Oppanna.com

ನೀರು ಮಾವಿನಕಾಯಿ ಮೇಲಾರ

ಬರದೋರು :   ವೇಣಿಯಕ್ಕ°    on   27/08/2013    2 ಒಪ್ಪಂಗೊ

ವೇಣಿಯಕ್ಕ°

ನೀರು ಮಾವಿನಕಾಯಿ ಮೇಲಾರ

ಬೇಕಪ್ಪ ಸಾಮಾನುಗೊ:

  • ನೀರು ಮಾವಿನಕಾಯಿ
  • 1 ಕಪ್(ಕುಡ್ತೆ) ಕಾಯಿತುರಿ
  • 2 ಹಸಿಮೆಣಸು
  • 1/4-1/2 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ
  • ಚಿಟಿಕೆ ಅರುಶಿನ ಹೊಡಿ (ಬೇಕಾದರೆ ಮಾತ್ರ)
  • 1/4 ಚಮ್ಚೆ ಮೆಣಸಿನ ಹೊಡಿ
  • 1/2 ಚಮ್ಚೆ ಸಾಸಮೆ
  • 1-2 ತುಂಡು ಮಾಡಿದ ಒಣಕ್ಕು ಮೆಣಸು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:
ನೀರು ಮಾವಿನಕಾಯಿಯ ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡೆಕ್ಕು.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ರೆಜ್ಜ ಹೊತ್ತು(ಹೆಚ್ಚಿಗೆ ಉಪ್ಪು ಬಿಡುವನ್ನಾರ) ಬೊದುಳುಲೆ ಹಾಕಿ ತೆಗೆರಿ.)
ಒಂದು ಹಸಿಮೆಣಸನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ ಸಿಗುದು ಮಡುಗಿ.
ಒಂದು ಪಾತ್ರಲ್ಲಿ ಕೊರದ ನೀರು ಮಾವಿನಕಾಯಿ, ಕೊರದ ಹಸಿಮೆಣಸು, ಅರುಶಿನ ಹೊಡಿ, ಮೆಣಸಿನ ಹೊಡಿ ಹಾಕಿ,  ರೆಜ್ಜ ನೀರು ಹಾಕಿ, ಮುಚ್ಚಲು ಮುಚ್ಚಿ ಲಾಯಿಕಲಿ ಬೇಶಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ. ಅದು ರೆಜ್ಜ ನೊಂಪಪ್ಪಗ ಖಾರಕ್ಕೆ ಬೇಕಪ್ಪಸ್ಟು ಹಸಿಮೆಣಸು ಹಾಕಿ, ಕಾಯಿಯ ನೊಂಪಿಂಗೆ ಕಡೆರಿ.ಇದರ ಬೇಶಿದ ಬಾಗಕ್ಕೆ ಹಾಕಿ, ಹುಳಿಗೆ ಬೇಕಪ್ಪಸ್ಟು ಮಜ್ಜಿಗೆಯನ್ನೂ ಹಾಕಿ, ತೊಳಸಿ, ಕೊದುಶೆಕ್ಕು.(ಉಪ್ಪು, ನೀರು ಬೇಕಾದರೆ ಹಾಕಿ.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡೆಕ್ಕು.
ಅದು ಹೊಟ್ಟಿ ಅಪ್ಪಗ, ಒಗ್ಗರಣೆಯ ಮೇಲಾರಕ್ಕೆ ಹಾಕಿ ತೊಳಸಿ. ಇದು ಅಶನ, ದೋಸೆ, ಕೊಟ್ಟಿಗೆ, ಉಂಡೆ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

2 thoughts on “ನೀರು ಮಾವಿನಕಾಯಿ ಮೇಲಾರ

    1. ನೀರು ಮಾವಿನಕಾಯಿ ಸಾರಿನ ಪಟ ತೆಗೆಯಕ್ಕಸ್ಟೆ.(ಇನ್ನೊಂದರಿ ಮಾಡಿಪ್ಪಗ ಪಟ ತೆಗದು ಹಾಕುತ್ತೆ). ನೀರು ಮಾವಿನಕಾಯಿ ಹಸಿ ಗೊಜ್ಜಿ/ಬೇಶಿದ ಗೊಜ್ಜಿಯ ರೆಸಿಪಿಯ ಹಾಕುತ್ತೆ.
      ನೀರು ಮಾವಿನಕಾಯಿ ಸಾರಿಂಗೆ, ನೀರು ಮಾವಿನಕಾಯಿಯ ತೊಳದು, ಕೊರದು, ಬೆಲ್ಲ, ರೆಜ್ಜ ಮೆಣಸಿನ ಹೊಡಿ, ೧-೨ ಹಸಿಮೆಣಸು ಸಿಗುದು ಹಾಕಿ, ಬೇಕಾದಸ್ಟು ನೀರು ಹಾಕಿ ಬೇಶಿ. ಇದಕ್ಕೆ ಮತ್ತೆ ಬೆಳ್ಳುಳ್ಳಿ, ಸಾಸಮೆ, ಇಂಗು, ಬೇನ್ಸೊಪ್ಪು ಹಾಕಿದ ಒಗ್ಗರಣೆ ಕೊಡಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×