ಓಡುಪ್ಪಾಳೆ ಕಾಯಿಹಾಲು

March 20, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓಡುಪ್ಪಾಳೆ ಕಾಯಿಹಾಲು

ಬೇಕಪ್ಪ ಸಾಮಾನುಗೊ:

  • ಓಡುಪ್ಪಾಳೆ
  • 3-3.5 ಕಪ್(ಕುಡ್ತೆ) ತೆಂಗಿನಕಾಯಿ ತುರಿ / 4 ಕಪ್(ಕುಡ್ತೆ) ಕಾಯಿಹಾಲು
  • 1.5 ಕಪ್(ಕುಡ್ತೆ) ಬೆಲ್ಲ
  • 1-2 ಏಲಕ್ಕಿ (ಬೇಕಾದರೆ ಮಾತ್ರ)

ಮಾಡುವ ಕ್ರಮ:

ಓಡುಪ್ಪಾಳೆಯ ಈ ಸಂಕೋಲೆಲಿ ಹೇಳಿದ ಹಾಂಗೆ ಮಾಡಿ, ಒಂದು ಕರೆಲಿ ತಣಿವಲೆ 15 ನಿಮಿಷ ಮಡುಗಿ.

ತುರುದ ಕಾಯಿಯ ರೆಜ್ಜವೆ ನೀರು ಹಾಕಿ ಮಿಕ್ಸಿ/ಗ್ರೈಂಡರಿಲ್ಲಿ ನೊಂಪು ಕಡೆರಿ. ಅದರ ಒಂದು ವಸ್ತ್ರಲ್ಲಿ ಹಾಕಿ ಲಾಯಿಕಲಿ ಹಿಂಡಿ. ಹಿಂಡಿದ ಕಾಯಿಹಾಲಿನ ಪುಂಟೆಗೆ 1/2 ಗ್ಲಾಸು ನೀರು ಹಾಕಿ, ಲಾಯಿಕಲಿ ಬೆರುಸಿ, ಪುನಃ ಹಿಂಡಿ.

ಬೆಲ್ಲವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರಸಿ ಮಡುಗಿ.

ಕೆರಸಿದ ಬೆಲ್ಲವ ಹಿಂಡಿದ ಕಾಯಿಹಾಲಿಂಗೆ ಹಾಕಿ ಲಾಯಿಕ ತೊಳಸಿ. ಏಲಕ್ಕಿಯ ಹೊಡಿ ಮಾಡಿ ಇದಕ್ಕೆ ಹಾಕಿ ತೊಳಸಿ(ಬೇಕಾದರೆ ಮಾತ್ರ).

ಓಡುಪ್ಪಾಳೆಯ ಕಾಯಿಹಾಲಿನ ಪಾತ್ರಕ್ಕೆ ಒಂದೊಂದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಾಕಿ.

ಇದರ ಒಂದು ಕರೆಲಿ ಮುಚ್ಚಿ 1 ಘಂಟೆ ಮಡುಗಿ, ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

  1. ಶೇಡಿಗುಮ್ಮೆ ಪುಳ್ಳಿ
    ಶೇಡಿಗುಮ್ಮೆ ಪುಳ್ಳಿ

    ಅಕ್ಕೋ ಇದಾ ಆ ಮೊನ್ನೆಯಾಣ ಮೆಡಿ ಉಪ್ಪಿನಕಾಯಿ ರಜಾ ಕರೇಂಗೆ ಬಳುಸಿಕ್ಕಿ ಆತೋ, ನವಗೆ ಬರೇ ಸೀವು ಹೆಚ್ಚಿಗೆ ತಿಂಬಲೆಡಿತ್ತಿಲ್ಲೆ….ಹ್ಮ್ಮ್

    [Reply]

    VN:F [1.9.22_1171]
    Rating: +1 (from 1 vote)
  2. ಚೆನ್ನೈ ಬಾವ°
    ಚೆನ್ನೈ ಭಾವ

    ಹು..! ಪಷ್ಟಾವ್ತು ಇದು – ಶುದ್ದಿಗೆ ಒಪ್ಪ

    ಇದು ಆದಿತ್ಯವಾರ ಮಾಡುತ್ಸು ಒಳ್ಳೇದು. ಬಾಕಿ ದಿನ ತಿಂದಿಕ್ಕಿ ಓಪೀಸಿಂಗೆ ಹೋವ್ತವಕ್ಕೆ ಭಂಙ !

    [Reply]

    VA:F [1.9.22_1171]
    Rating: +1 (from 1 vote)
  3. ಜಯಶ್ರೀ ನೀರಮೂಲೆ
    jayashree.neeramoole

    ಒಡುಪ್ಪಾಳೆ ಕಾಮ್ಬಗಳೇ ‘ಓಡುಪ್ಪಾಳೆ ಕಾಯಿಹಾಲು’ ನ ಬೈಲಿನ್ಗೆ ವೇನಿಯಕ್ಕ ವಿವರುಸಿ ಹೇಳಿರೆ ಒಳ್ಳೆದಿತ್ತು ಹೇಳಿ ಅನ್ನಿಸಿದ್ದತ್ತು… ಖುಷಿಯಾತು…

    [Reply]

    VA:F [1.9.22_1171]
    Rating: 0 (from 0 votes)
  4. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ನವಗೆ ಇಷ್ತ ಇದು, ಆದರೆ ಎಂತ್ಸರ ಮಾಡುದು, ಈ ಡಾಗುಟ್ರಕ್ಕೊ ನವಗೆ ಇಷ್ತ ಇಪ್ಪದರನ್ನೇ ಹುಡುಕಿ ತಿಂಬಲಾಗ ಹೇಳ್ತವನ್ನೆ. ..ಛೆ !

    [Reply]

    VN:F [1.9.22_1171]
    Rating: +1 (from 1 vote)
  5. ಮುಳಿಯ ಭಾವ
    ರಘು ಮುಳಿಯ

    ಆಹಾ,ಎ೦ತಾ ರುಚಿ.
    ಈಗ ಸರೀ ಆತು. ಹೊಟ್ಟೆಯೂ ತು೦ಬಿತ್ತು.

    [Reply]

    VA:F [1.9.22_1171]
    Rating: 0 (from 0 votes)
  6. ಶ್ರೀಅಕ್ಕ°

    ವೇಣಿ,
    ಯೇವತ್ರಾಣ ಹಾಂಗೇ ಭಾರೀ ಲಾಯ್ಕಾಯಿದು ಪಟ ಸಮೇತ ವಿವರ ಬರದ್ದದು.
    ಇದು ಎನಗೆ ಇಷ್ಟದ್ದು. ಎನ್ನ ಅಮ್ಮ ಮಾಡಿಗೊಂಡಿದ್ದದು ನೆಂಪಾತು.
    ನೀನು ಇನ್ನೊಂದರಿ ಮಾಡುವಾಗ ಹೇಳಾತಾ… ಬತ್ತೆ.. 😉

    [Reply]

    VN:F [1.9.22_1171]
    Rating: 0 (from 0 votes)
  7. ಗಣೇಶ ಪೆರ್ವ
    ಗಣೇಶಪೆರ್ವ

    ಯೇ ದೇವರೇ!! ಓಡುಪ್ಪಾಳೆ ತಿ೦ದು ವರ್ಶಗಟ್ಲೆ ಆತು ಹೇಳಿ ನೆ೦ಪಾತಿದಾ ಈಗ..

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣಪುಣಚ ಡಾಕ್ಟ್ರುವಿದ್ವಾನಣ್ಣಪುಟ್ಟಬಾವ°ಚೂರಿಬೈಲು ದೀಪಕ್ಕಅನು ಉಡುಪುಮೂಲೆವಿಜಯತ್ತೆಅನಿತಾ ನರೇಶ್, ಮಂಚಿಅಕ್ಷರದಣ್ಣವಾಣಿ ಚಿಕ್ಕಮ್ಮಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ಕಜೆವಸಂತ°ಶೇಡಿಗುಮ್ಮೆ ಪುಳ್ಳಿದೀಪಿಕಾನೀರ್ಕಜೆ ಮಹೇಶರಾಜಣ್ಣಮುಳಿಯ ಭಾವಒಪ್ಪಕ್ಕಕೊಳಚ್ಚಿಪ್ಪು ಬಾವವಿನಯ ಶಂಕರ, ಚೆಕ್ಕೆಮನೆಪುತ್ತೂರಿನ ಪುಟ್ಟಕ್ಕಪೆರ್ಲದಣ್ಣಯೇನಂಕೂಡ್ಳು ಅಣ್ಣಮಾಲಕ್ಕ°ಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ