Oppanna.com

ಮಾವಿನ ಹಣ್ಣಿನ ಚಂಡ್ರುಪುಳಿ

ಬರದೋರು :   ವೇಣಿಯಕ್ಕ°    on   07/05/2013    8 ಒಪ್ಪಂಗೊ

ವೇಣಿಯಕ್ಕ°

ಮಾವಿನ ಹಣ್ಣಿನ ಚಂಡ್ರುಪುಳಿ

ಬೇಕಪ್ಪ ಸಾಮಾನುಗೊ:

  • 12-15 ಕಾಟು ಮಾವಿನ ಹಣ್ಣು
  • 2.5-3.5 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಹಸಿಮೆಣಸು
  • ಚಿಟಿಕೆ ಅರುಶಿನ ಹೊಡಿ
  • 1 ಚಮ್ಚೆ ಸಾಸಮೆ
  • 1-2 ಮುರುದ ಒಣಕ್ಕು ಮೆಣಸು
  • ಚಿಟಿಕೆ ಇಂಗು (ಬೇಕಾದರೆ ಮಾತ್ರ)
  • 7-8 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ.

1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ.
ಗೊರಟನ್ನೂ ಹದಕೆ ಪುರುಂಚಿ,ಅದಕ್ಕೆ ಅರುಶಿನ ಹೊಡಿ, ಬೆಲ್ಲ, ಉಪ್ಪು, 3-4 ಕುಡ್ತೆ ನೀರು ಹಾಕಿ ಬೇಶಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ ಇಂಗು ಹಾಕಿ ರೆಜ್ಜ ಹೊತ್ತು ಮಡುಗಿ, ಮತ್ತೆ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನ, ಮೊಸರು/ಮಜ್ಜಿಗೆ ಒಟ್ಟಿಂಗೆ ಹಾಕಿ ತಿಂಬಲೆ/ಚೀಪುಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

8 thoughts on “ಮಾವಿನ ಹಣ್ಣಿನ ಚಂಡ್ರುಪುಳಿ

  1. ಆಹಾ! ಫಟ ನೋಡುವಾಗ ಜೋರು ಆಶೆ ಆವ್ತಾ ಇದ್ದು ವೇಣಿಯಕ್ಕ. ಎಂಗಳ ಊರಿನ ಹೊಡೆಲಿ ಕಾಟು ಮಾವಿನಣ್ಣು ಕಮ್ಮಿ ಆಯಿದೀಗ. 🙁

  2. ಓಹ್!!!! ಶೀರ್ಷಿಕೆ ಓದಿಯಪ್ಪಗಳೇ ಬಾಯಿಲಿ ನೀರು ಬ೦ತು.. ಈಗ ಇದರ ಉಣ್ಣದ್ದೆ ವರ್ಷಗಟ್ಳೆ ಆತು.. 🙁
    ಇದುದೆ ಕೊಯಿಶಕ್ಕಿ ಅಶನವುದೆ ಇದ್ದರೆ ಬೇರೆ ಎ೦ತ ಬೇಕು!!??

    1. (ಇದುದೆ ಕೊಯಿಶಕ್ಕಿ ಅಶನವುದೆ ಇದ್ದರೆ ಬೇರೆ ಎ೦ತ ಬೇಕು!!??)

      ಬಟ್ಲು ಬೇಕಲ್ಲದ? ಉಂಬಲೆ….

      1. ಬಾಳೆ ಎಲೆ ಆದರೂ ಆವುತ್ತು ಶಾಮಣ್ಣಾ… 😉

  3. ಸಾಸಮೆಗೆ ಕಾಯರಪ್ಪು( ಸಾಸಮೆ,ಕಾಯಿ,ಮೆಣಸು)ಹಾಯೆಕ್ಕು,ಕೊದುಶುಲೆ ಇಲ್ಲೆ…. ಇದು ಗೊಜ್ಜಿ\ಸಾರಿನ ಹಾಂಗೆ….

    ಹಸಿಮೆಣಸು ಇಲ್ಲದ್ರೆ\ ಆಗದ್ರೆ ಗೆಣಮೆಣಸಿನ ಹೊಡಿ ಹಾಕಿರೂ ಲಾಯ್ಕಾವುತ್ತಲ್ಲದಾ ಅಕ್ಕಾ…
    ಸಣ್ಣಾದಿಪ್ಪಗ ಗೊರಟು ಚೀಪುವಗ ಕೈಸೊಂಟುವರೆಗೂ ಅರಿಶಿಗೊಂಡು ತಿಂಬದು… ತುಂಬಾ ಸವಿ ಸವಿ ,ನೆನಪು….

  4. ಇದಕ್ಕೇ ಹೇಳುದೋ ‘ಮಾವಿನಹಣ್ಣು ಸಾಸಮೆ’ ಹೇಳಿ?

  5. ಹೀಂಗಿಪ್ಪ ಚಂಡ್ರುಪುಳಿ ಇದ್ದರೆ ಎಷ್ಟೊತ್ತಾದರೂ ಊಟವೇ ಮುಗಿತ್ತಿಲ್ಲೆ. ಗೊರಟು ಚೀಪಿಗೊಂಡು ಗೊಜ್ಜಿಯ ರುಚಿಯ ಆಸ್ವಾದಿಸಿಗೊಂಡು ಇಪ್ಪಾಗ ಎದ್ದು ಕೈತೊಳವಲೆ ಮನಸ್ಸೇ ಬತ್ತಿಲ್ಲೆ. ಚಿತ್ರ ನೋಡಿಯಪ್ಪಾಗಳೇ ಬಾಯಿಲಿ ನೀರು ಬಕ್ಕನ್ನೆ !

  6. ವಾವ್………ಅನು ಮಾಡ್ತಾ ಇರ್ತೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×