ಮುಳ್ಳುಸೌತೆಕಾಯಿ ತಿರುಳಿನ ಚಟ್ನಿ / ಕೊಂಡಾಟ

November 4, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಳ್ಳುಸೌತೆಕಾಯಿ ತಿರುಳಿನ ಚಟ್ನಿ / ಕೊಂಡಾಟ

ಬೇಕಪ್ಪ ಸಾಮಾನುಗೊ:

 • 10-15 ತುಂಡು ಎಳತ್ತು ಮುಳ್ಳುಸೌತೆಕಾಯಿ ತಿರುಳು
 • 2-3 ಹಸಿಮೆಣಸು
 • 1/2 ಕಪ್(ಕುಡ್ತೆ) ಕಾಯಿತುರಿ
 • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
 • ರುಚಿಗೆ ತಕ್ಕಸ್ಟು ಉಪ್ಪು
 • 1/2 ಚಮ್ಚೆ ಸಾಸಮೆ
 • 3-4 ಬೇನ್ಸೊಪ್ಪು
 • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಮಿಕ್ಸಿಗೆ ಕಾಯಿ ತುರಿ, ಹಸಿಮೆಣಸು, ಹುಳಿ, ರೆಜ್ಜ ನೀರು ಹಾಕಿ ನೊಂಪಿಂಗೆ ಕಡೆರಿ. ಇದಕ್ಕೆ ಮುಳ್ಳುಸೌತೆಕಾಯಿ ತಿರುಳು ಹಾಕಿ 1-2 ನಿಮಿಷ ಕಡೆರಿ.
ಇದಕ್ಕೆ ಉಪ್ಪುದೆ ಬೇಕಾದಸ್ಟು ನೀರು ಹಾಕಿ ಕೊದುಶಿ. ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಚಟ್ನಿಗೆ ಹಾಕಿ, ತೊಳಸಿ.
ಇದು ದೋಸೆ, ಇಡ್ಲಿ, ರೊಟ್ಟಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  GOPALANNA

  ಇದಕ್ಕೆ ಕೊಂಡಾಟ ಹೇಳಿಯೂ ಹೆಸರಿದ್ದೋ? ತುಂಬಾ ಆಸಕ್ತಿದಾಯಕ ಹೆಸರು.

  [Reply]

  VA:F [1.9.22_1171]
  Rating: 0 (from 0 votes)
 2. ವೇಣಿಯಕ್ಕ°

  ಅಪ್ಪು ಗಾಂಧಾರಿ ಮೆಣಸು ಹಾಕಿದರೆ ಖಾರ ಖಾರ ಆಗಿ ಇನ್ನೂ ರುಚಿ ಆವುತ್ತು.
  ಶಿವಳ್ಲಿಯವು ಇದಕ್ಕೆ ಕೊಂಡಾಟ ಹೇಳ್ತವು.

  [Reply]

  VN:F [1.9.22_1171]
  Rating: 0 (from 0 votes)
 3. ಯಮ್.ಕೆ.

  ಗಾ೦ಧಾರಿಯ ಕೊ೦ಡಾಟಲ್ಲಿ ಬೆಳೆದ ಸುಯೋಧನ೦ಗೆ ಭೀಮನ ಕೆನ್ನೇ ಗುಳಿ ಕ೦ಡರೆ ಗೆ೦ಟ್ಲಿಲಿ ಖಾರ ಖಾರ ತೇಗು ಬತ್ತಿತಡ !

  [Reply]

  VA:F [1.9.22_1171]
  Rating: 0 (from 0 votes)
 4. ಶ್ಯಾಮಣ್ಣ
  ಶ್ಯಾಮಣ್ಣ

  (ಸಣ್ಣ ದ್ರಾಕ್ಷೆ ಗಾತ್ರದ ಹುಳಿ) ಸಣ್ಣ ಹುಳಿ ದ್ರಾಕ್ಷೆಯನ್ನೇ ಹಾಕಿರೆ ಆವುತ್ತೋ?

  [Reply]

  ವೇಣಿಯಕ್ಕ°

  ವೇಣಿಯಕ್ಕ° Reply:

  ಹ್ಹಹ್ಹ ಹಾಕಿ ನೋಡ್ಲಕ್ಕು ಹೊಸ ಪಾಕದ ಚಟ್ನಿ ಅಕ್ಕು..:)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಪುಣಚ ಡಾಕ್ಟ್ರುಮುಳಿಯ ಭಾವಪವನಜಮಾವಅನುಶ್ರೀ ಬಂಡಾಡಿಚುಬ್ಬಣ್ಣವಾಣಿ ಚಿಕ್ಕಮ್ಮಸುಭಗಅಡ್ಕತ್ತಿಮಾರುಮಾವ°ವೇಣಿಯಕ್ಕ°ಬೋಸ ಬಾವಬಂಡಾಡಿ ಅಜ್ಜಿಗೋಪಾಲಣ್ಣಮಾಷ್ಟ್ರುಮಾವ°ಶರ್ಮಪ್ಪಚ್ಚಿಸರ್ಪಮಲೆ ಮಾವ°ಶ್ರೀಅಕ್ಕ°ದೊಡ್ಡಮಾವ°ಶ್ಯಾಮಣ್ಣಸುವರ್ಣಿನೀ ಕೊಣಲೆಅನು ಉಡುಪುಮೂಲೆಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ