್ರಕ್ಕೂ ಗೊಂತಿಲ್ಲೆ ಅದಾ.

    1. ಅಪ್ಪೋ ಮಾವ°..
      ಸಾರ ಇಲ್ಲೆ, ನಿಂಗೊ ಹೇಂಗೆ ಬರದರೂ ಬೈಲಿನವಕ್ಕೆ ಅರ್ತ ಅಕ್ಕು, ನಮ್ಮ ಭಾಷೆಲೇ ಬರೆತ್ತಿರನ್ನೆ, ಅದುವೇ ಸಂತೋಷ.
      ಈಗಾಣ ಜವ್ವನಿಗರು ಕೆಲವು ಜೆನ ಇಂಗ್ಳೀಶಿಲಿ ಬರೆತ್ತವಿದಾ, ನವಗೆ ಅದರ ಶೆಬ್ದಂಗೊ ಅರ್ತ ಅಪ್ಪಲಿಲ್ಲೆ.
      ಇನ್ನೊಬ್ಬನತ್ರೆ ಕೇಳುಲೆ ಹೋಪಲಿಲ್ಲೆ, ನಾವು ಸಣ್ಣ ಅಪ್ಪದೆಂತಕೆ ಸುಮ್ಮನೆ ಹೇಳಿಗೊಂಡು.
      ಹ್ಮ್, ಅದಿರಳಿ..
      ನಮ್ಮ ಪೆರ್ಲದಣ್ಣನ ಹಾಂಗಿರ್ತ ಬೆಂಗುಳೂರಿನ ಸೋಫ್ಟುವೇರುಗೊ ಮನಸ್ಸು ಮಾಡಿರೆ ನಮ್ಮ ಭಾಶೆಯ ತಂತ್ರ ಮಾಡ್ತವೋ ಏನೋ!
      ನೋಡೊ°, ಎಂತಾವುತ್ತು ಹೇಳಿಗೊಂಡು! ಬೆಂದಷ್ಟು ತಣಿಯೆಡ!!

      1. ಕರೆಂಟಿನ ಪುಸ್ತಕಲ್ಲಿ ತಂತ್ರವೂ ಮಾಡ್ತವೋ? ಎಡಿಯಪ್ಪ ಈ ಪುಳ್ಯಕ್ಕಳತ್ತರೆ!

    2. ಡಾಕ್ಟ್ರೆ, ಎನಗೆ “ಬರಹ ನೋಟ್ ಪಾಡ್” ಒಳ್ಳೆದು ಆವುತ್ತು. ದೊಡ್ಡ ಅಕ್ಷರ ಉಪಯೋಗಿಸದ್ದೆ ಎಡಿಯ. ಆದರೆ ಇದರಲ್ಲಿ ಸುಲಾಭ ಇದ್ದು.
      ನಿಂಗೊ ಡಾಕ್ಟ್ರು ಆಗಿ ಸುರೂವಿಂಗೆ, ಪ್ರಾಕ್ಟೀಸ್ ಸುರು ಮಾಡುವಾಗ, ರಜ ಅಲೋಚನೆ ಮಾಡೆಕ್ಕಾಗಿಂಡು ಇತ್ತಿದ್ದಿಲ್ಲೆಯಾ. ಆದರೆ ಮದ್ದು ಕೊಡ್ಲೆ ಈಗ ಅಷ್ಟೊಂದು ಆಲೋಚನೆ ಮಾಡೆಕ್ಕಾಗ ಅಲ್ಲದ. ಹಾಂಗೆ ಇದು ಕೂಡಾ. ಸುರುವಿಂಗೆ ರಜ ಕಷ್ಟ ಹೇಳಿ ಕಂಡರೂ ಮತ್ತೆ ಸುಲಾಭ ಆವುತ್ತು.
      ಶರ್ಮಪ್ಪಚ್ಚಿ ಮೊನ್ನೆ ಮೊನ್ನೆ ಸುರು ಮಾಡಿದವು ಈಗ ಸ್ಪೀಡಿಲ್ಲಿ ಟೈಪ್ ಮಾಡ್ತವು. ಅವಕ್ಕೂ ಪ್ರಾಯ 50 ದಾಂಟಿ ಕೆಲವು ವರ್ಷ ಆತು.

      1. ಆನು ನಮ್ಮ ಮೆದುಳಿನ ಅಗತ್ಯ ಇಪ್ಪಷ್ಟೇ ಉಪಯೋಗ ಮಾಡೆಕ್ಕು ಹೇಳಿ ನಂಬಿದವ°.ಗೂಗಲ್ ಕನ್ನಡ ಫಾಂಟ್ ಸಾಕಷ್ಟು ಲಾಯ್ಕ್ ಇದ್ದು.ಕೆಲವು ಸರ್ತಿ ಅರ್ಧ ಟೈಪ್ ಮಾಡಿ ಜೋಡುಸೆಕ್ಕಾವುತ್ತು.ಮದ್ದಿನ ವಿಷಯ ಬೇರೆ,ಅದರ ಆನು ಹತ್ತರೆ ಹತ್ತರೆ ಆರು ವರ್ಷ ಕಲ್ತು ಮಾಡುದದ.ಅದಲ್ಲದ್ದೆ ಎನಗೆ ಅನಿವಾರ್ಯ ಕೂಡ.ಇಲ್ಲಿ ಹೇಂಗೆ ಬರೆತ್ತು ಹೇಳ್ತದು ಮುಖ್ಯ ಅಲ್ಲಾದ.ನಿಂಗೋಗೆ ಅರ್ಥ ಆದರೆ ಸಾಕ್ಕಲ್ಲದೋ?ಶರ್ಮಪ್ಪಚ್ಚಿ ಎನ್ನಂದ ಕೆಲವು ವಿಷಯಲ್ಲಿ ಹುಶಾರಿಕ್ಕು.ಸಾಮನ್ಯವಾಗಿ ವಿಜ್ಞಾನ ಕಲ್ತವು ಹೀಂಗಿಪ್ಪ ವಿಷಯಲ್ಲಿ ದಡ್ದರಾಗಿರ್ತವು.ಅಂತೂ ಇಂತೂ ಬರೆತ್ತೆನ್ನೇ.

  7. ಅಜ್ಜೀ,
    ಎಲ್ಲಾ ದಿಕ್ಕೆ ಮಳೆ ಜೋರು ಬಪ್ಪಗ ಲಾಯಕ ಕುರು ಕುರು ಕಾಟಂಕೋಟಿ ಮಾಡ್ಲೆ ಹೇಳಿ ಕೊಟ್ಟಿದಿ..
    ಆದರೆ ಕುಂಬ್ಳೆ ಪುಳ್ಳಿ ಇದ್ದಲ್ಲದಾ? ಅದಕ್ಕೆ ಎಣ್ಣೆತಿಂಡಿ ಆಗಡ್ದ ಅದರಲ್ಲೂ ನೀರುಳ್ಳಿ ಬಜೆ ಆಗಲೇ ಆಗಡ್ದ…
    ಇನ್ನು ಶುದ್ದಿಯ ಓದುತ್ತೋ ಇಲ್ಲೆಯೋ.. ಒಪ್ಪ ಅಂತೂ ಬರೆಯಲೇ ಬರೆಯ…
    ಇನ್ನು ಅದರ ಮದುವೆ ಅಪ್ಪ ಮಾಣಿಗೆ ನೀರುಳ್ಳಿ ಬಜೆ ಪ್ರೀತಿ ಆದರೆ ಗೋವಿಂದ…
    ಮತ್ತೆ ಅವ ನೀರುಳ್ಳಿ ಬಜೆಗೆ ಕೇಶವಣ್ಣನ ಹೋಟೆಲಿಂಗೆ ಹೊಯೇಕ್ಕಷ್ಟೇ 😉

    1. ಕುಂಬ್ಳೆ ಅಳಿಯಂಗೆ ನೀರುಳ್ಳಿ ಬಜೆ ಕಂಡರೆ ಬೇರೆ ಆರಿಂಗೂ ಸಿಕ್ಕಾ.. ಒಪ್ಪಕ್ಕ ಚಿಕ್ಕು ತಿಂದ ಹಾಂಗೆ ತಿಂಗು…. ಆದರೆ ಮಜ್ಜಿಗೆ ಮುಟ್ಟಲೇಮುಟ್ಟ…
      ಎಂತದೋ ನವಗರಡಿಯಾ.. ಕಾನಾವಿಂಗೆ ಬಂದಿಪ್ಪಗ ಎಂತಾರು ಮಾಡೆಕ್ಕಷ್ಟೆ….

      1. “ದೊಡ್ಡ ಅರ್ಧ” ಅಲ್ಲದ್ದರೆ ಸಣ್ಣ ಅರ್ಧ ಆದರೂ ಹತ್ತರೆ ಕೂದವಕ್ಕೆ ಸಿಕ್ಕುಗಾಯಿಕ್ಕು

  8. ಕುರು ಕುರು ತಿಮ್ಬಲೆ ಲಾಯಕ ಅಪ್ಪದು ಅಪ್ಪು.ಆದರೆ ಈಗ ಐವತ್ತು ದಾನ್ಟಿದ ಎನ್ನ ಹಾಂಗೆ ಇಪ್ಪವಕ್ಕೆ ಕಷ್ಟವೇ ತಿಮ್ಬದು .(ಗೂಗಲ್ ಉಪಯೋಗ ಮಾಡಿರೆ ಒತ್ತಕ್ಷರ ಅದರಲ್ಲಿಯೂ ಣ ಬಂದರೆ ಸರಿ ಬತ್ತಿಲ್ಲೆ)ಬೇಜಾರ್ ಮಾಡೆದ ಒಪ್ಪಣ್ಣ.ನಿಂಗಳ ಬೈಲಿಂಗೆ ಆನು ಬತ್ತಾ ಇದ್ದೆ.ಗಾಳಿ ಲಾಯೆಕಿದ್ದು,ಅಲ್ಲದ್ದೆ ಒಳ್ಳೆ ಹಲಸಿನ ಕಾಯಿ ಹೊರುದು ಕೊಟ್ಟರೆ ಮತ್ತೆಂತ ಬೇಕು?

    1. ಕೇಜಿಮಾವಂಗೆ ನಮಸ್ಕಾರ ಇದ್ದು.
      ಲಾಯಿಕು ಒಪ್ಪ ಬರದು ಬೈಲಿನ ಮಕ್ಕಳ ಬೆನ್ನು ತಟ್ಟುತ್ತಿ, ತುಂಬಾ ಕೊಶಿ!
      ಗೂಗುಲು ಸೈಟಿಂಗೆ ಹವ್ಯಕ ಅರಡಿಯದೋ ಏನೋ!
      ನಿಂಗೊ ಕನ್ನಡಸ್ಲೇಟಿನ ಉಪಯೋಗುಸಿ ನೋಡಿ: (http://kannadaslate.com )
      ಗೂಗುಲಿಂದ ಕೊಶಿ ಆವುತ್ತಡ, ಬೈಲಿನ ಕೆಲವು ಜೆನಕ್ಕೆ…

      1. ಸ್ಲೇಟೊ? ಪುಳ್ಳಿ ನಿನ್ನೆ ತೋಟಂದ ನೀರುಕಡ್ಡಿ ತಂದು ಉದ್ದಿಗೊಂಡಿದ್ದತ್ತು ಸ್ಲೇಟಿನ.

    2. ಮದಲು ಎಂಬತ್ತು ದಾಂಟಿದ ಮತ್ತುದೇ ಚಕ್ಕುಲಿ ಕಟುಕುಟು ಮಾಡಿಗೊಂಡು ಇತ್ತಲ್ಲದೋ? ಈಗ ನಮುನೆ ನಮುನೆ ಪೇಷ್ಟುಗೊ ಬಂದ ಮತ್ತೆ ಹಲ್ಲು ಸರಿ ಇಪ್ಪಲಿಲ್ಲೆಯೋಳಿ ಕೇಜಿಅಣ್ಣೊ

      1. ತಿಂಬ ವಿಷಯಲ್ಲಿ ಏನೂ ತೊಂದರೆ ಇಲ್ಲೆ.ಈಗ ಎಂತಾಯಿದು ಹೇಳಿರೆ ಕೆಲಸದ ಮಧ್ಯಲ್ಲಿ ತಿಂದು ಕರಗುಸುವ ಪುರುಸೊತ್ತು ಇಲ್ಲೆ ಅದಾ.ಅದಲ್ಲದ್ದೆ ಅಪ್ಪಂಗೋ ಅಬ್ಬಗೋ ಸೀ ಮೂತ್ರವೋ ಬ್ಲಡ್ ಪ್ರೆಶರೋ ಇದ್ದರೆ ಜಾಗ್ರತೆ ಮಾಡುದು ಒಳ್ಳೇದು ಹೇಳಿ ರಜಾ ಬಾಯಿ ಕಟ್ಟೆಕ್ಕಾವುತ್ತು.ಹಲ್ಲಿನ ಸಮಸ್ಯೆ ಏನೂ ಇಲ್ಲೆ.

  9. ಅಜ್ಜಿ ಬಂದಿರೋ.. ಆನು ಅಜ್ಜಿ ಕಟ್ಟ ಕಟ್ಟಿದ್ದರ ತೆಕ್ಕೊಂಬಲೆ ಬಪ್ಪ ಮಾಡಿರೆ, ಪುಳ್ಲಿಯೊಟ್ಟಿಂಗೆ ಚೆನ್ನೆಬೆಟ್ಟು ಮದುವೆ ಹೋಯಿದು ಹೇಲಿ ಒಪ್ಪಣ್ಣ ಹೇಳಿದ…
    ಈಗ ಮಳೆಗಾಲಕ್ಕಿಪ್ಪ ತಿಂಡಿ ಬಾರಿ ಲಾಯ್ಕ ಇದ್ದು.. ದೊಡ್ಡ ಬೇಗು ತರೆಕ್ಕಷ್ಟೆ..

    1. ಬೇಗು ತಂದು ಕೊಂಡೋಪಷ್ಟು ಇಲ್ಲೆ ಪುಳ್ಳೀ. ಎಲ್ಲ ಪುಳ್ಯಕ್ಕೊಗೂ ಆಗೆಡದೋ?

      1. ಬಂಡಾಡಿ ಪುಳ್ಳಿಯ ಹೆಗಲು ಚೀಲಲ್ಲಿ ತುಂಬುವಷ್ಟಾದ್ರೂ ಸಿಕ್ಕುಗಾ..? ಮಳೆ ಜೋರಿದ್ದಿದಾ.. ತಿಂಬಲೆ ಜಾಸ್ತಿ ಬೇಕು.. ಮತ್ತೆ ಅರ್ಧ ಒಪ್ಪಣ್ಣ ಕಾಲಿ ಮಾಡುಗು.. ಮೊನ್ನೆ ಮಾಷ್ಟ್ರತ್ತ್ತೆ ಮನೆಲಿ ಎರಡಂಕೆ ಹೋಳಿಗೆ ತಿಂದಿದಾ ಇದಾ ಒಂದರಿಯೆ..

  10. ಒಂದೊಂದೇ ಬಗೆ ಓದಿದ ಹಾಂಗೆ ಜೋರು ಆಶೆ ಆವ್ತು !!

    1. ನಿನ್ನೆ ಬಾಳೆಕಾಯಿ ಚಿಪ್ಪುಸು ಮಾಡಿದ್ದೆ. ದೀಪನಲ್ಲಿಂದ ತಂದದು ಒಳ್ಳೆ ನೇಂದ್ರ . ಇತ್ಲಾಗಿ ಬಂದರೆ ಕೊಡ್ತೆಬ್ಬೋ. ಸೊಳೆ ಹೊರುದ್ದದುದೇ ಇದ್ದು ಬೇಕಾರೆ. ಎಂತ?
      ಬಪ್ಪಲಾಗದ್ದರೆ ಮತ್ತೆ ಪುರುಸೊತ್ತಿಲಿ ಒಂದೊಂದೇ ಮಾಡಿತಿಂದತ್ತು. ಅಂತಾ ಬಂಙ ಏನೂ ಇಲ್ಲೆ ಇದಾ ಮಾಡುಲೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×