ಮು೦ಡಿ ಕೆಸವಿನ ಪಿಳ್ಳೆಯ ಹಪ್ಪಳ

April 28, 2011 ರ 9:34 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಪ್ಪಳ ಹೇಳಿರೆ ಯೆಲ್ಲರಿ೦ಗು ಖುಶಿ. ಮು೦ಡಿ ಕೆಸವಿನ ಪಿಳ್ಳೆಯ ಹಪ್ಪಳ ಒ೦ದು ಹೊಸ ಪ್ರಯೊಗ.

ಬೇಕಪ್ಪ ಸಾಮಗ್ರಿಗೊ:

ಕೆಸವಿನ ಪಿಳ್ಳೆ -ಸಾಧಾರಣ ಗಾತ್ರದ್ದು ನಾಲ್ಕು(೪)

ಅವಲಕ್ಕಿ – ಒ೦ದು ಹಿಡಿ

ಉಪ್ಪು – ರುಚಿಗೆ ತಕ್ಕಷ್ಟು

ಓಮ – ಒ೦ದು ಚಮಚ

ಮೆಣಸಿನ ಹೊಡಿ – ಒ೦ದು ಚಮಚ

ಮಾಡುವ ವಿಧಾನ:

ಕೆಸವಿನ ಪಿಳ್ಳೆಯ ಸಿಪ್ಪೆ ತೆಗದು ಸಣ್ಣಕೆ ಕೊರೆಕು.

ಮಜ್ಜಿಗೆಲಿ ಈ ಬಾಗವ ಒ೦ದಾರಿ ತೊಳೆಕು.

ಅದರ ರಜ ನೀರು ಹಾಕಿ ಸಣ್ಣಕೆ  ಕಡೆಕು.

ಕಡವಗಳೆ ಉಪ್ಪು,ಓಮ, ಮೆಣಸಿನ ಹೊಡಿ ಹಾಕೆಕ್ಕು.

ತೆಗವಲಪ್ಪಗ ಅವಲಕ್ಕಿ ಹಾಕಿ ನಾಲ್ಕುಸುತ್ತು ತಿರುಗುಸೆಕ್ಕು.

ಈ ಹಿಟ್ಟಿನ ಒ೦ದು ಪಾತ್ರಲ್ಲಿ ಹಾಕಿ ಇಡ್ಲಿ ಪಾತ್ರದ ಒಳ ಮಡಿಗಿ ಸೆಕೆಗೆ ಬೇಯೆಸೆಕ್ಕು.(ಅಧ೯ ಗ೦ಟೆ)

ಬೆಶಿ ಹಿಟ್ಟಿನ ಒ೦ದು ಚಮಚಲ್ಲಿ ತೆಗದು ಹಪ್ಪಳಮುಟ್ಟಿಲಿ ಒತ್ತಿ ಹಸೆಲಿ ಅಥವಾ ಪ್ಲಾಸ್ಟಿಕ್ಕು ಶೀಟಿಲಿ  ಹಾಕಿ ಬೆಶಿಲಿಲ್ಲಿ ಒಣಗುಸುವದು.(ಮೂರು ದಿನ)

ಇದು ಹೊರಿವಗ ಒಳ್ಳೆತ ದೂಡ್ದ ಆವುತ್ತು. ತಿ೦ಬಗ ಸೆ೦ಡಗೆಯ ಹಾ೦ಗೆ ಮ್ರದು ಆವುತ್ತು.

ಮು೦ಡಿ ಕೆಸವಿನಸೆಸಿ

ಮು೦ಡಿ ಕೆಸವಿನ ಪಿಳ್ಳೆಯ ಹಪ್ಪಳ

ಮು೦ಡಿ ಕೆಸವಿನ ಪಿಳ್ಳೆಯ ಹಪ್ಪಳ, 4.7 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  [ ಹಾಕಿ ಬೆಶಿಲಿಲ್ಲಿ ಒಣಗುಸುವದು.(ಮೂರು ದಿನ) ] – ಎರಡನೇ ದಿನ ಮಳೆ ಬಂದರೆ ಹೇಳಿ ಒಬ್ಬಂಗೆ ಸಂಶಯಡ .!

  -ಇದಕ್ಕೆ ಕೂಡ್ಳೆ ..?!

  -ಬೋಸ ಭಾವಂಗೆ ಬೇಡಡಾ – ತೊರುಸುಗಡ!!

  -ಮೃದು ಅಪ್ಪಲೆ ಎಂತ ಹಾಕೆಕು ಗೊಂತಾಯ್ದಿಲ್ಲೆ ದೀಪಕ್ಕ.!!!

  -ಇದು ಊಟಂದ ಮದಲೆಯೋ ಊಟದ ನಂತ್ರವೋ ಹೇಳಿ ತೆಕ್ಕುಂಜ ಕುಮಾರಣ್ಣನ್ಗೆ ಒರಕ್ಕೇ ಬಯಿಂದಿಲ್ಲೆಡ .!

  -ಮಾಡಿ ಕೊಟ್ರೆ ತಿಂದಿಕ್ಕಿ ಹೇಳ್ಳಕ್ಕು ಹೇಳಿ ಅಜ್ಜಕಾನ ಭಾವ.!!

  – ಅಂತೂ ನಿಂಗೊ ಮಾಡಿದ್ದು ಪಟಲ್ಲಿ ಒಪ್ಪ ಆಯ್ದು ಹೇಳಿ ನಮ್ಮಲ್ಲಿಂದ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಈ ಶುದ್ದಿಯ ಹಕ್ಕು ಮಾಂತ್ರ ನಿಂಗಳ ಕೈಲಿ ಇಪ್ಪದೊ ಅಲ್ಲ ಹಪ್ಪಳ ತಿಂಬ ಹಕ್ಕೂ ನಿಂಗೊಗೇ ಇಪ್ಪದೋ ಹೇಳಿ ಅಧ್ವೈತ ಕೀಟಣ್ಣ ಒಂದರಿ ತಿಳಿಸಿದರೆ ತಿಂದು ನೋಡ್ಳಕ್ಕು.( ಅಲ್ಲದ್ದರೆ ಚೆನ್ನೈ ಭಾವ ಸುಮ್ಮನೆ ಬಿಡವು..!)
  ಹೊಸ ರುಚಿ ಒಂದರ ಎಂಗೊಗೆ ತಿಳಿಸಿದ್ದಕ್ಕೆ ಧನ್ಯವಾದ ಅಕ್ಕ.

  [Reply]

  VN:F [1.9.22_1171]
  Rating: 0 (from 0 votes)
 3. ಚೂರಿಬೈಲು ದೀಪಕ್ಕ
  ಚೂರಿಬೈಲು ದೀಪಕ್ಕ

  ಬೆಶಿಲು ಬ೦ದಪ್ಪಗ ಮಡಗಿದರತು.
  ಬೋಸ ಭಾವಂಗೆ ಮಜ್ಜಿಗೆಲಿ ತೊಳೆಯದ್ದರು ತೊರುಸ.

  ಮೃದು ಅಪ್ಪಲೆ ಒ೦ದು ಹಿಡಿ ಅವಲಕ್ಕಿ ಹಾಯೆಕ್ಕು.

  ಊಟಂದ ಮದಲೆಯೋ ಅಥವ ಊಟದ ನಂತ್ರವೋ ಹೇಳಿ ನಿ೦ಗೊಗೆ ಪುರುಸೊತ್ತು ಇಪ್ಪ ಹಾ೦ಗೆ.

  [Reply]

  ಸುಭಗ

  ಸುಭಗ Reply:

  ಚೆನ್ನೈ ಭಾವಂಗೆ ಇನ್ನೂ ಒಂದು ಸಂಶಯ ಇದ್ದಡ ದೀಪಕ್ಕ.. ಪುನಃ ಪುನಃ ಪ್ರಶ್ನೆ ಕೇಳಿಯಪ್ಪಗ ನಿಂಗೊ ಬೈಯುವಿ ಹೇಳಿ ಗ್ರೇಶಿ ಅದರ ಕೇಳ್ಳೆ ಎನ್ನತ್ರೆ ಹೇಳಿದ್ದವು.

  ಅವರ ಪ್ರಶ್ನೆ- “ಕೆಸವಿನ ಪಿಳ್ಳೆ ಭಾಗಂಗಳ ಕಡದಿಕ್ಕಿ ಬೇಯಿಶುದು ಎಂತಕೆ? ಬೇಯಿಶಿಕ್ಕಿ ಕಡದರೆ ಏಕೆ ಆಗ? ಅದು ಸುಲಬ ಅಲ್ಲದೊ?” ಹೇಳಿ. ಇದಕ್ಕೆ ಉತ್ತರ ನಿಂಗಳೇ ಹೇಳೆಕ್ಕಷ್ಟೆ 😉

  [Reply]

  VN:F [1.9.22_1171]
  Rating: 0 (from 0 votes)
 4. ಚುಬ್ಬಣ್ಣ
  ಚುಬ್ಬಣ್ಣ

  ದೀಪಕ್ಕ, ಕೆಸವಿನ ಪಿಳ್ಳೆಯ ಹಪ್ಪ ಮಾಡ್ತ ಬಗೆ ತಿಳುಶಿದ್ದು ಲಾಯಕೆ ಆಯಿದು.. ಮಾಡಿನೋಡೆ ಕಷ್ಟೆ.. 😉
  ನಮ್ಮ ಮಡಿಕೇರಿಲ್ಲಿ ಕೆಸವು ಜಾಸ್ತಿ.. ಎನ್ನ ಅಮ್ಮನತ್ರೆ ಹೇಳಿ ನೋಡೆಕ್ಕು ಇದರ ಮಾಡ್ಲೆ…
  ತಿಳಿಸಿದ್ದಕ್ಕೆ ಧನ್ಯವಾದ ಅಕ್ಕ..

  [Reply]

  VN:F [1.9.22_1171]
  Rating: +1 (from 1 vote)
 5. ಗೋಪಾಲಣ್ಣ
  Gopalakrishna BHAT S.K.

  ಕೆಸವಿನ ಗಡ್ಡೆ ಹಪ್ಪಳ-ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಲಿ ಯಶವಂತರ ಅಮ್ಮ ಮಾಡುತ್ತ ಬಗ್ಗೆ ಉಲ್ಲೇಖ ಇದ್ದು. ಆನು ಕಂಡಿದಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘುಮುಳಿಯ

  ಪಿಳ್ಳೆ ಹೇಳಿರೆ ಗೆ೦ಡೆಯೇ ಅಲ್ಲದೋ ದೀಪಕ್ಕ?ಮಾಹಿತಿಗೆ ಧನ್ಯವಾದ.

  “ಎಲೆಯು ಪತ್ರಡೆಗಾದೆ ಸೆಲೆಯು ಹಪ್ಪಳಕಾದೆ
  ನೀನಾರಿಗಾದೆಯೋ ಎಲೆ ಮಾವಾ? ”
  ಹೇಳುಗೋ ಕೆಸವಿನ ಸೆಸಿ?

  [Reply]

  ಗಣೇಶ ಪೆರ್ವ

  ಗಣೇಶ Reply:

  @ನೀನಾರಿಗಾದೆಯೋ ಎಲೆ ಮಾವಾ? .. – ರಘು ಭಾವಾ.. ಎಲ್ಲ ಸರಿ.. ಈ ಎಲೆ ಮಾವ° ಅರು ಹೇಳಿ ಗೊ೦ತಾಯಿದಿಲ್ಲೆನ್ನೆ!! 😉

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹ,ಹ್ಹಾ..ಎನ್ನನ್ನೆಯೋ?ಅಲ್ಲ ಚೆನ್ನೈಭಾವನನ್ನೋ?

  [Reply]

  VA:F [1.9.22_1171]
  Rating: 0 (from 0 votes)
 7. ನೆಗೆಗಾರ°

  ಮುಂಡಿ ಕೆಸವು ತೊರುಸುತ್ತು.
  ನಮ್ಮ ಊರಿಲಿ ಇದರಿಂದಲೂ ಜಾಸ್ತಿ ತೊರುಸುವ ಸುಮಾರು ’ಪಿಳ್ಳೆ’ಗೊ ಇದ್ದವು.
  ಅವರ ಎಲ್ಲೋರನ್ನೂ ಒತ್ತಿ ಹಪ್ಪಳ ಮಾಡಿದ್ದರೆ ಗುಣಾಜೆಕುಂಞಿಗೆ ಕೊಶೀ ಆವುತಿತು…… :-)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಕೇಜಿಮಾವ°ಹಳೆಮನೆ ಅಣ್ಣಪೆರ್ಲದಣ್ಣಮಂಗ್ಳೂರ ಮಾಣಿಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°ಶ್ರೀಅಕ್ಕ°ಯೇನಂಕೂಡ್ಳು ಅಣ್ಣಡೈಮಂಡು ಭಾವಜಯಶ್ರೀ ನೀರಮೂಲೆದೊಡ್ಡಮಾವ°ಕಜೆವಸಂತ°ಎರುಂಬು ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಸಂಪಾದಕ°ವಾಣಿ ಚಿಕ್ಕಮ್ಮಅನಿತಾ ನರೇಶ್, ಮಂಚಿದೇವಸ್ಯ ಮಾಣಿಡಾಗುಟ್ರಕ್ಕ°ಗಣೇಶ ಮಾವ°ವೆಂಕಟ್ ಕೋಟೂರುಮಾಲಕ್ಕ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ