Oppanna.com

ಮಾವಿನ ಹಣ್ಣಿನ ಹಸಿ ಗೊಜ್ಜಿ

ಬರದೋರು :   ವೇಣಿಯಕ್ಕ°    on   24/04/2012    6 ಒಪ್ಪಂಗೊ

ವೇಣಿಯಕ್ಕ°

ಮಾವಿನ ಹಣ್ಣಿನ ಹಸಿ ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 12-15 ಕಾಟು ಮಾವಿನ ಹಣ್ಣು
  • 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಹಸಿಮೆಣಸು
  • 1 ಚಮ್ಚೆ ಸಾಸಮೆ
  • 1-2 ಮುರುದ ಒಣಕ್ಕು ಮೆಣಸು
  • ಚಿಟಿಕೆ ಇಂಗು (ಬೇಕಾದರೆ ಮಾತ್ರ)
  • 7-8 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:


ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ.

1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ.
ಅದಕ್ಕೆ ಬೆಲ್ಲವ ಕೆರಸಿ ಹಾಕಿ. ಉಪ್ಪುದೆ ಹಾಕಿ. ಅದರ ಲಾಯಿಕಲಿ ಪುರುಂಚಿ. ಹಸಿಮೆಣಸಿನ ನುರಿರಿ.

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಇಂಗು ಹಾಕಿ ರೆಜ್ಜ ಹೊತ್ತು ಮಡುಗಿ, ಮತ್ತೆ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನ, ಮೊಸರು/ಮಜ್ಜಿಗೆ ಒಟ್ಟಿಂಗೆ ಹಾಕಿ ಚೀಪುಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

6 thoughts on “ಮಾವಿನ ಹಣ್ಣಿನ ಹಸಿ ಗೊಜ್ಜಿ

  1. ನಿನ್ನೆ ಮಾಡಿ ರುಚಿ ನೋಡಿದೆ, ಲಾಯಕಾಯಿದು.

  2. ಯೇ ಅಕ್ಕಾ
    ಮೊನ್ನೆ ಆಯಿತ್ಯವಾರ ಆನುದೇ ಬೋಚಬಾವನುದೇ ಯೇನಂಕೋಡ್ಲು ತೋಟಕ್ಕೆ ಹೋಗಿ ಜೀರಿಗೆ ಮಾವಿನಣ್ಣು ತಂದು ನಿಂಗೊ ಹೇಳಿದಾಂಗೆ ಮಾಡಿದೆಯೋ..

    ಉಂಡಪ್ಪಗ ಬೋಚಬಾವನ ದೊಡ್ಡ ಬಟ್ಲು ತುಂಬಾ ಗೊರಟು.. ಹು ಹು..

    ಇದಾ ಆನು ಮತ್ತೆ ಯೇ ಬೋಚಾ ಹೇಳಿಯಪ್ಪಗ ಅವಾ° ಓ° ಹೇಳಿಯೊಂಡು ಬಕ್ಕು.. ಅಂಬಗ ಗೊರಟು ಇಡ್ಕಿ ಓಡಿ ಹೆರ್ಕಿಯೊಂಡು ಬಾ ಹೇಳುದು ಅವಾ° ಓಡುಲೆ… ಹ ಹ.. ಅಂತೂ ತಿಂಡದ್ದು ಕರಗಿದ್ದು..

    ಅದಪ್ಪು ನಿಂಗಳಾಲ್ಲಿಗೆ ಯೇವಗ ಬರೆಕ್ಕು..

    1. ಹು..!
      ಏ ಪೆ೦ಗಣ್ಣ…. ಈ ನೆಗೆ ಗಾರನ ಸುದ್ದಿ ಇದ್ದೊ ನೋಡು..
      ಓ.. ನೆಗೆಗಾರ – ಇದ್ಯೊ???
      ಇದಾ – ನೀನು ” ಓ ” ಕೊಟ್ರೆ ಆನು ಗರಟು ಇಡುಕುತ್ತಿಲ್ಲೆ ಆತೋ? 😉

  3. ವಾವ್… ಸೂಪರ್!!
    ಆನು ಮೊನ್ನೆ ಮೊನ್ನೆ ಮನೆಲಿ ಇದರ ಉ೦ಡದಷ್ಟೇ… ಇನ್ನಾಣ ಸರ್ತಿ ರಜೆ ಸಿಕ್ಕಿ ಊರಿ೦ಗೆ ಬಪ್ಪಲ್ಲಿ ವರೇ೦ಗೆ ಅ೦ಬಗ೦ಬಗ ಮೆಲುಕು ಹಾಕಿ ಚಪ್ಪರಿಸಲೆ ಯೋಗ್ಯ ನೆನಪಿನ ಎದ್ದೇಳಿಸಿ ಬಾಯಿಲಿ ನೀರು ಬರಿಸಿದ ಲೇಖನಕ್ಕೆ ಒಪ್ಪ೦ಗೊ.

  4. ಊರಿಂಗೆ ಹೋಗಿ ಕಾಟು ಮಾವಿನ ಹಣ್ಣು ತೆಕ್ಕೊಂಡು ಬಂದು ಹಸಿ ಗೊಜ್ಜಿ ಮಾಡಿ ಉಂಡು ಬಾಯಿ ಚೀಪೆ ಹೊಯೇಕ್ಕಾರೆ ಮೊದಲು ಬೈಲಿಲ್ಲಿ ‘ಮಾವಿನ ಹಣ್ಣಿನ ಹಸಿ ಗೊಜ್ಜಿ’ ಕಂಡು ಖುಷಿ ಆತು… 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×