ಮಾಂಬಳ ಗೊಜ್ಜಿ

June 24, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಂಬಳ ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 2-3 ಇಂಚು ಉದ್ದದ ಮಾಂಬಳ
  • 3-4 ಹಸಿಮೆಣಸು
  • 1-2 ದೊಡ್ಡ ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 4-5 ಬೇನ್ಸೊಪ್ಪು
  • 3-4 ಬೆಳ್ಳುಳ್ಳಿ ಎಸಳು (ಬೇಕಾದರೆ ಮಾತ್ರ)
  • ಚಿಟಿಕೆ ಇಂಗು
  • 1-2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಮಾಂಬಳವ ತುಂಡು ಮಾಡಿ, 2-3 ಕುಡ್ತೆ ಬೆಶಿ ನೀರಿಲ್ಲಿ ಒಂದು 30 ನಿಮಿಷ ಬೊದುಳುಲೆ ಹಾಕಿ.

ಇದರ ಮಿಕ್ಸಿಗೆ ಹಾಕಿ ಒಂದರಿ ತಿರುಗ್ಸಿ ಅಥವಾ ಕೈಲಿ ಲಾಯಿಕಲಿ ಪುರುಂಚಿ. ಇದಕ್ಕೆ ಸೀವಿಂಗೆ ಬೇಕಪ್ಪಸ್ಟು ಬೆಲ್ಲವ ಕೆರಸಿ ಹಾಕಿ. ಹಸಿಮೆಣಸಿನ ಲಾಯಿಕಲಿ ನುರಿರಿ. ಉಪ್ಪು, ನೀರು ಬೇಕಪ್ಪಸ್ಟು ಹಾಕಿ ತೊಳಸಿ.

ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಹಾಕಿ, ಎಣ್ಣೆದೆ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.
ಇದಕ್ಕೆ ಸಾಸಮೆ ಹಾಕಿ ಹೊರಿರಿ. ಅದು ಹೊಟ್ಟಿ ಅಪ್ಪಗ, ಅದಕ್ಕೆ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಚೆನ್ನೈ ಬಾವ°ವಸಂತರಾಜ್ ಹಳೆಮನೆvreddhiಅನು ಉಡುಪುಮೂಲೆಅನಿತಾ ನರೇಶ್, ಮಂಚಿಪೆರ್ಲದಣ್ಣವೇಣೂರಣ್ಣಜಯಗೌರಿ ಅಕ್ಕ°ಶೇಡಿಗುಮ್ಮೆ ಪುಳ್ಳಿನೆಗೆಗಾರ°ಬೊಳುಂಬು ಮಾವ°ಸರ್ಪಮಲೆ ಮಾವ°ಶ್ಯಾಮಣ್ಣಸುವರ್ಣಿನೀ ಕೊಣಲೆಎರುಂಬು ಅಪ್ಪಚ್ಚಿಅನುಶ್ರೀ ಬಂಡಾಡಿವಿನಯ ಶಂಕರ, ಚೆಕ್ಕೆಮನೆಚುಬ್ಬಣ್ಣಸುಭಗಡಾಮಹೇಶಣ್ಣವೆಂಕಟ್ ಕೋಟೂರುಶ್ರೀಅಕ್ಕ°ಹಳೆಮನೆ ಅಣ್ಣಜಯಶ್ರೀ ನೀರಮೂಲೆಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ