ಮುಳ್ಳು ಸೌತೆಕಾಯಿ ಸೀವು ದೋಸೆ(ಪಚ್ಚಪ್ಪ)

September 16, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಳ್ಳು ಸೌತೆಕಾಯಿ ಸೀವು ದೋಸೆ(ಪಚ್ಚಪ್ಪ)

ಬೇಕಪ್ಪ ಸಾಮಾನುಗೊ:

  • 1.5 ಕಪ್(ಕುಡ್ತೆ)  ಮುಳ್ಳು ಸೌತೆಕಾಯಿ ತುಂಡುಗೊ
  • 1 ಕಪ್(ಕುಡ್ತೆ) ಬೆಣ್ತಕ್ಕಿ
  • 1/2 ಕಪ್(ಕುಡ್ತೆ) ಕಾಯಿ ತುರಿ
  • 3/4 ಕಪ್(ಕುಡ್ತೆ) ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • ತುಪ್ಪ

ಮಾಡುವ ಕ್ರಮ:

ಅಕ್ಕಿಯ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಮುಳ್ಳು ಸೌತೆಕಾಯಿಯ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು ಸಣ್ಣಕೆ ತುಂಡು ಮಾಡಿ ಅಥವಾ ತುರುದು ಮಡಿಕ್ಕೊಳ್ಳಿ. ಅಕ್ಕಿ, ಉಪ್ಪು, ಕಾಯಿ ತುರಿ, ಮುಳ್ಳು ಸೌತೆಕಾಯಿ ತುಂಡಿನ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ ನೊಂಪಿಂಗೆ ಕಡೆರಿ. ಇದಕ್ಕೆ ಬೆಲ್ಲ ಹಾಕಿ 1-2 ನಿಮಿಷ ಕಡೆರಿ.(ನೀರು ಬೇಕಾದರೆ ಮಾತ್ರ ಹಾಕಿ.) ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಕಾವಲಿಗೆಯ ಬೆಶಿ ಮಾಡಿ, ಒಂದು ಸೌಟು ಹಿಟ್ಟು ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಎರದು ಮುಚ್ಚಲು ಮುಚ್ಚಿ 1-2 ನಿಮಿಷ ಬೇಶಿ.
ಇದಕ್ಕೆ ತುಪ್ಪ ಹಾಕಿ, ಕವುಂಚಿ ಹಾಕಿ 1-2 ನಿಮಿಷ ಬೇಶಿ.

ಬೆಶಿ ಬೆಶಿ ದೋಸೆಯ ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ ಅಥವಾ ತುಪ್ಪ ಹಾಕಿ ಹಾಂಗೆ ತಿಂಬಲೆ ಕೊಡಿ. ಇದರ ದೇವರ ನೈವೇದ್ಯಕ್ಕುದೆ ಉಪಯೋಗ್ಸುಲೆ ಅಕ್ಕು. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 6-8 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಮುಳಿಯ ಭಾವ
    ರಘು ಮುಳಿಯ

    ಭಲೆ ಭಲೆ.. ವೇಣಿಯಕ್ಕ..ಊರಿ೦ದ ಮುಳ್ಳುಸೌತೆ ಬಯಿ೦ದು. ಕೊಚ್ಚಿಸಳ್ಳಿಯ ಬದಲು ದೊಸೆಯೇ ಅಕ್ಕೊ ..!

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವದೊಡ್ಮನೆ ಭಾವಕಳಾಯಿ ಗೀತತ್ತೆವೇಣೂರಣ್ಣಹಳೆಮನೆ ಅಣ್ಣಶಾ...ರೀಡಾಮಹೇಶಣ್ಣಯೇನಂಕೂಡ್ಳು ಅಣ್ಣವಾಣಿ ಚಿಕ್ಕಮ್ಮಪೆರ್ಲದಣ್ಣದೇವಸ್ಯ ಮಾಣಿಅಜ್ಜಕಾನ ಭಾವಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿಅನು ಉಡುಪುಮೂಲೆಅನುಶ್ರೀ ಬಂಡಾಡಿಜಯಶ್ರೀ ನೀರಮೂಲೆಜಯಗೌರಿ ಅಕ್ಕ°ಗಣೇಶ ಮಾವ°ಅಡ್ಕತ್ತಿಮಾರುಮಾವ°ವೆಂಕಟ್ ಕೋಟೂರುನೆಗೆಗಾರ°ಉಡುಪುಮೂಲೆ ಅಪ್ಪಚ್ಚಿಮಾಷ್ಟ್ರುಮಾವ°ಬೋಸ ಬಾವಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ