ಮಾಂಬಳ

April 15, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಂಬಳ

ಬೇಕಪ್ಪ ಸಾಮಾನುಗೊ:

 • ಮಾವಿನಹಣ್ಣು (ಕಾಟು ಮಾವಿನ ಹಣ್ಣು ಒಳ್ಳೆದು)
 • ರುಚಿಗೆ ತಕ್ಕಸ್ಟು ಉಪ್ಪು

ಮಾಡುವ ಕ್ರಮ:

ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ.

ಮಾವಿನ ಹಣ್ಣಿನ ಚೋಲಿಗೆ ರೆಜ್ಜ ನೀರು ಹಾಕಿ ಪುರುಂಚಿ, ಎಸರಿನ ಗೊರಟು ಇಪ್ಪ ಪಾತ್ರಕ್ಕೆ ಹಾಕಿ. ಗೊರಟನ್ನೂ ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ, ಉಪ್ಪು ಹಾಕಿ ತೊಳಸಿ.
ಮಾವಿನ ಹಣ್ಣಿನ ಗಟ್ಟಿ ಇದ್ದರೆ ಇದರ ಮಿಕ್ಸಿಗೆ ಹಾಕಿ ರೆಜ್ಜ ಹೊತ್ತು ತಿರುಗ್ಸುಲಕ್ಕು.

ಒಂದು ಕೆರುಶಿ/ಹಾಳೆಗೆ ಪ್ಲಾಸ್ಟೀಕು ಶೀಟು ಅಥವಾ ವಸ್ತ್ರದ ತುಂಡಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ.

ಮಾವಿನ ಹಣ್ಣಿನ ಎಸರಿನ ಪ್ಲಾಸ್ಟೀಕು ಶೀಟ್ ಅಥವಾ ವಸ್ತ್ರದ ಮೇಲೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹರಡುಸಿ, ಬೆಶಿಲಿಂಗೆ ಮಡುಗಿ. ಪುನಃ ಮರುದಿನವುದೇ(ಅಥವಾ ದಿನ ಬಿಟ್ಟು ದಿನ) ಹೀಂಗೆ ಮಾವಿನ ಹಣ್ಣಿನ ಎಸರು ಹಿಂಡಿ ಅದರ ಮೇಗಂದ ಎರದು ಬೆಶುಲಿಂಗೆ ಮಡುಗಿ. ಸಾಧಾರಣ 8-10 ಸರ್ತಿ ಮಾವಿನ ಹಣ್ಣಿನ ಎಸರು ಎರದಪ್ಪಗ ಮಾಂಬಳ ಸಾಧಾರಣ ದಪ್ಪ ಬತ್ತು.

ಮತ್ತೆ ಸರಿ ಒಣಗುವನ್ನಾರ(ಎಳಕ್ಕುಲೆ ಬಪ್ಪನ್ನಾರ) ಸಾಧಾರಣ 5-6 ದಿನ, ದಿನಾಗುಳುದೆ ಬೆಶಿಲಿಂಗೆ ಮಡುಗಿ.

ಇದರ ಪ್ಲಾಸ್ಟೀಕು ಶೀಟ್ ಅಥವಾ ವಸ್ತ್ರಂದ ಎಳಕ್ಕುಸಿ, ಕವುಂಚಿ ಮಡುಗಿ, ಪುನಃ ಇನ್ನೊಂದು ಎರಡು ದಿನ ಬೆಶಿಲಿಂಗೆ ಒಣಗುಸಿ.

ಇದರ ಉದ್ದಕೆ ಕೊರದು, ಮಡ್ಸಿ, ಕರಡಿಗೆಲಿ ಹಾಕಿ ತೆಗದು ಮಡುಗಿ. ಇದರ ಹಾಂಗೆ ಬೇಕಾದರು ತಿಂಬಲೆ ಆವುತ್ತು ಅಥವಾ ಗೊಜ್ಜಿ ಮಾಡಿಯುದೆ ತಿಂಬಲೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಕಾಂತಣ್ಣ

  ಎನಕೆ ಅತಿ ಪ್ರೀತಿಯ ಬಾಯ್ಬೇಡಿ ಇದು, ಊರಕಡೆ ಈಗೀಗ ಕಾಟುಹಣ್ಣು ಸಿಗ್ತೆ ಇಲ್ಲೆ, ಅಮ್ಮಂಗೂ ವಯಸ್ಸಾತು, ಮಹಿಳೋದಯದ ಐಟಂ ಭಾಳ ತುಟ್ಟಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಪ್ರಕಾಶಪ್ಪಚ್ಚಿಅನು ಉಡುಪುಮೂಲೆಸಂಪಾದಕ°ಶೇಡಿಗುಮ್ಮೆ ಪುಳ್ಳಿದೊಡ್ಡಭಾವಪಟಿಕಲ್ಲಪ್ಪಚ್ಚಿಪೆಂಗಣ್ಣ°ಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣವೇಣೂರಣ್ಣದೊಡ್ಡಮಾವ°ಜಯಶ್ರೀ ನೀರಮೂಲೆಯೇನಂಕೂಡ್ಳು ಅಣ್ಣಗೋಪಾಲಣ್ಣಪುತ್ತೂರುಬಾವಶುದ್ದಿಕ್ಕಾರ°ಪುತ್ತೂರಿನ ಪುಟ್ಟಕ್ಕಕೊಳಚ್ಚಿಪ್ಪು ಬಾವಚೆನ್ನೈ ಬಾವ°ದೀಪಿಕಾಅನುಶ್ರೀ ಬಂಡಾಡಿಪುಟ್ಟಬಾವ°ನೀರ್ಕಜೆ ಮಹೇಶಬೊಳುಂಬು ಮಾವ°ಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ