ಮುಳ್ಳು ಸೌತೆಕಾಯಿ ಉಪ್ಪಿನಕಾಯಿ

September 30, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಳ್ಳು ಸೌತೆಕಾಯಿ ಉಪ್ಪಿನಕಾಯಿ

ಬೇಕಪ್ಪ ಸಾಮಾನುಗೊ:

 • 3 ಸಾಧಾರಣ ಗಾತ್ರದ ಎಳತ್ತು ಮುಳ್ಳು ಸೌತೆ
 • 1/4 ಕಪ್(ಕುಡ್ತೆ) ಉಪ್ಪು
 • 1 ಕಪ್(ಕುಡ್ತೆ) ಉಪ್ಪಿನಕಾಯಿ ಹಸಿ ಹೊರಡಿ
 • 1/2 ಚಮ್ಚೆ ಸಾಸಮೆ
 • ದೊಡ್ಡ ಚಿಟಿಕೆ ಇಂಗು
 • 1/2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಹೊರಡಿ ಮಾಡುವ ಕ್ರಮಃ
ಉಪ್ಪಿನಕಾಯಿ ಹೊರಡಿಯ “ಮಾವಿನ ಮೆಡಿ ಉಪ್ಪಿನಕಾಯಿಲಿ” ಹೇಳಿದ ಹಾಂಗೆ ಮಾಡಿ.

ಉಪ್ಪಿನಕಾಯಿ ಮಾಡುವ ಕ್ರಮಃ

ಮುಳ್ಳು ಸೌತೆಯ ತೊಳದು, ಮನಾರಕೆ ಉದ್ದಿ ಒಂದು ಕರೆಲಿ 5 ನಿಮಿಷ ನೀರ ಪಸೆ ಆರುಲೆ ಮಡುಗಿ.

ಮುಳ್ಳು ಸೌತೆಯ ಕೊರದು, ಅದರ ತಿರುಳಿನ ಮನಾರಕೆ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ. ಇದಕ್ಕೆ ಉಪ್ಪು ಬೆರುಸಿ 7-8 ಘಂಟೆ ಒಂದು ಕರೆಲಿ ಮುಚ್ಚಲು ಮುಚ್ಚಿ ಮಡುಗಿ.

ಇದಕ್ಕೆ ಹೊರಡಿ ಹಾಕಿ ಬೆರುಸಿ. ಒಗ್ಗರಣೆ ಸಟ್ಟುಗಿಲ್ಲು ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಇಂಗು ಹಾಕಿ ರೆಜ್ಜ ಹೊತ್ತು ಮಡುಗಿ, ಉಪ್ಪಿನಕಾಯಿಗೆ ಹಾಕಿ ತೊಳಸಿ. ಇದರ ಪ್ರಿಡ್ಜಿಲ್ಲಿ ಮಡುಗಿದರೆ ಒಂದು ವಾರದ ವರೆಗೆ ಉಪಯೋಗ್ಸುಲೆ ಅಕ್ಕು. ಇದು ಅಶನ, ದೋಸೆ ಇತ್ಯಾದಿಗಳ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಸೂಚನೆಃ ಉಪ್ಪಿನಕಾಯಿ ಮಾಡುವಗ ಚೆಂಡಿ ಕೈ/ ಚೆಂಡಿ ಪಾತ್ರ ಉಪಯೋಗ್ಸುಲೆ, ನೀರು ಮುಟ್ಟುಸುಲೆ ಆಗ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. Sumana Bhat Sankahithlu

  ಊರಿಂದ ಬಪ್ಪಗ ಮನೆಂದ ಅತ್ತೆ ಕೊಟ್ಟ ಮೆಡಿ ಉಪ್ಪಿನಕಾಯಿಲಿ ಮೆಡಿ ಮುಗುದು ಎಸರು ಒಳಿತ್ತು ಎನಗೆ ಇಲ್ಲಿ. ಅದಕ್ಕೆ ಆನು ವಾಪಾಸು ಮಾವಿನಕಾಯಿ ತಂದು ಕೊಚ್ಚಿ ಹಾಕಿ ಎಸರಿನ ಉಪಯೋಗ ಮಾಡಿಗೊಂಡಿತ್ತಿದ್ದೆ. ಈಗ ಈ ಹೊಸ ವಿಧಾನ ಸಿಕ್ಕಿದ್ದು ಲಾಯಿಕಾತು ವೇಣಿ. ಇಲ್ಲಿ ಎಳತ್ತು ಸೌತೆ ಸಿಕ್ಕುದು ಅಪರೂಪ. ಒಂದರಿಯೊ ಏನೋ ಮಾಡಿದ್ದೆ ಅಷ್ಟೆ ಅದರ ಉಪ್ಪಿನಕಾಯಿ. ಆದರೆ ಮುಳ್ಳುಸೌತೆ ಲಾಯಿಕದ್ದು ಯಾವಾಗಲೂ ಸಿಕ್ಕುತ್ತು. ಹಾಂಗೆ ಮಾಡಿ ತಿಂದು ಎಲ್ಲ ಆತು. ಲಾಯಿಕವ್ತು ಆತಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಚುಬ್ಬಣ್ಣಶ್ಯಾಮಣ್ಣಹಳೆಮನೆ ಅಣ್ಣಒಪ್ಪಕ್ಕಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಜಯಗೌರಿ ಅಕ್ಕ°ಕಾವಿನಮೂಲೆ ಮಾಣಿಪುತ್ತೂರುಬಾವವಿಜಯತ್ತೆಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಮುಳಿಯ ಭಾವಶರ್ಮಪ್ಪಚ್ಚಿಕಳಾಯಿ ಗೀತತ್ತೆಬಂಡಾಡಿ ಅಜ್ಜಿಮಂಗ್ಳೂರ ಮಾಣಿವಿದ್ವಾನಣ್ಣತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆಅಜ್ಜಕಾನ ಭಾವಡಾಗುಟ್ರಕ್ಕ°ಶ್ರೀಅಕ್ಕ°ಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ