Oppanna.com

ಮುಳ್ಳುಸೌತೆಕಾಯಿ ಸೀವು ಸುಟ್ಟವು(ಗುಳಿ ಅಪ್ಪ)

ಬರದೋರು :   ವೇಣಿಯಕ್ಕ°    on   05/11/2013    1 ಒಪ್ಪಂಗೊ

ವೇಣಿಯಕ್ಕ°

ಮುಳ್ಳುಸೌತೆಕಾಯಿ ಸೀವು ಸುಟ್ಟವು(ಗುಳಿ ಅಪ್ಪ)
ಬೇಕಪ್ಪ ಸಾಮಾನುಗೊ:

  • 1 ಸಾಧಾರಣ ಗಾತ್ರದ ಮುಳ್ಳುಸೌತೆ ಅಥವಾ 2 ಕಪ್(ಕುಡ್ತೆ) ದೊಡ್ಡಕೆ ತುರುದ ಮುಳ್ಳುಸೌತೆ
  • 1 ಕಪ್(ಕುಡ್ತೆ) ಬೆಣ್ತಕ್ಕಿ
  • 1 ಕಪ್(ಕುಡ್ತೆ) ಬೆಲ್ಲ
  • 1/2 ಕಪ್(ಕುಡ್ತೆ) ಕಾಯಿ ತುರಿ
  • ರುಚಿಗೆ ತಕ್ಕಸ್ಟು ಉಪ್ಪು
  • ತುಪ್ಪ

ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಅಕ್ಕಿ, ಕಾಯಿ ತುರಿಯ ಗ್ರೈಂಡರಿಲ್ಲಿ/ಮಿಕ್ಸಿಲಿ ಹಾಕಿ, ರೆಜ್ಜ ನೀರು(ಮುಳ್ಳುಸೌತೆ ತುರುದ ನೀರು) ಹಾಕಿ ಕಡೆರಿ. ಹಿಟ್ಟು ನೊಂಪಪ್ಪಲಪ್ಪಗ, ಬೆಲ್ಲ, ಉಪ್ಪು ಹಾಕಿ 2-3 ನಿಮಿಷ ಕಡೆರಿ.


ಮುಳ್ಳುಸೌತೆಯ ಚೋಲಿ ತೆಗದು(ಬೆಳದರೆ ಒಳಾಣ ತಿರುಳು, ಬಿತ್ತಿನ ತೆಗೆರಿ) ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ದೊಡ್ಡಕೆ ತುರಿರಿ ಅಥವಾ ಸಣ್ಣಕೆ ಕೊಚ್ಚಿ ಅಥವಾ ಮಿಕ್ಸಿಲಿ ಹಾಕಿ ಕ್ರಶ್ ಮಾಡಿ.

ತುರುದ ಮುಳ್ಳುಸೌತೆಯ ಹಿಟ್ಟಿಂಗೆ ಹಾಕಿ ತೊಳಸಿ. ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಹದ ಇರಲಿ.

ಒಲೆಲಿ ಅಪ್ಪದ ಗುಳಿಯ ಬೆಶಿ ಅಪ್ಪಲೆ ಮಡುಗಿ, ಪ್ರತಿ ಗುಳಿಗೂ, 2-3 ಚಮ್ಚೆ ತುಪ್ಪ ಹಾಕಿ(ಹಿಟ್ಟು ಹಾಕಿ ಅಪ್ಪಗ ಅದು ತುಪ್ಪಲ್ಲಿ ಮುಳುಗೆಕ್ಕು).

ತುಪ್ಪ ಬೆಶಿ ಆದ ಕೂಡಲೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಗುಳಿಗು ಹಿಟ್ಟು ಹಾಕಿ.

3-4 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ. ತಿರುಗಿಸಿ ಹಾಕಿ ಇನ್ನೊಂದು ಹೊಡೆಯನ್ನೂ ಚಿನ್ನದ ಬಣ್ಣ ಬಪ್ಪನ್ನಾರ ಬೇಶಿ.

ಬೆಶಿ ಬೆಶಿ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 20-25 ಗುಳಿ ಅಪ್ಪ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಮುಳ್ಳುಸೌತೆಕಾಯಿ ಸೀವು ಸುಟ್ಟವು(ಗುಳಿ ಅಪ್ಪ)

  1. ಮುಳ್ಲುಸೌತೆಯ ಸುಟ್ಟವು ಮಾಡುವಾಗ ಅಕ್ಕಿಹಿಟ್ಟಿಂಗೆ ಸೌತೆತುರಿಯುದೆ ಬೆಲ್ಲವುದೆ ಹಾಕಿಅಪ್ಪಾಗ ಅದು ನೀರುಬಿಡ್ತು.ಹಾಂಗೇಳಿ ಕಮ್ಮಿಹಾಕಿರೆ ರುಚಿದೆ ಕಮ್ಮಿ ಆವುತ್ತು. ಹಾಂಗಾಗಿ ಹಿಟ್ತು ತೆಳುವಾತು ಹೇಳಿ ಆದರೆ ಅದರ ಒಂದು ದಪ್ಪತಳದ ಬಾಣಲೆಲಿ ಅರ್ಧ ಹಿಟ್ತಿನ ಹಾಕಿ ಬೆಶಿಮಾಡಿದರೆ ಅದು ರಜ ಗಟ್ಟಿಯಾವುತ್ತು. ಅದರ ಒಳುದ ಅರ್ಧಕ್ಕೆ ಸೇರಿಸಿಯಪ್ಪಾಗ ಅದು ಹದವಾದ ಪಾಕಕ್ಕೆ ಬತ್ತು, ಅಲ್ಲದಾ ವೇಣಿಯಕ್ಕ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×