ಮಾವಿನ ಹಣ್ಣಿನ ಚಂಡ್ರುಪುಳಿ

May 7, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾವಿನ ಹಣ್ಣಿನ ಚಂಡ್ರುಪುಳಿ

ಬೇಕಪ್ಪ ಸಾಮಾನುಗೊ:

 • 12-15 ಕಾಟು ಮಾವಿನ ಹಣ್ಣು
 • 2.5-3.5 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
 • ರುಚಿಗೆ ತಕ್ಕಸ್ಟು ಉಪ್ಪು
 • 1-2 ಹಸಿಮೆಣಸು
 • ಚಿಟಿಕೆ ಅರುಶಿನ ಹೊಡಿ
 • 1 ಚಮ್ಚೆ ಸಾಸಮೆ
 • 1-2 ಮುರುದ ಒಣಕ್ಕು ಮೆಣಸು
 • ಚಿಟಿಕೆ ಇಂಗು (ಬೇಕಾದರೆ ಮಾತ್ರ)
 • 7-8 ಬೇನ್ಸೊಪ್ಪು
 • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ.

1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ.
ಗೊರಟನ್ನೂ ಹದಕೆ ಪುರುಂಚಿ,ಅದಕ್ಕೆ ಅರುಶಿನ ಹೊಡಿ, ಬೆಲ್ಲ, ಉಪ್ಪು, 3-4 ಕುಡ್ತೆ ನೀರು ಹಾಕಿ ಬೇಶಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ ಇಂಗು ಹಾಕಿ ರೆಜ್ಜ ಹೊತ್ತು ಮಡುಗಿ, ಮತ್ತೆ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನ, ಮೊಸರು/ಮಜ್ಜಿಗೆ ಒಟ್ಟಿಂಗೆ ಹಾಕಿ ತಿಂಬಲೆ/ಚೀಪುಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶೈಲಜಾ ಕೇಕಣಾಜೆ

  ವಾವ್………ಅನು ಮಾಡ್ತಾ ಇರ್ತೆ…

  [Reply]

  VA:F [1.9.22_1171]
  Rating: 0 (from 0 votes)
 2. ಇಂದಿರತ್ತೆ
  ಇಂದಿರತ್ತೆ

  ಹೀಂಗಿಪ್ಪ ಚಂಡ್ರುಪುಳಿ ಇದ್ದರೆ ಎಷ್ಟೊತ್ತಾದರೂ ಊಟವೇ ಮುಗಿತ್ತಿಲ್ಲೆ. ಗೊರಟು ಚೀಪಿಗೊಂಡು ಗೊಜ್ಜಿಯ ರುಚಿಯ ಆಸ್ವಾದಿಸಿಗೊಂಡು ಇಪ್ಪಾಗ ಎದ್ದು ಕೈತೊಳವಲೆ ಮನಸ್ಸೇ ಬತ್ತಿಲ್ಲೆ. ಚಿತ್ರ ನೋಡಿಯಪ್ಪಾಗಳೇ ಬಾಯಿಲಿ ನೀರು ಬಕ್ಕನ್ನೆ !

  [Reply]

  VA:F [1.9.22_1171]
  Rating: 0 (from 0 votes)
 3. ಸಂದೇಶ

  ಇದಕ್ಕೇ ಹೇಳುದೋ ‘ಮಾವಿನಹಣ್ಣು ಸಾಸಮೆ’ ಹೇಳಿ?

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಸಾಸಮೆಗೆ ಕಾಯರಪ್ಪು( ಸಾಸಮೆ,ಕಾಯಿ,ಮೆಣಸು)ಹಾಯೆಕ್ಕು,ಕೊದುಶುಲೆ ಇಲ್ಲೆ…. ಇದು ಗೊಜ್ಜಿ\ಸಾರಿನ ಹಾಂಗೆ….

  ಹಸಿಮೆಣಸು ಇಲ್ಲದ್ರೆ\ ಆಗದ್ರೆ ಗೆಣಮೆಣಸಿನ ಹೊಡಿ ಹಾಕಿರೂ ಲಾಯ್ಕಾವುತ್ತಲ್ಲದಾ ಅಕ್ಕಾ…
  ಸಣ್ಣಾದಿಪ್ಪಗ ಗೊರಟು ಚೀಪುವಗ ಕೈಸೊಂಟುವರೆಗೂ ಅರಿಶಿಗೊಂಡು ತಿಂಬದು… ತುಂಬಾ ಸವಿ ಸವಿ ,ನೆನಪು….

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಓಹ್!!!! ಶೀರ್ಷಿಕೆ ಓದಿಯಪ್ಪಗಳೇ ಬಾಯಿಲಿ ನೀರು ಬ೦ತು.. ಈಗ ಇದರ ಉಣ್ಣದ್ದೆ ವರ್ಷಗಟ್ಳೆ ಆತು.. :-(
  ಇದುದೆ ಕೊಯಿಶಕ್ಕಿ ಅಶನವುದೆ ಇದ್ದರೆ ಬೇರೆ ಎ೦ತ ಬೇಕು!!??

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  (ಇದುದೆ ಕೊಯಿಶಕ್ಕಿ ಅಶನವುದೆ ಇದ್ದರೆ ಬೇರೆ ಎ೦ತ ಬೇಕು!!??)

  ಬಟ್ಲು ಬೇಕಲ್ಲದ? ಉಂಬಲೆ….

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಬಾಳೆ ಎಲೆ ಆದರೂ ಆವುತ್ತು ಶಾಮಣ್ಣಾ… 😉

  [Reply]

  VA:F [1.9.22_1171]
  Rating: +2 (from 2 votes)
 6. ಅನುಶ್ರೀ ಬಂಡಾಡಿ

  ಆಹಾ! ಫಟ ನೋಡುವಾಗ ಜೋರು ಆಶೆ ಆವ್ತಾ ಇದ್ದು ವೇಣಿಯಕ್ಕ. ಎಂಗಳ ಊರಿನ ಹೊಡೆಲಿ ಕಾಟು ಮಾವಿನಣ್ಣು ಕಮ್ಮಿ ಆಯಿದೀಗ. :(

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ನೆಗೆಗಾರ°ಅಡ್ಕತ್ತಿಮಾರುಮಾವ°ಚೂರಿಬೈಲು ದೀಪಕ್ಕಶಾಂತತ್ತೆಪೆರ್ಲದಣ್ಣಡಾಮಹೇಶಣ್ಣಎರುಂಬು ಅಪ್ಪಚ್ಚಿಡಾಗುಟ್ರಕ್ಕ°ವಿಜಯತ್ತೆವಿನಯ ಶಂಕರ, ಚೆಕ್ಕೆಮನೆಉಡುಪುಮೂಲೆ ಅಪ್ಪಚ್ಚಿವೆಂಕಟ್ ಕೋಟೂರುಶುದ್ದಿಕ್ಕಾರ°ಅನುಶ್ರೀ ಬಂಡಾಡಿಪ್ರಕಾಶಪ್ಪಚ್ಚಿಯೇನಂಕೂಡ್ಳು ಅಣ್ಣಪಟಿಕಲ್ಲಪ್ಪಚ್ಚಿಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಸಂಪಾದಕ°vreddhiಶ್ಯಾಮಣ್ಣಜಯಗೌರಿ ಅಕ್ಕ°ಬೊಳುಂಬು ಮಾವ°ದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ