Oppanna.com

ಮಾವಿನ ಮೆಡಿ ಉಪ್ಪಿನಕಾಯಿ

ಬರದೋರು :   ವೇಣಿಯಕ್ಕ°    on   13/03/2012    10 ಒಪ್ಪಂಗೊ

ವೇಣಿಯಕ್ಕ°

ಮಾವಿನ ಮೆಡಿ ಉಪ್ಪಿನಕಾಯಿ

ಬೇಕಪ್ಪ ಸಾಮಾನುಗೊ:

  • 500 ಕಾಟು ಮಾವಿನ ಮೆಡಿ
  • 16 ಕಪ್(ಕುಡ್ತೆ) ಕಲ್ಲು ಉಪ್ಪು
  • 12 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು)
  • 4 ಕಪ್(ಕುಡ್ತೆ) ಸಣ್ಣ ಸಾಸಮೆ
  • 5-6 ಒಂದು ಇಂಚು ಗಾತ್ರದ ಒಣಗಿದ ಅರುಶಿನ ಕೊಂಬು

ಮಾಡುವ ಕ್ರಮ:

ಹೊರಡಿ ಮಾಡುವ ಕ್ರಮಃ

ಮೆಣಸಿನ ಲಾಯಿಕಲಿ ನೀರಿಲ್ಲಿ ತೊಳದು, 4-5 ದಿನ ಬೆಶಿಲಿಲ್ಲಿ ಒಣಗ್ಸೆಕ್ಕು.

ಸಾಸಮೆಯನ್ನೂ ಲಾಯಿಕ ತೊಳದು ಅರುಶಿ, 4-5 ದಿನ ಬೆಶಿಲಿಲ್ಲಿ ಒಣಗ್ಸೆಕ್ಕು.

ಮಾವಿನ ಮೆಡಿಲಿ ಎದ್ದ ಉಪ್ಪು ನೀರು ಅಥವಾ ಉಪ್ಪುದೆ ನೀರುದೆ ಒಂದು ಪಾತ್ರಲ್ಲಿ ಹಾಕಿ, ಲಾಯಿಕಲಿ ಕೊದುಶಿ ತಣಿವಲೆ ಮಡುಗಿ.
ಮೆಣಸು, ಸಾಸಮೆ, ಅರುಶಿನವ ಗ್ರೈಂಡರ್ ಅಥವಾ ಮಿಕ್ಸಿಲಿ ಹಾಕಿ, ಬೇಕಾದಸ್ಟು ಕೊದುಶಿ ತಣುಶಿದ ಉಪ್ಪು ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪು ಕಡೆರಿ.
ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 15 ಕುಡ್ತೆ ಹೊರಡಿ ಆವುತ್ತು.

ಉಪ್ಪಿನಕಾಯಿ ಮಾಡುವ ಕ್ರಮಃ


ಮಾವಿನ ಮೆಡಿಯ ಒಂದು ಒಣಕ್ಕು ವಸ್ತ್ರಲ್ಲಿ ಲಾಯಿಕ ಉದ್ದಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೊಟ್ಟಿಂದ ಮುರುದು ಮಡುಗಿ.

ಇದರಲ್ಲಿ ಸಾಧಾರಣ 50 ಮೆಡಿಯ ತೆಗದು ಒಂದು ಭರಣಿ ಅಥವಾ ಗ್ಲಾಸು/ಪ್ಲಾಸ್ಟೀಕು ಕರಡಿಗೆಲಿ ಹಾಕಿ(ತೊಳದು ಒಣಗ್ಸಿದ ಭರಣಿ/ಕರಡಿಗೆ), ಅದರ ಮೇಗೆ ಸಾಧಾರಣ 1.5 ಕುಡ್ತೆ ಅಪ್ಪಸ್ಟು ಉಪ್ಪು ಬಿಕ್ಕಿ. ಹೀಂಗೆ ಒಳುದ ಮಾವಿನ ಮೆಡಿಯನ್ನೂ, ಉಪ್ಪನ್ನೂ ಭರಣಿ ತುಂಬುವನ್ನಾರ ಹಾಕಿ.

ಇದರ ಮೇಗೆ ತೊಳದು ಒಣಗ್ಸಿ ಮಡುಗಿದ 2-3 ಭಾರದ ಕಲ್ಲಿನ ತುಂಡಿನ(ಕರ್ಗಲ್ಲು) ಮಡುಗಿ, ಭರಣಿಯ ಮುಚ್ಚಲು ಮುಚ್ಚಿ ಮಡುಗಿ. ಇದರ ಸಾಧಾರಣ 8-10 ಮಡುಗೆಕ್ಕು.
ಪ್ರತಿ ದಿನ ಲಾಯಿಕಲಿ ಒಂದರಿ ಕೈ ಹಾಕಿ ತೊಳಸೆಕ್ಕು.
ಮಾವಿನ ಮೆಡಿಯ ಉಪ್ಪು ನೀರಿಂದ ತೆಗದು ಒಂದು ಹಾಳೆ/ಪಾತ್ರಲ್ಲಿ ತೆಗದು ಸಾಧಾರಣ 6-7 ಘಂಟೆ ಒಂದು ಕರೆಲಿ ಮಡುಗಿ.

ಒಂದು ಪಾತ್ರಲ್ಲಿ, ಕಡದ ಹೊರಡಿಯನ್ನೂ, ಮಾವಿನ ಮೆಡಿಯನ್ನೂ ಹಾಕಿ ತೊಳಸಿ. (ಹೊರಡಿ ಘಟ್ಟಿ ಇದ್ದರೆ, ರೆಜ್ಜ ಕೊದುಶಿ ತಣುಶಿದ ಉಪ್ಪು ನೀರು ಹಾಕಿ ತೊಳಸಿ.)
ಇದರ ಭರಣಿ ಅಥವಾ ಗ್ಲಾಸು/ಪ್ಲಾಸ್ಟೀಕು ಕರಡಿಗೆಲಿ ಹಾಕಿ, ಮೇಗಂದ ರೆಜ್ಜ ಹೊರಡಿದೆ ಉಪ್ಪುದೆ ಹಾಕಿ, ಒಂದು ವಸ್ತ್ರ ಮುಚ್ಚಿ, ಮುಚ್ಚಲಿನ ಘಟ್ಟಿಗೆ ಹಾಕಿ ತೆಗದು ಮಡುಗಿ.
ಇದರ ಸಾಧಾರಣ 1-2 ತಿಂಗಳು ಕಳುದ ಹಾಂಗೆ ಉಪಯೋಗ್ಸುಲೆ ಸುರು ಮಾಡ್ಲೆ ಅಕ್ಕು. 4-5 ವರ್ಷ ಆದರೂ ಹಾಳಾವುತ್ತಿಲ್ಲೆ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಸೂಚನೆಃ ಉಪ್ಪಿನಕಾಯಿ ಮಾಡುವಗ ಚೆಂಡಿ ಕೈ/ ಚೆಂಡಿ ಪಾತ್ರ ಉಪಯೋಗ್ಸುಲೆ, ನೀರು ಮುಟ್ಟುಸುಲೆ ಆಗ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

10 thoughts on “ಮಾವಿನ ಮೆಡಿ ಉಪ್ಪಿನಕಾಯಿ

  1. ಪಾಕಶಾಸ್ತ್ರ ಪ್ರವೀಣೆ ವೇಣಿಅಕ್ಕನ ಈ ವಾರದ ಚೀಪೆ ಶುದ್ದಿ ಎಂತರಪ್ಪಾ ಹೇದು ಕಾದಿತ್ತಿದ್ದೆ.
    ನೋಡಿರೆ ಕೈಬಾಯಿ ಹೊಗವ ಖಾರದ ಉಪ್ಪಿನ ಕಾಯಿ ಶುದ್ದಿ. 😉

    ಆಗಲಿ, ಶುದ್ದಿ ಯೇವತ್ರಾಣಂತೆ ಚೆಂದ ಆಯಿದು.
    ಮಾಷ್ಟ್ರುಮನೆ ಅತ್ತೆ ಉಪ್ಪಿನಕಾಯಿ ಹಾಕುತ್ತವಾದರೂ – ಹೀಂಗಿರ್ಸ ದೃಶ್ಯಂಗೊ ಕಾಂಬಲೆ ಸಿಕ್ಕ ನವಗೆ.
    ಎಂತಕೆ?
    ಉಪ್ಪಿನಕಾಯಿ ಹಾಕುತ್ತರೆ ಆ ಕೋಣೆಗೆ ಆರಿಂಗೂ ಪ್ರವೇಶ ಇರ ಇದಾ! 😉

    ಬೇಕು ಬೇಕಾದಲ್ಲಿ ಬೇಕದ ನಮುನೆಯ ಪಟಂಗಳ ಹಾಕಿ, ಅದಕ್ಕೆ ಬೇಕಾದ ಅಡಿಬರಹಂಗಳ ಕೊಟ್ಟು –
    ಇನ್ನು ಆರಿಂಗೆ ಕ್ರಮಂಗೊ ತಪ್ಪಲಿಲ್ಲೆ ಇದಾ.

    ಚೆಂದದ ಶುದ್ದಿಗೆ ವಂದನೆಗೊ. 🙂
    ಇನ್ನಾಣ ವಾರ…?

  2. ಈ ವರ್ಷ ಮೆಡಿ ಸಿಕ್ಕುಲೆ ಕಷ್ಟ ಇದ್ದು 🙁

    1. ಹಾಂಗೆಲ್ಲ ನೀರು ಬಪ್ಪಲೆ ಇಲ್ಲೆ…. ನೀರು ಮುಟ್ಸುಲಾಗ ಹೇಳಿ ವೇಣಿ ಅಕ್ಕ ಹೇಳಿದ್ದು ಗೊಂತಾಯಿದಿಲ್ಲೆಯ?

  3. ಹಾ ಹಾ ಹಾ..!!
    ಒಳ್ಳೆ ಕಾರ-ಕಾರ ಸೊನೆ ಇಪ್ಪ ಮೆಡಿಯೋ ಅಕ್ಕಾ??
    ಎನಗೆ ಒ೦ದು ಭರಣಿ.. !!!

  4. ಹೋ .. ಹು! ಇದನ್ನೇ ಕಾದುಗೊಂಡಿದ್ದದು. ಲಾಯಕ ಆತುದೇ ಸಕಾಲಿಕವುದೇ.

  5. ಶುರೂ ನೋಡಿ ಓದಿ ಒಪ್ಪ ಕೊಟ್ಟವಕ್ಕೆ ಉಪ್ಪಿನ ಕಾಯಿ ಹೇಳಿದ್ದವ್ದ ಗುರಿಕ್ಕಾರ್ರು.
    ಹಾಂಗಾಗಿ ಎನಗೆ ಕೊಟ್ಟಿಕ್ಕಿ ಅಕ್ಕ. ಭರಣಿ ಕಳುಗುತ್ತೆ.
    ಹೇಳಿಕೊಟ್ಟದು ಪಷ್ಟಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×