ಮಾವಿನ ಹಣ್ಣು ರಸಾಯನ

May 21, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾವಿನ ಹಣ್ಣು ರಸಾಯನ

ಬೇಕಪ್ಪ ಸಾಮಾನುಗೊ:

 • 2 ದೊಡ್ಡ ಮಾವಿನ ಹಣ್ಣು
 • 1 ಕಪ್(ಕುಡ್ತೆ) ಬೆಲ್ಲ
 • 1/2 ಕಪ್(ಕುಡ್ತೆ) ಸಕ್ಕರೆ
 • 2 ಕಪ್(ಕುಡ್ತೆ) ಕಾಯಿ ತುರಿ ಅಥವಾ 1.5 ಕಪ್(ಕುಡ್ತೆ) ಕಾಯಿ ಹಾಲು
 • 2 ಚಮ್ಚೆ ಎಳ್ಳು (ಬೇಕಾದರೆ ಮಾತ್ರ)
 • 2-3 ಚಮ್ಚೆ ಸಣ್ಣಕೆ ತುರುದ ಕಾಯಿ ತುರಿ (ಬೇಕಾದರೆ ಮಾತ್ರ)
 • ಚಿಟಿಕೆ ಉಪ್ಪು
 • 2 ಏಲಕ್ಕಿ

ಮಾಡುವ ಕ್ರಮ:

ಮಾವಿನ ಹಣ್ಣಿನ ಚೋಲಿಯ ತೆಗದು, ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ.

ಇದಕ್ಕೆ ಬೆಲ್ಲ, ಸಕ್ಕರೆ, ಚಿಟಿಕೆ ಉಪ್ಪು ಹಾಕಿ ತೊಳಸಿ 20-30 ನಿಮಿಷ ಮಡುಗಿ.

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಕಾಯಿ ಹಾಲಿನ ಮಾವಿನ ಹಣ್ಣು ಕೊಚ್ಚಿ ಮಡುಗಿದ ಪಾತ್ರಕ್ಕೆ ಹಾಕಿ ತೊಳಸಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ.

ಫ್ರಿಜ್ ಲ್ಲಿ ಮಡುಗಿ ತಣ್ಣಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಸೂಚನೆ (ಬೇಕಾದರೆ ಮಾತ್ರ)ಃ
ಎಳ್ಳು ಕಾಯಿ ಇಷ್ಟ ಇಪ್ಪವಕ್ಕೆ, ಒಂದು ಬಾಣಲೆಲಿ 2 ಚಮ್ಚೆ ಎಳ್ಳು ಹಾಕಿ ಪರಿಮ್ಮಳ ಬಪ್ಪನ್ನಾರ/ಹೊಟ್ಟುವನ್ನಾರ ಹದ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ 2-3 ಚಮ್ಚೆ ಸಣ್ಣಕೆ ತುರುದ ಕಾಯಿ ತುರಿ ಹಾಕಿ ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ. ಇದರ ರಸಾಯನಕ್ಕೆ ಹಾಕಿ ತೊಳಸಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಪೆಂಗಣ್ಣ°

  ಇದಾ ಬೋಚನೂ ಪೆಂಗಣ್ಣನೂ ಅತ್ತೆ ಹೆರಟಿದವು..
  ನಾಳಂಗೆ ಮದ್ಯಾಹ್ನಕ್ಕೆ ತಲ್ಪುಗು.. ನೆಗೆಮಾಣಿ ಘಟ್ಟ ಹತ್ತಿದವ ಬರೇಕಟ್ಟೇ ..

  ಎರಡು ತಪಲೆ ರಸಾಯನ ಇರಳಿ..

  [Reply]

  ಬೋಸ ಬಾವ

  ಬೋಸ ಬಾವ Reply:

  ಏ ಭಾವ…
  ಎರಡು ಸಾಕೊ? ಇದಾ..
  ಒ೦ದು ತಪಲೆ ರಸಾಯನ ಇಡೀ ಎನಗೆ ಬೇಕು…! ಮತ್ತೊ೦ದು ನಿಗೆ…
  ಅ೦ಬಗ ನೆಗೆಮಾಣಿಗೆ ಎ೦ತರ??

  ತಪಲೆ ಮಾ೦ತ್ರವೋ..!! 😀

  [Reply]

  VN:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಅಕ್ಷರ°ಶೇಡಿಗುಮ್ಮೆ ಪುಳ್ಳಿನೀರ್ಕಜೆ ಮಹೇಶಪುತ್ತೂರಿನ ಪುಟ್ಟಕ್ಕಮಾಲಕ್ಕ°ಡೈಮಂಡು ಭಾವಬೊಳುಂಬು ಮಾವ°ಪೆರ್ಲದಣ್ಣಸುಭಗಮಾಷ್ಟ್ರುಮಾವ°ನೆಗೆಗಾರ°ಕಜೆವಸಂತ°ದೇವಸ್ಯ ಮಾಣಿದೊಡ್ಮನೆ ಭಾವದೀಪಿಕಾಚೆನ್ನೈ ಬಾವ°ಎರುಂಬು ಅಪ್ಪಚ್ಚಿಅಕ್ಷರದಣ್ಣವಿಜಯತ್ತೆಪುಟ್ಟಬಾವ°ಜಯಶ್ರೀ ನೀರಮೂಲೆಪುತ್ತೂರುಬಾವಕಾವಿನಮೂಲೆ ಮಾಣಿಜಯಗೌರಿ ಅಕ್ಕ°ದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ