ಮಾವಿನಕಾಯಿ ಚಿತ್ರಾನ್ನ

June 4, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾವಿನಕಾಯಿ ಚಿತ್ರಾನ್ನ

ಬೇಕಪ್ಪ ಸಾಮಾನುಗೊ:

  • 2-3 ಕಪ್(ಕುಡ್ತೆ) ಬೇಶಿದ ಅಶನ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು)
  • 3/4-1 ಕಪ್(ಕುಡ್ತೆ) ತುರುದ ಮಾವಿನಕಾಯಿ
  • 2 -3 ಚಮ್ಚೆ ಕಾಯಿ ತುರಿ
  • 2-3 ಹಸಿಮೆಣಸು
  • 7-8 ಎಳೆ ಕೊತ್ತಂಬರಿ ಸೊಪ್ಪು
  • 8-10 ಬೇನ್ಸೊಪ್ಪು
  • 3 ಚಮ್ಚೆ ನೆಲಕಡ್ಲೆ
  • 2 ಚಮ್ಚೆ ಕಡ್ಲೆ ಬೇಳೆ
  • 1 ಚಮ್ಚೆ ಉದ್ದಿನ ಬೇಳೆ
  • 1 ಚಮ್ಚೆ ಸಾಸಮೆ
  • 1/2 ಚಮ್ಚೆ ಜೀರಿಗೆ
  • 1-2 ಮುರುದ ಒಣಕ್ಕು ಮೆಣಸು
  • 1/2-3/4 ಚಮ್ಚೆ ಅರುಶಿನ ಹೊಡಿ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 2-3 ಚಮ್ಚೆ ಎಣ್ಣೆ

ಮಾಡುವ ಕ್ರಮ:

1 ಕುಡ್ತೆ ಬೆಣ್ತಕ್ಕಿಯ ನೀರಿಲ್ಲಿ ಲಾಯಿಕ ತೊಳದು, ಸಾಧಾರಣ 2 ಕುಡ್ತೆ ನೀರು ಹಾಕಿ, ಕುಕ್ಕರಿಲ್ಲಿ ಬೇಶಿ ಕರೆಲಿ ಮಡುಗಿ.

ಮಾವಿನಕಾಯಿಯ ತೊಟ್ಟು ತೆಗದು(ಕೈಕ್ಕುತ್ತರೆ ಚೋಲಿಯನ್ನೂ ತೆಗದು), ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುರುದು ಮಡುಗಿ.
ಹಸಿಮೆಣಸಿನ ಸಿಗುದು ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ.

ಒಂದು ಬಾಣಲೆಲಿ ನೆಲಕಡ್ಲೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಸಿಗುದ ಹಸಿಮೆಣಸು, ಇಂಗು, ಬೇನ್ಸೊಪ್ಪು, ತುರುದ ಮಾವಿನಕಾಯಿ, ಅರುಶಿನ ಹೊಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಸಾಧಾರಣ 5 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ತೊಳಸಿ.

ಬೇಶಿ ಮಡುಗಿದ ಅಶನವ ಹಾಕಿ ತೊಳಸಿ.

ಇದಕ್ಕೆ ಕಾಯಿ ತುರಿ(ಉಪ್ಪು ಬೇಕಾದರೆ) ಹಾಕಿ ತೊಳಸಿ, 2-3 ನಿಮಿಷ ಲಾಯಿಕ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಲ.ನಾ.ಭಟ್ಟ

    ಅನು ಒಂದರಿ ಚಿತ್ರಾನ್ನ ಮಾಡಿತ್ತು ಓ ಮೊನ್ನೆ. ಭಾರೀ ಲಾಯ್ಕಾಗಿತ್ತು :)

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿಬಂಡಾಡಿ ಅಜ್ಜಿಪವನಜಮಾವಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ಚೆನ್ನೈ ಬಾವ°ರಾಜಣ್ಣಚೂರಿಬೈಲು ದೀಪಕ್ಕಸುವರ್ಣಿನೀ ಕೊಣಲೆಪುಣಚ ಡಾಕ್ಟ್ರುಶುದ್ದಿಕ್ಕಾರ°ಮಾಲಕ್ಕ°ಸರ್ಪಮಲೆ ಮಾವ°ಕಳಾಯಿ ಗೀತತ್ತೆಶ್ರೀಅಕ್ಕ°ಡಾಗುಟ್ರಕ್ಕ°ಜಯಗೌರಿ ಅಕ್ಕ°ವಸಂತರಾಜ್ ಹಳೆಮನೆಒಪ್ಪಕ್ಕನೆಗೆಗಾರ°ಪೆರ್ಲದಣ್ಣಚುಬ್ಬಣ್ಣನೀರ್ಕಜೆ ಮಹೇಶಸುಭಗಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ