Oppanna.com

ಮೇಲಾರ

ಬರದೋರು :   ವೇಣಿಯಕ್ಕ°    on   31/01/2012    9 ಒಪ್ಪಂಗೊ

ವೇಣಿಯಕ್ಕ°

ಮೇಲಾರ

ಬೇಕಪ್ಪ ಸಾಮಾನುಗೊ:

  • 1 ಸಾಧಾರಣ ಗಾತ್ರದ ಕುಂಬಳಕಾಯಿ
    (ಅಥವಾ ಅಳಸಂಡೆ, ಬೀನ್ಸ್, ದೀಗುಜ್ಜೆ,  ಸೌತೆಕಾಯಿ,  ತೊಂಡೆಕಾಯಿ,  ಸೀಮೆ ಬದನೆಕಾಯಿ – ಹೀಂಗಿಪ್ಪ ತರಕಾರಿಗಳ ಉಪಯೋಗಿಸಿ ಕೆಳ ಹೇಳಿದ ರೀತಿಲಿ ಮೇಲಾರ ಮಾಡ್ಲೆ ಆವುತ್ತು.
    (ಕೆಲವು ತರಕಾರಿಗಳ ಮೇಲಾರ ರೆಜ್ಜ ಬೇರೆ ರೀತಿ ಇರ್ತು (ಉದಾ: ಬೆಂಡೆಕಾಯಿ, ಹಾಗಲಕಾಯಿ).
    ಬೇರೆ ರೀತಿ ಮಾಡುವ ಮೇಲಾರದ ವಿಧಾನವ ನಿಧಾನಕ್ಕೆ ಒಂದೊಂದೆ ಹಾಕುತ್ತೆ.)
  • 2 ಕಪ್(ಕುಡ್ತೆ) ಕಾಯಿತುರಿ
  • 2 – 3 ಹಸಿಮೆಣಸು
  • 3/4 – 1 ಕಪ್(ಕುಡ್ತೆ) ಮಜ್ಜಿಗೆ
  • ಚಿಟಿಕೆ ಅರುಶಿನ ಹೊಡಿ (ಬೇಕಾದರೆ ಮಾತ್ರ)
  • 1/4 ಚಮ್ಚೆ ಮೆಣಸಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 2 ತುಂಡು ಮಾಡಿದ ಒಣಕ್ಕು ಮೆಣಸು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕುಂಬಳಕಾಯಿಯ ಹೆರಾಣ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡೆಕ್ಕು.
ಒಂದು ಹಸಿಮೆಣಸನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ ಸಿಗುದು ಮಡುಗಿ.(ಬೇಕಾದರೆ ಮಾತ್ರ)

ಒಂದು ಪಾತ್ರಲ್ಲಿ, ಕೊರದ ಕುಂಬಳಕಾಯಿ, ಅರುಶಿನ ಹೊಡಿ, ಮೆಣಸಿನ ಹೊಡಿ, ಸಿಗುದ ಹಸಿಮೆಣಸು, ಉಪ್ಪು, ರೆಜ್ಜ ನೀರು ಹಾಕಿ, ಮುಚ್ಚಲು ಮುಚ್ಚಿ ಲಾಯಿಕಲಿ ಬೇಶಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ. ಅದು ರೆಜ್ಜ ನೊಂಪಪ್ಪಗ ಖಾರಕ್ಕೆ ಬೇಕಪ್ಪಸ್ಟು ಹಸಿಮೆಣಸು ಹಾಕಿ, ಕಾಯಿಯ ನೊಂಪಿಂಗೆ ಕಡೆರಿ.
ಇದರ ಬೇಶಿದ ಬಾಗಕ್ಕೆ ಹಾಕಿ, ಹುಳಿಗೆ ಬೇಕಪ್ಪಸ್ಟು ಮಜ್ಜಿಗೆಯನ್ನೂ ಹಾಕಿ, ತೊಳಸಿ, ಕೊದುಶೆಕ್ಕು.
(ಉಪ್ಪು, ನೀರು ಬೇಕಾದರೆ ಹಾಕಿ.)

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು.
ಅದು ಹೊಟ್ಟಿ ಅಪ್ಪಗ, ಒಗ್ಗರಣೆಯ ಮೇಲಾರಕ್ಕೆ ಹಾಕಿ. ಇದು ಅಶನ, ದೋಸೆ, ಕೊಟ್ಟಿಗೆ, ಉಂಡೆ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

9 thoughts on “ಮೇಲಾರ

  1. ಮೇಲಾರ ಹೇದರೇ ಎನಗೆ ಇಷ್ಟ. ಅದರಲ್ಲಿಯೂ ಕುಂಬ್ಳಾಯಿ ಮೇಲಾರ ಹೇದರೆ ಮತ್ತೂ ಇಷ್ಟ.
    ಪಷ್ಟಾಯಿದು.
    ಒಂದ್ಸೌಟು ಅಶನ ಹೆಚ್ಚೇ ಉಂಡೆ ಇಂದು.

    ಓಯ್, ಇದರ ಚೋಲಿ ಅಂತೇ ಇಡ್ಕಿಕ್ಕೆಡಿಪ್ಪ.. ಕುಂಬ್ಳೋಡು ತಾಳಿಂಗಾತಿಲ್ಯೋ? ಲಾಯ್ಕಾವ್ತು. ಪೇಟೆಂದ ತಂದ ಆ ವಿಷಹಿಡ್ಕಟೆ ಕೇಬೇಜಿ ಬೀಮ್ಸು ಮಣ್ಣೂ ಮಸಿ ತಿಂತರಿಂದ ಕುಂಬ್ಳೋಡು ಎಷ್ಟಕ್ಕೂ ಅಕ್ಕು. ಒಳ್ಳೆತ ಒದಗುತ್ತುದೆ.

  2. ಉಪ್ಪು ಮತ್ತೆ ಮೆಣಸು ಹಾಕದ್ರೆ ಎ೦ತಕ್ಕು ಚಿಕ್ಕಮ್ಮ? ಮೇಲಾರ “ಸೂಪರ್” ಅಕ್ಕು ಹೇಳಿ ಬೋಚ ಭಾವನ ವಾಣಿ ಕೇಳಿತ್ತು ಎನಗೆ 😉

  3. Veni akka melara super.. Majjige/mosaru enige doora. majjige badlu Huli use madire sari agallada 🙁

  4. ಹವ್ಯಕರ ಅಡಿಗೆಲಿ ಮೆಲಾರಕ್ಕೆ ಮುಖ್ಯ ಸ್ಥಾನ ಇದ್ದು. ಹೆಚ್ಚಿನ ಮನೆಗಳಲ್ಲಿಯೂ ಹೆಚ್ಚಾಗಿ ಮಾಡುವ ಅಡಿಗೆ.
    “ಮೇಲಾರಕ್ಕೆ ಕೊರವದು” ಹೇಳಿಯೇ ಹೇಳಿಕೆ ಇದ್ದು.
    ಮೇಲಾರ ಕೊದುಶುವಾಗ ಸಾರು ಸಾಂಬಾರು ಕೊದಿತ್ತ ಹಾಂಗೆ ಹೆಚ್ಚು ಕೊದಿವಲೆ ಆಗ.
    ಕರೆ ಕರೆಂದ ಕೊದುದಪ್ಪಗ ಇಳುಗೆಕ್ಕು ಹೇಳ್ತು ಕೇಳಿದ್ದೆ.

    1. ಅಪ್ಪಪ್ಪು.. ಅಲ್ಲದ್ರೆ ಮಜ್ಜಿಗೆ ಎಲ್ಲ ಪಿರಿತ್ತು…

  5. ಬೆಳಿ ಮೇಲಾರ , ಅರಶಿನ ಮೇಲಾರ ಹೇಳಿ ಎರಡು ವೆರೈಟಿ ಇದ್ದಲ್ಲದೊ. ಎನಗೆ ಎರಡೂ ಆವ್ತು. ಅರಶಿನ ಹುಡಿ ಮೆಂತೆ ಮೆಣಸಿನ ಹುಡಿ ಹಾಕಿರೇ ರುಚಿ ಜಾಸ್ತಿ. ಎಂತಾರು ಮೇಲಾರಕ್ಕೆ ಹುಳಿ ಮಜ್ಜಿಗೆ ಸರೀ ಬೀಳೆಕ್ಕಪ್ಪ. (ಮೊಸರು ಮಜ್ಜಿಗೆ ಆಗದ್ದವು ಬಾಗ ತೊಳದು ಬೇಶಿ ತುಪ್ಪಲ್ಲಿ ಒಗ್ಗರ್ಸಿ ಹಾಲು ಎರದು ಅಹಾ ಎನ್ನ ಮೇಲಾರ ಎಂತ ರುಚಿ ಹೇಳ್ತವೋ ಏನೋ ಅಲ್ದೋ ಶೇ.ಪು. ಭಾವ!)

    ಕುಂಬಳಕ್ಕಾಯಿ ಮೇಲಾರಕ್ಕೊಂದು ಒಗ್ಗರಣೆ – ‘ಚೆನ್ನೈವಾಣಿ’

  6. ಮೇಲಾರಕ್ಕೆ ಎಣ್ಣೆ ಒಗ್ಗರಣೆಂದ ತುಪ್ಪ ಒಗ್ಗರಣೆ ಇನ್ನಷ್ಟು ರುಚಿ ಕೊಡ್ತು.

  7. ಅಕ್ಕೋ ಮೇಲಾರ ಲಾಯಿಕಾಯಿದು,
    ಮಜ್ಜಿಗೆ ರಜಾ ಹುಳಿ ಇತ್ತು ರಜ್ಜ ಮೊಸರು ಹಾಕಿತ್ತಿದ್ದರೂ ಲಾಯಿಕಕ್ಕೋಳಿ ಕಾಣ್ತು, ಆದರೆಂತ ಮಾಡುದು ಇಲ್ಲಿ ಕೆಲವು ಜೆನಕ್ಕೆ ಮೊಸರಿನ ಹೆಸರು ತೆಗದರೇ ಆವುತ್ತಿಲ್ಲೆ, ಹಾಂಗಾಗಿ ಮಜ್ಜಿಗೆ ಹಾಕಿದ್ದು ಒಳ್ಳೆದಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×