ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್

January 28, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್

ಬೇಕಪ್ಪ ಸಾಮಾನುಗೊ:

 • 1-1.25 ಕಪ್(ಕುಡ್ತೆ) ನಿಂಬೆ ಹುಳಿ ಎಸರು
 • 1/2 ಕಪ್(ಕುಡ್ತೆ) ಕ್ರಶ್ ಮಾಡಿದ ಶುಂಠಿ
 • 8 ಕಪ್(ಕುಡ್ತೆ) ಸಕ್ಕರೆ
 • 1.5-2 ಕಪ್(ಕುಡ್ತೆ) ನೀರು

ಮಾಡುವ ಕ್ರಮ:

ನಿಂಬೆ ಹುಳಿಯ ಲಾಯಿಕಲಿ ತೊಳದು, ತುಂಡು ಮಾಡಿ, ಬಿತ್ತಿನ ತೆಗದು ಎಸರು ಹಿಂಡಿ ಮಡುಗಿ.

ಶುಂಠಿಯನ್ನೂ ಲಾಯಿಕಲಿ ತೊಳದು, ಮಿಕ್ಸಿಗೆ ಹಾಕಿ ಕ್ರಶ್ ಮಾಡಿ ಮಡಿಕ್ಕೊಳ್ಳಿ.

ಸಕ್ಕರೆ, ನೀರಿನ ಒಂದು ಪಾತ್ರಲ್ಲಿ ಹಾಕಿ ತೊಳಸಿ, ಕೊದುಶಿ.

ಇದಕ್ಕೆ ಕ್ರಶ್ ಮಾಡಿದ ಶುಂಠಿಯ ಹಾಕಿ ಸಕ್ಕರೆ ಪಾಕ ಅಪ್ಪನ್ನಾರ ಮಡುಗಿ. (ಸಕ್ಕರೆ ಪಾಕ ಆತಾ ಹೇಳಿ ನೋಡುಲೆ, ಕೋಲು ಬೆರಳಿನ ಕೊಡಿಯ ಜಾಗ್ರತೆಲಿ ಸಕ್ಕರೆ ಪಾಕಕ್ಕೆ ಅದ್ದಿ, ಅದರ ಹೆಬ್ಬಟೆ ಬೆರಳಿಲ್ಲಿ ಮುಟ್ಟಿ ಬಿಡಿ. ಅಸ್ಟೊತ್ತಿಂಗೆ ನೂಲಿನ ಹಾಂಗೆ ಬಂದರೆ ಸಕ್ಕರೆ ಪಾಕ ಆಯಿದು ಹೇಳಿ ಲೆಕ್ಕ.)

ಇದಕ್ಕೆ ನಿಂಬೆ ಹುಳಿ ಎಸರಿನ ಹಾಕಿ ಲಾಯಿಕಲಿ ತೊಳಸಿ, ಕಿಚ್ಚಿನ ನಂದ್ಸಿ.

ಇದರ ಒಂದು ಅರಿಪ್ಪೆಲಿ ಅರುಶಿ, ತಣಿವಲೆ ಮಡಿಗಿ.

ಪೂರ್ತಿ ತಣುದ ಮೇಲೆ ಇದರ ಲಾಯಿಕಲಿ ತೊಳಸಿ, ಕುಪ್ಪಿಗೆ ತುಂಬ್ಸಿ ಮಡುಗಿ. ಫ್ರಿಜ್ಜಿಲ್ಲಿ ಮಡುಗಿದರೆ 6 ತಿಂಗಳಾದರೂ ಹಾಳಾವುತ್ತಿಲ್ಲೆ.

ಜ್ಯೂಸ್ ಮಾಡ್ಲೆ, ಈ ಸಿರಪ್ಪಿನ ಒಂದು ಪಾತ್ರಲ್ಲಿ ಹಾಕಿ ಅದಕ್ಕೆ 4 ಪಟ್ಟು ನೀರು ಹಾಕಿ ತೊಳಸಿ. ಐಸ್ ತುಂಡು ಬೇಕಾದರೆ ಹಾಕಿ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಇದರ ಮಾಡಿ ಮಡುಗೆಕು… ಲಾಯಿಕ ಕಾಣ್ತು :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಪವನಜಮಾವಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿಪುತ್ತೂರುಬಾವರಾಜಣ್ಣಗಣೇಶ ಮಾವ°ಕಜೆವಸಂತ°ಅನುಶ್ರೀ ಬಂಡಾಡಿದೊಡ್ಡಭಾವದೊಡ್ಮನೆ ಭಾವವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಸರ್ಪಮಲೆ ಮಾವ°ಹಳೆಮನೆ ಅಣ್ಣಶರ್ಮಪ್ಪಚ್ಚಿಚೆನ್ನೈ ಬಾವ°ವಿನಯ ಶಂಕರ, ಚೆಕ್ಕೆಮನೆಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆಅನಿತಾ ನರೇಶ್, ಮಂಚಿದೊಡ್ಡಮಾವ°ಅನು ಉಡುಪುಮೂಲೆಪುಟ್ಟಬಾವ°ಕೇಜಿಮಾವ°ಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ