Oppanna.com

ಮೆಣಸಿನ ಬಾಳಕ್ಕು

ಬರದೋರು :   ವೇಣಿಯಕ್ಕ°    on   14/01/2014    3 ಒಪ್ಪಂಗೊ

ವೇಣಿಯಕ್ಕ°

ಮೆಣಸಿನ ಬಾಳಕ್ಕು
ಬೇಕಪ್ಪ ಸಾಮಾನುಗೊ:

  • 1/2 ಕೆ.ಜಿ ಹಸಿಮೆಣಸು
  • 2.5-3 ಕಪ್(ಕುಡ್ತೆ) ಹುಳಿ ಮಜ್ಜಿಗೆ
  • 1/2 ಚಮ್ಚೆ ಇಂಗಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು

ಮಾಡುವ ಕ್ರಮ:
ಹಸಿಮೆಣಸಿನ ತೊಟ್ಟು  ಸಮೇತ, ತೊಳದು ಒಂದು ವಸ್ತ್ರಲ್ಲಿ ಹರಗಿ ಮಡುಗಿ.

ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಿಗುದು ಮಡುಗಿ.

ಒಂದು ಪಾತ್ರಲ್ಲಿ ಮಜ್ಜಿಗೆ, ಉಪ್ಪು, ಇಂಗು ಹಾಕಿ ಲಾಯಿಕಲಿ ತೊಳಸಿ ಮಡುಗಿ.

ಇದಕ್ಕೆ ಕೊರದ ಹಸಿಮೆಣಸಿನ ಹಾಕಿ ಲಾಯಿಕಲಿ ತೊಳಸಿ.

ಇದರ ಮೇಲಂದ ಒಂದು ಪ್ಲಾಸ್ಟೀಕು ಶೀಟಿನ ಮಡುಗಿ ಅದರ ಮೇಲಂದ ಒಂದು ಕಲ್ಲು ಮಡುಗಿ ಮುಚ್ಚಿ, ಒಂದು ಕರೆಲಿ 7-8 ಘಂಟೆ ಮಡುಗಿ.

ಮೆಣಸಿನ ಮಜ್ಜಿಗೆಂದ ತೆಗದು, ಒಂದು ಕೆರುಶಿ/ಹಾಳೆ/ಪ್ಲಾಸ್ಟೀಕು ಶೀಟಿಲ್ಲಿ ಹರಗಿ, ಬೆಶಿಲಿಲ್ಲಿ ಒಣಗುಲೆ ಹಾಕಿ.

ಕಸ್ತಲಪ್ಪಗ ಪುನಃ ಈ ಒಣಗಿದ ಮೆಣಸಿನ ತಂದು ಒಳುದ ಮಜ್ಜಿಗೆಯ ಪಾತ್ರಲ್ಲಿ ಹಾಕಿ, ತೊಳಸಿ, ಮುಚ್ಚಿ ಮಡುಗಿ. ಹೀಂಗೆ ಆ ಮಜ್ಜಿಗೆ ಮುಗಿವನ್ನಾರ ಮಾಡಿ(3-4 ದಿನ).
ಮಜ್ಜಿಗೆ ಮುಗುದ ಮೇಲೆ, ಇದರ 6-8 ದಿನ ಬೆಶಿಲಿಂಗೆ ಒಣಗ್ಸಿ, ಕರಡಿಗೆಲಿ ತೆಗದು ಮಡುಗಿ.

ಇದರ ಎಣ್ಣೆಲಿ ಹೊರುದು ಊಟಕ್ಕೆ ಬಳುಸಿ. ಇದು ಮೇಲಾರ, ತಂಬ್ಳಿ, ಮಜ್ಜಿಗೆ, ಮೊಸರು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಇದರ ಮೊಸರು ಗೊಜ್ಜಿಗೊಕ್ಕೆ, ಸೊಳೆ ತಾಳಿಂಗೆ ಎಲ್ಲ ಒಗ್ಗರಣೆ ಕೊಡ್ಲು ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ಮೆಣಸಿನ ಬಾಳಕ್ಕು

  1. ಬಾಲಣ್ಣ, ಶ್ರೀಅಕ್ಕಂಗೆ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ…ಃ)
    ನಿಂಗಳ(ಓದುಗರ) ಎಲ್ಲರ ಪ್ರೋತ್ಸಾಹ ಸದಾ ಇರಲಿ..ಃ)

  2. ವೇಣಿ,
    ಬಾಳಕ್ಕು ಮಾಡ್ತ ಕ್ರಮವ ಅನುಕ್ರಮಣಿಕೆಲಿ ವಿವರ್ಸಿದ್ದದು ಶೋಕಾಯಿದಬ್ಬೋ.
    ಪ್ರತಿ ಮಂಗಳವಾರ ಇಂದೆಂತರ ಹಾಕುತ್ತು ವೇಣಿ ಹೇಳಿ ಕಾವ ಹಾಂಗೆ ಆವುತ್ತು.
    ನಮ್ಮ ಅಡಿಗೆಗಳ ಬೈಲಿಲಿ ಚೊಕ್ಕಕ್ಕೆ ಹಾಕುತ್ತ ನಿನ್ನ ಶ್ರಮಕ್ಕೆ ಅಭಿನಂದನೆಗ.

  3. ಇದು ಎಣ್ನೆಲಿ ಹೊರುದು, ಊಟಕ್ಕೆ ಕೂಡಲೆ ಭಾರೀ ಲಾಯಕ ಆವುತ್ತು ವೇಣಿಯಕ್ಕ ..ಕಳುದ ವರುಶ ಎಂಗಳಲ್ಲಿ ಮಾಡಿದ ಮೆಣಸಿನ ಬಾಳ್ಕು ಇನ್ನುದೆ ಮುಗುದ್ದಿಲ್ಲೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×