Oppanna.com

ಓಡುಪ್ಪಾಳೆ

ಬರದೋರು :   ವೇಣಿಯಕ್ಕ°    on   06/03/2012    12 ಒಪ್ಪಂಗೊ

ವೇಣಿಯಕ್ಕ°

ಓಡುಪ್ಪಾಳೆ

ಬೇಕಪ್ಪ ಸಾಮಾನುಗೊ:

  • 2 ಕಪ್(ಕುಡ್ತೆ) ಬೆಣ್ತಕ್ಕಿ
  • 1 ಕಪ್(ಕುಡ್ತೆ) ಕೊಯಿಶಕ್ಕಿ
  • ರುಚಿಗೆ ತಕ್ಕಸ್ಟು ಉಪ್ಪು
  • ಮಣ್ಣಿನ ಓಡು

ಮಾಡುವ ಕ್ರಮ:

ಕೊಯಿಶಕ್ಕಿ, ಬೆಣ್ತಕ್ಕಿಯ ಒಂದು ಪಾತ್ರಲ್ಲಿ ಹಾಕಿ, ನೀರಿಲ್ಲಿ 8-10 ಘಂಟೆ ಬೊದುಳುಲೆ ಹಾಕಿ.
ಅದರ ಲಾಯಿಕಲಿ 2-3 ಸರ್ತಿ ನೀರಿಲ್ಲಿ ತೊಳದು,  ಬೇಕಾಸ್ಟು ನೀರು ಹಾಕಿ, ನೊಂಪಿಂಗೆ ಕಡೆರಿ.
ಬೇಕಾಸ್ಟು ನೀರುದೆ, ರುಚಿಗೆ ತಕ್ಕಷ್ಟು ಉಪ್ಪುದೆ ಹಾಕಿ ತೊಳಸಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಒಲೆಯ ಮೇಗೆ ಮಣ್ಣಿನ ಓಡಿನ ಮಡುಗಿ, ಲಾಯಿಕ ಬೆಶಿ ಮಾಡಿ.

ಓಡು ಬೆಶಿ ಆದ ಕೂಡ್ಲೆ, ಒಂದು ಸೌಟು ಹಿಟ್ಟಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಎರದು ಮುಚ್ಚಿ ಮಡುಗಿ 4-5 ನಿಮಿಷ ಹದ ಕಿಚ್ಚಿಲ್ಲಿ ಬೇಶಿ.

ಓಡಿನ ಒಂದು ಕೈಲಿ ಚೆಂಡಿ ವಸ್ತ್ರಲ್ಲಿ ಗಟ್ಟಿ ಹಿಡ್ಕೊಂಡು, ಇನ್ನೊಂದು ಕೈಲಿ ಕಾವಲಿಗೆ ಸಟ್ಟುಗಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಎಳಕ್ಕಿ.

ಬೆಶಿ ಬೆಶಿ ಓಡುಪ್ಪಾಳೆಗೆ ತುಪ್ಪ/ತೆಂಗಿನ ಎಣ್ಣೆ ಹಾಕಿ, ಚಟ್ನಿ /ಸೀವು ಕಾಯಿಹಾಲು / ಸಾಂಬರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 7-8 ಓಡುಪ್ಪಾಳೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

12 thoughts on “ಓಡುಪ್ಪಾಳೆ

  1. oduppale thumbaa kannugo bandare kaihalu heeruvaga ruchi avthu.

    modalu ajjana maneli chikkamma madugu. ho! jenada poleyange ikku.

    anu henge madiru a ruchi avthille.

    gas li sariyagaddali oleliyu madide ,,,,,,

    ella onde…

    odindenaru ikka???

  2. Veni akko, ninna parishramava mechchekkaddade. Mathe enna ajji ‘paje madikkela’ heli ondu bale ele bage madigondithidavu.Ninagenaru gonthido? Iddare engoge adara mahithi koduveyo?

  3. ವಾ..!!
    ಮೊದಲಿ೦ಗೆ ನಮ್ಮ ಅಜ್ಜನ,ಅಜ್ಜನ ಕಾಲಲ್ಲಿ ಕಾವಲಿಗೆ ಮಣ್ಣಿ೦ದ ಮಾಡಿಪ್ಪ ಕಾಲಲ್ಲಿ ಮಾಡೆ೦ಡು ಬ೦ದ ರೀತಿ ಇ೦ದಿ೦ಗೆ ಕಮ್ಮಿ ಆದರೂ, ವೇಣಿಯಕ್ಕ ಒ೦ದಾರಿ ಇದರ ನೆ೦ಪು ಮಾಡಿಕೊಟ್ಟೀ ಧನ್ಯವಾದ.

    ಅ೦ದ್ರಾಣ ಕಾಲಲ್ಲಿ, ಒ೦ದೋ ಬಾಳೆಲಿ ಊಟ, ಅಲ್ಲದ್ರೆ ಮಣ್ಣಿನ ತಟ್ಟೆ, ಮತ್ತೆ ರಾಜ೦ಗೊ ಬೆಳ್ಳಿ ತಟ್ಟೆಲಿ ಉ೦ಗು ಹೇಳಿ ಎನ್ನ ಅಜ್ಜಿ ಹೇಳುಗು.. 🙂

  4. ಎಷ್ಟು ಸಮಯ ಆತು ಓಡುಪ್ಪಾಳೆ ತಿಂದು..! ಕೊದಿ ಹಿಡುದತ್ತದ, ಈಗ.

  5. ಎಂಗೊಗೆ ತುಂಬಾ ಇಷ್ಟದ ತಿಂಡಿ ಇದು…

  6. ಕಾಯಿಹಾಲಿಲಿ ಅದ್ದಿ ಬೊದುಲಿಸಿದ ಓಡುಪ್ಪಾಳೆಯ ತಿ೦ದರೆ ಸ್ವರ್ಗಕ್ಕೆ ಮೂರೇ ಗೇಣು !
    ಓದಿ ಕೊದಿಯೂ ಆತು,ಕೊಶಿಯೂ ಆತು ಅಕ್ಕ.

  7. ಓಡುಪ್ಪಾಳೆ ತಿಂದಿಕ್ಕಿ ಓಪೀಸಿಂಗೆ ಹೋಗಿ ಒರಕ್ಕು ಬಾರದ್ದೆ ಓವರ್ಟೈಮ್ ವರ್ಕೂ ಮಾಡಿರೆ ನೋ ಓಬ್ಜೆಕ್ಷನ್ ಅಕ್ಕನ್ನೆ.

    ಚಿತ್ರವೂ ಚಂದ ಆಯ್ದು ಓಡುಪ್ಪಾಳೆಯೂ ಲಾಯಕ ಆಯ್ದು ಹೇಳಿತ್ತು – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×